»   » ಟಿವಿ ಪರದೆ ಮೇಲೆ ಸೂಪರ್ 'ಸಿನಿ' ಸಂಕ್ರಾಂತಿ

ಟಿವಿ ಪರದೆ ಮೇಲೆ ಸೂಪರ್ 'ಸಿನಿ' ಸಂಕ್ರಾಂತಿ

Posted By:
Subscribe to Filmibeat Kannada

'ಶುಕ್ರವಾರ' ಅಂದ್ರೆ 'ಸಿನಿವಾರ' ಅನ್ನುವ ಮಾತಿತ್ತು. ಆದ್ರೆ, ಈ ಬಾರಿ 'ಗುರುವಾರ'ವೇ ಸಿನಿ ಪ್ರಿಯರಿಗೆ 'ಸಿನಿವಾರ'ವಾಗಿದೆ. ಅದು ಬೆಳ್ಳಿಪರದೆ ಮೇಲೆ ಮಾತ್ರ ಅಂದುಕೊಳ್ಳಬೇಡಿ. ನಿಮ್ಮ ಮನೆಗಳಲ್ಲಿರುವ ಪುಟ್ಟ ಟಿವಿ ಪರದೆ ಮೇಲೂ ನಾಳೆ ಸೂಪರ್ ಸಿನಿಕ್ರಾಂತಿ.

ಸಂಕ್ರಾಂತಿ ಹಬ್ಬವನ್ನ ಧೂಮ್ ಧಾಮ್ ಆಗಿ ಆಚರಿಸಿ, 'ಎಳ್ಳು ಬೆಲ್ಲ' ಸವಿದ ಮೇಲೆ ಮನಸ್ಸಿಗೆ ಮನರಂಜನೆ ಬೇಕಲ್ವಾ..? ಹೇಗಿದ್ದರೂ ರಜಾ ಮಜಾ....ಚಿತ್ರಮಂದಿರಕ್ಕೆ ಹೋಗಿ, ಹೊಸ ಸಿನಿಮಾ ನೋಡುವ ಬದಲು ಆರಾಮಾಗಿ ಕುಟುಂಬದವರೊಂದಿಗೆ ಮನೆಯಲ್ಲಿರಬೇಕು ಅಂತ ಬಯಸೋರಿಗೆ, ಕನ್ನಡ ಟಿವಿ ವಾಹಿನಿಗಳಲ್ಲಿ ಭರಪೂರ ಮನರಂಜನಾ ಔತಣವಿದೆ.

Sankranthi Festival Special

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಪವರ್ ***' ಚಿತ್ರ ನಾಳೆ (ಜನವರಿ 15) ಸಂಕ್ರಾಂತಿ ಹಬ್ಬದ ಪ್ರಯುಕ್ತ ನಿಮ್ಮ ನೆಚ್ಚಿನ ಉದಯ ಟಿವಿಯಲ್ಲಿ ರಾತ್ರಿ 7ಗಂಟೆಗೆ ಪ್ರಸಾರವಾಗಲಿದೆ.

Sankranthi Festival Special1

ಆಕ್ಷನ್ ಬೇಡ, ಬಾಯ್ತುಂಬ ನಕ್ಕು ನಲಿಯಬೇಕು ಅಂತ ಬಯಸುವವರು ಮಧ್ಯಾಹ್ನ 3.30 ಕ್ಕೆ ಸರಿಯಾಗಿ ಜೀ ಕನ್ನಡ ವಾಹಿನಿಯನ್ನ ಟ್ಯೂನ್ ಮಾಡಿ. ಕಾಮಿಡಿ ಖಿಲಾಡಿ ಶರಣ್ 'ವಿಕ್ಟರಿ' ಚಿತ್ರದ ಮೂಲಕ ನಿಮಗೆ ಕಚಗುಳಿ ಇಡುವುದಕ್ಕೆ ಬರುತ್ತಾರೆ.

Sankranthi Festival Special3

ರೋಮ್ಯಾಂಟಿಕ್ ಸಿನಿ ಪ್ರಿಯರಿಗಾಗಿ ಕನ್ನಡಿಗರ ಹೆಮ್ಮೆಯ ಪ್ರತೀಕ ಕಸ್ತೂರಿ ವಾಹಿನಿಯಲ್ಲಿ 'ಅಭಿ' ಚಿತ್ರ ಮಧ್ಯಾಹ್ನ 2 ಗಂಟೆಗೆ ಫಿಕ್ಸ್ ಆಗಿದ್ದರೆ, ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಗಳಿಗಾಗಿ ಕಳೆದ ವರ್ಷವಷ್ಟೆ ರಿಲೀಸ್ ಆಗಿದ್ದ 'ದಿಲ್ ರಂಗೀಲಾ' ಚಿತ್ರವನ್ನ ಸುವರ್ಣ ವಾಹಿನಿ ಮಧ್ಯಾಹ್ನ 3 ಗಂಟೆಗೆ ಪ್ರಸಾರ ಮಾಡಲಿದೆ.

ಒಟ್ನಲ್ಲಿ ನಾಲ್ಕು ಪ್ರಮುಖ ಕನ್ನಡ ಮನರಂಜನಾ ವಾಹಿನಿಗಳಿಂದ ಭರ್ಜರಿ ರಸದೌತಣ ಸಿದ್ಧವಾಗಿದೆ. ನಿಮ್ಮ ಆಯ್ಕೆ ನಿಮ್ಮ ಕೈಯಲ್ಲಿದೆ.

English summary
Leading Kannada Entertainment TV Channels are airing Hit Kannada movies as Sankranthi Festival Special. Victory- Zee Kannada-3.30PM, Power ***- Udaya TV-7PM, Abhi-Kasturi Channel-2PM, Dil Rangeela-Suvarna Channel-3PM

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada