Don't Miss!
- News
ಪಂಜಾಬ್ನಲ್ಲಿ 400 ಮೊಹಲ್ಲಾ ಕ್ಲಿನಿಕ್ಗಳ ಲೋಕಾರ್ಪಣೆ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Finance
LIC plan: ದಿನಕ್ಕೆ 83 ರೂ ಹೂಡಿಕೆ ಮಾಡಿ, ಮೆಚ್ಯೂರಿಟಿ ವೇಳೆ 10 ಲಕ್ಷ ರೂ ಪಡೆಯಿರಿ!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಿಷಿಕಾ ಸಿಂಗ್ ಎಂದೂ 'ಮರೆಯಲಾರದ ಘಟನೆ'
ಚಿತ್ರದಲ್ಲಿ ನನ್ನ ಪಾತ್ರವು ಸ್ವತಃ ಅಣ್ಣಂದಿರಿಂದಲೇ ರೇಪ್ ಆಗಲ್ಪಡುತ್ತದೆ. ಇಂತಹ ಕಥೆ ಕನ್ನಡದಲ್ಲಿ ಇಲ್ಲಿಯವರೆಗೆ ಬಂದಿರುವುದು ತೀರಾ ಅಪರೂಪ. ಚಿತ್ರದಲ್ಲಿ ಹೆಚ್ಚಿನ ಭಾಗವನ್ನು ನಾನು ಕನಿಷ್ಠ ಮೇಕಪ್ ಕೂಡ ಇಲ್ಲದೇ ನಟಿಸಿದ್ದೇನೆ. ಅಷ್ಟೇ ಅಲ್ಲ, ನೀರಿನಲ್ಲಿ, ಮಳೆಯಲ್ಲಿ ನೆನೆದು ಒದ್ದೆ-ಮುದ್ದೆಯಾಗಿರುವ ಸ್ಥಿತಿಯಲ್ಲೇ ಹೆಚ್ಚಿನ ದೃಶ್ಯಗಳು ಮೂಡಿ ಬಂದಿವೆ. ಚಿತ್ರ ನೋಡಿದಾಗ ನಿಮಗೆ 'ತುಂತುರು' ಚಿತ್ರದಲ್ಲಿ ವಿಶೇಷ ರಿಷಿಕಾ ಕಾಣಸಿಗುತ್ತಾರೆ.
ಚಿತ್ರದಲ್ಲೊಂದು ವಿಶೇಷ ಸಾಹಿತ್ಯ ಹೊಂದಿರುವ ಹಾಡಿದೆ. 'ನಿನ್ ಪ್ರೀತಿ ಸಾಲ ಕೊಡೆ...'ಅದು ಬಹಳಷ್ಟು ಜನರಿಗೆ, ಮಾಸ್ ಹಾಗೂ ಕ್ಲಾಸ್ ಎಂಬ ಭೇದವಿಲ್ಲದೇ ಇಷ್ಟವಾಗುವುದು ಖಂಡಿತ.
*ಜೀವನದಲ್ಲಿ ಮರೆಯಲಾರದ ಘಟನೆ?
ಮಾಲಾಶ್ರೀ ಅವರಿಂದ ನನ್ನ ಕೆರಿಯರ್ ನ ಮೊದಲ ಸಿನಿಮಾದಲ್ಲಿ ನಟಿಸಲು ಅಡ್ವಾನ್ಸ್ ಪಡೆದ ಆ ದಿನವನ್ನು ನಾನೆಂದೂ ಮರೆಯಲಾರೆ. ಕೋಟಿ ರಾಮು ಬ್ಯಾನರಿನ 'ಕಂಠೀರವ' ಚಿತ್ರದಲ್ಲಿ ನಟಿಸಲು ಅವಕಾಶ ಬಂದಾಗ ಸ್ವತಃ ನಟಿ ಮಾಲಾಶ್ರೀ ನನಗೆ ತಮ್ಮ ಕೈಯಾರೆ ಅಡ್ವಾನ್ಸ್ ಕೊಟ್ಟರು. ಅದನ್ನು ನಾನು ಲೈಫ್ ಲಾಂಗ್ ಮರೆಯಲಾರೆ.
ಕಾರಣ, ನಾನು ಮಾಲಾಶ್ರೀ ಮಹಾ ಫ್ಯಾನ್. 'ನಂಜುಂಡಿ ಕಲ್ಯಾಣ'ದಿಂದ ಹಿಡಿದು ಇತ್ತೀಚಿನ 'ಶಕ್ತಿ' ಮಾಲಾಶ್ರೀ ನಟನೆಯ ಎಲ್ಲಾ ಚಿತ್ರಗಳನ್ನು ನಾನು ನೋಡಿದ್ದೇನೆ. ಹೀಗಿರುವಾಗ ನಟಿಯಾಗಿ ಚಿತ್ರರಂಗಕ್ಕೆ ಅಂಬೆಗಾಲಿಡುತ್ತಿರುವ ನನಗೆ ಮಾಲಾಶ್ರೀ ಕೈಯಿಂದ ಅಡ್ವಾನ್ಸ್ ಪಡೆದಿದ್ದು ತೀರಾ ಅಚ್ಚರಿ ಹಾಗೂ ಖುಷಿಯ ಸಂಗತಿ. ಮರೆಯುವುದು ಹಾಗಿರಲಿ, ಆ ಘಟನೆಯನ್ನು ಆಗಾಗ ನೆನಪಿಸಿಕೊಂಡು ಖುಷಿಪಡುತ್ತಿರುತ್ತೇನೆ. (ಒನ್ ಇಂಡಿಯಾ ಕನ್ನಡ)