For Quick Alerts
  ALLOW NOTIFICATIONS  
  For Daily Alerts

  BB7: ಖನ್ನಾ ಬಗ್ಗೆ ಏನು ಹೇಳದೆ ಹೊರಟ ಅನಿತಾ

  By ಜೇಮ್ಸ್ ಮಾರ್ಟಿನ್
  |

  ಕಲರ್ಸ್ ವಾಹಿನಿಯ ಅತಿದೊಡ್ಡ ರಿಯಾಲಿಟಿ ಶೋನಲ್ಲಿ ಮತ್ತೊಂದು ಎಲಿಮಿನೇಷನ್ ಆಗಿದೆ.ಹಿಂದಿ ಚಿತ್ರರಂಗದ ಮೊದಲ ಸೂಪರ್ ಸ್ಟಾರ್ ರಾಜೇಶ್ ಖನ್ನ ಅವರ ಲಿವ್ ಇನ್ ಪಾರ್ಟ್ನರ್ ಎಂದೇ ಖ್ಯಾತಿ ಗಳಿಸಿದ್ದ ಅನಿತಾ ಅಡ್ವಾಣಿ ಅವರು ಮನೆಯಿಂದ ಹೊರಬಿದ್ದಿದ್ದಾರೆ.

  ಮೂರು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ಅನಿತಾ ಅವರಿಗೂ ಮುನ್ನ ಹಜೇಲ್ ಕೀಚ್ ಹಾಗೂ ರತನ್ ರಜಪೂತ್ ಅವರು ಮನೆಯಿಂದ ಹೊರಬಿದ್ದಿದ್ದರು. ಜನರಿಗೆ ಮನರಂಜನೆ ನೀಡುವಲ್ಲಿ ಈ ಮೂವರು ಸ್ಪರ್ಧಿಗಳು ವಿಫಲರಾಗಿದ್ದರಲ್ಲದೆ ಕೆಲವು ಟಾಸ್ಕ್ ಗಳಲ್ಲಿ ಉತ್ತಮ ಸಾಧನೆ ತೋರದಿರುವುದೇ ಇವರನ್ನು ಮನೆಯಿಂದ ಹೊರಹಾಕಲು ಪ್ರಮುಖ ಕಾರಣವಾಗಿದೆ.

  ಬಿಗ್ ಬಾಸ್ ಮನೆಗೆ ಬರುವಾಗಲೇ ಶೋಕತಪ್ತ ಮುಖ ಹೊತ್ತು ಬಂದಿದ್ದ ಅನಿತಾ ಬಂದ ರೀತಿಯಲ್ಲೇ ಹಿಂತಿರುಗಿದ್ದಾರೆ. ಮನೆಯಲ್ಲಿ ಆಕೆಯ ಗೌರವಕ್ಕೇನೂ ಕಮ್ಮಿಯಾಗಲಿಲ್ಲ. ಹೊಸ ಜೀವನಕ್ಕೆ ಕಾಲಿಡಲು ನನಗೆ ಬಿಗ್ ಬಾಸ್ ಮನೆ ಸಹಾಯಕವಾಗಲಿದೆ ಎಂದಿದ್ದ ಅನಿತಾ ಹೊಸ ಜೀವನ ಕಂಡು ಕೊಂಡರೋ ಅಥವಾ ಹಳೆ ನೆನಪಿನ ಗುಂಗಿನಲ್ಲೇ ಮತ್ತೆ ಮುಳುಗಿದರೋ ದೇವರೇ ಬಲ್ಲ.

  ಅವರ ಬಗ್ಗೆ ಇದ್ದ ಕುತೂಹಲವೆಂದರೆ ರಾಜೇಶ್ ಖನ್ನ ಬಗ್ಗೆ ಜನಕ್ಕೆ ಗೊತ್ತಿಲ್ಲದ ಸತ್ಯ ಏನಾದರೂ ಇದೆಯೇ? ಅದನ್ನು 50 ವರ್ಷದ ಆನಿತಾ ಹೇಳುತ್ತಾರೆಯೇ ಎಂಬ ಕೆಟ್ಟ ಕುತೂಹಲ ಮೂರು ವಾರಗಳ ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟಿತ್ತು.. ಆದರೆ, ಆಗಿದ್ದೇ ಬೇರೆ ಬಿಗ್ ಬಾಸ್ ಮನೆ ಕಥೆ, ವಾರದ ವಾರೆನೋಟ ಮುಂದೆ ಓದಿ...

