»   » ಸಂಕ್ರಾಂತಿ ವಿಶೇಷ: ಉದಯ ಟಿವಿಯಲ್ಲಿ 'ಮಹಾಸಂಚಿಕೆ'ಗಳ ಮಹಾಸಂಭ್ರಮ

ಸಂಕ್ರಾಂತಿ ವಿಶೇಷ: ಉದಯ ಟಿವಿಯಲ್ಲಿ 'ಮಹಾಸಂಚಿಕೆ'ಗಳ ಮಹಾಸಂಭ್ರಮ

Posted By:
Subscribe to Filmibeat Kannada

ಈ ಸಂಕ್ರಾಂತಿ ಹಬ್ಬಕ್ಕೆ ಮನರಂಜನೆಯ ಪಾಕವನ್ನೇ ಉಣಬಡಿಸುತ್ತಿದೆ ಉದಯ ಟಿವಿ. ಮನರಂಜನೆಯ ಕಾರ್ಯಕ್ರಮಗಳಲ್ಲಿ ಸದಾ ವಿಭಿನ್ನ ರೂಪವನ್ನು ಅಳವಡಿಸಿಕೊಂಡು, ಹಬ್ಬದ ಸಂಭ್ರಮವನ್ನು ದುಪ್ಪಟ್ಟು ಹೆಚ್ಚಿಸುವ ನಿಟ್ಟಿನಲ್ಲಿ ಉದಯ ಟಿವಿ ತನ್ನ ಧಾರಾವಾಹಿಗಳ ಮಹಾಸಂಚಿಕೆ ಪ್ರಸಾರ ಮಾಡುತ್ತಿದೆ.

ಸಂಕ್ರಾಂತಿ ಹಬ್ಬದ ಕೊಡುಗೆಯಾಗಿ ಮಹಾಸಂಚಿಕೆಯ ರೂಪದಲ್ಲಿ ವೀಕ್ಷಕರಿಗೆ ರಸದೌತಣ ನೀಡಲಿರುವ ಧಾರಾವಾಹಿಗಳು 'ಕಾವೇರಿ' ಮತ್ತು 'ದೊಡ್ಮನೆ ಸೊಸೆ'.

'ದೊಡ್ಮನೆ ಸೊಸೆ': ಸೂರ್ಯ ಮತ್ತು ಶೃತಿ ಈಗಾಗಲೇ ದೊಡ್ಡಮ್ಮನ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿರುತ್ತಾರೆ. ತಾನು ಪ್ರೀತಿಸ್ತಿರೋ ಹುಡುಗ ಸೂರ್ಯ ಈಗ ಶೃತಿಯ ಪಾಲಾದನೆಂಬ ಹೊಟ್ಟೆ ಕಿಚ್ಚು ಚಾಂದಿನಿಗಿದೆ. ಹಾಗಾಗಿ ಶೃತಿ ಸೂರ್ಯ.. ಇಬ್ಬರಿಗೂ ದೊಡ್ಡಮ್ಮ ಮತ್ತು ಚಾಂದಿನಿಯಿಂದ ಆತಂಕವಿರುತ್ತದೆ. ಹಾಗೆಯೇ ಹಬ್ಬಕ್ಕೆ ಮನೆಯವರೆಲ್ಲ ಸೇರಿ ಸಂಕ್ರಾಂತಿ ಆಚರಿಸುತ್ತಿರುವಾಗ, ಶೃತಿ ಕೈಯಿಂದ ಪೂಜೆಯ ಪ್ರಧಾನ ಹಸುವಿಗೆ ವಿಷ ಉಣಿಸುವ ಮಸಲತ್ತನ್ನು ದೊಡ್ಡಮ್ಮ ಮತ್ತು ಚಾಂದಿನಿ ಸೇರಿ ಮಾಡಿರುತ್ತಾರೆ.

Sankranthi special: 'Kaveri' and 'Dodmane Sose' mahasanchike in Udaya TV

ದೊಡ್ಮನೆಯ ಸಂಪ್ರದಾಯದಲ್ಲಿ ಹಸುವನ್ನು ಕೊಂದಿರುವ ಅಪವಾದ ಶೃತಿ ಮೇಲೆ ಬರುತ್ತದೆ. ಈ ಸಮಯಲ್ಲಿ ಶೃತಿ ಮನೆಯಿಂದ ಹೊರ ಹೋಗುತ್ತಾಳೋ ಅಥವಾ ಆಗಿರೋ ಅನ್ಯಾಯಕ್ಕೆ ತಾನು ಹೊಣೆಯಲ್ಲವೆಂಬುವುದನ್ನು ಶೃತಿ ಹೇಗೆ ಸಾಬೀತು ಮಾಡುತ್ತಾಳೆ? ಎಂಬುವುದನ್ನು 'ದೊಡ್ಮನೆ ಸೊಸೆ' ಮಹಾಸಂಚಿಕೆಯಲ್ಲೇ ಕಾದು ನೋಡಬೇಕು.

'ಕಾವೇರಿ': ಮಡದಿಯೂ, ತಾಯಿಯೂ ಆಗಿರುವ ಕಾವೇರಿ ತನ್ನ ತ್ಯಾಗಮಯಿ ಸ್ವಭಾವದಿಂದಲೇ ಹೆಂಗಳೆಯರ ಮನಸೂರೆಗೊಂಡಿದ್ದಾಳೆ. ತನ್ನ ಬದುಕಿನಲ್ಲಿ ನಡೆದ ಅನಿರೀಕ್ಷಿತ ಘಟನೆಯ ನಂತರ ಮನೆ ಸೇರಿರುವ ಕಾವೇರಿ ಅವನು ಸಾಕುತ್ತಿರುವ ಮಕ್ಕಳಿಗೆ ತಾಯಿಯಾಗಿ ನಟಿಸುತ್ತಿದ್ದಾಳೆ. ಸಂತೋಷ್ ನ ಅಪ್ಪ ಮಾಡಿದ ತಪ್ಪನ್ನು ಬಯಲು ಮಾಡಿ, ಆ ಮಕ್ಕಳಿಗೆ ನ್ಯಾಯ ಕೊಡಿಸುವುದು ಕಾವೇರಿಯ ಬದುಕಿನ ಉದ್ದೇಶವೇ ಆಗಿ ಬದಲಾಗಿದೆ. ಹೀಗಿರುವಾಗ ಕಾವೇರಿಗೆ ಬಾಲ್ಯದ ಗೆಳತಿ ರಾಧಾ (ಜೋಜೋ ಲಾಲಿ) ಭೇಟಿಯಾಗ್ತಾಳೆ. ಅವಳ ಜೀವನದಲ್ಲಿ ನಡೆದ ಘಟನೆಗಳನ್ನು ಕೇಳಿ ಮರುಗುವ ಕಾವೇರಿ, ರಾಧಾ ಹಾಗೂ ಅವಳ ಪ್ರೇಮಿ ಪ್ರೀತಂನನ್ನು ಒಂದಾಗಿಸುವ ನಿರ್ಧಾರ ಮಾಡುತ್ತಾಳೆ.

Sankranthi special: 'Kaveri' and 'Dodmane Sose' mahasanchike in Udaya TV

ಸಂಕ್ರಾಂತಿಯ ಶುಭಮುಹೂರ್ತದಲ್ಲಿ ಅವರನ್ನು ಒಂದುಗೂಡಿಸುವ ಪ್ರಯತ್ನದಲ್ಲಿ ಯಶಸ್ವಿಯಾಗ್ತಾಳಾ? ಮಹಾ ಸಂಚಿಕೆ ನೋಡಿ ತಿಳಿದುಕೊಳ್ಳಬೇಕು.

ಜನವರಿ 15 ರಂದು ಸೋಮವಾರ ಸಂಜೆ 6 ರಿಂದ 7:30 ರವರೆಗೆ 'ಕಾವೇರಿ' ಜೊತೆ 'ಜೋಜೋ ಲಾಲಿ'ಯ ಪಾತ್ರಗಳು ಜೊತೆಯಾಗಿ ಒಂದುವರೆ ಗಂಟೆಗಳ ಕಾಲ 'ಕಾವೇರಿ ಮಹಾಸಂಚಿಕೆ'ಯಾಗಿ ಪ್ರಸಾರವಾಗಲಿದೆ. ಹಾಗೂ ರಾತ್ರಿ 9:30 ರಿಂದ 10:30 ರವರೆಗೂ 'ದೊಡ್ಮನೆ ಸೊಸೆ' ಮಹಾಸಂಚಿಕೆ ಸಂಕ್ರಾಂತಿ ವಿಶೇಷವಾಗಿ ಬರಲಿದೆ.

English summary
'Kaveri' and 'Dodmane Sose' Mahasanchike to be aired in Udaya TV from January 15th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X