For Quick Alerts
  ALLOW NOTIFICATIONS  
  For Daily Alerts

  ರೂಮ್ ನಲ್ಲಿ ಬೆಡ್ ಮೇಲೆ ಇಲ್ಲದ ರಾಣಿ, ಬಾತ್ ರೂಮ್ ನಲ್ಲಿ ಪ್ರತ್ಯಕ್ಷವಾದರೆ ತಲೆ ಚಚ್ಚಿಕೊಳ್ಳಬೇಡಿ.!

  By Harshitha
  |

  ಈ ಧಾರಾವಾಹಿಗಳ ಹಣೆಬರಹವೇ ಇಷ್ಟು... ಟಿ.ಆರ್.ಪಿ ಬರ್ತಿದೆ, ಅದನ್ನ ಕಳೆದುಕೊಳ್ಳಬಾರದು ಎಂಬ ಕಾರಣಕ್ಕೆ ಸುಮ್ ಸುಮ್ನೆ ಟ್ವಿಸ್ಟ್ ಕೊಡೋದು... ಕಡೆಗೆ ಅದನ್ನ ಡಮ್ಮಿ ಮಾಡೋದು.!

  ಇತ್ತೀಚೆಗೆ ಬರುತ್ತಿರುವ ಧಾರಾವಾಹಿಗಳಲ್ಲಂತೂ ಕಥೆಯೇ ಇರಲ್ಲ. ಒಂದು ಫ್ಯಾಮಿಲಿ... ಆ ಫ್ಯಾಮಿಲಿಯೊಳಗೇ 'ಲೇಡಿ' ವಿಲನ್. ಇಡೀ ಕುಟುಂಬದ ನೋವಿಗೆ ಆಕೆಯೇ ಕಾರಣ. ಆದ್ರೆ, ಕುಟುಂಬದ ಕಣ್ಣಿಗೆ ಆಕೆಯೇ 'ದೇವತೆ'. ಆ 'ದೇವತೆ' ಏನು ಹೇಳಿದರೂ ಹಿಂದು-ಮುಂದು ಯೋಚಿಸದ 'ದಡ್ಡ' ಕುಟುಂಬ.!

  ಇನ್ನೇನು ಆ ಲೇಡಿ ವಿಲನ್ ತಗಲಾಕೊಂಡ್ಳು... ಅನ್ನೋಷ್ಟರಲ್ಲಿ ಒಂದು ಸಿಲ್ಲಿ ಟ್ವಿಸ್ಟ್.! ಆ ಲೇಡಿ ವಿಲನ್ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬೀಳಲ್ಲ... ಧಾರಾವಾಹಿಗಳು ಮುಗಿಯಲ್ಲ.!

  ಒಟ್ನಲ್ಲಿ ಈ ಹಾವು ಏಣಿ ಆಟದ ಹಾಗೆ ಕೆಲವು ಧಾರಾವಾಹಿಗಳ ಕಥೆಗಳು ಸಾಗುತ್ತಿವೆ. ಇವತ್ತು ಸತ್ಯ ಗೊತ್ತಾಗುತ್ತೆ, ನಾಳೆ ಸತ್ಯ ಗೊತ್ತಾಗುತ್ತೆ ಅಂತ ನೋಡಿ ನೋಡಿ ವೀಕ್ಷಕರಂತೂ ಬೇಸೆತ್ತಿದ್ದಾರೆ. ಮುಂದೆ ಓದಿರಿ...

  ಆಗಿದ್ದ ಕಥೆ ಒಂದು.. ಈಗ ಆಗಿರೋದೇ ಇನ್ನೊಂದು.!

  ಆಗಿದ್ದ ಕಥೆ ಒಂದು.. ಈಗ ಆಗಿರೋದೇ ಇನ್ನೊಂದು.!

  ಈ 'ರಾಧಾ ರಮಣ' ಧಾರಾವಾಹಿಯನ್ನೇ ತೆಗೆದುಕೊಳ್ಳಿ... ಸೀರಿಯಲ್ ಶುರು ಆದಾಗ ಇದ್ದ ಕಥೆಯೇ ಬೇರೆ. ಈಗ ನಡೆಯುತ್ತಿರುವ ಕಥೆಯೇ ಬೇರೆ. ಈ ಧಾರಾವಾಹಿಯಲ್ಲಿ ರಾಣಿ ಮುಖವಾಡ ಕಳಚಿ ಬೀಳಬೇಕು, ಸಿತಾರ ದೇವಿ ಬಣ್ಣ ಬಯಲಾಗಬೇಕು.... ಇವೆರಡೂ ಆದರೆ ಧಾರಾವಾಹಿ ಮುಗಿದ ಹಾಗೆ ಲೆಕ್ಕ.

