»   » ಇದೇ ಶನಿವಾರದಿಂದ ಮತ್ತೆ ಜೀ ಕನ್ನಡದಲ್ಲಿ 'ಸರಿಗಮಪ' ಶುರು

ಇದೇ ಶನಿವಾರದಿಂದ ಮತ್ತೆ ಜೀ ಕನ್ನಡದಲ್ಲಿ 'ಸರಿಗಮಪ' ಶುರು

Posted By:
Subscribe to Filmibeat Kannada

ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಸರಿಗಮಪ' ಮತ್ತೆ ಶುರು ಆಗುತ್ತಿದೆ. ಸೀಸನ್ 13ರ ಅದ್ಬುತ ಯಶಸ್ಸಿನ ನಂತರ ಈಗ ಸೀಸನ್ 14 ಪ್ರಾರಂಭವಾಗುತ್ತಿದೆ. ಇದೇ ಶನಿವಾರ ಕಾರ್ಯಕ್ರಮದ ಮೊದಲ ಸಂಚಿಕೆ ಪ್ರಸಾರ ಆಗಲಿದೆ.

'ಸರಿಗಮಪ'ಗೆ ಸಿಕ್ಕಿಯೇ ಬಿಟ್ಟರು 'ಮಹಾಗುರು'ಗಳು.!

ಈ ಬಾರಿಯ ಕಾರ್ಯಕ್ರಮದ ದೊಡ್ಡ ಹೈಲೆಟ್ ಅಂದರೆ ನಾದಬ್ರಹ್ಮ ಹಂಸಲೇಖ. 'ಸರಿಗಮಪ' ಗ್ರಾಂಡ್ ಫಿನಾಲೆ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಬರುತ್ತಿದ್ದ ಹಂಸಲೇಖ ಅವರು ಈ ಸೀಸನ್ ನಲ್ಲಿ ಮಹಾ ಗುರುಗಳಾಗಿದ್ದಾರೆ. ಅದ್ದರಿಂದ ಪ್ರತಿ ಸಂಚಿಕೆಯಲ್ಲಿಯೂ ಹಂಸಲೇಖ ಇರುತ್ತಾರೆ. ಈಗಾಗಲೇ ಹಂಸಲೇಖ ಅವರ ಸರಿಗಮಪ ಪ್ರೋಮೋ ರಿಲೀಸ್ ಆಗಿ ಕಾರ್ಯಕ್ರಮದ ಮೇಲೆ ನಿರೀಕ್ಷೆ ಹೆಚ್ಚಿಸಿದೆ. ಹಂಸಲೇಖ ಆಗಮನದ ನಂತರ ಈ ಕಾರ್ಯಕ್ರಮದ ತೂಕ ಹೆಚ್ಚಾಗಿದೆ.

'Sarigamapa Season 14' will start from this Saturday. (December 9)

ಉಳಿದಂತೆ ಗಾಯಕ ವಿಜಯ್ ಪ್ರಕಾಶ್ ಮತ್ತು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕಾರ್ಯಕ್ರಮದ ಜಡ್ಜ್ ಆಗಿದ್ದಾರೆ. ಕಳೆದ ಬಾರಿ ದೊಡ್ಡವರಿಗೆ ಮೀಸಲಾಗಿದ್ದ ಕಾರ್ಯಕ್ರಮ ಈ ಬಾರಿ ಮಕ್ಕಳಿಗೆ ಸೀಮಿತವಾಗಿದೆ. ಈ ಬಾರಿಯ ಶೋ ವನ್ನು ಮಕ್ಕಳ ಪೋಷಕರಿಗಾಗಿ ಅರ್ಪಣೆ ಮಾಡಿರುವುದು ಮತ್ತೊಂದು ವಿಶೇಷ ಅಂತ ಹೇಳಬಹುದು. ಅಂದಹಾಗೆ, 'ಸರಿಗಮಪ' ಸೀಸನ್ 14 ಕಾರ್ಯಕ್ರಮ ಇದೇ ಶನಿವಾರದಿಂದ ಸಂಜೆ 7-30ಕ್ಕೆ ಜೀಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿದೆ.

English summary
Zee Kannada channel's popular show 'Sarigamapa Season 14' will start from this Saturday (December 9).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada