For Quick Alerts
  ALLOW NOTIFICATIONS  
  For Daily Alerts

  ವರ್ಷಗಳ ಬಳಿಕ ಮತ್ತೆ ಪ್ರೇಕ್ಷಕರ ಮುಂದೆ ಬಂದ ಜೂ.ಪುಟ್ಟಗೌರಿ!

  |

  ಪುಟ್ಟುಗೌರಿ ಅಂದರೆ ನಟಿ ರಂಜನಿ ನೆನಪಾಗುತ್ತಾರೆ. ಆದರೆ ಜೂ.ಪುಟ್ಟಗೌರಿ ಅಂದರೆ ಮುದ್ದು ಮುಖದ ಪುಟ್ಟ ಸುಂದರಿ ನೆನಪಿಗೆ ಬರುತ್ತಾರೆ. ಹೌದು, ಮುದ್ದಾದ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದ ಬಾಲನಟಿ ಪುಟ್ಟಗೌರಿ ಈಗ ದೊಡ್ಡವರಾಗಿದ್ದಾರೆ. ಪುಟ್ಟಗೌರಿಯನ್ನು ಈಗ ನೋಡಿದರೆ ಇವರು ಜೂ.ಪುಟ್ಟಗೌರಿನ ಅಂತ ಅಚ್ಚರಿ ಪಡಬೇಕು, ಹಾಗಾಗಿದ್ದಾರೆ.

  ಪುಟ್ಟಗೌರಿ ಮದುವೆ ಬಾಲ್ಯವಿವಾಹದ ಬಗ್ಗೆ ಇದ್ದ ಸೀರಿಯಲ್. ಪುಟ್ಟ ಬಾಲಕಿಯನ್ನು ಬಲವಂತವಾಗಿ ಮದುವೆ ಮಾಡಿಸುವುದು ಈ ಧಾರಾವಾಹಿಯಲ್ಲಿ ತೋರಿಸಲಾಗಿತ್ತು. ಧಾರಾವಾಹಿ ಸೆಟ್ಟೇರಿದ ಪ್ರಾರಂಭದಲ್ಲಿ ಸಿಕ್ಕಾಪಟ್ಟೆ ಚರ್ಚೆಗೂ ಕಾರಣವಾಗಿತ್ತು. ಆ ನಂತರ ಈ ಧಾರಾವಾಹಿ ಭಾರಿ ನಿಜಪ್ರಿಯತೆ ಪಡೆದುಕೊಂಡಿತು. ಧಾರಾವಾಹಿ ಜೊತೆಗೆ ಪುಟ್ಟಗೌರಿ ಸಾನ್ಯಾ ಕೂಡ ಎಲ್ಲರ ಮನಗೆದ್ದಿದ್ದರು.

  ಸಾನ್ಯಾ ಅಯ್ಯರ್ ಅಂದರೆ ಥಟ್ ಅಂತ ಯಾರಿಗೂ ಗೊತ್ತಾಗುವುದಿಲ್ಲ. ಆದರೆ ಜೂ.ಪುಟ್ಟಗೌರಿ ಅಂದರೆ ನೆನಪಾಗುತ್ತಾರೆ. ಸಾನ್ಯ ಅಯ್ಯರ್ ಪುಟ್ಟಗೌರಿ ಧಾರಾವಾಹಿಯಲ್ಲಿ ಮುಗ್ಧ ಅಭಿನಯದ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಧಾರಾವಾಹಿಯಲ್ಲಿ ಆಕೆ ಪಾತ್ರ ಮುಗಿಯುತ್ತಿದ್ದಂತೆ ಸಾನ್ಯಾ ಮತ್ತೆ ಕನ್ನಡದಲ್ಲಿ ಬಣ್ಣಹಚ್ಚಿಲ್ಲ.ಆದರೇ ಈಗ ಬಹಳ ವರ್ಷಗಳ ನಂತರ ಜೂನಿಯರ್ ಪುಟ್ಟಗೌರಿ ಅಲಿಯಾಸ್ ಸಾನ್ಯಾ ಕಿರುತೆರೆಗೆ ಮತ್ತೆ ಕಂಬ್ಯಾಕ್ ಮಾಡಿದ್ದಾರೆ. ಅದು ಹೇಗೆ ಅಂತ ಮುಂದೆ ಓದಿ...

  ಮುಗ್ಧ ನಟನೆಯಿಂದ ಗಮನ ಸೆಳೆದಿದ್ದ ಸಾನ್ಯಾ!

  ಮುಗ್ಧ ನಟನೆಯಿಂದ ಗಮನ ಸೆಳೆದಿದ್ದ ಸಾನ್ಯಾ!

  ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಯಾಗಿ ಜನರ ಅಪಾರ ಅಭಿಮಾನವನ್ನು ಪಡೆದುಕೊಂಡಿದ್ದ ಪುಟ್ಟು ಗೌರಿ ಮದುವೆ ಸೀರಿಯಲ್ ಅನ್ನು ಕಿರುತೆರೆಯ ಪ್ರೇಕ್ಷಕರು ಇನ್ನೂ ಮರೆತಿಲ್ಲ. ಹೌದು ಪುಟ್ಟಗೌರಿ ಮದುವೆ ಸೀರಿಯಲ್ ಇನ್ನೂ ಅನೇಕರಿಗೆ ಬಹಳ ಇಷ್ಟವಾದ ಧಾರಾವಾಹಿಯಾಗಿ ಅವರ ಮನಸ್ಸಿನಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಈ ಧಾರಾವಾಹಿಯ ಪ್ರಮುಖ ಪಾತ್ರವೇ ಪುಟ್ಟಗೌರಿ. ಜೂನಿಯರ್ ಪುಟ್ಟ ಗೌರಿಯಾಗಿ, ಚೈತನ್ಯ ತುಂಬಿದ ನಡೆ, ನುಡಿ ಹಾಗೂ ಕ್ರಿಯಾಶೀಲತೆಯೊಂದಿಗೆ ಜನರ ಮನಸ್ಸನ್ನು ಗೆದ್ದಿದ್ದ ಬಾಲ ನಟಿಯನ್ನು ಜನ ಹೇಗೆ ತಾನೇ ಮರೆಯಲು ಸಾಧ್ಯ. ಖಂಡಿತ ಆ ಬಾಲ ನಟಿಯನ್ನು ಜನ ಮರೆತಿಲ್ಲ.

  ಡ್ಯಾನ್ಸಿಂಗ್ ಚಾಂಪಿಯನ್ ನಲ್ಲಿ ಮೋಡಿ ಮಾಡುತ್ತಿರುವ ಪುಟ್ಟಗೌರಿ

  ಡ್ಯಾನ್ಸಿಂಗ್ ಚಾಂಪಿಯನ್ ನಲ್ಲಿ ಮೋಡಿ ಮಾಡುತ್ತಿರುವ ಪುಟ್ಟಗೌರಿ

  ಅಸಂಖ್ಯಾತ ಹೃದಯಗಳನ್ನು ಗೆದ್ದಿದ್ದ ಅದೇ ಬಾಲ ನಟಿ ಈಗ ಡಾನ್ಸಿಂಗ್ ಸೆನ್ಸೇಷನ್ ಆಗಿ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಕೆಲವು ವರ್ಷಗಳಿಂದ ಕೂಡಾ ಹಿನ್ನೆಲೆಗೆ ಸರಿದಿದ್ದ ಈ ಬಾಲನಟಿ ಸಾನ್ಯಾ ಅಯ್ಯರ್, ಈಗ ಯುವ ಡ್ಯಾನ್ಸರ್ ಆಗಿ ಮತ್ತೆ ಮುನ್ನೆಲೆಗೆ ಬಂದಿದ್ದು, ಟಿವಿಗೆ ಕಮ್ ಬ್ಯಾಕ್ ಮಾಡುವ ಮೂಲಕ ತಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದವರಿಗೆ ಒಂದು ದೊಡ್ಡ ಸರ್ಪ್ರೈಸ್ ನೀಡಿದ್ದಾರೆ. ಹೌದು ಕನ್ನಡ ಕಿರುತೆರೆಯಲ್ಲಿ ಮೂಡಿ ಬರುತ್ತಿರುವ ಡ್ಯಾನ್ಸ್ ರಿಯಾಲಿಟಿ ಶೋ ನಲ್ಲಿ ಸಾನ್ಯಾ ಸ್ಪರ್ಧಿಯಾಗಿ ಪ್ರವೇಶ ನೀಡಿದ್ದಾರೆ.

  ಟಫ್ ಕಾಂಪಿಟೇಷನ್ ನೀಡುತ್ತಿದ್ದಾರೆ ಜೂ.ಪುಟ್ಟಗೌರಿ

  ಟಫ್ ಕಾಂಪಿಟೇಷನ್ ನೀಡುತ್ತಿದ್ದಾರೆ ಜೂ.ಪುಟ್ಟಗೌರಿ

  ಸಾನ್ಯಾ ಸೆಲೆಬ್ರಿಟಿ ಡಾನ್ಸ್ ಸ್ಪರ್ಧಿಯಾಗಿ ಬರುತ್ತಿದ್ದು, ಅವರಿಗೆ ಒಬ್ಬ ಪಾರ್ಟ್ನರ್ ಕೂಡಾ‌ ಇರುತ್ತಾರೆ. ಸಾನ್ಯಾ ತಮ್ಮ ಈ ಡಾನ್ಸಿಂಗ್ ಜರ್ನಿ ಬಗ್ಗೆ ಸಾಕಷ್ಟು ಉತ್ಸುಕರಾಗಿದ್ದಾರೆ ಎನ್ನಲಾಗಿದೆ. ಗಮನಿಸಬೇಕಾದ ವಿಷಯ ಏನೆಂದರೆ ಸಾನ್ಯಾ ಅವರಿಗೆ ಇದು ಮೊದಲ ಡ್ಯಾನ್ಸ್ ರಿಯಾಲಿಟಿ ಶೋ ಅಲ್ಲ. ಈ ಮೊದಲು ಚಿಕ್ಕ ವಯಸ್ಸಿನಲ್ಲೇ ಸಾನ್ಯಾ ಡಾನ್ಸಿಂಗ್ ಸ್ಟಾರ್ಸ್ ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ, ಇನ್ನಿತರೆ ಸ್ಪರ್ಧಿಗಳಿಗೆ ಬಹಳ ಕಠಿಣ ಎನಿಸುವ ರೀತಿಯಲ್ಲಿ ಸ್ಪರ್ಧೆಯನ್ನು ನೀಡಿದ್ದರು.

  ಬ್ರೇಕ್‌ನ ನಂತರ ಮತ್ತೆ ಮೋಡಿ ಮಾಡುತ್ತಿದ್ದಾರೆ ನಟಿ

  ಬ್ರೇಕ್‌ನ ನಂತರ ಮತ್ತೆ ಮೋಡಿ ಮಾಡುತ್ತಿದ್ದಾರೆ ನಟಿ

  ಸ್ಟಾರ್‌ಗಳು ಇರುವ ಕುಟುಂಬದಲ್ಲಿ ಜನಿಸಿದ ಸಾನ್ಯಾ ಸಣ್ಣ ವಯಸ್ಸಿನಲ್ಲೇ ಕಲಾ ಜಗತ್ತಿಗೆ ಬಾಲ ಕಲಾವಿದೆಯಾಗಿ ಪ್ರವೇಶ ನೀಡಿದ್ದು, ಪುಟ್ಟಗೌರಿ ಮದುವೆ ಮೂಲಕ ಕಿರುತೆರೆಯ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ಸನ್ನು ಪಡೆದವರು. ಈ ಸೀರಿಯಲ್‌ನ ಪ್ರಮುಖ ಪಾತ್ರವಾದ ಪುಟ್ಟಗೌರಿ ಪಾತ್ರದಲ್ಲಿ ಅವರು ನಟಿಸಿದ್ದರು. ಬಾಲ್ಯ ವಿವಾಹಕ್ಕೆ ಒಳಗಾಗುವ ಪುಟ್ಟ ಹುಡುಗಿಯ ಪಾತ್ರಕ್ಕೆ ಸಾನ್ಯಾ ಜೀವ ತುಂಬಿ ಜನ ಮನವನ್ನು ಗೆದ್ದಿದ್ದರು.

  English summary
  Putta Gowri Madve fame Sanya Iyer to make her comeback with reality show

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X