  ಅನಿತಾ ಹೊರ ಹೋಗಿದ್ದು ಏಕೆ?

  ಅನಿತಾ ಹೊರ ಹೋಗಿದ್ದು ಏಕೆ?

  ಅನಿತಾ ಅವರ ವಯಸ್ಸಿಗೆ ಮರ್ಯಾದೆ ಕೊಟ್ಟು ಅವರನ್ನು ಆರಂಭದಲ್ಲೆ ಸ್ವರ್ಗಕ್ಕೆ ಕಳಿಸಲಾಯಿತು. ಆದರೆ, ಸ್ವರ್ಗದಲ್ಲಿ ಅಡುಗೆ ಕೆಲಸ ಬಿಟ್ಟು ಮಿಕ್ಕಂತೆ ಅಘೋಷಿತ ಗುಂಪುಗಾರಿಕೆಯ ಪಾಲುದಾರಿಕೆಯಲ್ಲಿ ಅನಿತಾ ಪಾಲ್ಗೊಂಡಿದ್ದರು. ಆದರೆ, ಇದರಿಂದ ಯಾವುದೆ ರಂಜನೆ ಸಿಗಲಿಲ್ಲ.

  ಕನಿಷ್ಠ ಸುಳ್ಳು ಜಗಳ ಆಡಲು ಕೂಡಾ ಬಾರದೆ ಹೋದ ಅನಿತಾ ಅವರು ಗೌಹರ್ ಜತೆ ಆಗಾಗ ಮಾತಿನ ಚಕಮಕಿ ನಡೆಸಿದರು ಅಷ್ಟೇ.

  ಗುಂಪಿಗೆ ಸೇರದ ವ್ಯಕ್ತಿ

  ಗುಂಪಿಗೆ ಸೇರದ ವ್ಯಕ್ತಿ

  ವೋಟಿಂಗ್ ಸಂದರ್ಭದಲ್ಲಿ ಕೇವಲ ಒಂದು ವೋಟ್ ಮಾತ್ರ ಅನಿತಾ ಪಡೆದಿದ್ದರು. ಸ್ಪರ್ಧಿಯನ್ನು ಉಳಿಸಲಿಕ್ಕೆ ಮತದಾನ ಪ್ರಕ್ರಿಯೆ ನಡೆಸಲಾಗಿದ್ದು ವಿಶೇಷ

  ಆಂಡಿ ಜತೆ ಅನಿತಾ

  ಆಂಡಿ ಜತೆ ಅನಿತಾ

  ಆರಂಭದ ವಾರದಲ್ಲಿ ರಾಜೇಶ್ ಖನ್ನ ಜತೆ ಒಡನಾಟದ ಕಥೆಯನ್ನು ಹೇಳಲು ಹೊರಟ ಅನಿತಾ ಆಂಡಿಗೆ ಪೂರ್ತಿ ಕಥೆ ಹೇಳುವ ಮುನ್ನವೆ ಸುಮ್ಮನಾದರು.

  ಅರ್ಮಾನ್ ಜತೆ ಅನಿತಾ

  ಅರ್ಮಾನ್ ಜತೆ ಅನಿತಾ

  ಅನಿತಾ ಸ್ವರ್ಗದಲ್ಲೆ ಉಳಿಯಲಿ ಎಂದು ತನೀಶಾ ಬಿಗ್ ಬಾಸ್ ಗೆ ಹೇಳಿದಳು ಆದರೆ, ಇನ್ನೊಂದು ಹೆಸರಿನ ಬಗ್ಗೆ ಗೊಂದಲ ಮೂಡಿತು. ಅರ್ಮಾನ್ ಈ ಸಮಯದಲ್ಲಿ ಆಕ್ಷೇಪ ವ್ಯಕ್ತಪಡಿಸಿದರೂ ನಂತರ ಮಾತಿನ ಚಕಮಕಿ ನಿಲ್ಲಿಸಿಬಿಟ್ಟ. ಅನಿತಾ ಸ್ವರ್ಗದಲ್ಲೇ ಇರಲಿ ಎಂದು ಅರ್ಮಾನ್ ಕೂಡಾ ಬಯಸಿದ

