»   » ಸಲ್ಮಾನ್ ಖಾನ್, ಅಜಯ್ ದೇವ್ಗನ್ ಬಾಯಲ್ಲಿ ಕನ್ನಡ ಪದ.!

ಸಲ್ಮಾನ್ ಖಾನ್, ಅಜಯ್ ದೇವ್ಗನ್ ಬಾಯಲ್ಲಿ ಕನ್ನಡ ಪದ.!

Posted By:
Subscribe to Filmibeat Kannada

ಬಾಲಿವುಡ್ ಟೈಗರ್ ಸಲ್ಮಾನ್ ಖಾನ್ ಕನ್ನಡ ಮಾತನಾಡಿದ್ದಾರೆ.! ಕನ್ನಡ ರಿಯಾಲಿಟಿ ಶೋನ ಪ್ರಮೋಟ್ ಮಾಡಿದ್ದಾರೆ.!

ಹೌದು, ಕನ್ನಡದ ಎಲ್ಲಾ ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಖುಷಿಯ ವಿಚಾರ ಅಂದ್ರೆ ಇದೆ. ಬಾಲಿವುಡ್ ಸಿಲ್ವರ್ ಸ್ಕ್ರೀನ್ ಮೇಲೆ ಘರ್ಜಿಸುವ ಸಲ್ಲು ಭಾಯ್, ಅಪ್ಪಟ ಕನ್ನಡ ರಿಯಾಲಿಟಿ ಶೋ ಪ್ರೋಮೋದಲ್ಲಿ ಕಾಣಿಸಿಕೊಂಡು, ಕನ್ನಡಿಗರನ್ನ ಚಿಕಿತಗೊಳಿಸಿದ್ದಾರೆ.

ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ 'ಹಳ್ಳಿ ಹೈದ ಪ್ಯಾಟೆಗ್ ಬಂದ ಸೀಸನ್-2' ಪ್ರೋಮೋದಲ್ಲಿ ಸಲ್ಮಾನ್ ಖಾನ್ ಮಿಂಚಿದ್ದಾರೆ.


''ಜಂಗಲ್ ಕೇ ಲಡಕೋಂಕೇ ಸಾಥ್ ಶೆಹರ್ ಕಿ ಲಡಕಿಯಾ...ಹಳ್ಳಿ ಹೈದ ಪ್ಯಾಟೆಗ್ ಬಂದ ಸೀಸನ್ 2..ಧೇಕಿಯೇ ಸುವರ್ಣ ಟಿವಿ ಪೆ'' ಅಂತ ಹೇಳ್ತಾ ರಿಯಾಲಿಟಿ ಶೋಗೆ ಪ್ರಚಾರ ನೀಡಿದ್ದಾರೆ. [ಸೀಸನ್ -2 ನಲ್ಲಿ ಮತ್ತೆ ಪ್ಯಾಟೆಗೆ ಬಂದಿಳಿದ ಹಳ್ಳಿ ಹೈಕಳು]

ಅಲ್ಲದೇ, 'ಹಳ್ಳಿ ಹೈದ ಪ್ಯಾಟೆಗ್ ಬಂದ' ಅನ್ನುವ ಅಚ್ಚ ಕನ್ನಡ ಪದಗಳನ್ನ ತಮ್ಮದೇ ಶೈಲಿಯಲ್ಲಿ ಹೇಳಿದ್ದಾರೆ. ಜೊತೆಗೆ ತಮ್ಮ 'ಭಜರಂಗಿ ಭಾಯ್ ಜಾನ್' ಚಿತ್ರವನ್ನ ವೀಕ್ಷಿಸುವಂತೆ ಇದೇ ಪ್ರೋಮೋದಲ್ಲಿ ರಾಜ್ಯದ ಜನತೆಗೆ ಸಲ್ಮಾನ್ ಖಾನ್ ಹೇಳಿದ್ದಾರೆ.

ಥೇಟ್ ಇದೇ ಸ್ಟೈಲ್ ನಲ್ಲಿ ನಟ ಅಜಯ್ ದೇವ್ಗನ್ ಕೂಡ 'ಹಳ್ಳಿ ಹೈದ ಪ್ಯಾಟೆಗ್ ಬಂದ ಸೀಸನ್-2'ನ ಪ್ರಮೋಟ್ ಮಾಡಿ ತಮ್ಮ 'ದೃಶ್ಯಂ' ಚಿತ್ರಕ್ಕೂ ಪ್ರಚಾರ ನೀಡಿದ್ದಾರೆ.


ಅಂತೂ ಕನ್ನಡ ರಿಯಾಲಿಟಿ ಶೋಗಳಿಗೆ ಬಾಲಿವುಡ್ ಸೂಪರ್ ಸ್ಟಾರ್ ಗಳು ಪ್ರಚಾರ ನೀಡುವ ಮಟ್ಟಕ್ಕೆ ಬಂತು. ಇದಕ್ಕೆ ಉತ್ತಮ ಬೆಳವಣಿಗೆ ಅನ್ನಬಹುದಾ?

English summary
Bollywood Actor Salman Khan and Ajay Devgan has promoted Kannada Reality Show 'Halli Hyda Pyateg Banda'. Watch the video here.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada