»   » ಈಟಿವಿ ರಾಮೋಜಿ ರಾವ್ ಮಗ ಕ್ಯಾನ್ಸರ್ ಗೆ ಬಲಿ

ಈಟಿವಿ ರಾಮೋಜಿ ರಾವ್ ಮಗ ಕ್ಯಾನ್ಸರ್ ಗೆ ಬಲಿ

Posted By:
Subscribe to Filmibeat Kannada
Etv group MD CH Suman
ಈನಾಡು ಗ್ರೂಪ್ ಸಂಸ್ಥೆಗಳ ಅಧ್ಯಕ್ಷ ರಾಮೋಜಿ ರಾವ್ ಅವರ ಎರಡನೇ ಪುತ್ರ ಸಿ.ಎಚ್. ಸುಮನ್ ಗುರುವಾರ ಮಧ್ಯರಾತ್ರಿ 12.18ಕ್ಕೆ (ಸೆ.6) ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹೈದರಾಬಾದಿನ ಯಶೋಧಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ 45 ವರ್ಷ ವಯಸ್ಸಾಗಿತ್ತು.

ಮಾರಕ ಕ್ಯಾನ್ಸರ್ ರೋಗದೊಂದಿಗೆ ಹೋರಾಡುತ್ತಿದ್ದ ಅವರು ಕಳೆದ ಆರು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ಮಧ್ಯರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ. ಅವರಿಗೆ ಒಬ್ಬ ಪುತ್ರಿ ಹಾಗೂ ಒಬ್ಬ ಮಗ ಇದ್ದಾನೆ.

ಶುಕ್ರವಾರ (ಸೆ.7) ಸಂಜೆ ಅವರ ಅಂತಿಮ ಸಂಸ್ಕಾರವನ್ನು ರಾಮೋಜಿ ಫಿಲಂ ಸಿಟಿಯಲ್ಲಿ ನೆರವೇರಿಸಲಾಗುತ್ತದೆ ಎಂದು ಅವರ ಕುಟುಂಬಿಕರು ತಿಳಿಸಿದ್ದಾರೆ. ಈಟಿವಿ ಗ್ರೂಪ್ ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸಂಸ್ಥೆಯನ್ನು ಬಹಳ ಉನ್ನತ ಸ್ಥಾನಕ್ಕೆ ಕೊಂಡೊಯ್ಯುವಲ್ಲಿ ಅವರು ಬಹಳಷ್ಟು ಶ್ರಮಿಸಿದ್ದರು.

ಬಹುಮುಖ ಪ್ರತಿಭೆಯಾಗಿದ್ದ ಸುಮನ್ ಧಾರಾವಾಹಿ ನಿರ್ದೇಶನ, ನಟನೆ, ಪರಿಕಲ್ಪನೆ ಹಾಗೂ ನಿರ್ಮಾಣದಲ್ಲಿ ಹೆಸರು ಮಾಡಿದ್ದರು. ಹುಟ್ಟಿದ್ದು 1966 ಡಿಸೆಂಬರ್ 23ರಂದು. ಸುಮನ್ ಅವರ ಪತ್ನಿ ವಿಜಯೇಶ್ವರಿ ಅವರು ರಾಮೋಜಿ ಗ್ರೂಪ್ ಸಂಸ್ಥೆಗಳ ಭಾಗವಾಗಿರುವ ಡಾಲ್ಫಿನ್ ಹೋಟೆಲ್ಸ್ ಎಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸುಮನ್ ಅವರು ನಿಧನರಾದ ಹಿನ್ನೆಲೆಯಲ್ಲಿ ಇಂದು ಆಂಧ್ರಪ್ರದೇಶದಾದ್ಯಂತ ಕಿರುತೆರೆ ಶೂಟಿಂಗ್ ಗಳನ್ನು ನಿಲ್ಲಿಸಲಾಗಿದೆ ಎಂದು ಆಂಧ್ರಪ್ರದೇಶ್ ಟಿವಿ ಆರ್ಟಿಸ್ಟ್ಸ್ ಅಸೋಸಿಯೇಷನ್ ಪ್ರಕಟಣೆಯಲ್ಲಿ ತಿಳಿಸಿದೆ. (ಒನ್ ಇಂಡಿಯಾ ಕನ್ನಡ)

English summary
Managing Director for ETV group, director, actor, and a producer Suman (45) passed away on Thursday (6th Sept, 2012) 12.18 pm while undergoing treatment at a private hospital in Hyderabad. Suman is a second son of Eenadu group Chairman Ramoji Rao.
Please Wait while comments are loading...