  ಕಥೆ ಹಾಗೆ ಉಳಿಯಿತು

  ಕಥೆ ಹಾಗೆ ಉಳಿಯಿತು

  ರಾಜೇಶ್ ಖನ್ನಾ ಅವರ ಜತೆ ಲಿವ್ ಇನ್ ಸಂಬಂಧದಲ್ಲಿದ್ದೆ ಎಂದು ರಾಜೇಶ್ ಖನ್ನಾ ಅವರ ಕುಟುಂಬಕ್ಕೆ ನೋಟಿಸ್ ಕಳಿಸಿದ್ದ ಅನಿತಾ ಅವರು ಖನ್ನಾ ಜತೆಗಿನ ಹಳೆ ಫೋಟೋದಲ್ಲಿ

   ಅಸಲಿ ಕಥೆ ಗೊತ್ತಿಲ್ಲ

  ಅಸಲಿ ಕಥೆ ಗೊತ್ತಿಲ್ಲ

  ರಾಜೇಶ್ ಖನ್ನಾ ಅವರ ಜತೆ ಲಿವ್ ಇನ್ ಸಂಬಂಧದಲ್ಲಿದ್ದರೂ ಆಸ್ತಿಗಾಗಿ ಅನಿತಾ ಬಯಸಿದ್ದರು ಎಂಬ ಸುದ್ದಿ ಹಬ್ಬಿತ್ತು ಆಕೆಗೂ ಮನಸ್ಸಿಗೆ ನೋವುಂಟು ಮಾಡಿತು. ಬಿಗ್ ಬಾಸ್ ಮನೆ ನೋವು ತೋಡಿಕೊಳ್ಳಲು ಬಂದಿದ್ದರು.

  ಹಜೇಲ್ ಕೀಚ್ ಬ್ಯಾಕ್

  ಹಜೇಲ್ ಕೀಚ್ ಬ್ಯಾಕ್

  ಮೊದಲ ವಾರ ಮನೆಯಿಂದ ಹೊರಬಿದ್ದ ಬಾಡಿಗಾರ್ಡ್ ಚಿತ್ರದ ಬೆಡಗಿ ಹಜೇಲ್ ಕೀಚ್ ಮತ್ತೊಮ್ಮೆ ಬಿಗ್ ಬಾಸ್ ಮನೆಗೆ ಬರುತ್ತಾಳೆ ಎಂಬ ಸುದ್ದಿಯೂ ಇದೆ

  ಅದಲು ಬದಲು ಕಾರ್ಯಕ್ರಮ

  ಅದಲು ಬದಲು ಕಾರ್ಯಕ್ರಮ

  ಪ್ರಥಮ ಬಾರಿಗೆ ಸ್ವರ್ಗ ನರಕವಾಸಿಗಳ ನಡುವೆ ಭಾರಿ ಅದಲು ಬದಲು ಕಾರ್ಯಕ್ರಮ ನಡೆಯಿತು. ಎಲ್ಲಿ ನರಕದಲ್ಲಿ ಹಾಗೂ ಶಿಲ್ಪ ಸ್ವರ್ಗದಲ್ಲಿ ಇರುವುದು ಮಿಕ್ಕವರು ಅದಲು ಬದಲಾಗುವುದು ಎಂದು ನಿಗದಿಯಾಯಿತು

   mohawk ಹೇರ್ ಸ್ಟೈಲ್

  mohawk ಹೇರ್ ಸ್ಟೈಲ್

  ಸಂಗ್ರಾಮ್ ಗೆ mohawk ಹೇರ್ ಸ್ಟೈಲ್ ನೀಡಿ ಎಲ್ಲರನ್ನು ದಂಗುಬಡಿಸಿದ್ದ ಬಿಗ್ ಬಾಸ್ ನಂತರ ಪ್ರತ್ಯೂಷಾಗೆ ಕರೆಂಟ್ ಶಾಕ್ ನೀಡಿದ್ದು ಎಲ್ಲರಿಗೂ ಶಾಕ್ ಆಯಿತು.

  'ಸ್ವಯಂವರ' ಸುಂದರಿ ರತನ್

  'ಸ್ವಯಂವರ' ಸುಂದರಿ ರತನ್

  'ಸ್ವಯಂವರ' ಸುಂದರಿ ರತನ್ ಗೆ ವಿಶಿಷ್ಟ ಸ್ನಾನ ಮಾಡುವ ಅವಕಾಶ ಬಿಗ್ ಬಾಸ್ ಒದಗಿಸಿದರು

  English summary
  Bigg Boss 7 third week eliminations saw Salman Khan calling out Anita Advani to join him from the house. Previously, Hazel Keech and Ratan Rajput got evicted from the house and now Anita Advani, looks like the under performers are let out not wanting to bore the viewers any further.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X