For Quick Alerts
  ALLOW NOTIFICATIONS  
  For Daily Alerts

  'ರಾಮಾಯಣ' ತಂಡ ಹೇಗಿತ್ತು?: ಅಪರೂಪದ ಫೋಟೊದ ನೆನಪು ಹಂಚಿಕೊಂಡ 'ಸೀತಾ'

  |

  ದೂರದರ್ಶನದಲ್ಲಿ ಮತ್ತೆ ಪ್ರಸಾರವಾಗುತ್ತಿರುವ 90ರ ದಶಕದ ಜನಪ್ರಿಯ ಧಾರಾವಾಹಿ 'ರಾಮಾಯಣ' ಹೊಸ ದಾಖಲೆಯನ್ನೇ ಸೃಷ್ಟಿಸಿದೆ. ವೀಕ್ಷಕರ ಬೇಡಿಕೆ ಮೇರೆಗೆ ಮರುಪ್ರಸಾರ ಆರಂಭವಾದ ಬಳಿಕ ಕುಟುಂಬದವರೆಲ್ಲ ಒಟ್ಟಿಗೆ ಕುಳಿತು ಪೌರಾಣಿಕ ಕಥೆಯನ್ನು ಆನಂದಿಸುತ್ತಿದ್ದಾರೆ. ಹೊಸ ಪೀಳಿಗೆಯ ಮಂದಿ ರಮಾನಂದ ಸಾಗರ್ ಅವರ 'ರಾಮಾಯಣ' ಏಕೆ ಇಷ್ಟು ಜನಪ್ರಿಯವಾಗಿತ್ತು ಎಂಬುದನ್ನು ಅರಿಯುತ್ತಿದ್ದಾರೆ.

  ಮತ್ತೊಂದು ವಿಶೇಷವೆಂದರೆ ರಾಮಾಯಣ ಮತ್ತು ಮಹಾಭಾರತ ಧಾರಾವಾಹಿಗಳು ದೂರದರ್ಶನಕ್ಕೆ ಮರು ಜೀವ ನೀಡಿವೆ. ಕಳೆದ ವಾರದ ಬ್ರಾಡ್ ಕಾಸ್ಟ್ ಆಡಿಯನ್ಸ್ ರೀಸರ್ಚ್ ಕೌನ್ಸಿಲ್ ಆಫ್ ಇಂಡಿಯಾ (ಬಾರ್ಕ್) ರೇಟಿಂಗ್‌ನಲ್ಲಿ ಕಳೆದ ವಾರ ದೂರದರ್ಶನವನ್ನು ಮತ್ತೆ ಅಗ್ರಸ್ಥಾನಕ್ಕೆ ಕೊಂಡೊಯ್ದಿವೆ. ಈಗಿನ ಸ್ಪರ್ಧಾತ್ಮಕ ಮನರಂಜನಾ ಜಗತ್ತಿನಲ್ಲಿ ನೂರಾರು ಮನರಂಜನಾ ವಾಹಿನಿಗಳ ನಡುವೆ ದೂರದರ್ಶನ ಮತ್ತೆ ಪೈಪೋಟಿ ನೀಡುತ್ತಿರುವುದು ವಿಶೇಷವೇ ಸರಿ. ಮುಂದೆ ಓದಿ...

  ರಾಮಾಯಣದ ತಾರಾಬಳಗ

  ರಾಮಾಯಣದ ತಾರಾಬಳಗ

  'ರಾಮಾಯಣ' ಧಾರಾವಾಹಿಯಲ್ಲಿ ಸೀತೆಯ ಪಾತ್ರ ನಿರ್ವಹಿಸಿದ್ದ ನಟಿ ದೀಪಿಕಾ ಚಿಖ್ಲಿಯಾ ಗತಕಾಲದ ವೈಭವವನ್ನು ನೆನಪಿಸುವ ಅಪರೂಪದ ಹಳೆಯ ಫೋಟೊವನ್ನು ಹಂಚಿಕೊಂಡಿದ್ದಾರೆ. ಅವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಈ ಫೋಟೊದಲ್ಲಿ 'ರಾಮಾಯಣ'ದ ಇಡೀ ತಾರಾಬಳಗವೇ ಇದೆ.

  'ರಾಮಾಯಣ' ಧಾರಾವಾಹಿಯ 'ಸುಗ್ರೀವ' ಶ್ಯಾಮ ಸುಂದರ್ ಇನ್ನಿಲ್ಲ'ರಾಮಾಯಣ' ಧಾರಾವಾಹಿಯ 'ಸುಗ್ರೀವ' ಶ್ಯಾಮ ಸುಂದರ್ ಇನ್ನಿಲ್ಲ

  ಕಲಾವಿದರು, ತಂತ್ರಜ್ಞರು

  ಕಲಾವಿದರು, ತಂತ್ರಜ್ಞರು

  ರಾಮನ ಪಾತ್ರಧಾರಿ ಅರುಣ್ ಗೋವಿಲ್, ಹನುಮಾನ್ ಪಾತ್ರಧಾರಿ ದಾರಾ ಸಿಂಗ್, ಭರತನ ಪಾತ್ರಧಾರಿ ಸಂಜಯ್ ಜೋಗ್, ಲಕ್ಷ್ಮಣನ ಪಾತ್ರಧಾನಿ ಸುನಿಲ್ ಲಾಹ್ರಿ ಸೇರಿದಂತೆ ಎಲ್ಲ ನಟರೂ, ಕ್ಯಾಮೆರಾ ಹಿಂದಿನ ತಂಡದೊಂದಿಗೆ ಗ್ರೂಪ್ ಫೋಟೊ ತೆಗೆಸಿಕೊಂಡಿತ್ತು.

