For Quick Alerts
  ALLOW NOTIFICATIONS  
  For Daily Alerts

  ರೀ ಡೈರೆಕ್ಟರೇ.. ಇವತ್ತಾದ್ರೂ 'ರಾಧಾ ರಮಣ'ನ ಬಾಯಿ ಬಿಡ್ಸಿ, ಒಂದು ಮಾಡ್ಸಿ.. ಪ್ಲೀಸ್.!

  By Harshitha
  |

  ''ಅಯ್ಯೋ ಗಣೇಶ... ಇವತ್ತಾದರೂ, ತನ್ನ ಮನಸ್ಸಿನಲ್ಲಿ ಇರುವ ಭಾವನೆಯನ್ನ ರಾಧಾ ಮಿಸ್ ಹೇಳಿಕೊಳ್ಳಲ್ಲಪ್ಪಾ.. ರಾಧಾ ಮೇಲೆ ಇಟ್ಟಿರುವ ಪ್ರೀತಿಯನ್ನ ರಮಣ್ ಬಾಯಿ ಬಿಡ್ಲಪ್ಪಾ.. ರಾಧಾ ಮಿಸ್ ಅಳುವುದನ್ನ ನಿಲ್ಲಿಸಲಿ.. ರಮಣ್ ಲವ್ ಸ್ಟೋರಿ ಸಕ್ಸಸ್ ಆಗಲಿ'' - ಹೀಗಂತ ಬೇಡಿಕೊಳ್ತಿರೋದು ನಾವಲ್ಲ. ಬದಲಾಗಿ ಪ್ರತಿ ದಿನ ಮಿಸ್ ಮಾಡದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿಯನ್ನ ನೋಡುತ್ತಿರುವ ವೀಕ್ಷಕರು.

  'ರಾಧಾ ರಮಣ' ಧಾರಾವಾಹಿ ಶುರುವಾಗಿ ವರ್ಷದ ಮೇಲಾಗಿದೆ. ಸೀರಿಯಲ್ ನಲ್ಲೇ ವಿವಾಹ ವಾರ್ಷಿಕೋತ್ಸವವನ್ನ ರಾಧಾ ಹಾಗೂ ರಮಣ ಆಚರಿಸಿಕೊಂಡಿದ್ದೂ ಆಯ್ತು. ಆದರೂ, ಇಬ್ಬರೂ ಕೂಡ ತಮ್ಮ ಮನಸ್ಸಿನಲ್ಲಿ ಇರುವ ಪ್ರೀತಿಯನ್ನ ಪರಸ್ಪರ ಹಂಚಿಕೊಂಡಿಲ್ಲ.

  ಇಷ್ಟು ದಿನ ಸೀರಿಯಲ್ ನಲ್ಲಿ 'ಅವನಿ' ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದಳು. ಆದ್ರೀಗ, 'ರಾಧಾ ರಮಣ'ನ ಕಥೆ ಟ್ರ್ಯಾಕ್ ಗೆ ಮರಳಿ ಹಳೇ ಪಾಯಿಂಟ್ ನಲ್ಲೇ ಬಂದು ನಿಂತಿದೆ.

  ರಾಧಾಗಾಗಿ ರಮಣ್ ಬರೆದಿದ್ದ ಲವ್ ಲೆಟರ್ ದೀಪಿಕಾ ಕೈಗೆ ಸೇರಿ ಅವಾಂತರ ಆಗ್ಹೋಯ್ತು. ದೀಪಿಕಾ ಮಾಡಿದ ಕೆಟ್ಟ ಕೆಲಸಕ್ಕೆ ರಾಧಾ ಕಣ್ಣೀರು ಹಾಕುವಂತಾಯಿತು. ಹೀಗಾಗಿ, ಒಮ್ಮೆ ರಮಣ್ ಮುಂದೆ ಮನಸ್ಸು ಬಿಚ್ಚಿ ಮಾತನಾಡಲು ರಾಧಾ ರೆಡಿ ಆಗಿದ್ದಾರೆ. ಇತ್ತ ರಮಣ್ ಕೂಡ ರಾಧಾ ಜೊತೆ ಮಾತನಾಡಲು ಮುಂದಾಗಿದ್ದಾರೆ. ''ಇಬ್ಬರೂ ಈಗಲಾದರೂ ಮಾತನಾಡಲಿ. ಮಾತನಾಡುವ ಹಾಗೆ ಮಾಡ್ರೀ ಡೈರೆಕ್ಟರೇ... ಪ್ಲೀಸ್'' ಅಂತ ವೀಕ್ಷಕರು ಫೇಸ್ ಬುಕ್ ನಲ್ಲಿ ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಾರೆ.

