Don't Miss!
- Technology
ಸ್ಯಾಮ್ಸಂಗ್ನ ಈ ಹೊಸ ಡಿವೈಸ್ ನೋಡಿದ್ರೆ ನಿಮಗೆ ಏನನ್ನಿಸುತ್ತೆ? ಇದೇನು ಸಾಬೂನಾ?
- News
ಬೊಮ್ಮಾಯಿ ಎಂದರೆ ಖಾಲಿ ಕುರ್ಚಿಗಳಿಗೆ ಭಾಷಣ ಮಾಡುವ ಸಿಎಂ!
- Lifestyle
ದಕ್ಷಿಣ ಧ್ರುವಕ್ಕೆ ಯಾತ್ರೆ ಮಾಡಿ ಸಾಧನೆ ಮೊದಲ ಮಹಿಳೆ: ಕ್ಯಾ. ಪ್ರೀತಿ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Sports
BGT 2023: ಭಾರತದ ಸ್ಪಿನ್ ದಾಳಿ ಭಯ: ಆಸ್ಟ್ರೇಲಿಯಾ ಆಟಗಾರರು ಮಾಡ್ತಿರೋದೇನು?
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಾಲನ ಜೊತೆಗೆ ಬದುಕೋದು ಬೇಡವೆಂದು ಕರೆಗೆ ಹಾರಿ ಬಿಟ್ಲಾ ದಿವ್ಯಾ?
'ಸತ್ಯ' ಧಾರವಾಹಿಯಲ್ಲಿ ದಿವ್ಯಾಳನ್ನು ರೊಮ್ಯಾಂಟಿಕ್ ಜಾಗಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ ಬಾಲ ಊರಿನ ಆಚೆಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಆಲದ ಮರದ ಕೆಳಗೆ ಚೋಟಾ ದಿವ್ಯಾ ಮತ್ತು ಬಾಲನಿಗಾಗಿ ಬೆಂಕಿಯನ್ನು ಹಾಕಿ ರೊಮ್ಯಾಂಟಿಕ್ ಹಾಡನ್ನು ಪ್ಲೇ ಮಾಡಿರುತ್ತಾನೆ.
ಬಾಲ ತುಂಬಾ ಜೋಶ್‌ನಲ್ಲಿ ದಿವ್ಯಾ ಜೊತೆಗೆ ಡ್ಯಾನ್ಸ್ ಮಾಡುತ್ತಾನೆ. ಆದರೆ ದಿವ್ಯಾ ತುಂಬಾ ಫ್ರಸ್ಟ್ರೇಟ್ ಆಗಿರುತ್ತಾಳೆ. ಹಾಗಾಗಿ ದಿವ್ಯಾ, ಬಾಲನ ಜೊತೆ ಜಗಳ ಮಾಡಲು ಶುರು ಮಾಡುತ್ತಾಳೆ.
ಮೊದಲನೇ
ರಾತ್ರಿ
ಸಂಭ್ರಮದಲ್ಲಿರುವ
ಸಮರ್ಥ್
ಸಿರಿ!
ನಾನು ಏನೆಲ್ಲಾ ಕನಸುಗಳನ್ನು ಹೊತ್ತುಕೊಂಡು ನಿನ್ನನ್ನು ಮದುವೆಯಾದೆ. ಆದರೆ ನಾನು ಈಗ ತಿರುಪೆ ಎತ್ತುವ ಪರಿಸ್ಥಿತಿ ಬಂದಿದ್ದೀನಿ. ಇದಕ್ಕೆಲ್ಲಾ ನೀನೆ ಕಾರಣ ಬಾಲ ಎಂದು ಹೇಳುತ್ತಾಳೆ.

ಜಗಳ ಮಾಡಿದ ದಿವ್ಯಾ
ನನ್ನ ತಾಯಿ ಮನೆಯಲ್ಲಿ ಎಲ್ಲರಿಗೂ ಜೋರು ಮಾಡಿಕೊಂಡು ನನಗೆ ಏನು ಬೇಕು ಅದನ್ನು ತರಿಸಿಕೊಳ್ತಾ ಇದ್ದೆ. ರಾಣಿ ತರಹ ಬದುಕುತ್ತಾ ಇದ್ದೆ. ಆದರೆ ನನಗೆ ನಮ್ಮನೆಯಲ್ಲಿ ನೋಡಿದ ಕಾರ್ತಿಕ್ ಕೂಡ ಶ್ರೀಮಂತಾನೆ ಕೋಟೆ ಮನೆ ಸೊಸೆ ಆಗಬೇಕಿದ್ದ ನಾನು ನಿನ್ನ ಮದುವೆ ಆಗಿ ಪಡಬಾರದ ಕಷ್ಟ ಪಡುತ್ತಿದ್ದೇನೆ. ಅಲ್ಲಿ ಸತ್ಯ ನಾನು ಮದುವೆಯಾಗಬೇಕಿದ್ದ ಕಾರ್ತಿಕ್‌ನನ್ನು ಮದುವೆಯಾಗಿ ಸುಖವಾಗಿದ್ದಾಳೆ. ನೀನು ನನಗೆ ಕನಸಿನ ಲೋಕವನ್ನು ತೋರಿಸಿ ಪ್ರೀತಿ ಹೆಸರಲ್ಲಿ ಮೋಸ ಮಾಡಿದ್ದೀಯಾ ಎಂದೆಲ್ಲಾ ಹೇಳುತ್ತಾಳೆ.

ಬಾಲ ಸ್ಥಿತಿ ಈಗ ಹೇಳತೀರದು
ದಿವ್ಯಾಳ ಮಾತುಗಳನ್ನು ಕೇಳಿದ ಬಾಲ ತುಂಬಾ ಬೇಸರ ಮಾಡಿಕೊಳ್ಳುತ್ತಾನೆ. ಹಾಗಾದರೆ ನಿನಗೆ ನನ್ನ ಮೇಲೆ ಪ್ರೀತಿನೇ ಇಲ್ವಾ.? ಹಣನೇ ಮುಖ್ಯನಾ ನಿನಗೆ ಎಂದು ಬಾಲ, ದಿವ್ಯಾಳನ್ನು ಕೇಳುತ್ತಾನೆ. ಹೌದು ನನಗೆ ಹಣನೇ ಮುಖ್ಯ ಹುಟ್ಟಿದಾಗಿನಿಂದ ಬಡತನದಲ್ಲಿದ್ದ ನಾನು ಶ್ರೀಮಂತನನ್ನ ಮದುವೆಯಾಗಬೇಕು, ರಾಣಿಯಂತೆ ಇರಬೇಕು ಅರಮನೆಯಲ್ಲಿ ಬದುಕಬೇಕು ಎಂದು ಕನಸಕು ಕಂಡಿದ್ದೆ. ಪದೇ ಪದೇ ಅಪ್ಪ ಅಪ್ಪ ಅಂತ ಹೇಳಬೇಡ ನನಗೆ ಗೊತ್ತಿಲ್ಲ ನಾನು ಕಂಡ ಕನಸನ್ನು ನನಸು ಮಾಡ್ತೀಯೋ ಇಲ್ಲ ಅಂದ್ರೆ ನಾನು ಕೆರೆನೋ ಅಥವಾ ಬಾವಿನೋ ನೋಡ್ಕೊಳ್ಳೋ ನೀನೇ ಡಿಸೈಡ್ ಮಾಡು ನನಗಂತೂ ಈ ಜೀವನ ಸಾಕಾಗಿ ಹೋಗಿದೆ. ಹೆಂಡತಿಯ ಸಾಕೋಕೆ ಆಗದೆ ಇದ್ದಮೇಲೆ ನಿಮಗೆಲ್ಲ ಯಾಕೆ ಪ್ರೀತಿ ಪ್ರೇಮ ಮದುವೆ ಎಲ್ಲ ಬೇಕು ಅಂತ ಹೇಳಿ ದಿವ್ಯಾ ಅಲ್ಲಿಂದ ಹೊರಟು ಹೋಗುತ್ತಾಳೆ.

ಬಲೆಯಲ್ಲಿ ಸಿಲುಕಿದ ಕಾರ್ತಿಕ್
ಇತ್ತ ಕಾರ್ತಿಕ್‌ನನ್ನು ಮಾಳವಿಕಾ ರೂಮಿಗೆ ಕರೆದುಕೊಂಡು ಹೋಗುತ್ತಾಳೆ. ಕರೆದುಕೊಂಡು ಹೋಗಿ ಅಲ್ಲಿ ಕಾರ್ತಿಕ್‌ನನ್ನು ಬೆಡ್ ಮೇಲೆ ಕೂರಿಸಿ ಬಾಗಿಲನ್ನು ಹಾಕುತ್ತಾಳೆ. ಬಳಿಕ ಲೈಟ್ ಆಫ್ ಮಾಡುತ್ತಾಳೆ. ಇದರಿಂದ ಹೆದರಿದ ಕಾರ್ತಿಕ್ ಏನು ಮಾಡುತ್ತಿದ್ದೀರಾ ನೀವು ಎಂದು ಕೇಳಿದರೆ, ಮಾಳವಿಕಾ ಈಗ ನೋಡಿ ನಾನು ಏನು ಮಾಡ್ತೀನಿ ಅಂತ ಹೇಳಿ ಹೋಗಿ ತಬ್ಬಿಕೊಂಡು ಬಿಡುತ್ತಾಳೆ. ಕಾರ್ತಿಕ್ ಸಿಟ್ಟು ಬಂದು ಮಾಳವಿಕಾ ಕೆನ್ನೆಗೆ ಹೊಡೆದು ಬಿಡುತ್ತಾನೆ. ಆಗ ಬೇಕಂತಲೇ ಮಾಳವಿಕಾ ಮೀಡಿಯಾ ಮುಂದೆ ಓಡಿ ಹೋಗುತ್ತಾಳೆ. ನನ್ನನ್ನು ಕಾಪಾಡಿ, ನನ್ನನ್ನು ಕಾಪಾಡಿ ಎಂದು ಹೇಳುತ್ತಾಳೆ.

ಇದೂ ಕೂಡ ಕೀರ್ತನಾ ಪ್ಲ್ಯಾನ್?
ಪಾರ್ಟಿಗೆ ಬಂದಿದ್ದ ಮೀಡಿಯಾದವರಲ್ಲ ಏನಾಯ್ತು ಮೇಡಂ ಎಂದು ಕೇಳುತ್ತಾರೆ. ಅವಳು ಬಿಸಿನೆಸ್ ವಿಚಾರವಾಗಿ ಮಾತನಾಡುತ್ತೀನಿ ಎಂದು ಹೇಳಿ ರೂಮ್ ಕರೆದುಕೊಂಡು ಹೋಗಿ ನನ್ನ ಬಳಿ ಮಿಸ್ ಬಿಹೇವ್ ಮಾಡಿದ ಎಂದು ಹೇಳುತ್ತಾಳೆ. ಆಗ ಮೀಡಿಯಾದವರು ಯಾರವರು ಯಾರವರು ಎಂದು ಕೇಳುತ್ತಾರೆ. ಅಷ್ಟರಲ್ಲಿ ಅದೇ ಜಾಗಕ್ಕೆ ಕಾರ್ತಿಕ್ ಕೂಡ ಬರುತ್ತಾನೆ. ಆಗ ಎಲ್ಲರೂ ಕಾರ್ತಿಕ್ ಫೋಟೋ ವಿಡಿಯೋ ತೆಗೆದುಕೊಳ್ಳುತ್ತಾರೆ. ಆಗ ಅಲ್ಲಿಗೆ ಸತ್ಯ, ಕೀರ್ತನಾ, ಸುಹಾಸ್ ಎಲ್ಲರೂ ಬರುತ್ತಾರೆ. ಇನ್ನು ಕೀರ್ತನಾ ನಾವು ಬಯಸಿದ್ದೊಂದು ಆಗಿದ್ದು ಒಂದು. ಕೋಟೆ ಮನೆ ಮಾನ ಮರ್ಯಾದೆ ಅಂತೂ ಮೀಡಿಯಾ ಮುಂದೆ ಹರಾಜು ಆಯ್ತು. ಪರಿಸ್ಥಿತಿ ನಾ ನಮಗೆ ಹೇಗೆ ಬೇಕೋ ಹಾಗೆ ನಾವು ಬಳಸಿಕೊಳ್ಳಬೇಕು. ಇಲ್ಲಾಂದ್ರೆ ನಮಗೆ ಕಷ್ಟ ಆಗುತ್ತೆ. ಹೇಗಾದರೂ ಮಾಡಿ ಪರಿಸ್ಥಿತಿಯನ್ನು ನಮ್ಮ ಹತೋಟಿಗೆ ತರಬೇಕು. ಅದಕ್ಕೆ ಪ್ಲ್ಯಾನ್ ಮಾಡಬೇಕು ಎಂದು ಕೀರ್ತನಾ ಸುಹಾಸ್ ಬಳಿ ಮಾತನಾಡುತ್ತಿರುತ್ತಾಳೆ.

