For Quick Alerts
  ALLOW NOTIFICATIONS  
  For Daily Alerts

  'ಸರ್ವಮಂಗಳ ಮಾಂಗಲ್ಯೇ' ಧಾರಾವಾಹಿಯ ನಟಿ ಐಶ್ವರ್ಯಾಗೆ ಕೂಡಿ ಬಂತು ಕಂಕಣ ಭಾಗ್ಯ

  |

  Recommended Video

  ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ ಐಶ್ವರ್ಯಾ ಪಿಸ್ಸೆ | FILMIBEAT KANNADA

  ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಪ್ರಸಿದ್ಧ ಧಾರಾವಾಹಿಗಳಲ್ಲಿ 'ಸರ್ವಮಂಗಳ ಮಾಂಗಲ್ಯೆ' ಕೂಡ ಒಂದು. ಈ ಧಾರಾವಾಹಿಯ ನಾಯಕಿ ಐಶ್ವರ್ಯಾ ಈಗ ಮದುವೆ ತಯಾರಿಯಲ್ಲಿದ್ದಾರೆ. ಹೊಸ ಬಾಳಿನ ಹೊಸಿಲಲ್ಲಿ ನಿಂತಿರುವ ಐಶ್ವರ್ಯಾ ಇತ್ತೀಚಿಗಷ್ಟೆ ಗೆಳೆಯ ಹರಿ ವಿನಯ್ ಜೊತೆ ನಿಶ್ವಿತಾರ್ಥ ಮಾಡಿಕೊಂಡಿದ್ದಾರೆ.

  ತೀರಾ ಖಾಸಗಿಯಾಗಿ ನಡೆದ ಎಂಗೇಜ್ ಮೆಂಟ್ ಕಾರ್ಯಕ್ರಮದಲ್ಲಿ ಐಶ್ವರ್ಯಾ ಮತ್ತು ಹರಿ ವಿನಯ್ ಉಂಗುರ ಬದಲಾಯಿಸಿಕೊಂಡಿದ್ದಾರೆ. ಈ ಮೂಲಕ ಅಧಿಕೃತವಾಗಿ ಎಂಗೇಜ್ ಆದ ಐಶ್ವರ್ಯಾ ಸಧ್ಯದಲ್ಲೇ ಹಸೆಮಣೆ ಏರಲಿದ್ದಾರೆ.

  ದಶಕದ ಬಳಿಕ ಧಾರಾವಾಹಿ ಪ್ರಪಂಚದಲ್ಲಿ ರಾಘವೇಂದ್ರ ರಾಜ್ ಕುಮಾರ್ ದಶಕದ ಬಳಿಕ ಧಾರಾವಾಹಿ ಪ್ರಪಂಚದಲ್ಲಿ ರಾಘವೇಂದ್ರ ರಾಜ್ ಕುಮಾರ್

  'ಸರ್ವಮಂಗಳ ಮಾಂಗಲ್ಯೇ' ಧಾರಾವಾಹಿಯಲ್ಲಿ ಐಶ್ವರ್ಯಾ ಪಾರ್ವತಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಹನಟನ ಪಾತ್ರದಲ್ಲಿ ಚಂದನ್ ಕಾಣಿಸಿಕೊಂಡಿದ್ದಾರೆ. ಕನ್ನಡ ಕಿರುತೆರೆ ಪ್ರೇಕ್ಷಕರ ನೆಚ್ಚಿನ ಜೋಡಿಗಳಲ್ಲಿ ಈ ಜೋಡಿ ಕೂಡ ಒಂದು. ನಿಶ್ಚಿತಾರ್ಥ ಮಾಡಿಕೊಂಡ ಸಹ ನಟಿ ಐಶ್ವರ್ಯಾ ಅವರಿಗೆ ಚಂದನ್ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದ್ದಾರೆ.

  ಐಶ್ವರ್ಯಾ ಈ ಮೊದಲು 'ಅನುರೂಪ' ಸೀರಿಯಲ್ ಮೂಲಕ ಕಿರುತೆರೆ ಪ್ರವೇಶಿಸಿದ್ದಾರೆ. ಆ ನಂತರ ಐಶ್ವರ್ಯಾ 'ಪುನರ್ ವಿವಾಹ', 'ಗಿರಿಜಾ ಕಲ್ಯಾಣ' ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಪ್ರಸಾರವಾಗುತ್ತಿರುವ 'ಸರ್ವಮಂಗಳ ಮಾಂಗಲ್ಯೇ' ಧಾರಾವಾಹಿ ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲೂ ಪ್ರಸಾರವಾಗುತ್ತಿದೆ. ಐಶ್ವರ್ಯಾ ಕಿರುತೆರೆ ಮಾತ್ರವಲ್ಲದೆ ಬೆಳ್ಳಿ ಪರದೆ ಮೇಲು ಮಿಂಚಿದ್ದಾರೆ.

  English summary
  Kannada famous serial 'Sarvamangala Mangalye' fame actress Aishwarya got engaged. Aishwarya engaged with her sweetheart Hari Vinay.
  Friday, May 10, 2019, 10:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X