  ಸಾಲದಕ್ಕೆ, ಏನೇನೋ ತಿರುವು ಕೊಟ್ಟು ರಬ್ಬರ್ ಎಳೆದ ಹಾಗೆ ಕಥೆಯನ್ನ ಎಳೆಯುತ್ತಿರುವ ಧಾರಾವಾಹಿಯ ನಿರ್ದೇಶಕರ ಬಗ್ಗೆ ವೀಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೇಕಾದ್ರೆ, ನೀವೇ ಕಾಮೆಂಟ್ ಗಳನ್ನ ಓದಿರಿ...

  ಯಾರಾದರೂ ಒಬ್ಬರು ಹೇಳಿ ಪ್ಲೀಸ್...

  ಯಾರಾದರೂ ಒಬ್ಬರು ಹೇಳಿ ಪ್ಲೀಸ್...

  ''ತಮ್ಮಲ್ಲಿರುವ ಪ್ರೀತಿ ಬಗ್ಗೆ ರಾಧಾ ಅಥವಾ ರಮಣ್.. ಯಾರಾದರೂ ಒಬ್ಬರು ಹೇಳಿ ಪ್ಲೀಸ್.. ಹಾಗೆ ಹೇಳುವ ಮುನ್ನ ಬಾಗಿಲು ಹಾಕಿಕೊಳ್ಳಿ.. ಇಲ್ಲಾಂದ್ರೆ, ದೀಪಿಕಾ ಬರ್ತಾಳೆ'' ಅಂತ 'ರಾಧಾ ರಮಣ' ಕಥೆಯಲ್ಲಿ ಮುಳುಗಿರುವ ವೀಕ್ಷಕರು ಕಾಮೆಂಟ್ ಮಾಡಿದ್ದಾರೆ.

  ಉಲ್ಟಾ ಹೊಡೆದ ರಾಣಿ: ಸಿತಾರ ದೇವಿಗೆ ಹೀಗೇ ಆಗಬೇಕು.!ಉಲ್ಟಾ ಹೊಡೆದ ರಾಣಿ: ಸಿತಾರ ದೇವಿಗೆ ಹೀಗೇ ಆಗಬೇಕು.!

  ಇವರಿಬ್ಬರಿಗೆ ಏನು ದೊಡ್ಡ ರೋಗ.?

  ಇವರಿಬ್ಬರಿಗೆ ಏನು ದೊಡ್ಡ ರೋಗ.?

  ''ರೂಮ್ ನಲ್ಲಿ ಬಾಗಿಲು ಹಾಕೊಂಡು ಮಾತನಾಡೋಕೆ, ಇವರಿಬ್ಬರಿಗೆ ಏನು ದೊಡ್ಡ ರೋಗ.? ಸಂಚಿಕೆ ಮುಗಿಯುವಾಗ ಮಾತನಾಡುತ್ತಾರೆ ಅಂತ ತೋರಿಸೋದು, ಮುಂದಿನ ಸಂಚಿಕೆಯಲ್ಲಿ ಮತ್ತದೇ ಗೋಳು'' ಎನ್ನುತ್ತಾ ನಿರ್ದೇಶಕರ ಬಗ್ಗೆ ವೀಕ್ಷಕರು ತಲೆ ಚಚ್ಚಿಕೊಳ್ತಿದ್ದಾರೆ.

  ಕೊಟ್ಟ ಬಿಲ್ಡಪ್ ಒಂದು, ಮಾದ ಮಾಡಿದ್ದು ಮತ್ತೊಂದು: ತಲೆ ಚಚ್ಚಿಕೊಂಡ ವೀಕ್ಷಕರು.! ಕೊಟ್ಟ ಬಿಲ್ಡಪ್ ಒಂದು, ಮಾದ ಮಾಡಿದ್ದು ಮತ್ತೊಂದು: ತಲೆ ಚಚ್ಚಿಕೊಂಡ ವೀಕ್ಷಕರು.!

  ವಾಟ್ಸ್ ಆಪ್ ನಲ್ಲಿ ಕಳುಹಿಸಿದಿದ್ರೆ.?

  ವಾಟ್ಸ್ ಆಪ್ ನಲ್ಲಿ ಕಳುಹಿಸಿದಿದ್ರೆ.?

  ''ವಾಟ್ಸ್ ಆಪ್ ನಲ್ಲಿ ಲೆಟರ್ ಬರೆದು ಕಳುಹಿಸಿದಿದ್ರೆ, ಈ ತರಹ ಪ್ರಾಬ್ಲಂ ಆಗ್ತಿರ್ಲಿಲ್ಲ. ಒಂದು ಲೆಟರ್ ಹಿಡಿದುಕೊಂಡು ರಬ್ಬರ್ ತರಹ ಎಳೆಯೋಕೆ ಆಗ್ತಿರ್ಲಿಲ್ಲ'' ಅನ್ನೋದು ವೀಕ್ಷಕರ ಅಭಿಪ್ರಾಯ.

  ದಾರಿ ತಪ್ಪುತ್ತಿದೆ 'ರಾಧಾ ರಮಣ' ಕಥೆ: ವೀಕ್ಷಕರದ್ದು ಬರೀ ವ್ಯಥೆ.! ದಾರಿ ತಪ್ಪುತ್ತಿದೆ 'ರಾಧಾ ರಮಣ' ಕಥೆ: ವೀಕ್ಷಕರದ್ದು ಬರೀ ವ್ಯಥೆ.!

  ತಾಳ್ಮೆ ಪರೀಕ್ಷೆ ಆಗುತ್ತಿದೆ.!

  ತಾಳ್ಮೆ ಪರೀಕ್ಷೆ ಆಗುತ್ತಿದೆ.!

  ''ಏನೋ ಸಾಧಿಸಿ ಬಿಡ್ತೀನಿ ಅನ್ನೋ ಹುಮ್ಮಸ್ಸಿನಲ್ಲಿ ನಮ್ಮ ತಾಳ್ಮೆ ಪರೀಕ್ಷೆ ಮಾಡುತ್ತಿದ್ದಾರೆ. ಇನ್ನೇನು ಬಾಲಿವುಡ್ ನಲ್ಲಿ ಚಿತ್ರ ನಿರ್ದೇಶನ ಮಾಡೋಕೆ ನಿಮ್ಮನ್ನೇ ಕೂಗುತ್ತಾರೆ. ಕಾದು ನೋಡಿ ಡೈರೆಕ್ಟರ್ ಸಾಹೇಬ್ರೇ'' ಅಂತ ವ್ಯಂಗ್ಯ ಮಾಡುತ್ತಿದ್ದಾರೆ ವೀಕ್ಷಕರು.

  ಸೀರಿಯಲ್ ನೋಡೋದು ಬಿಡಲ್ಲ.!

  ಸೀರಿಯಲ್ ನೋಡೋದು ಬಿಡಲ್ಲ.!

  ''ರಾಧಾ ರಮಣ' ಮನಸ್ಸಿನ ಮಾತು ಹೇಳಲ್ಲ. ನಾವು ಗೂಬೆ ತರಹ ಸೀರಿಯಲ್ ನೋಡೋದು ಬಿಡಲ್ಲ. ಬೋರಿಂಗ್ ಸೀರಿಯಲ್ ನೋಡ್ತಾಯಿದ್ರೆ, ಸಿಟ್ಟು ಬರುತ್ತೆ'' ಎನ್ನುತ್ತಿದ್ದಾರೆ ವೀಕ್ಷಕರು.

  English summary
  Radha Ramana serial: Viewers want Radha and Ramana to open up about their feelings.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X