»   » ರಿಯಾಲಿಟಿ ಶೋ ನಿರೂಪಕರಾಗಿ ಆರ್ ಜೆ ರೋಹಿತ್

ರಿಯಾಲಿಟಿ ಶೋ ನಿರೂಪಕರಾಗಿ ಆರ್ ಜೆ ರೋಹಿತ್

Posted By:
Subscribe to Filmibeat Kannada

ಜೀ ಕನ್ನಡ ವಾಹಿನಿ ಅನೇಕ ಹೊಸ ಹೊಸ ಪ್ರಯೋಗಗಳನ್ನು ಮಾಡಿದ್ದು ಅವುಗಳಲ್ಲಿ 'ವೀಕೆಂಡ್ ವಿಥ್ ರಮೇಶ್' ಮತ್ತು 'ಲೈಫ್ ಸೂಪರ್ ಗುರೂ' ಕಾರ್ಯಕ್ರಮಗಳು ಕೂಡಾ ಸೇರಿವೆ. ಇದೀಗ 'ಡಿವೈಡೆಡ್' ಎಂಬ ಮತ್ತೊಂದು ವಿನೂತನ ರಿಯಾಲಿಟಿ ಶೋ ಪ್ರಾರಂಭಿಸುತ್ತಿದೆ.

ರಾಕ್ ಸ್ಟಾರ್ ಆರ್. ಜೆ. ರೋಹಿತ್ (ಬಿಗ್ ಬಾಸ್ ಸೀಸನ್ 2 ಸ್ಪರ್ಧಿ) ನಿರೂಪಣೆಯಲ್ಲಿ ಮೂಡಿಬರಲಿರುವ ಈ ಶೋ 10 ಲಕ್ಷ ರುಪಾಯಿಯ ಬಹುಮಾನವನ್ನು ಒಳಗೊಂಡಿದ್ದು, ಪ್ರತಿ ಸಂಚಿಕೆಯಲ್ಲಿ 3 ಸ್ಪರ್ಧಿಗಳು ಭಾಗವಹಿಸುತ್ತಾರೆ. ಈ ಮೂರೂ ಜನ ಒಬ್ಬರಿಗೊಬ್ಬರು ಪರಿಚಿತರಾಗೋದು 'ಡಿವೈಡೆಡ್' ವೇದಿಕೆಯ ಮೇಲೆ ಬಂದಾಗಲೇ. ಒಟ್ಟು ನಾಲ್ಕು ರೌಂಡ್ ಗಳಲ್ಲಿ 10 ಪ್ರಶ್ನೆಗಳನ್ನು ಇಲ್ಲಿ ಸ್ಪರ್ಧಿಗಳು ಎದುರಿಸಬೇಕಾಗಿರುತ್ತೆ.

RJ Rohit1

ಮೊದಲನೇ ರೌಂಡ್ ನಲ್ಲಿ 25 ಸಾವಿರ ಬಹುಮಾನದ ನಾಲ್ಕು ಪ್ರಶ್ನೆಗಳನ್ನು ಕೇಳಲಾಗುತ್ತೆ. ಎರಡನೇ ರೌಂಡ್ ನಲ್ಲಿ 50 ಸಾವಿರಕ್ಕೆ ಮೂರು ಪ್ರಶ್ನೆಗಳಿಗೆ ಉತ್ತರಿಸಬೇಕು. ಮೂರನೇ ರೌಂಡ್ ನಲ್ಲಿ 1 ಲಕ್ಷ 25 ಸಾವಿರ ರೂಗಳಿಗೆ 2 ಪ್ರಶ್ನೆಗಳನ್ನು ಸ್ಪರ್ಧಿಗಳಿಗೆ ಕೇಳಲಾಗುತ್ತೆ. ಕೊನೆಯ ಹಾಗೂ ನಾಲ್ಕನೆಯ ಸುತ್ತಿನಲ್ಲಿ 5 ಲಕ್ಷ ಮೊತ್ತದ 1 ಪ್ರಶ್ನೆಯನ್ನು ಸ್ಪರ್ಧಿಗಳು ಎದುರಿಸಬೇಕಾಗುತ್ತದೆ.

"ಇಲ್ಲಿ ಒಂದು ಪ್ರಶ್ನೆಗೆ ಮೂರು ಜನ ಸ್ಪರ್ಧಿಗಳು ಒಟ್ಟಾಗಿ ಚರ್ಚಿಸಿ ಒಮ್ಮತಕ್ಕೆ ಬಂದು ಉತ್ತರಿಸಬೇಕು. ಇದಕ್ಕೆ 100 ಸೆಕೆಂಡುಗಳ ಕಾಲಾವಕಾಶವಿರುತ್ತೆ. ಪ್ರಶ್ನೆಯೊಂದಕ್ಕೆ ಉತ್ತರಿಸಲು 100 ಸೆಕೆಂಡುಗಳ ರಿವರ್ಸ ಕೌಂಟಿಗ್ ಶುರುವಾಗಿರುತ್ತೆ. ಸೆಕೆಂಡುಗಳು ಕಡಿಮೆಯಾದಷ್ಟು ಪ್ರಶ್ನೆಯ ಒಟ್ಟು ಮೊತ್ತದ ಹಣ ಕೂಡಾ ಕಡಿತವಾಗುತ್ತದೆ.

RJ Rohit2

ಇಡೀ ಸ್ಪರ್ಧೆಯಲ್ಲಿ ಒಟ್ಟು 3 ಲೈಫ್ ಲೈನ್ ಗಳಿರುತ್ತವೆ. (ಎರಡು ತಪ್ಪು ಉತ್ತರಗಳಿಗೆ ಮತ್ತು 1 ಪ್ರಶ್ನೆಯನ್ನು 'ಪಾಸ್' ಮಾಡುವುದಕ್ಕೆ) ಅಂತಿಮವಾಗಿ ಮೂವರೂ ಸ್ಪರ್ಧಿಗಳು ಗೆಲ್ಲುವ ಹಣದಲ್ಲಿ ಯಾವ ಸ್ಪರ್ಧಿ ಎಷ್ಟು ಹಣ ಹಂಚಿಕೊಳ್ಳಬೇಕು? ಇದರಲ್ಲಿ ಯಾರ ಪಾಲು ಎಷ್ಟು? ಎಂಬುದನ್ನು ಕೂಡಾ ಸ್ಪರ್ಧಿಗಳೇ ನಿರ್ಧರಿಸಬೇಕು. ಅದಕ್ಕೂ 15 ಸೆಕೆಂಡುಗಳ ಸಮಯವಿರುತ್ತೆ.

ಈ 15 ಸೆಕೆಂಡುಗಳಲ್ಲಿ ಒಮ್ಮತಕ್ಕೆ ಬರದೇ ಹೋದರೆ ಮತ್ತೆ 100 ಸೆಕೆಂಡುಗಳ ಸಮಯ ನೀಡಿ ಗೆದ್ದಿರುವ ಹಣ ಸೆಕೆಂಡುಗಳ ಲೆಕ್ಕದಲ್ಲಿ ಕಡಿತಗೊಳ್ಳುತ್ತದೆ. ಎಂಡೋಮಾಲ್ ಪ್ರೊಡಕ್ಷನ್ ಸಂಸ್ಥೆ 'ಡಿವೈಡೆಡ್' ಕಾರ್ಯಕ್ರಮದ ನಿರ್ಮಾಣ ಮಾಡುತ್ತಿದ್ದು. ಜನವರಿ 3 ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 8 ರಿಂದ 9ರವರೆಗೆ ಪ್ರಸಾರವಾಗಲಿದೆ ಎಂದು ಜೀ ಕನ್ನಡ ವಾಹಿನಿಯ ಬಿಜಿನೆಸ್ ಹೆಡ್ ಸಿಜು ಪ್ರಭಾಕರನ್ ಮತ್ತು ಪ್ರೊಗ್ರಾಮಿಂಗ್ ಹೆಡ್ ರಾಘವೇಂದ್ರ ಹುಣಸೂರು ತಿಳಿಸಿದ್ದಾರೆ. (ಫಿಲ್ಮಿಬೀಟ್ ಕನ್ನಡ)

English summary
Rock Star RJ Rohith now turns as telvevision host. The new Game Show 'Divided' Will start from 3rd January 2015 8 to 9pm only on Zee Kannada. Rohith is all set to host a reality show, in which the winner of the reality show will get Rs 10 lakh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada