For Quick Alerts
  ALLOW NOTIFICATIONS  
  For Daily Alerts

  ಮುದ್ದು ಮಗಳನ್ನು ಪರಿಚಯಿಸಿದ 'ರಾಧಾ ರಮಣ' ಖ್ಯಾತಿಯ ನಟ ಸ್ಕಂದ ಅಶೋಕ್

  |

  ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಾ ರಮಣ' ಧಾರಾವಾಹಿಯ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದಿರುವ ನಟ ಸ್ಕಂದ ಅಶೋಕ್ ತಂದೆಯಾದ ಸಂಭ್ರಮದಲ್ಲಿದ್ದಾರೆ. ದೀಪಾವಳಿಯ ಶುಭ ಸಂದರ್ಭದಲ್ಲಿ ನಟ ಸ್ಕಂದ ತನ್ನ ಮುದ್ದು ಮಗಳನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.

  ಮಗಳ ಫೋಟೋವನ್ನು ಸ್ಕಂದ ಅಶೋಕ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಗಳು ಮತ್ತು ಪತ್ನಿ ಶಿಖಾ ಜೊತೆ ಫೋಟೋಶೂಟ್ ಮಾಡಿಸಿರುವ ಸ್ಕಂದ ಸುಂದರ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಅಂದಹಾಗೆ ಆಗಸ್ಟ್ ತಿಂಗಳಿನಲ್ಲಿ ಶಿಖಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈಗಾಗಲೇ ಮಗಳಿಗೆ 3 ತಿಂಗಳು ತುಂಬಿದ್ದು, ಮುದ್ದು ಮಗಳಿಗೆ ಇನ್ನೂ ಹೆಸರಿಟ್ಟಿಲ್ಲ. ಸದ್ಯದಲ್ಲೇ ನಾಮಕರಣ ಶಾಸ್ತ್ರ ಮಾಡುವ ಸಾಧ್ಯತೆ ಇದೆ. ಮುಂದೆ ಓದಿ...

  ತಂದೆಯಾಗುತ್ತಿರುವ ಸಂಭ್ರಮದಲ್ಲಿ 'ರಾಧಾ ರಮಣ' ಖ್ಯಾತಿಯ ನಟ ಸ್ಕಂದತಂದೆಯಾಗುತ್ತಿರುವ ಸಂಭ್ರಮದಲ್ಲಿ 'ರಾಧಾ ರಮಣ' ಖ್ಯಾತಿಯ ನಟ ಸ್ಕಂದ

  ಫೋಟೋ ಶೇರ್ ಮಾಡಿ ಸ್ಕಂದ ಹೇಳಿದ್ದೇನು?

  ಫೋಟೋ ಶೇರ್ ಮಾಡಿ ಸ್ಕಂದ ಹೇಳಿದ್ದೇನು?

  ಮೂರು ತಿಂಗಳ ಮಗುವಿನ ಜೊತೆ ಸ್ಕಂದ ದಂಪತಿ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಫೋಟೋ ಶೇರ್ ಮಾಡುವ ಜೊತೆಗೆ, 'ದೀಪಾವಳಿಯ ಈ ಶುಭ ಸಂದರ್ಭದಲ್ಲಿ ನಮ್ಮ ಪುಟ್ಟ ರಾಜಕುಮಾರಿಯನ್ನು ಪರಿಚಯಿಸುತ್ತಿದ್ದೇವೆ. ತಮ್ಮ ಮುದ್ದಾದ ಮಗುವನ್ನು ನೋಡಲು ಕಾಯುತ್ತಿದ್ದ ನಮ್ಮ ಹಿತೈಶಿಗಳಿಗಾಗಿ' ಎಂದು ಬರೆದುಕೊಂಡು ಎಲ್ಲರಿಗೂ ದೀಪಾವಳಿಯ ಶುಭಾಶಯ ತಿಳಿಸಿದ್ದಾರೆ.

  2018ರಲ್ಲಿ ಹಸೆಮಣೆ ಏರಿದ್ದ ಸ್ಕಂದ

  2018ರಲ್ಲಿ ಹಸೆಮಣೆ ಏರಿದ್ದ ಸ್ಕಂದ

  ಅಂದಹಾಗೆ ಸ್ಕಂದ ಪತ್ನಿ ಶಿಖಾ ಪ್ರಸಾದ್ ಅವರದ್ದು ಪ್ರೇಮ ವಿವಾಹ. ಎರಡು ವರ್ಷಗಳ ಹಿಂದೆ ಅಂದರೆ 2018ರಲ್ಲಿ ಸ್ಕಂದ ಮತ್ತು ಶಿಖಾ ಅದ್ದೂರಿಯಾಗಿ ಹಸೆಮಣೆ ಏರಿದ್ದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಸ್ಕಂದ ಅಶೋಕ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸ್ಕಂದ ಮದುವೆಗೆ ಸ್ಯಾಂಡಲ್ ವುಡ್ ಗಣ್ಯರು, ಕಿರುತೆರೆ ಕಲಾವಿದರು ಸಾಕ್ಷಿಯಾಗಿದ್ದರು.

  ಮೊದಲ ಮಗುವಿನ ನಿರೀಕ್ಷೆಯಲ್ಲಿ 'ಮಂಗಳ ಗೌರಿ ಮದುವೆ' ಖ್ಯಾತಿಯ ನಟಿ ರಾಧಿಕಾ ಶ್ರವಂತ್ಮೊದಲ ಮಗುವಿನ ನಿರೀಕ್ಷೆಯಲ್ಲಿ 'ಮಂಗಳ ಗೌರಿ ಮದುವೆ' ಖ್ಯಾತಿಯ ನಟಿ ರಾಧಿಕಾ ಶ್ರವಂತ್

  ವಿರೋಧಿಸುವವರಿಗೆ ಟಾಂಗ್ ಕೊಟ್ಟ Rachita Ram | Filmibeat Kannada
  ಸ್ಕಂದ ಬಳಿ ಇರುವ ಸಿನಿಮಾಗಳು

  ಸ್ಕಂದ ಬಳಿ ಇರುವ ಸಿನಿಮಾಗಳು

  ಸ್ಕಂದ ಧಾರಾವಾಹಿಯ ಜೊತೆಗೆ ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ. ಯೂಟರ್ನ್, ಚಾರುಲತ ಸೇರಿದಂತೆ ಕೆಲವು ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇನ್ನೂ ವಿಶೇಷ ಅಂದರೆ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂನಲ್ಲಿಯೂ ಸ್ಕಂದ ಅಭಿನಯಿಸಿದ್ದಾರೆ. ಮಲಯಾಳಂನಲ್ಲಿ ಕಿರುತೆರೆಯ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಸ್ಕಂದ ಭಾಗಿಯಾಗಿದ್ದರು. ಸದ್ಯ ಫ್ಲಾಟ್#9, ಕಸ್ತೂರಿ ಮಹಲ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

  Read more about: baby tv ಮಗು ಟಿವಿ
  English summary
  Radha Ramana fame Actor Skanda Ashok introduce his daughter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X