Don't Miss!
- News
Breaking; ಕೋಲಾರವೇ ಕ್ಷೇತ್ರವೇ ಏಕೆ, ಸಿದ್ದರಾಮಯ್ಯ ಪ್ರತಿಕ್ರಿಯೆ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Sports
ಜಿಂಬಾಬ್ವೆ vs ವೆಸ್ಟ್ ಇಂಡೀಸ್: ಮೊದಲ ಟೆಸ್ಟ್ 2ನೇ ದಿನ: Live score
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಟ್ರೋಲ್ ಮಾಡೋಕು ಮುಂಚೆ ಸಮೀರಾಚಾರ್ಯ ಮಾತು ಕೇಳಿ!
Recommended Video

ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಟ್ರೆಂಡ್ ಆಗಿ ಬಿಟ್ಟಿತ್ತು. ಎಲ್ಲರೂ ಆ ವಿಡಿಯೋವನ್ನು ತಮ್ಮ ತಮ್ಮ ಶೈಲಿಯಲ್ಲಿ ಟ್ರೋಲ್ ಮಾಡಿ ಪ್ರತಿಭೆ ತೋರಿಸುತ್ತಿದ್ದರು. ಅದು ಬೇರೆ ಯಾರದ್ದೋ ಅಲ್ಲ ಸಮೀರಾಚಾರ್ಯ ಮತ್ತು ಅವರ ಪತ್ನಿಯ ಸಂಭಾಷಣೆಯ ವಿಡಿಯೋ.
'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಮೀರಾಚಾರ್ಯ ಸರಿ ಉತ್ತರ ಹೇಳಿದ್ದ ತಮ್ಮ ಹೆಂಡತಿಗೆ ವಾದಿಸಿದ್ದರು. ಸಮೀರಾಚಾರ್ಯ ಅವ್ರ ಹೆಂಡತಿಗೆ ಗೌರವ ನೀಡಿಲ್ಲ ಎಂದು ಆ ವಿಡಿಯೋ ದೊಡ್ಡ ಚರ್ಚೆಗೆ ಕಾರಣವಾಯ್ತು. ಅಲ್ಲಿಂದ ಆರಂಭವಾದ ಟ್ರೋಲ್ ಗಳು ಇನ್ನೂ ಯಶಸ್ವಿಯಾಗಿ ಓಡುತ್ತಿವೆ.
ಆತುರದಿಂದ
ಕೈಸುಟ್ಟುಕೊಂಡ
ಸಮೀರಾಚಾರ್ಯ:
ರಾಮಾಯಣ
ಕುರಿತ
ಪ್ರಶ್ನೆಗೆ
ತಪ್ಪು
ಉತ್ತರ
ಈ ಘಟನೆಯ ಬಗ್ಗೆ ಈಗ ಸ್ವತಃ ಸಮೀರಾಚಾರ್ಯ ಮಾತನಾಡಿದ್ದಾರೆ. ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ತಾವು 'ಕನ್ನಡದ ಕೋಟ್ಯಾಧಿಪತಿ' ಹಾಗೂ 'ಬಿಗ್ ಬಾಸ್' ನಲ್ಲಿ ಹೆಂಡತಿಯ ಜೊತೆಗೆ ಇರುವ ಎರಡು ಭಾವನಾತ್ಮಕ ವಿಡಿಯೊ ಮೂಲಕ ಟ್ರೋಲ್ ಗಳಿಗೆ ಉತ್ತರ ನೀಡಿದ್ದಾರೆ. ಮುಂದೆ ಓದಿ....

ಬಹಳ ದಿನದಿಂದ ನನ್ನನ್ನು ಎಲ್ಲರೂ ನೆನೆಸಿಕೊಳ್ಳುತ್ತಿದ್ದೀರಿ
''ಬಹಳ ದಿನದಿಂದ ನನ್ನನ್ನು ಎಲ್ಲರೂ ನೆನೆಸಿಕೊಳ್ಳುತ್ತಿದ್ದೀರಿ. ಎಲ್ಲರೂ ಬಹಳ ಪ್ರೀತಿ ಮಾಡುತ್ತಿದ್ದೀರಿ. ಆದರೆ, ನಿಜವಾಗಿ ಏನು ಮಾಡುತ್ತಿದ್ದೀರಿ ಅಂತ ತಿಳಿಯುತ್ತಿಲ್ಲ. ನನ್ನ ಫೇಸ್ ಬುಕ್ ಪೇಜ್ ನಲ್ಲಿ ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಸಮೀರಾಚಾರ್ಯ ಫುಲ್ ವೈರಲ್ ಆಗುತ್ತಿದ್ದಾರೆ ಎಂದು ಎಲ್ಲರೂ ಕೇಳುತ್ತಿದ್ದರು. ಹಾಗದ್ರೆ, ಸಮೀರಾಚಾರ್ಯ ವೈರಲ್ ಆಗುವುದಕ್ಕೆ ಏನು ಕಾರಣ?'' - ಸಮೀರಾಚಾರ್ಯ, ಬಿಗ್ ಬಾಸ್ ಕನ್ನಡ 5 ಸ್ಪರ್ಧಿ

ಒಳ್ಳೆಯ ಕೆಲಸ ವೈರಲ್ ಆಗಿರಲಿಲ್ಲ
''ಇಷ್ಟು ದಿನ ಸಮೀರಾಚಾರ್ಯ ಎಷ್ಟೊಂದು ಒಳ್ಳೆಯ ಕೆಲಸ ಮಾಡಿದ್ದರೂ ಅದೆಲ್ಲ ವೈರಲ್ ಆಗಿರಲಿಲ್ಲ. ಪಾಠ - ಪ್ರವಚನ ಮಾಡುತ್ತಿದ್ದರೂ ಅದನ್ನು ಯಾರು ಶೇರ್ ಮಾಡಲಿಲ್ಲ. ಪ್ರತಿಯೊಂದು ಹಳ್ಳಿ ಹಳ್ಳಿಗೆ ಹೋಗಿ ನಮ್ಮ ದೇಶದ ಸಂಸ್ಕೃತಿಯನ್ನು ಹೇಳಿದರೂ ಅದನ್ನು ಯಾರು ನೋಡಲಿಲ್ಲ. ಮಕ್ಕಳಿಗೆ ಮೌಲ್ಯಧಾರಿತ ಶಿಕ್ಷಣ ಹಾಗೂ ಸ್ಕೂಲ್ ತೆಗೆದು ರೈತರ ಮಕ್ಕಳಿಗೆ ಶಿಕ್ಷಣ ಕೊಡಬೇಕು ಅಂತ ಹೊರಟರು. ಅದನ್ನು ಯಾರು ವೈರಲ್ ಮಾಡಲಿಲ್ಲ.'' - ಸಮೀರಾಚಾರ್ಯ, ಬಿಗ್ ಬಾಸ್ ಕನ್ನಡ 5 ಸ್ಪರ್ಧಿ

ಎಲ್ಲರನ್ನು ನಗಿಸಲು ಪ್ರಯತ್ನ ಮಾಡಿದ್ದು ಮುಳುವಾಯ್ತು
''ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಗಂಡ ಹೆಂಡತಿ ಮಾತನಾಡಿ, ಆ ಕಾರ್ಯಕ್ರಮಕ್ಕೆ ನಗು ತಿಂಬಿ, ಎಲ್ಲರನ್ನು ನಗಿಸಲು ಪ್ರಯತ್ನ ಮಾಡಿದ್ರಲ್ಲ ಅದೇ ಸಮೀರಾಚಾರ್ಯರಿಗೆ ಮುಳುವಾಯ್ತು. ಸಮೀರಾಚಾರ್ಯ ತಮ್ಮ ಹೆಂಡತಿನ ಬೈದರು ಎಂದು ಎಷ್ಟೋ ಜನ ಹೇಳುತ್ತಿದ್ದಾರೆ. ಅವರಿಗೆ ನಾನು ಉತ್ತರ ಕೊಡಬೇಕಿದೆ.'' - ಸಮೀರಾಚಾರ್ಯ, ಬಿಗ್ ಬಾಸ್ ಕನ್ನಡ 5 ಸ್ಪರ್ಧಿ

ಪ್ರೀತಿ ಎಲ್ಲಿಯೂ ಹೋಗುವುದಿಲ್ಲ ಎಂದು ಹೆಂಡತಿನ ತೋರಿಸಿದ್ದೆ
''ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿಯೇ ಜಯಶ್ರೀ ಮೇಡಂ ಕೇಳುತ್ತಾರೆ 'ಮದುವೆ ಆದ ಮೇಲೆ ಗಂಡಂದಿರ ಪ್ರೀತಿ ಕಡಿಮೆ ಆಗುತ್ತದೆ ಯಾಕೆ..?, ಅದು ಎಲ್ಲಿಗೆ ಹೋಗುತ್ತದೆ..?' ಎಂದು ಹೇಳಿದ್ದರು. ಅದಕ್ಕೆ ನಾನು 'ಪ್ರೀತಿ ಎಲ್ಲಿಯೂ ಹೋಗುವುದಿಲ್ಲ. ನಾನು ಎಲ್ಲಿ ಹೋದರು ನನ್ನ ಪ್ರೀತಿ ಅಲ್ಲಿಗೆ ಬರುತ್ತದೆ' ಅಂತ ನನ್ನ ಹೆಂಡತಿಯನ್ನು ತೊರಿಸಿದ್ದೆ. ಇದು ಕೂಡ ಕೋಟ್ಯಾಧಿಪತಿ ಶೋ ನಲ್ಲಿಯೇ ನಡೆದಿದ್ದು.'' - ಸಮೀರಾಚಾರ್ಯ, ಬಿಗ್ ಬಾಸ್ ಕನ್ನಡ 5 ಸ್ಪರ್ಧಿ

ಬಿಗ್ ಬಾಸ್ ನಲ್ಲಿ ನನ್ನ ಹೆಂಡತಿಯ ಧ್ವನಿ ಕೇಳಿ ಕಣ್ಣೀರು ಹಾಕಿದ್ದೇನೆ
''ಬಿಗ್ ಬಾಸ್ ನಲ್ಲಿ ಇರುವಾಗ ಬರೀ ನನ್ನ ಹೆಂಡತಿಯ ಧ್ವನಿ ಕೇಳಿ ಕಣ್ಣೀರು ಹಾಕಿದ್ದೇನೆ. ಅವರು 'ಬಿಗ್ ಬಾಸ್' ಮನೆಯೊಳಗೆ ಆಕೆ ಬಂದಾಗ ಕೊಟ್ಟ ಮಾಲೆಯಲ್ಲಿ ಬಿದ್ದ ಒಂದೊಂದು ಹೂವನ್ನು ಆರಿಸಿ ತೆಗೆದು ಇಟ್ಟುಕೊಂಡಿದ್ದೆ. ಹೀಗಿದ್ದಾಗ, ಹೆಂಡತಿಯನ್ನು ಅಷ್ಟು ಜನರ ಮುಂದೆ ಬೈಯುವುದಕ್ಕೆ ಸಾಧ್ಯ ಆಗುತ್ತದೆಯಾ ವಿಚಾರ ಮಾಡಿ.'' ಸಮೀರಾಚಾರ್ಯ, ಬಿಗ್ ಬಾಸ್ ಕನ್ನಡ 5 ಸ್ಪರ್ಧಿ
ಹೆಂಡತಿಯನ್ನು ಪ್ರೀತಿ ಮಾಡಿದ್ರು ಟ್ರೋಲ್ ಮಾಡುತ್ತಾರೆ
''ಬಿಗ್ ಬಾಸ್ ನಲ್ಲಿ ನನ್ನ ಹೆಂಡತಿಯ ಪತ್ರ ನನಗೆ ಸಿಕ್ಕಿಲ್ಲ ಎಂದು ನೀರಿಗೆ ಹಾರಿದ್ದೆ. ಅದನ್ನು ಟ್ರೋಲ್ ಮಾಡಿದ್ರಿ. ಹಾಗಾದ್ರೆ, ನಾನು ನನ್ನ ಹೆಂಡತಿಯನ್ನು ಪ್ರೀತಿ ಮಾಡಿದ್ರು ಟ್ರೋಲ್ ಮಾಡಿತ್ತೀರಿ, ಏನಾದರೂ ಹೇಳಿದರು ಟ್ರೋಲ್ ಮಾಡುತ್ತೀರಿ. ಹೀಗಿರುವಾಗ ನಾನು ನನ್ನ ಹೆಂಡತಿಯನ್ನು ಪ್ರೀತಿ ಮಾಡುತ್ತೇನೆ ಎಂದು ನಿಮಗೆ ಸಾಬೀತು ಮಾಡಬೇಕಾಗಿಲ್ಲ.'' - ಸಮೀರಾಚಾರ್ಯ, ಬಿಗ್ ಬಾಸ್ ಕನ್ನಡ 5 ಸ್ಪರ್ಧಿ

ಅವಳಿಗೆ ಅವಮಾನ ಮಾಡಬೇಕು ಎಂದು ಹೇಳಿಲ್ಲ
''ತುಂಬ ಜನರು ಸಮೀರಾಚಾರ್ಯ ಅವರು ಅವರ ಹೆಂಡತಿಗೆ ಹೇಳಿದ ಮಾತು ತಪ್ಪು ಎಂದರು. ಆ ಕಾರ್ಯಕ್ರಮದ ಪೂರ್ಣ ವಿಡಿಯೋ ನೋಡಿಕೊಂಡು ಬನ್ನಿ. ಅಲ್ಲಿ ಇದ್ದ ಎಲ್ಲರೂ ತಮಾಷೆಯಲ್ಲಿ ಇದ್ದೇವು. ನಾನು ಉತ್ತರಿಸಿದ ಪ್ರತಿ ಉತ್ತರ ನಗುವ ಹಾಗೆ ಇತ್ತು. ನನ್ನ ಹೆಂಡತಿ, ರಮೇಶ್ ಸರ್ ಎಲ್ಲರೂ ನಕ್ಕಿದ್ದಾರೆ. ನಾನು ಸೀರಿಯಸ್ ಆಗಿ ಅವಳಿಗೆ ಅವಮಾನ ಮಾಡಬೇಕು ಎಂದು ಹೇಳಿಲ್ಲ. ಅದು ಒಂದು ಜೋಕ್ ಅಷ್ಟೇ.'' - ಸಮೀರಾಚಾರ್ಯ, ಬಿಗ್ ಬಾಸ್ ಕನ್ನಡ 5 ಸ್ಪರ್ಧಿ