»   » ಸಂಕ್ರಾಂತಿ ಹಬ್ಬಕ್ಕೆ ನಿಮ್ಮ ಮನೆಗೆ ಬರ್ತಿದ್ದಾರೆ ದರ್ಶನ್, ಧ್ರುವ, ಗಣೇಶ್

ಸಂಕ್ರಾಂತಿ ಹಬ್ಬಕ್ಕೆ ನಿಮ್ಮ ಮನೆಗೆ ಬರ್ತಿದ್ದಾರೆ ದರ್ಶನ್, ಧ್ರುವ, ಗಣೇಶ್

Posted By:
Subscribe to Filmibeat Kannada
ಸಂಕ್ರಾಂತಿ ಪ್ರಯುಕ್ತ ದರ್ಶನ್, ಧ್ರುವ ಹಾಗು ಗಣೇಶ್ ನಿಮ್ಮ ಮನೆಗೆ | Filmibeat Kannada

ಸಂಕ್ರಾಂತಿ ಹಬ್ಬದ ವಿಶೇಷವಾಗಿ ಸ್ಯಾಂಡಲ್ ವುಡ್ ಗಿಂತ ಈ ಬಾರಿ ಕಿರುತೆರೆಯಲ್ಲೇ ಸಂಭ್ರಮ ಜೋರಾಗಿದೆ. ಡ್ಯಾನಿಶ್ ಸೇಠ್ ಅಭಿನಯದ 'ಹಂಬಲ್ ಪೊಲಿಟಿಶಿಯನ್ ನೊಗರಾಜ್' ಸಿನಿಮಾ ಈ ವಾರ ತೆರೆಕಾಣುತ್ತಿದ್ದು, ಸಂಕ್ರಾಂತಿ ಹಬ್ಬಕ್ಕೆ ಈ ಚಿತ್ರ ಉಡುಗೊರೆಯಾಗಿದೆ.

ಇನ್ನು ಹಬ್ಬದ ಪ್ರಯುಕ್ತ ಸ್ಟಾರ್ ನಟರ ಸಿನಿಮಾಗಳ ಘೋಷಣೆಯಾಗುವುದು ಅನುಮಾನ. ಟೀಸರ್ ಮತ್ತು ಟ್ರೈಲರ್ ಗಳು ಬರುವುದು ಡೌಟ್. ಆದ್ರೆ, ಟಿವಿ ಪ್ರೇಕ್ಷಕರಿಗೆ ಮಾತ್ರ ಮಸ್ತ್ ಮನರಂಜನೆ. ಸುಗ್ಗಿ ಸಡಗರವನ್ನ ಹೆಚ್ಚಿಸಲು ಹೊಚ್ಚ ಹೊಸ ಚಲನಚಿತ್ರಗಳು ಟಿವಿಯಲ್ಲಿ ಪ್ರಸಾರವಾಗುತ್ತಿದೆ.

ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಬಿಡುಗಡೆಯಾಗಿ, ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸಿದ್ದ ಚಿತ್ರಗಳು ಮೊಟ್ಟ ಮೊದಲ ಬಾರಿಗೆ ಕಿರುತೆರೆಯಲ್ಲಿ ಮೂಡಿಬರ್ತಿದೆ. ಈ ಮೂಲಕ ದೊಡ್ಡ ಪರದೆಯಲ್ಲಿ ಮಿಸ್ ಮಾಡಿಕೊಂಡಿದ್ದವರು ಮನೆಯಲ್ಲೇ ಕೂತು ಸಿನಿಮಾ ನೋಡಬಹುದು. ಹಾಗಿದ್ರೆ, ಸಂಕ್ರಾಂತಿ ಹಬ್ಬದ ಪ್ರಯುಕ್ತ ಯಾವ ಸಿನಿಮಾ ಪ್ರಸಾರವಾಗ್ತಿದೆ ಎಂದು ತಿಳಿಯಲು ಮುಂದೆ ಓದಿ....

ದರ್ಶನ್ 'ಚಕ್ರವರ್ತಿ'

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೂರು ವಿಭಿನ್ನ ಶೇಡ್ ನಲ್ಲಿ ಮಿಂಚಿದ್ದ ಚಕ್ರವರ್ತಿ ಸಿನಿಮಾ ನಿಮ್ಮ ಉದಯ ಟಿವಿಯಲ್ಲಿ ಮೊದಲ ಬಾರಿಗೆ ಪ್ರಸಾರವಾಗ್ತಿದೆ. ಸಂಕ್ರಾಂತಿ ಹಬ್ಬದ ವಿಶೇಷವಾಗಿ ಜನವರಿ 14 ರಂದು ಸಂಜೆ 6 ಗಂಟೆಗೆ ಮೂಡಿಬರ್ತಿದೆ. ಚಿಂತನ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ದರ್ಶನ್, ದೀಪಾ ಸನ್ನಿಧಿ, ಆಧಿತ್ಯ, ದಿನಕರ್ ತೂಗುದೀಪ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

ನಿಮ್ಮ ಮುಂದೆ ಬರ್ತಿದ್ದಾನೆ 'ಚಕ್ರವರ್ತಿ' ಅತಿ ಶೀಘ್ರದಲ್ಲಿ..

ಗಣೇಶ್ 'ಮುಗುಳುನಗೆ'

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸೂಪರ್ ಹಿಟ್ ಸಿನಿಮಾ 'ಮುಗುಳುನಗೆ' ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗ್ತಿದೆ. ಆದ್ರೆ, ದಿನಾಂಕ ಮತ್ತು ಸಮಯ ಬಹಿರಂಗವಾಗಿಲ್ಲ. ಮೂಲಗಳ ಪ್ರಕಾರ, ಸಂಕ್ರಾಂತಿ ಹಬ್ಬದ ವಿಶೇಷವಾಗಿ ಮೂಡಿ ಬರಲಿದೆಯಂತೆ.

ಧ್ರುವ ಸರ್ಜಾ 'ಭರ್ಜರಿ'

ಕಳೆದ ವರ್ಷದ ಸೂಪರ್ ಹಿಟ್ ಸಿನಿಮಾ ಭರ್ಜರಿ, ಸುಗ್ಗಿ ಹಬ್ಬಕ್ಕೆ ನಿಮ್ಮ ಮನೆಗೆ ಬರ್ತಿದೆ. ಜನವರಿ 14 ರಂದು ಸಂಜೆ 5 ಗಂಟೆಗೆ ನಿಮ್ಮ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗ್ತಿದೆ. ಚೇತನ್ ಕುಮಾರ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಧ್ರುವ ಸರ್ಜಾ, ರಚಿತಾ ರಾಮ್, ಹರಿಪ್ರಿಯಾ ಮತ್ತು ವೈಶಾಲಿ ದೀಪಕ್ ಅಭಿನಯಿಸಿದ್ದರು.

ಕಿರುತೆರೆಯಲ್ಲಿ 'ಭರ್ಜರಿ' ಸಿನಿಮಾ ನೋಡೋ ಅವಕಾಶ

ಮಸ್ತ್ ಮನರಂಜನೆ

ಈ ಎಲ್ಲ ಚಿತ್ರಗಳು ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಮೂಡಿ ಬರುತ್ತಿರುವುದರಿಂದ ವೀಕ್ಷಕರು ಫುಲ್ ಖುಷಿಯಾಗಿದ್ದಾರೆ. ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡು ಬೇಸರಗೊಂಡಿದ್ದವರಂತೂ ಮೂವಿ ಟೈಮ್ ಗೆ ಮನೆಗೆ ಹಾಜರ್ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.

English summary
Challenging Star Darshan starrer 'Chakravathy' to telecast in Udaya TV. golden star ganesh starrer mugulunage movie to telecast in zee kannada and dhruva sarja's bharjari to telecast in star suvarna on january 14th for Sankranti festival special.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X