For Quick Alerts
  ALLOW NOTIFICATIONS  
  For Daily Alerts

  ಅಂದು ಡ್ಯಾನ್ಸರ್ ಆಗಿದ್ದ ಶ್ರುತಿಗೆ ಅಪಮಾನ ಮಾಡಿದ್ದರು ಧಿಮಾಕಿನ 'ಆ' ನಟಿ.!

  By Harshitha
  |

  ಬೆಳ್ಳಿ ತೆರೆ ಮೇಲೆ ನಾಯಕಿ ಆಗಿ ಮಿಂಚುವ ಮುನ್ನ ಗ್ರೂಪ್ ಡ್ಯಾನ್ಸರ್ ಆಗಿದ್ದವರು ಶ್ರುತಿ ಹರಿಹರನ್. ನೃತ್ಯದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಶ್ರುತಿ ಹರಿಹರನ್, ಇಮ್ರಾನ್ ಸರ್ದಾರಿಯಾ ರವರ ಡ್ಯಾನ್ಸ್ ಟ್ರೂಪ್ ಸೇರಿಕೊಂಡು, ಅನೇಕ ಚಿತ್ರಗೀತೆಗಳಲ್ಲಿ ಬ್ಯಾಕ್ ಗ್ರೌಂಡ್ ಡ್ಯಾನ್ಸರ್ ಆಗಿ ಸೊಂಟ ಬಳುಕಿಸಿದ್ದರು.

  ತುಂಬಾ ತಪ್ಪುಗಳನ್ನು ಮಾಡಿದ್ದಾರಂತೆ ನಟಿ ಶ್ರುತಿ ಹರಿಹರನ್.!

  ಹೀಗಿರುವಾಗಲೇ, ಚಿತ್ರರಂಗದ ನಾಯಕಿಯೊಬ್ಬರು ಶ್ರುತಿ ಹರಿಹರನ್ ಗೆ ಅವಮಾನ ಆಗಿರುವ ರೀತಿಯಲ್ಲಿ ನಡೆದುಕೊಂಡಿದ್ದರಂತೆ.

  ಆ ಘಟನೆಯನ್ನ ಶ್ರುತಿ ಹರಿಹರನ್ ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ಮುಂದೆ ಓದಿರಿ...

  ವರ್ಷಗಳ ಹಿಂದೆ...

  ವರ್ಷಗಳ ಹಿಂದೆ...

  ''ಇಮ್ರಾನ್ ಸರ್ದಾರಿಯಾ ರವರ ಜೊತೆ ಅಸಿಸ್ಟ್ ಮಾಡಬೇಕಾದರೆ, ಒಂದು ಅವಾರ್ಡ್ ಫಂಕ್ಷನ್ ಗೆ ಪ್ರಾಕ್ಟೀಸ್ ಮಾಡೋಕೆ ನಾಯಕಿಯೊಬ್ಬರು ಬೆಳಗ್ಗೆ 11 ಗಂಟೆಗೆ ಬರ್ತಾರೆ ಅಂತ ಹೇಳಿದ್ದರು'' - ಶ್ರುತಿ ಹರಿಹರನ್, ನಟಿ

  ಬೆಳಗ್ಗೆಯಿಂದ ರಾತ್ರಿವರೆಗೂ ಕಾಯುತ್ತಿದ್ದೆ

  ಬೆಳಗ್ಗೆಯಿಂದ ರಾತ್ರಿವರೆಗೂ ಕಾಯುತ್ತಿದ್ದೆ

  ''ನಾನು ನನ್ನ ಕಾಲೇಜ್ ಬಂಕ್ ಮಾಡಿ, ಬೆಳಗ್ಗೆಯಿಂದ ರಾತ್ರಿ 9 ಗಂಟೆವರೆಗೂ ಕಾಯುತ್ತಿದ್ದೆ ಆ ನಟಿಗೆ ಡ್ಯಾನ್ಸ್ ಹೇಳಿಕೊಡಲು. ಕೊನೆಗೆ ರಾತ್ರಿ 9 ಗಂಟೆ ನಂತರ ಬಂದರು'' - ಶ್ರುತಿ ಹರಿಹರನ್, ನಟಿ

  ಸ್ಟೆಪ್ ಚೇಂಜ್ ಮಾಡಿ ಎಂದರು

  ಸ್ಟೆಪ್ ಚೇಂಜ್ ಮಾಡಿ ಎಂದರು

  ''ಅವರಿಗೆ ಬೇರೆ ದಾರಿಯಿರಲಿಲ್ಲ. ಮಾರನೇ ದಿನ ಅವರು ಸ್ಟೇಜ್ ಮೇಲೆ ಡ್ಯಾನ್ಸ್ ಮಾಡಲೇಬೇಕಿತ್ತು. ಡ್ಯಾನ್ಸ್ ಹೇಳಿಕೊಡುವ ಮಧ್ಯದಲ್ಲಿ ಒಂದು ಸ್ಟೆಪ್ ಚೇಂಜ್ ಮಾಡಿ ಎಂದರು. ಸ್ಟೆಪ್ ಚೇಂಜ್ ಮಾಡಲು ನಾನು ಒಪ್ಪಿಕೊಳ್ಳಲಿಲ್ಲ. ಯಾಕಂದ್ರೆ, ಒಂದು ಸ್ಟೆಪ್ ಚೇಂಜ್ ಮಾಡಿದರೆ 40 ಮಂದಿ ಡ್ಯಾನ್ಸರ್ಸ್ ಅದನ್ನ ಕಲಿಯಬೇಕಿತ್ತು'' - ಶ್ರುತಿ ಹರಿಹರನ್, ನಟಿ

  ಇಮ್ರಾನ್ ನನ್ನ ಮೇಲೆ ಕೂಗಾಡಿದರು

  ಇಮ್ರಾನ್ ನನ್ನ ಮೇಲೆ ಕೂಗಾಡಿದರು

  ''ಅದಕ್ಕೆ ಆ ನಟಿ ಇಮ್ರಾನ್ ಹತ್ತಿರ ಹೋಗಿ ನನ್ನ ಬಗ್ಗೆ ಕೆಟ್ಟದಾಗಿ ಹೇಳಿದ್ದರು. ಆಗ ಇಮ್ರಾನ್ ಬಂದು ನನ್ನ ಮೇಲೆ ಕೂಗಾಡಿದ್ದರು. ಆವತ್ತು ನಾನು, ''ಅಕಸ್ಮಾತ್ ಆಗಿ ನಾನು ಆರ್ಟಿಸ್ಟ್ ಆದರೆ, ನನ್ನ ಜೊತೆ ಕೆಲಸ ಮಾಡುವವರೊಂದಿಗೆ ನಾನು ಈ ರೀತಿ ನಡೆದುಕೊಳ್ಳಬಾರದು'' ಎಂದು ನಿರ್ಧಾರ ಮಾಡಿದೆ''

  ಯಾರು 'ಆ' ನಟಿ.?

  ಯಾರು 'ಆ' ನಟಿ.?

  ''ಆ ಹೀರೋಯಿನ್ ಇನ್ನೂ ಆಕ್ಟ್ ಮಾಡ್ತಿದ್ದಾರಾ.?'' ಎಂದು ಅಕುಲ್ ಕೇಳಿದಕ್ಕೆ, ''ಹೌದು'' ಎಂದಷ್ಟೇ ಶ್ರುತಿ ಹರಿಹರನ್ ಹೇಳಿದರೆ ಹೊರತು 'ಆ' ನಟಿ ಯಾರು ಎಂಬ ಗುಟ್ಟನ್ನ ಬಿಟ್ಟುಕೊಡಲಿಲ್ಲ.

  English summary
  Kannada Actress Sruthi Hariharan revealed that she was insulted by Kannada Actress

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X