»   » ಕನ್ನಡ ಚಿತ್ರರಂಗದ ಬಗ್ಗೆ ರಘು ದೀಕ್ಷಿತ್ ಬಾಯ್ಬಿಟ್ಟ ದೊಡ್ಡ ಸತ್ಯವೇನು.?

ಕನ್ನಡ ಚಿತ್ರರಂಗದ ಬಗ್ಗೆ ರಘು ದೀಕ್ಷಿತ್ ಬಾಯ್ಬಿಟ್ಟ ದೊಡ್ಡ ಸತ್ಯವೇನು.?

Posted By:
Subscribe to Filmibeat Kannada

ಒಂದು ಸಿನಿಮಾ ಹಿಟ್ ಆಗಬೇಕು ಅಂದ್ರೆ ಅನೇಕ ಫಾರ್ಮುಲಾಗಳು ಗಾಂಧಿನಗರದಲ್ಲಿವೆ. ಆದರೆ, ಒಬ್ಬ ಕಲಾವಿದನಿಗೆ ಕೈತುಂಬ ಕೆಲಸ ಸಿಗಬೇಕು ಅಂದ್ರೆ ಇರುವ ಫಾರ್ಮುಲಾ ಒಂದೇ. ಆತನ ಸಿನಿಮಾ ಸೂಪರ್ ಹಿಟ್ ಆಗಬೇಕಷ್ಟೇ.

ಕಲಾವಿದನ ಸಿನಿಮಾ ಹಿಟ್ ಆದರಷ್ಟೇ ಗಾಂಧಿನಗರದಲ್ಲಿ ಬೆಲೆ. ಇಲ್ಲಾಂದ್ರೆ ಕಲಾವಿದನ ಪ್ರತಿಭೆಗೆ ಕ್ಯಾರೇ ಅನ್ನೋರೂ ಇರಲ್ಲ ಎಂಬ ದೊಡ್ಡ ಸತ್ಯವನ್ನ ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ಹೊರಹಾಕಿದ್ದಾರೆ.

ರಘು ದೀಕ್ಷಿತ್ ಗೆ ಅವಮಾನ ಮಾಡಿದ ಕನ್ನಡದ 'ಆ' ಮಹಾನ್ ಡೈರೆಕ್ಟರ್ ಯಾರು.?

ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಭಾಗವಹಿಸಿದ ರಘು ದೀಕ್ಷಿತ್ ಗಾಂಧಿನಗರದ 'ಸತ್ಯ'ದ ಬಗ್ಗೆ ಮಾತನಾಡಿದ್ದು ಹೀಗೆ...

ಬೇಜಾರಾಗಿದೆ

''ಸೈಕೋ' ಮತ್ತು 'ಜಸ್ಟ್ ಮಾತ್ ಮಾತಲ್ಲಿ' ನನಗೆ ಎಷ್ಟು ಖುಷಿ ಕೊಟ್ಟಿದ್ಯೋ.. ಅಷ್ಟೇ ಬೇಜಾರು ಕೂಡ ಆಗುತ್ತೆ. ಈ ಇಂಡಸ್ಟ್ರಿಯಲ್ಲಿ ಒಬ್ಬ ಆರ್ಟಿಸ್ಟ್ ನ ಕೆಲಸ ಮಾತ್ರ ನೋಡಿ ಪರಿಗಣಿಸುವುದಿಲ್ಲ. ಈ ಇಂಡಸ್ಟ್ರಿಯಲ್ಲಿ ಸಿನಿಮಾ ಗೆಲ್ಲಬೇಕು'' - ರಘು ದೀಕ್ಷಿತ್

ಇಲ್ಲ ಸಲ್ಲದ ಅಪವಾದ: ಕನ್ನಡ ಚಿತ್ರರಂಗದ ಮೇಲೆ ಮುನಿಸಿಕೊಂಡ ರಘು ದೀಕ್ಷಿತ್.!

ಓಡುವ ಕುದುರೆಗೆ ಮಾತ್ರ ಬೆಲೆ

''ಓಡುವ ಕುದುರೆ ಇದ್ದರೆ ಮಾತ್ರ ಮುಂದಿನ ರೇಸ್ ಗೆ ದುಡ್ಡು ಹಾಕೋಕೆ ಜನ ಮುಂದೆ ಬರುವುದು. ಇಲ್ಲಾಂದ್ರೆ, ಅವರು ಸಕ್ಸಸ್ ಫುಲ್ ಅಲ್ಲ'' - ರಘು ದೀಕ್ಷಿತ್

ದೊಡ್ಡ ಫೇಲ್ಯೂರ್

''ಇವತ್ತು ನನ್ನ ದೊಡ್ಡ ಫೇಲ್ಯೂರ್ ಅಂದ್ರೆ ನನ್ನ ಒಂದೂ ಚಿತ್ರವೂ ಬಾಕ್ಸ್ ಆಫೀಸ್ ಹಿಟ್ ಆಗಿಲ್ಲ. ಇದೇ ಸತ್ಯ''

ಕಾಯುತ್ತಿದ್ದೇನೆ....

''ನಾನು ಸಂಗೀತ ನೀಡುವ ಒಂದು ಸಿನಿಮಾ ಸೂಪರ್ ಹಿಟ್ ಆಗಿ, ಅದರಿಂದ ನನಗೆ ಒಳ್ಳೆಯ ಕೆಲಸ ಹಾಗೂ ಜಾಸ್ತಿ ಕೆಲಸ ಸಿಗಬಹುದು ಅಂತ ನಾನು ಕಾಯುತ್ತಲೇ ಇದ್ದೇನೆ. ಆ ಹಂಬಲದಿಂದಲೇ ನಾನು ಕನ್ನಡ ಚಿತ್ರರಂಗಕ್ಕೆ ವಾಪಸ್ ಬಂದಿದ್ದೇನೆ. ಹೊಸಬರಿಂದಲೇ ನನ್ನ ಕನಸು ನನಸಾಗುತ್ತೆ ಅಂತ ನಂಬಿದ್ದೇನೆ'' - ರಘು ದೀಕ್ಷಿತ್

English summary
Music Director Raghu Dixit is waiting for a Big Break in Kannada Film Industry

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada