For Quick Alerts
  ALLOW NOTIFICATIONS  
  For Daily Alerts

  ಬಿಗ್‌ಬಾಸ್ ನಿರೂಪಣೆ ಮಾಡಲು ಸಮಂತಾ ಪಡೆಯುತ್ತಿದ್ದಾರೆ ಭಾರಿ ದೊಡ್ಡ ಮೊತ್ತ

  |

  ತೆಲುಗು ಬಿಗ್‌ಬಾಸ್ ಸೀಸನ್ 4 ಒಳ್ಳೆಯ ಟಿಆರ್‌ಪಿ ಪಡೆಯುತ್ತಿದೆ. ಈವರೆಗೆ ಬಿಗ್‌ಬಾಸ್ ಸೀಸನ್‌ಗಳಿಗೆ ಹೋಲಿಸಿದರೆ ಈ ಬಾರಿಯ ಬಿಗ್‌ಬಾಸ್‌ಗೆ ಜನಸ್ಪಂದನೆ ಹೆಚ್ಚಿಗೆ ದೊರೆತಿದೆ.

  ನಟ ನಾಗಾರ್ಜುನ ಅವರ ನಿರೂಪಣಾ ಶೈಲಿಯೂ ಜನರಿಗೆ ಇಷ್ಟವಾಗಿದೆ. ಆದರೆ ಹಠಾತ್ತನೆ ನಾಗಾರ್ಜುನ ಬಿಗ್‌ಬಾಸ್ ನಿರೂಪಣೆಯಿಂದ ಹೊರಗೆ ಉಳಿದಿದ್ದಾರೆ. ಅವರ ಜಾಗಕ್ಕೆ ನಾಗಾರ್ಜುನ ಸೊಸೆ, ನಟಿ ಸಮಂತಾ ಬಂದಿದ್ದಾರೆ.

  ಚಿರಂಜೀವಿ ಸೊಸೆ-ನಾಗಾರ್ಜುನ ಸೊಸೆ, ಅಡುಗೆ ಮನೆಯಲ್ಲಿ ಪ್ರತಿಭಾ ಪ್ರದರ್ಶನ!ಚಿರಂಜೀವಿ ಸೊಸೆ-ನಾಗಾರ್ಜುನ ಸೊಸೆ, ಅಡುಗೆ ಮನೆಯಲ್ಲಿ ಪ್ರತಿಭಾ ಪ್ರದರ್ಶನ!

  ಹೌದು, ಸಮಂತಾ ಈಗಾಗಲೇ ಬಿಗ್‌ಬಾಸ್ ನ ಒಂದು ಎಪಿಸೋಡ್ ಅನ್ನು ನಿರೂಪಣೆ ಮಾಡಿದ್ದಾರೆ. ನಟ ನಾಗಾರ್ಜುನ, ಚಿತ್ರೀಕರಣದಲ್ಲಿ ಭಾಗವಹಿಸಬೇಕಾಗಿ ಬಂದ ಕಾರಣ ಸಮಂತಾ ಗೆ ನಿರೂಪಣೆ ಜವಾಬ್ದಾರಿಯನ್ನು ಹೊರಿಸಿ ಹೋಗಿದ್ದಾರೆ ನಾಗಾರ್ಜುನ.

  ಭಾರಿ ಮೊತ್ತ ಪಡೆದಿರುವ ನಟಿ ಸಮಂತಾ

  ಭಾರಿ ಮೊತ್ತ ಪಡೆದಿರುವ ನಟಿ ಸಮಂತಾ

  ಸಮಂತಾ ನಿರೂಪಣೆ ಮಾಡಿದ್ದ ಎಪಿಸೋಡ್ ಸಹ ಒಳ್ಳೆಯ ಟಿಆರ್‌ಪಿ ಗಳಿಸಿದೆ. ಆದರೆ ಬಿಗ್‌ಬಾಸ್ ಶೋ ನಿರೂಪಣೆ ಮಾಡಲು ಸಮಂತಾ ಪಡೆದಿರುವ ಮೊತ್ತ ಹಲವರ ಹುಬ್ಬೇರಿಸಿದೆ. ಭಾರಿ ದೊಡ್ಡ ಮೊತ್ತವನ್ನೇ ಸಂಭಾವನೆಯಾಗಿ ಪಡೆದಿದ್ದಾರೆ ಸಮಂತಾ.

  ಆರು ಎಪಿಸೋಡ್‌ಗಳ ನಿರೂಪಣೆ ಮಾಡಲಿದ್ದಾರೆ ಸಮಂತಾ

  ಆರು ಎಪಿಸೋಡ್‌ಗಳ ನಿರೂಪಣೆ ಮಾಡಲಿದ್ದಾರೆ ಸಮಂತಾ

  ಮೂರು ವಾರಗಳ ಕಾಲ ಆರು ಎಪಿಸೋಡ್‌ಗಳನ್ನು ಸಮಂತಾ ನಡೆಸಿಕೊಡಲಿದ್ದಾರೆ. ಈ ಆರೊ ಎಪಿಸೋಡ್ಗೆ ಸಮಂತಾ ಪಡೆಯುತ್ತಿರುವುದು ಬರೋಬ್ಬರಿ 2.10 ಕೋಟಿ ರೂಪಾಯಿಗಳಂತೆ! ಇದು ನಾಗಾರ್ಜುನ ಪಡೆಯುತ್ತಿದ್ದ ಮೊತ್ತಕ್ಕಿಂತಲೂ ಹೆಚ್ಚು.

  ಪೂರ್ತಿ ಸೀಸನ್‌ ಗೆ ನಾಗಾರ್ಜುನ ಪಡೆದಿದ್ದು 8 ಕೋಟಿ

  ಪೂರ್ತಿ ಸೀಸನ್‌ ಗೆ ನಾಗಾರ್ಜುನ ಪಡೆದಿದ್ದು 8 ಕೋಟಿ

  ನಾಗಾರ್ಜುನ ಅವರು ಇಡೀಯ ಬಿಗ್‌ಬಾಸ್ ಸೀಸನ್ ಅನ್ನು ನಿರೂಪಣೆ ಮಾಡಲು ಎಂಟು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು. ಆದರೆ ಸಮಂತಾ ಕೇವಲ ಆರು ಎಪಿಸೋಡ್‌ಗೆ 2.10 ಕೋಟಿ ಹಣ ಪಡೆಯುತ್ತಿದ್ದಾರೆ.

  ಹಿಮಾಲಯದ ಬಳಿ ನಾಗಾರ್ಜುನ

  ಹಿಮಾಲಯದ ಬಳಿ ನಾಗಾರ್ಜುನ

  ಇನ್ನು ನಟ ನಾಗಾರ್ಜುನ ತಮ್ಮ 'ವೈಲ್ಡ್ ಡಾಗ್ ಇನ್ ಮನಾಲಿ' ಸಿನಿಮಾದ ಚಿತ್ರೀಕರಣಕ್ಕೆ ಹಿಮಾಲಯಕ್ಕೆ ತೆರಳಿದ್ದಾರೆ. ಅಲ್ಲಿಂದ ವಿಡಿಯೋ ಹಂಚಿಕೊಂಡಿರುವ ಅವರು, ಸಮುದ್ರಮಟ್ಟದಿಂದ 13,000 ಅಡಿ ಮೇಲಿದ್ದೇನೆ, ಏಳು ತಿಂಗಳ ನಂತರ ಇಂಥಹಾ ಸ್ವರ್ಗಕ್ಕೆ ಬಂದಿದ್ದೇನೆ' ಎಂದಿದ್ದಾರೆ.

  English summary
  Samantha getting big amount as remuneration for hosting Bigg Boss Telugu seson 4.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X