ದಿವ್ಯಾ ಕೆರೆಗೆ ಹಾರಿಬಿಟ್ಲಾ?
ನನಗೆ ದಿವ್ಯಾ ಅಂದ್ರೆ ತುಂಬಾ ಇಷ್ಟ. ಆದರೆ ಏನು ಮಾಡೋದು ಅವಳಿಗೆ ಹಣವೇ ಮುಖ್ಯ. ನಾನು ಅವಳನ್ನ ಒಲಿಸಿಕೊಳ್ಳುವುದಕ್ಕೋಸ್ಕರ ಇಷ್ಟು ದೊಡ್ಡ ಸುಳ್ಳಿನ ಅರಮನೆಯನ್ನೇ ಕಟ್ಟಿದ್ದೀನಿ. ಆದರೆ ದಿವ್ಯಾ ಮಾತ್ರ ಹಣ ಹಣ ಅಂತ ಹೇಳ್ತಾ ಇದ್ದಾಳೆ. ನನ್ನ ಹತ್ರ ಇರೋದು ಈ ಹಳ್ಳಿಯಲ್ಲಿರೋ ಮನೆ ಬಿಟ್ಟರೆ ಬೇರೆ ಏನು ಇಲ್ಲ. ಅವಳಿಗೆ ಈಗ ಹೇಗೆ ಅರ್ಥ ಮಾಡಿಸುವುದು. ಅವಳಿಗೋಸ್ಕರ ನನ್ನ ಕೈಯಲ್ಲಿದ್ದ ಪುಟ ಕೆಲಸವನ್ನು ಕೂಡ ಬಿಟ್ಟುಬಿಟ್ಟೆ. ಈಗ ಕೆಲಸಾನೂ ಇಲ್ಲ. ಕೈಯಲ್ಲಿ ಹಣವೂ ಇಲ್ಲ. ದಿವ್ಯಾಳನ್ನ ಚೆನ್ನಾಗಿ ನೋಡ್ಕೋಬೇಕು ಅಂತ ಕೀರ್ತನಾ ಬಳಿ ಬ್ಲ್ಯಾಕ್ ಮೇಲ್ ಮಾಡಿ ಹಣ ವಸೂಲಿ ಮಾಡ್ತಿದ್ದೆ ಎಂದು ತನ್ನ ಗೋಳನ್ನು ಚೋಟಾ ಬಳಿ ಹೇಳಿಕೊಳ್ಳುತ್ತಿರುತ್ತಾನೆ. ಇದೇ ವೇಳೆಗೆ ಬಾಲನ ಮೊಬೈಲ್‌ಗೆ ಸುರೇಶ್ ಎಂಬುವರಿಂದ ಫೋನ್ ಬರುತ್ತದೆ. ಫೋನ್ ರಿಸೀವ್ ಮಾಡಿದ ಕೂಡಲೇ ಹೆದರಿಕೊಂಡ ಬಾಲ ಫೋನ್ ಕಟ್ ಮಾಡಿ, ದಿವ್ಯಾ ಕೆರೆಗೆ ಹಾರಿದ್ದಾಳಂತೆ ಎಂದು ಹೇಳುತ್ತಾನೆ. ಆಗ ಇಬ್ಬರು ಎದ್ದು ಓಡುತ್ತಾರೆ. ಇದು ದಿವ್ಯಾಳ ಹೊಸ ಪ್ಲ್ಯಾನ್ ಆ..? ಇಲ್ಲ ಅನಾಹುತ ನಡೆದೇ ಹೋಯ್ತೋ..??