For Quick Alerts
  ALLOW NOTIFICATIONS  
  For Daily Alerts

  'ಸರಳ ಜೀವನ' ವಾಹಿನಿಯಲ್ಲಿ ಇನ್ಮುಂದೆ ನ್ಯೂಸ್ ನೋಡಬಹುದು

  By Bharath Kumar
  |

  ಕನ್ನಡದ ಮೊಟ್ಟಮೊದಲ ಇನ್​ಫೋಟೈನ್​ಮೆಂಟ್ ಚಾನೆಲ್ ಸರಳ ಜೀವನ ವಾಹಿನಿಗೆ ಯಶಸ್ವಿ 2 ಸಂವತ್ಸರಗಳನ್ನ ಪೂರೈಸಿದ ಸಂಭ್ರಮ. ಈ ಶುಭ ಸಂದರ್ಭದಲ್ಲಿ ಸರಳ ಜೀವನ ವಾಹಿನಿ ಶುಭ ಸುದ್ದಿಯೊಂದನ್ನ ಹೊತ್ತು ನಿಮ್ಮ ಮುಂದೆ ಬಂದಿದೆ.

  ಹೌದು, ಇನ್ಮುಂದೆ ಮಾಹಿತಿ, ಮನರಂಜನೆಯ ಜೊತೆಗೆ ಸರಳಜೀವನ ಚಾನೆಲ್​ನಲ್ಲಿ ರಾಜ್ಯದ ಸಮಗ್ರ ಸುದ್ದಿ ಸಹ ಪ್ರಸಾರವಾಗಲಿದೆ. ಇದೇ ಫೆಬ್ರವರಿ 19ಕ್ಕೆ ಸರಳ ಜೀವನ ವಾಹಿನಿ ಮೂರನೇ ವರ್ಷಕ್ಕೆ ದಾಪುಗಾಲಿಡುತ್ತಿದ್ದು, ಈ ದಿನದಿಂದಲೇ ಸರಳ ಜೀವನ ಚಾನೆಲ್, ಮಾಹಿತಿ, ಮನರಂಜನೆಯ ಜೊತೆಗೆ ದಿನಕ್ಕೆ 4 ವಾರ್ತಾ ಸಂಚಿಕೆಗಳು ವಾಹಿನಿಯಲ್ಲಿ ಪ್ರಸಾರವಾಗಲಿವೆ.

  ಮಾಹಿತಿ ಹಾಗೂ ಮನರಂಜನಾ ಪೂರ್ಣ ವಾಹಿನಿಯಾಗಿ ಈಗಾಗಲೇ ಜನಮೆಚ್ಚುಗೆ ಗಳಿಸಿರುವ ಸರಳಜೀವನ, ಸುದ್ದಿಯನ್ನು ನೀಡುವಲ್ಲೂ ಪರಿಶುದ್ಧತೆಯನ್ನ ಕಾಯ್ದುಕೊಳ್ಳಲಿದೆ. ಯಾವುದೇ ಸುದ್ದಿಯನ್ನ ವೈಭವೀಕರಿಸದೆ. ರಾಜ್ಯದ ಯಥಾವತ್ ಸುದ್ದಿಗಳನ್ನು ನಿಮ್ಮ ಮುಂದಿಡಲಿದೆ.

  ಮಾಹಿತಿ ಹಾಗೂ ಮನರಂಜನಾ ಕ್ಷೇತ್ರದಲ್ಲಿ ಸರಳ ಜೀವನ ವಾಹಿನಿ ತನ್ನದೇ ಛಾಪು ಮೂಡಿಸಿದ್ದು, ಭಾರತೀಯ ಪುರಾಣ, ಇತಿಹಾಸ, ಪ್ರವಾಸ ಕಥನ, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಆಧರಿಸಿದ ವಿಚಾರಪೂರ್ಣ ಕಾರ್ಯಕ್ರಮಗಳನ್ನು ಈಗಾಗಲೇ ವಾಹಿನಿ ಪ್ರಸಾರ ಮಾಡುತ್ತಿದೆ. ಈ ಮೂಲಕ ಕನ್ನಡದ ಇತರೇ ಸುದ್ದಿ ಹಾಗೂ ಮನರಂಜನಾ ವಾಹಿನಿಗಳ ಸಾಲಿನಲ್ಲಿ ವಿಭಿನ್ನವಾಗಿ ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

  ಸರಳ ಸುದ್ದಿ ಸಂಚಿಕೆಗಳು?

