For Quick Alerts
  ALLOW NOTIFICATIONS  
  For Daily Alerts

  ಹೊಸ 'ರಗಳೆ' ಮೂಲಕ ಮತ್ತೆ ರಿಷಿಕಾ ಸಿಂಗ್ ಪ್ರತ್ಯಕ್ಷ!

  |

  ರಾಜೇಂದ್ರ ಸಿಂಗ್ ಬಾಬು ಪುತ್ರಿ, ನಟಿ ರಿಷಿಕಾ ಸಿಂಗ್ ಸದ್ಯದಲ್ಲೇ ಹೊಸ 'ರಗಳೆ' ಶುರು ಮಾಡಲಿದ್ದಾರೆ. 'ಯಾರಾದ್ರೆ ನಂಗೇನು?' ಎಂಬ ಚಿತ್ರದಲ್ಲಿ ಬೋಲ್ಡ್ ಆಗಿ ಫೋಟೋ ತೆಗೆಸಿಕೊಂಡು ಇವರು ಮಾಡಿದ್ದ ಹಳೆ 'ರಗಳೆ' ಇಡೀ ಕರ್ನಾಟಕಕ್ಕೆ ಗೊತ್ತಿದೆ. ಈ ಬಾರಿ ಇನ್ನೊಂದು ಹೊಸ 'ರಗಳೆ' ಮೂಲಕವೇ ಪ್ರೇಕ್ಷಕರೆದುರು ಬರಲು ಸಿದ್ಧರಾಗುತ್ತಿದ್ದಾರೆ. ಅದು ಕಿರುತೆರೆಯಲ್ಲಿ ಮೂಡಿಬರಲಿರುವ 'ರಿಷಿಕಾ ವಿತ್ ರಗಳೆ' ಕಾರ್ಯಕ್ರಮದ ಮೂಲಕ ಎಂಬುದು ಲೇಟೆಸ್ಟ್ ಸುದ್ದಿ.

  ರಿಷಿಕಾ ಸಿನಿಮಾದಲ್ಲಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಕನ್ನಡದ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮಗಳಾದ್ದರಿಂದ ಸಿನಿಮಾ ಮೂಲಕ ಎಂಟ್ರಿ ಕೊಟ್ಟಿದ್ದರೂ, ಅವರಿಗೆ ಒಟ್ಟಿನಲ್ಲಿ ಬೇಕಾಗಿರುವುದು ಪ್ರಚಾರವಷ್ಟೇ ಎಂಬುದು ಸರ್ವರಿಗೂ ಗೊತ್ತಿರುವ ಸಂಗತಿ. ಸಿಕ್ಕ ಸುದ್ದಿ ಪ್ರಕಾರ ರಿಷಿಕಾ ಸದ್ಯದಲ್ಲೇ ಒಂದು 'ಪ್ರೋಗ್ರಾಂ' ಮೂಲಕ 'ಟಿವಿ' ಲೋಕಕ್ಕೆ ಬರಲಿದ್ದಾರೆ. ಅದು ರಿಯಾಲಿಟಿ ಶೋ, ಅಥವಾ ಕಾರ್ಯಕ್ರಮವೇ ಎಂಬುದು ಇನ್ನೂ ಪಕ್ಕಾ ಆಗಿಲ್ಲ.

  ಆದರೆ ಇದು, ಹಿಂದಿಯಲ್ಲಿ ಕರಣ್ ಜೋಹರ್ ನಡೆಸಿಕೊಡುತ್ತಿರುವ 'ಕಾಫಿ ವಿತ್ ಕರಣ್' ಮಾದರಿಯಲ್ಲಿ ಇರಲಿದೆ ಎಂಬ ಮಾಹಿತಿಯಿದೆ. ಆದರೆ ಹೆಸರು ಮಾತ್ರ 'ರಗಳೆ ವಿತ್ ರಿಷಿಕಾ'. ಸದ್ಯಕ್ಕೆ ಮಾತುಕತೆ ಹಂತದಲ್ಲಿರುವ ಈ ಶೋ, ಯಾವ ಚಾನೆಲ್ ಮೂಲಕ ಪ್ರೇಕ್ಷಕರ ಮುಂದೆ ಬರಲಿದೆ ಎಂಬುದು ಇನ್ನೂ ನಿಗೂಢ. ಸ್ಯಾಂಡಲ್‌ ವುಡ್‌ನ ಬೊಂಬಾಟ್ ಜೋಡಿಗಳನ್ನು ಕರೆಸಿ ಮಾತನಾಡಿಸುವ ಕಾರ್ಯಕ್ರಮ ಎನ್ನಲಾಗುತ್ತಿದೆ.

  ಅಂದರೆ ಸದ್ಯದ ಜನಪ್ರಿಯ ಜೋಡಿಗಳಾದ ಸುದೀಪ್-ರಮ್ಯಾ, ಪುನೀತ್-ರಮ್ಯಾ, ದಿಗಂತ್-ಐಂದ್ರಿತಾ, ಯಶ್-ರಾಧಿಕಾ ಪಂಡಿತ್ ಮುಂತಾದ ತಾರಾ ಜೋಡಿಗಳನ್ನು ಕರೆಸಿ ಮಾತನಾಡಿಸಿ ಅವರ ಕೈಗೊಂದು ಗಿಫ್ಟ್ ಕೊಟ್ಟು ಕಳಿಸಿಕೊಡುವ ಕಾರ್ಯಕ್ರಮ ಎಂಬುದು ಸದ್ಯದ ಮಾಹಿತಿಯಾದರೂ ಅದಿನ್ನೂ ಪಕ್ಕಾ ಆಗಬೇಕಷ್ಟೇ. ಒಟ್ಟಿನಲ್ಲಿ, 'ಕಂಠೀರವ' ಹಾಗೂ 'ಕಠಾರಿವೀರ ಸುರಸುಂದರಾಂಗಿ' ಚಿತ್ರಗಳಲ್ಲಿ ಸಿನಿಪ್ರೇಕ್ಷಕರಿಗೆ ದರ್ಶನ ಕೊಟ್ಟಿದ್ದ ರಿಷಿಕಾ, ಇನ್ಮುಂದೆ ಕಿರುತೆರೆಯನ್ನೂ ಬಿಡುವುದಿಲ್ಲ ಎಂಬುದು ಕೆಲವರನ್ನು ಕಂಗಾಲಾಗಿಸಿದೆಯಂತೆ! (ಒನ್ ಇಂಡಿಯಾ ಕನ್ನಡ)

  English summary
  Actress Rishika Singh is again in News. There is news buzz that she wiil appears soon with a TV reality show 'Ragale with Rishika'. But, there is no confirmation for this till the date. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X