  ಫೋಟೋದಲ್ಲಿ 'ರಾವಣ' ಇಲ್ಲ

  ಫೋಟೋದಲ್ಲಿ 'ರಾವಣ' ಇಲ್ಲ

  ಆದರೆ ಬೇಸರದ ಸಂಗತಿಯೆಂದರೆ 'ರಾಮಾಯಣ'ಕ್ಕೆ ಕಾರಣಕರ್ತನಾದ 'ರಾವಣ'ನ ಪಾತ್ರಧಾರಿ ಅರವಿಂದ್ ತ್ರಿವೇದಿ ಅವರು ಈ ಫೋಟೊದಲ್ಲಿ ಇಲ್ಲ. 'ರಾಮಾಯಣ ಕಲಾವಿದರು ಮತ್ತು ತಂತ್ರಜ್ಞರ ಇಡೀ ತಂಡದೊಂದಿಗಿನ ಎಪಿಕ್ ಫೋಟೊ ಇದು. ಸಾಗರ್ ಸಾಬ್ ತಮ್ಮ ಮಕ್ಕಳೊಂದಿಗೆ ಮತ್ತು ಕೆಳಭಾಗದಲ್ಲಿ ನಿರ್ದೇಶನದ ತಂಡ ಹಾಗೂ ಕ್ಯಾಮೆರಾ ತಂಡ, ರಾವಣನ ಹೊರತಾಗಿ ಹೆಚ್ಚೂ ಕಡಿಮೆ ಎಲ್ಲರೂ ಅದರಲ್ಲಿದ್ದಾರೆ' ಎಂದು ದೀಪಿಕಾ ತಿಳಿಸಿದ್ದಾರೆ.

  ಮರು ಪ್ರಸಾರದಲ್ಲೂ ದಾಖಲೆಗಳು ಸೃಷ್ಟಿಸಿದ ರಾಮಾಯಣಮರು ಪ್ರಸಾರದಲ್ಲೂ ದಾಖಲೆಗಳು ಸೃಷ್ಟಿಸಿದ ರಾಮಾಯಣ

  ಅನೇಕರು ಈಗ ಇಲ್ಲ

  ಅನೇಕರು ಈಗ ಇಲ್ಲ

  'ನಾವು ನಮ್ಮ ಬದುಕಿನ ಬಗ್ಗೆ ಒಮ್ಮೆ ಹಿಂದಿರುಗಿ ನೋಡಿದಾಗ ಮಾತ್ರವೇ ನಾವು ಏನನ್ನು ಉಳಿಸಿದ್ದೇವೆ ಎನ್ನುವುದು ನಮಗೆ ಅರಿವಾಗುವುದು. ಈ ತಂಡದಲ್ಲಿದ್ದ ಅನೇಕರು ಈಗ ಇಲ್ಲ. ಅವರೆಲ್ಲರ ಆತ್ಮಗಳಿಗೂ ಶಾಂತಿ ಸಿಗಲಿ' ಎಂದು ದೀಪಿಕಾ ಬರೆದುಕೊಂಡಿದ್ದಾರೆ.

  'ನೀವು ರಾಮನಾಗಿಯೇ ಇರಿ, ಬೇರೆ ಪಾತ್ರ ಬೇಡ': 'ರಾಮಾಯಣ'ದ ನಟ ಅನುಭವಿಸಿದ್ದ ಸಂಕಷ್ಟ'ನೀವು ರಾಮನಾಗಿಯೇ ಇರಿ, ಬೇರೆ ಪಾತ್ರ ಬೇಡ': 'ರಾಮಾಯಣ'ದ ನಟ ಅನುಭವಿಸಿದ್ದ ಸಂಕಷ್ಟ

  ರೇಟಿಂಗ್ ಹೆಚ್ಚಿಸಿದ ಧಾರಾವಾಹಿ

  ಮಾರ್ಚ್ 28 ರಿಂದ ಏಪ್ರಿಲ್ 3ರ ಅವಧಿಯ ಬಾರ್ಕ್ ರೇಟಿಂಗ್ ವರದಿ ಪ್ರಕಾರ ದೂರದರ್ಶನದ ಸಾಪ್ತಾಹಿಕ ವೀಕ್ಷಕರ ಸೆಳೆತವು 156.48 ಕೋಟಿ ಇದೆ. ಎರಡು ಪೌರಾಣಿಕ ಧಾರಾವಾಹಿಗಳು ಟಿಆರ್‌ಪಿಯನ್ನು ದೂರದರ್ಶನವನ್ನು ಮರಳಿ ಮೊದಲ ಸ್ಥಾನಕ್ಕೆ ಮುಟ್ಟಿಸಿದೆ. ಕ್ಲಾಸಿಕ್ ಶೋ ರಾಮಾಯಣವು ಟೆಲಿವಿಷನ್ ವೀಕ್ಷಣೆಯನ್ನು ಆಳುತ್ತಿದೆ. ತನ್ನ ಮೊದಲ ನಾಲ್ಕು ಎಪಿಸೋಡ್‌ಗಳಲ್ಲಿ 6.9 ಬಿಲಿಯನ್ ವ್ಯೂವಿಂಗ್ ಮಿನಿಟ್‌ಗಳನ್ನು ಸೃಷ್ಟಿಸಿದೆ ಎಂದು ಬಾರ್ಕ್ ಟ್ವೀಟ್ ಮಾಡಿದೆ.

  English summary
  Actress Dipika Chikhlia, who played the role of Sita in epic Ramayan serial has shared a rare old photo of Ramayan team.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X