  ಸಮಾಚಾರ ಸೌರಭ (Morning News):

  ಅಂದಿನ ಸಂಭವನೀಯ ಸುದ್ದಿಗಳು ಹಾಗೂ ಹಿಂದಿನ ದಿನದ ಸುದ್ದಿ ಮುಖ್ಯಾಂಶಗಳನ್ನು ಹೊತ್ತು ಬರಲಿದೆ ಸರಳ ಜೀವನ ವಾಹಿನಿಯ ಸಮಾಚಾರ ಸೌರಭ. ಪ್ರತಿದಿನ ಮುಂಜಾನೆ 8.00 ಗಂಟೆಗೆ ಈ ಬೆಳಗಿನ ಸುದ್ದಿ ಸಂಚಿಕೆ ಬಿತ್ತರಗೊಳ್ಳಲಿದೆ. ನಿಮ್ಮ ಬೆಳಗಿನ ಉಪಾಹಾರದ ಜೊತೆ ಸರಳವಾಹಿನಿಯ ಈ ಸುದ್ದಿ ಸಂಚಿಕೆ ರಾಜ್ಯದ ಸಮಗ್ರ ಸುದ್ದಿಯನ್ನು ನಿಮಗೆ ಉಣಬಡಿಸಲಿದೆ.

  ಮಧ್ಯಂತರ ವರದಿ (Miday News):

  ಇದು ಸರಳಜೀವನ ವಾಹಿನಿಯ ಮಿಡ್ ಡೇ ಸುದ್ದಿಯೂಟ. ಪ್ರತಿದಿನ ಮಧ್ಯಾಹ್ನ 1 .00 ಗಂಟೆಗೆ ಮಧ್ಯಂತರ ವರದಿ ಪ್ರಸಾರವಾಗಲಿದ್ದು, ಈ ವಾರ್ತಾ ಸಂಚಿಕೆಯಲ್ಲಿ ಮಧ್ಯಾಹ್ನದವರೆಗಿನ ರಾಜ್ಯದ ಪ್ರಮುಖ ಸುದ್ದಿಗಳ ಸಮಗ್ರ ಚಿತ್ರಣ ನಿಮಗೆ ಸಿಗಲಿದೆ.

  ನಮ್ಮೂರು ಸುದ್ದಿ (News from my town): ಇದು ಸಂಪೂರ್ಣ ಗ್ರಾಮೀಣ ಸುದ್ದಿಯ ಹೂರಣ. ರಾಜ್ಯದ 30 ಜಿಲ್ಲೆಗಳ ಸಂಪೂರ್ಣ ಸುದ್ದಿ ಚಿತ್ರಣವನ್ನು "ನಮ್ಮೂರು ಸುದ್ದಿ" ಯಲ್ಲಿ ನಾವು ನಿಮಗೆ ನೀಡಲಿದ್ದೇವೆ. ಸ್ಥಳೀಯ ಸುದ್ದಿಗಳಿಗಾಗಿಯೇ ಮೀಸಲಾಗಿರುವ ಈ ವಾರ್ತಾ ಸಂಚಿಕೆ ಪ್ರತಿದಿನ ಸಂಜೆ 7.30ಕ್ಕೆ ಪ್ರಸಾರವಾಗಲಿದೆ.

  ಸಮಗ್ರ ಸಮಾಚಾರ (Prime News):

  ಪ್ರತಿದಿನ ರಾತ್ರಿ 10.00 ಗಂಟೆಗೆ ಸರಳ ಸಮಗ್ರ ಸಮಾಚಾರ ಪ್ರಸಾರವಾಗಲಿದೆ. ಇದರಲ್ಲಿ ರಾಜ್ಯ ಹಾಗೂ ದೇಶದ ರಾಜಕೀಯ ಬೆಳವಣಿಗೆ ಹಾಗೂ ಆ ದಿನದ ಸಂಪೂರ್ಣ ಸುದ್ದಿಗಳ ಚಿತ್ರಣ ನಿಮಗೆ ಲಭಿಸಲಿದೆ

  ಈ ನಾಲ್ಕು ಸುದ್ದಿ ಸಂಚಿಕೆಗಳ ಜೊತೆಗೆ ಸರಳಜೀವನ ವಾಹಿನಿ ಮತ್ತೊಂದು ವಿಶೇಷ ಕಾರ್ಯಕ್ರಮವನ್ನೂ ನಿಮಗಾಗಿ ರೂಪಿಸಿದೆ. ಫೆ.19ರಿಂದ ಅಮರ ಪ್ರೇಮ ಕಥೆಗಳು ಎಂಬ ವಿಶೇಷ ಕಾರ್ಯಕ್ರಮ ಪ್ರಸಾರವಾಗಲಿದೆ. ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗಲಿರುವ ಈ ಪ್ರೇಮ ಕಾವ್ಯ ನಿಮ್ಮನ್ನು ಹೊಸದೊಂದು ಲೋಕಕ್ಕೆ ಕರೆದೊಯ್ಯಲಿದೆ. ಇತಿಹಾಸ ಹಾಗೂ ಪುರಾಣಗಳ ಕಥೆಗಳನ್ನು ಆಧರಿಸಿ ಈ ಕಾರ್ಯಕ್ರಮ ರೂಪುಗೊಂಡಿದೆ.

  ದಿನಕ್ಕೆ 4 ಸುದ್ದಿ ಸಂಚಿಕೆಗಳ ಮೂಲಕ ದೇಶ ಹಾಗೂ ರಾಜ್ಯದ ಸಂಪೂರ್ಣ ಹಾಗೂ ಸಮಗ್ರ ಸುದ್ದಿ ನೀಡುವುದು ನಮ್ಮ ಮುಖ್ಯ ಗುರಿ ಎನ್ನುತ್ತಾರೆ ವಾಹಿನಿಯ ಬ್ಯುಸಿನೆಸ್ ಹೆಡ್ ರಘುನಾಥ ರೆಡ್ಡಿ. ಕೇವಲ ಪ್ಲಾಶ್ ನ್ಯೂಸ್ ಹಾಗೂ ಬ್ರೇಕಿಂಗ್ ನ್ಯೂಸ್​ಗೆ ಸೀಮಿತವಾಗದೆ ಮನರಂಜನೆಯ ನಡುವೆ 3 -5 ಗಂಟೆಗಳ ಅಂತರದಲ್ಲಿ ಒಂದೊಂದು ನ್ಯೂಸ್ ಬುಲೆಟಿನ್​ಗಳನ್ನು ನೀಡುವುದು ನಮ್ಮ ಆಶಯ ಎನ್ನುತ್ತಾರೆ ವಾಹಿನಿಯ ಬ್ಯುಸಿನೆಸ್ ಹೆಡ್​​.

  ಸರಳವಾಸ್ತು ಕ್ಷೇತ್ರದ ಅಗ್ರಗಣಿ ಡಾ. ಶ್ರೀ ಚಂದ್ರಶೇಖರ್ ಗುರೂಜಿ ಅವರ ಮಾರ್ಗದರ್ಶನಲ್ಲಿ ನಡೆಯುತ್ತಿರುವ ಸರಳಜೀವನ ಚಾನೆಲ್, ವಾಸ್ತವಿಕ ಹಾಗೂ ಸ್ಫೂರ್ತಿದಾಯಕ ಕಾರ್ಯಕ್ರಮಗಳನ್ನ ಪ್ರೇಕ್ಷಕರಿಗೆ ನೀಡುವುದರಲ್ಲಿ ಮುಂಚೂಣಿಯಲ್ಲಿದೆ. ಈ ಮೂಲಕ ಮನುಕುಲದ ಒಳಿತಿಗಾಗಿ ದುಡಿಯುವುದೇ ಸರಳಜೀವನ ವಾಹಿನಿಯ ಉದ್ದೇಶವಾಗಿದೆ.

  English summary
  The first Infotainment channel of Karnataka Saral Jeevan will be completing 2years and going forward channel will be launching NEWS from 19th February 2018.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X