»   » ರಕ್ಷಿತ್ ಶೆಟ್ಟಿ ನಿಜ ಬದುಕಿನಲ್ಲಿ ನಡೆದ ಘಟನೆಯೇ 'ಕಿರಿಕ್ ಪಾರ್ಟಿ'ಯ ಸಾನ್ವಿ ಕಥೆ.!

ರಕ್ಷಿತ್ ಶೆಟ್ಟಿ ನಿಜ ಬದುಕಿನಲ್ಲಿ ನಡೆದ ಘಟನೆಯೇ 'ಕಿರಿಕ್ ಪಾರ್ಟಿ'ಯ ಸಾನ್ವಿ ಕಥೆ.!

Posted By:
Subscribe to Filmibeat Kannada
Rakshit Shetty Speaks About kirik Party Cinema | FIlmibeat Kannada

ರಿಶಬ್ ಶೆಟ್ಟಿ ನಿರ್ದೇಶನದ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಅಭಿನಯದ ಕಳೆದ ವರ್ಷ ಬಿಡುಗಡೆ ಆದ 'ಕಿರಿಕ್ ಪಾರ್ಟಿ' ಸಿನಿಮಾ ಸೂಪರ್ ಡ್ಯೂಪರ್ ಹಿಟ್ ಆಯ್ತು. ಕಾಲೇಜು ಲವ್ ಸ್ಟೋರಿ ಹೊಂದಿದ ಈ ಸಿನಿಮಾ ಕಾಲೇಜು ಯುವಕರನ್ನ ಥಿಯೇಟರ್ ವರೆಗೆ ಕರೆ ತರುವಲ್ಲಿ ಯಶಸ್ವಿಯಾಯ್ತು.

ಟಾಪ್ ಗೇರಿದ ಕಲರ್ಸ್ ಕನ್ನಡ ಟಿ.ಆರ್.ಪಿ: ಎಲ್ಲ 'ಕಿರಿಕ್ ಪಾರ್ಟಿ' ಕರಾಮತ್ತು.!

ಅಸಲಿಗೆ, 'ಕಿರಿಕ್ ಪಾರ್ಟಿ' ಕಾಲ್ಪನಿಕ ಕಥೆ ಅಲ್ಲ. ರಕ್ಷಿತ್ ಶೆಟ್ಟಿ ಕಾಲೇಜು ದಿನಗಳಲ್ಲಿ ನಡೆದ ಸತ್ಯ ಘಟನೆ. ಹಾಗಂತ ಸ್ವತಃ ರಕ್ಷಿತ್ ಶೆಟ್ಟಿ ಹೇಳಿದ್ದಾರೆ. ಅದು ಸೂಪರ್ ಟಾಕ್ ಟೈಮ್ ಕಾರ್ಯಕ್ರಮದಲ್ಲಿ. ಮುಂದೆ ಓದಿರಿ...

ಕಾಲೇಜು ದಿನಗಳ ಬಗ್ಗೆ ರಕ್ಷಿತ್ ಮಾತು

ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟ ರಕ್ಷಿತ್ ಶೆಟ್ಟಿ ತಮ್ಮ ಕಾಲೇಜು ದಿನಗಳನ್ನ ಮೆಲುಕು ಹಾಕಿದರು.

'ಕಿರಿಕ್ ಪಾರ್ಟಿ' ವಿಮರ್ಶೆ: ಮತ್ತೆ ನೆನಪಾಗುತ್ತಿದೆ ಕಾಲೇಜಿನ 'ಜಾಲಿಲೈಫ್'!

ಸೀನಿಯರ್ ಮೇಲೆ ರಕ್ಷಿತ್ ಗೆ ಆಕರ್ಷಣೆ

ಕಾಲೇಜಿನಲ್ಲಿ ಮೊದಲನೇ ವರ್ಷ ಓದುವಾಗ ಸೀನಿಯರ್ ಒಬ್ಬರ ಮೇಲೆ ರಕ್ಷಿತ್ ಗೆ ಕ್ರಷ್ ಆಗಿತ್ತಂತೆ. ಆ ಘಟನಾವಳಿಗಳನ್ನ ಇಟ್ಟುಕೊಂಡೇ 'ಕಿರಿಕ್ ಪಾರ್ಟಿ' ಸಿನಿಮಾ ಕಥೆ ರಚಿಸಿದರಂತೆ.

'ಕಿರಿಕ್ ಪಾರ್ಟಿ' ತೆಲುಗು ರಿಮೇಕ್ ಸಿನಿಮಾಗೆ ನಾಯಕ ಸಿಕ್ಕಾಯ್ತು!

ರಕ್ಷಿತ್ ಶೆಟ್ಟಿ ಹೇಳಿದ್ದೇನು.?

''ನಾನು ಮೊದಲನೇ ವರ್ಷ ಓದುವಾಗ 'ಸಾನ್ವಿ' (ಹೆಸರು ಬದಲಾಯಿಸಿದೆ) ಮೇಲೆ ಕ್ರಷ್ ಆಗಿತ್ತು. ಅದೇ ಕ್ಯಾರೆಕ್ಟರ್ ಮೇಲೆ ನಾನು ಕಿರಿಕ್ ಪಾರ್ಟಿ ಸಿನಿಮಾ ಕಥೆ ಬರೆದಿದ್ದು. ಕಿರಿಕ್ ಪಾರ್ಟಿ ನನ್ನ ಕಾಲೇಜ್ ದಿನಗಳಿಂದ ಸ್ಫೂರ್ತಿ ಪಡೆದ ಸಿನಿಮಾ. ನಾನು ಫೈನಲ್ ಇಯರ್ ಓದುವಾಗ ಫಸ್ಟ್ ಇಯರ್ ಹುಡುಗಿ ಮೇಲೆ ಕ್ರಷ್ ಆಗಿತ್ತು'' ಎಂದು ಸೂಪರ್ ಟಾಕ್ ಟೈಮ್ ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ ಹೇಳಿದರು.

ಸಾನ್ವಿ ಸಾವು ಆಗಿದ್ದು ಹೇಗೆ.?

'ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ಸಾನ್ವಿ ಮೇಲಿಂದ ಬಿದ್ದು ಸತ್ತು ಹೋಗುತ್ತಾಳೆ. ಆದ್ರೆ, ನಿಜ ಜೀವನದಲ್ಲಿ ರಕ್ಷಿತ್ ಶೆಟ್ಟಿ ಸ್ನೇಹಿತೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡರಂತೆ.

ಸಾನ್ವಿ ಸತ್ತು ಹೋಗಿದ್ದು ಹೇಗೆ ಅಂದ್ರೆ...

''ಬೇರೆ ಫ್ರೆಂಡ್ ಒಬ್ಬರು ಸೂಸೈಡ್ ಮಾಡಿಕೊಂಡರು. ಸೂಸೈಡ್ ಮಾಡಿಕೊಳ್ಳುವ ಹಿಂದಿನ ದಿನ ನನ್ನ ಜೊತೆ ಮಾತನಾಡಬೇಕು ಅಂತ ಹೇಳಿದ್ದರು. ಆದ್ರೆ ಮಾತನಾಡಲು ಸಾಧ್ಯವಾಗಲಿಲ್ಲ. ಮಾರನೆಯ ದಿನ ಕಾಲೇಜಿಗೆ ಹೋದಾಗ ಸೂಸೈಡ್ ಮಾಡಿಕೊಂಡ ವಿಷಯ ಗೊತ್ತಾಯ್ತು. ಅವರ ತಂದೆಗೆ ಫೋನ್ ಮಾಡಿದಾಗ, ಆಕೆ ನನ್ನ ಮಗಳಲ್ಲ ಅಂತ ಫೋನ್ ಕಟ್ ಮಾಡಿದರು. ಅದನ್ನೆಲ್ಲ ನಾವು ಸಿನಿಮಾದಲ್ಲಿ ಹಾಕಿಕೊಂಡ್ವಿ'' - ರಕ್ಷಿತ್ ಶೆಟ್ಟಿ, ನಟ

ಸೂಸೈಡ್ ಗೆ ಕಾರಣ ಏನು.?

''ಯಾವ ವಿಚಾರಕ್ಕೆ ಸೂಸೈಡ್ ಮಾಡಿಕೊಂಡರು ಎಂಬ ಬಗ್ಗೆ ಗೊತ್ತಿಲ್ಲ. ನಾನು ಆಕೆಯೊಂದಿಗೆ ಮಾತನಾಡಿದ್ದರೆ, ಗೊತ್ತಾಗುತ್ತಿತ್ತೇನೋ... ಬಾಕಿಯವರೆಲ್ಲ ಏನೇನೋ ಮಾತನಾಡುತ್ತಿದ್ದರು. ಅವರೊಂದಿಗೆ ನಾನು ಜಗಳ, ವಾದ ಮಾಡಿದ್ದೂ ಉಂಟು. ಅದನ್ನೆಲ್ಲ ಸಿನಿಮಾದಲ್ಲಿ ಅಳವಡಿಸಿದ್ದೇವೆ'' - ರಕ್ಷಿತ್ ಶೆಟ್ಟಿ, ನಟ

English summary
Kannada Actor Rakshit Shetty speaks about Kirik Party cinema.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada