For Quick Alerts
  ALLOW NOTIFICATIONS  
  For Daily Alerts

  ತೆಲುಗು ಬಿಗ್‌ಬಾಸ್ ಗೆದ್ದವರ್ಯಾರು? ಸಿಕ್ಕ ಬಹುಮಾನದ ಮೊತ್ತ ಎಷ್ಟು?

  |

  ಅರ್ಜಂಟೈನಾ-ಫ್ರಾನ್ಸ್‌ ನಡುವೆ ಫುಟ್‌ಬಾಲ್ ವಿಶ್ವಕಪ್ ಫೈನಲ್ ಪಂದ್ಯ ನಡೆಯುತ್ತಿರುವ ವೇಳೆಯಲ್ಲಿಯೇ ತೆಲುಗು ಬಿಗ್‌ಬಾಸ್‌ ರಿಯಾಲಿಟಿಶೋನಲ್ಲಿ ಫಿನಾಲೆ ಕಾರ್ಯಕ್ರಮ ನಡೆಯುತ್ತಿತ್ತು.

  ನಿನ್ನೆ ನಡೆದ ತೆಲುಗು ಬಿಗ್‌ಬಾಸ್ ಸೀಸನ್ 06 ಫಿನಾಲೆಯಲ್ಲಿ ನಾಗಾರ್ಜುನ ಈ ಸೀಸನ್‌ನ ಬಿಗ್‌ಬಾಸ್ ವಿಜೇತರನ್ನು ಘೋಷಿಸಿದ್ದಾರೆ. ಎಲ್‌ವಿ ರೇವಂತ್ ತೆಲುಗು ಬಿಗ್‌ಬಾಸ್ ಸೀಸನ್ 06 ರ ವಿಜೇತರೆನಿಸಿಕೊಂಡಿದ್ದಾರೆ.

  ಫಿನಾಲೆಗೆ ಗಾಯಕ ಶ್ರಿಹಾನ್, ಆದಿ ರೆಡ್ಡಿ, ಕೀರ್ತಿ ಭಟ್, ರೋಹಿತ್ ಶನಿ ಹಾಗೂ ರೇವಂತ್ ಬಂದಿದ್ದರು. ಕೊನೆಗೆ ಉಳಿದಿದ್ದು ಗಾಯಕ ಶ್ರಿಹಾನ್ ಹಾಗೂ ರೇವಂತ್. ಆಗ 25 ಲಕ್ಷ ಹಣವಿದ್ದ ಗೋಲ್ಡನ್ ಸೂಟ್‌ಕೇಸ್ ತಂದ ನಿರೂಪಕ ನಾಗಾರ್ಜುನ, ಇಬ್ಬರನ್ನು ಯಾರು ಗೇಮ್ ಬಿಡುತ್ತೀರೊ ಅವರು ಇದನ್ನು ತೆಗೆದುಕೊಂಡು ಹೋಗಬಹುದು ಎಂದರು.

  ಸ್ಪರ್ಧಿಗಳಲ್ಲಿ ಆಸೆ ಹೆಚ್ಚಿಸಲೆಂದು ಸೂಟ್‌ಕೇಸ್‌ನಲ್ಲಿನ ಮೊತ್ತವನ್ನು 25 ಲಕ್ಷದಿಂದ 35 ಲಕ್ಷಕ್ಕೆ, ಆ ಬಳಿಕ 40 ಲಕ್ಷಕ್ಕೆ ಹೆಚ್ಚಿಸಲಾಯ್ತು. ಆಗ ಗಾಯಕ ಶಿಹಾನ್ ಸೂಟ್‌ಕೇಸ್ ಅನ್ನು ತೆಗೆದುಕೊಂಡು ಆಟವನ್ನು ಬಿಟ್ಟರು. ಆ ಮೂಲಕ ರೇವಂತ್ ಬಿಗ್‌ಬಾಸ್ ವಿಜೇತರಾಗಿ ಹೊರಹೊಮ್ಮಿದರು.

  ರೇವಂತ್‌ಗೆ ಹತ್ತು ಲಕ್ಷ ನಗದು, 25 ಲಕ್ಷ ಮೌಲ್ಯದ ಸೈಟು, ಒಂದು ಐಶಾರಾಮಿ ಕಾರನ್ನು ನೀಡಲಾಯಿತು. ಶ್ರಿಹಾನ್‌ 40 ಲಕ್ಷ ನಗದು ಹಣಕ್ಕೆ ತೃಪ್ತಿ ಪಟ್ಟುಕೊಂಡರು. ಆದರೆ ನಾಗಾರ್ಜುನ ಹೇಳಿದಂತೆ ಅಸಲಿಗೆ ಅತಿ ಹೆಚ್ಚು ಮತಗಳು ಬಂದಿದ್ದು ಗಾಯಕ ಶ್ರಿಹಾನ್‌ಗೆ, ಒಂದೊಮ್ಮೆ ಅವರು ಸೂಟ್‌ಕೇಸ್ ತೆಗೆದುಕೊಳ್ಳದೇ ಹೋಗಿದ್ದಿದ್ದರೆ ಅವರೇ ವಿನ್ನರ್ ಆಗಿರುತ್ತಿದ್ದರು.

  ಫಿನಾಲೆಗೆ ಹಲವು ತಾರೆಯರು ಅತಿಥಿಗಳಾಗಿ ಆಗಮಿಸಿದ್ದರು. ಕನ್ನಡದ ನಟಿ ಶ್ರೀಲೀಲಾ, ತೆಲುಗು ಸ್ಟಾರ್ ನಟ ರವಿತೇಜ, 'ಕಾರ್ತಿಕೇಯ 2' ಖ್ಯಾತಿಯ ನಿಖಿಲ್, ಹಿರಿಯ ನಟ ರಾಧಾ, ಬಾಲಿವುಡ್ ನಟಿ ಊರ್ವಶಿ ರೋಟೆಲ್ಲಾ ಬಂದಿದ್ದರು.

  English summary
  Revanth won Bigg Boss Telugu season 06. Received 10 lakh cash, 25 lakh worth plot, one swanky car. Shrihan took 40 lakh rs cash and walked out of the show.
  Monday, December 19, 2022, 10:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X