  ರಾತ್ರೋರಾತ್ರಿ 'ಅವನಿ' ಗಾಯಬ್: ಸಿತಾರ ದೇವಿ ಕಥೆ ಫಿನಿಶ್.?ರಾತ್ರೋರಾತ್ರಿ 'ಅವನಿ' ಗಾಯಬ್: ಸಿತಾರ ದೇವಿ ಕಥೆ ಫಿನಿಶ್.?

  ಹಾವು ಸಾಯಲ್ಲ, ಕೋಲು ಮುರಿಯಲ್ಲ.!

  ಹಾವು ಸಾಯಲ್ಲ, ಕೋಲು ಮುರಿಯಲ್ಲ.!

  ಇಷ್ಟು ಬೇಗ ಸೀರಿಯಲ್ ಮುಗಿಸೋದು ಸಾಧ್ಯವೇ.? ಖಂಡಿತ ಇಲ್ಲ. ಅದಕ್ಕೆ ರಾಣಿ ತಪ್ಪಿಸಿಕೊಳ್ತಿಲ್ಲ. ಸಿತಾರ ದೇವಿ ಮಾಸ್ಟರ್ ಪ್ಲಾನ್ ಯಾರಿಗೂ ಅರ್ಥ ಆಗ್ತಿಲ್ಲ.

  ಜಿದ್ದಿಗೆ ಬಿದ್ದ ದೀಪು: ಇವತ್ತಾದರೂ ರಾಣಿ ಬಂಡವಾಳ ಬಯಲು.?ಜಿದ್ದಿಗೆ ಬಿದ್ದ ದೀಪು: ಇವತ್ತಾದರೂ ರಾಣಿ ಬಂಡವಾಳ ಬಯಲು.?

  ಎಲ್ಲರಿಗೂ ಆಘಾತ

  ಎಲ್ಲರಿಗೂ ಆಘಾತ

  ಸದ್ಯ ಧಾರಾವಾಹಿಯಲ್ಲಿ ಮನೆಯಿಂದ ರಾಣಿ ಎಸ್ಕೇಪ್ ಆಗಿದ್ದಾಳೆ. ರೂಮ್ ನಲ್ಲಿ ಬೆಡ್ ಮೇಲೆ 'ಅವನಿ' ಅಲಿಯಾಸ್ ರಾಣಿ ಇಲ್ಲ. ಎಲ್ಲರೂ ಶಾಕ್ ಆಗುತ್ತಿದ್ದ ಹಾಗೆ ಸಂಚಿಕೆ ಮುಗಿದಿದೆ.!

  'ರಾಣಿ' ಮುಖವಾಡ 'ರಾಧಾ' ಮುಂದೆ ಕಳಚಿ ಬೀಳುತ್ತಾ.?'ರಾಣಿ' ಮುಖವಾಡ 'ರಾಧಾ' ಮುಂದೆ ಕಳಚಿ ಬೀಳುತ್ತಾ.?

  ನಿಮಗೆ ನೆನಪಿರಲಿ...

  ನಿಮಗೆ ನೆನಪಿರಲಿ...

  ಅಲ್ಲಿಗೆ, ಸಿತಾರ ದೇವಿ ಹಾಗೂ ರಾಣಿ ಕಥೆ ಮುಗೀತು ಅಂತ ವೀಕ್ಷಕರು ಭಾವಿಸಬಹುದು. ಆದ್ರೆ, ಅದಕ್ಕೆ ನಿರ್ದೇಶಕರು ಮನಸ್ಸು ಮಾಡಬೇಕಲ್ಲ.?! ರಾಣಿ ಕಿಟಿಕಿಗೆ ಹಗ್ಗ ಕಟ್ಟಿ ಇಳಿದು ಹೋಗಿರುವುದನ್ನ ಯಾರೂ ನೋಡಿಲ್ಲ. ಅದೇ ಹಗ್ಗದಿಂದ ಮೇಲಕ್ಕೆ ಹತ್ತಿ ರಾಣಿ ಬಾತ್ ರೂಮ್ ಒಳಗೆ ಬರಬಹುದಲ್ವಾ.? ಬೆಡ್ ಮೇಲೆ ಇಲ್ಲದ ರಾಣಿಯನ್ನ ನಿರ್ದೇಶಕರು ಬಾತ್ ರೂಮ್ ನಲ್ಲಿ ಪ್ರತ್ಯಕ್ಷ ಮಾಡಿಸಿದರೆ ನೀವಂತೂ ತಲೆ ಚಚ್ಚಿಕೊಳ್ಳಬೇಡಿ. ಯಾಕಂದ್ರೆ, ಇದು ಮೆಗಾ ಧಾರಾವಾಹಿ... ಈಗಲೇ ಮುಗಿಯಲ್ಲ ಅನ್ನೋದು ನಿಮಗೆ ನೆನಪಿರಲಿ.!

  English summary
  Dont be surprised if Rani enters through Bathroom in 'Radha Ramana' serial.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X