Don't Miss!
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
ಈ ಭಾರತೀಯ ತಾನು ಎದುರಿಸಿದ 'ಅತ್ಯಂತ ಅಪಾಯಕಾರಿ ಬೌಲರ್' ಎಂದ ಜೋಸ್ ಬಟ್ಲರ್
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Sathya: ರಿತು-ರಾಕಿ ಲವ್ ಕಹಾನಿ: ಕೀರ್ತನಾ ಕಣ್ಣಿಗೆ ಬಿದ್ದ ಪ್ರೇಮಿಗಳು!
'ಸತ್ಯ' ಧಾರಾವಾಹಿಯಲ್ಲಿ ಕಾರ್ತಿಕ್ ಆಫೀಸಿಗೆ ಹೊರಟಿರುತ್ತಾನೆ. ಆದರೆ ಸತ್ಯ, ಕಾರ್ತಿಕ್ ಡ್ರೆಸ್ ಚೆನ್ನಾಗಿಲ್ಲ ಎಂದು ಬೇರೆ ಬಟ್ಟೆಯನ್ನು ಸೆಲೆಕ್ಟ್ ಮಾಡುತ್ತಾಳೆ. ಅದನ್ನು ಕಾರ್ತಿಕ್ ಧರಿಸುತ್ತಾನೆ. ಆದರೆ ಬ್ಲೇಜರ್‌ನ ಬಟನ್ ಇರುವುದಿಲ್ಲ.
ಆ ಬ್ಲೇಜರ್‌ನ ಸತ್ಯಳೇ ಹಾಕಿಕೊಡುತ್ತಾಳೆ. ಇನ್ನು ಇಬ್ಬರ ನಡುವೆ ರೊಮ್ಯಾನ್ಸ್ ಕೂಡ ಆಗಾಗ ನಡೆಯುತ್ತಿರುತ್ತದೆ. ಸುಮ್ಮನೆ ಎಳೆದಿದ್ದಕ್ಕೆ ಕಾರ್ತಿಕ್, ಸತ್ಯ ಮೇಲೆ ಬೀಳುತ್ತಾನೆ. ಈ ವೇಳೆಗೆ ರಿತು ಬಂದು ನೋಡುತ್ತಾಳೆ.
Paaru
Serial:
ಪಾರು
ಮೇಲೆ
ಆರೋಪ
ಹೊರಿಸಿದ
ಮೋನಿಕಾ
ರಿತು, ಕಾರ್ತಿಕ್‌ನನ್ನು ರೇಗಿಸುತ್ತಾಳೆ. ಕಾರ್ತಿಕ್‌ಗೆ ಮುಜುಗರವಾಗುತ್ತದೆ. ರಿತು, ಅಪ್ಪ ನಿನ್ನನ್ನು ಕರೆಯುತ್ತಿದ್ದಾರೆ ಬೇಗ ಬಾ ಎಂದು ಹೇಳಿ ಹೋಗುತ್ತಾಳೆ. ಆಗ ಸತ್ಯ ಕೂಡ ಬೇಕಂತಲೇ ಕಾರ್ತಿಕ್ ಕಾಲೆಳೆಯುತ್ತಾಳೆ.

ಆಫೀಸಿಗೆ ಹೊರಟ ಕಾರ್ತಿಕ್
ಸೀತಾ, ಕಾರ್ತಿಕ್‌ಗೆ ಆರತಿ ಮಾಡುತ್ತಾಳೆ. ಎಲ್ಲಾ ಒಳ್ಳೆಯದಾಗಲಿ ಎನ್ನುತ್ತಾಳೆ. ಮನೆಯಲ್ಲಿ ಎಲ್ಲರೂ ಕಾರ್ತಿಕ್‌ಗೆ ವಿಶ್ ಮಾಡುತ್ತಾರೆ. ಸತ್ಯ ಯಾರೂ ಇಲ್ಲದಾಗ ಕಾರ್ತಿಕ್‌ಗೆ ಆಲ್ ದಿ ಬೆಸ್ಟ್ ಹೇಳಿ ಪ್ಲೇನ್ ಕಿಸ್ ಕೊಡುತ್ತಾಳೆ. ಇನ್ನು ರಾಯರು ಕಾರ್ತಿಕ್‌ನನ್ನು ಆಫೀಸಿಗೆ ಕರೆದುಕೊಂಡು ಹೋಗುತ್ತಾರೆ. ಆಫೀಸಿನಲ್ಲಿ ಕಾರ್ತಿಕ್ ಕೈ ಹಿಡಿದುಕೊಂಡು ರಾಯರು ಹೋಗುವಾಗ ಕಾರ್ತಿಕ್ ಎಮೋಷನಲ್ ಆಗುತ್ತಾನೆ. ಅಪ್ಪನೇ ತನ್ನ ಕೈ ಹಿಡಿದುಕೊಂಡಿರುವುದಕ್ಕೆ ಖುಷಿ ಪಡುತ್ತಾನೆ.

ಸುಶೀಲಗೆ ಸತ್ಯ ಹೇಳಿದ ಜಗನ್ನಾಥ
ಹಣ ಕಳೆದುಕೊಂಡು ಜಗನ್ನಾಥ ಒಬ್ಬನೇ ಹಗಲು-ರಾತ್ರಿ ಕೊರಗುತ್ತಿರುತ್ತಾನೆ. ಊರಲ್ಲಿ ತಲೆ ಎತ್ತಿಕೊಂಡು ನಡೆಯದಂತೆ ಆಯಿತಲ್ಲ ಎಂದು ಗೋಳಾಡುತ್ತಿರುತ್ತಾನೆ. ಆದರೆ ಈ ಸಂಕಟವನ್ನು ಜಗನ್ನಾಥ ಯಾರ ಬಳಿಯೂ ಹೇಳಿಕೊಳ್ಳಲಾಗದೆ ಒದ್ದಾಡುತ್ತಿರುತ್ತಾನೆ. ಜಗನ್ನಾಥನ ಹೆಂಡತಿ ಸುಶೀಲ ಪದೇ ಪದೇ ಹಣ ಎಲ್ಲಿ ಎಂದು ಕೇಳುತ್ತಿರುತ್ತಾಳೆ. ಜಗನ್ನಾಥ ಸಿಟ್ಟು ಬಂದು ನಡೆದ ಘಟನೆಯನ್ನೆಲ್ಲಾ ಹೇಳುತ್ತಾನೆ. ಗೋವಿಂದ ಎಂಬುವನ್ನು ಪ್ಲಾನ್ ಮಾಡಿ ನಾಮ ಹಾಕಿದ ಎಂದು ಹೇಳುತ್ತಾನೆ. ಸಿಟ್ಟು ಮಾಡಿಕೊಂಡು ಮನೆಯಿಂದ ಹೋಗುತ್ತಾನೆ.

ಬಾಲನಿಗೆ ಈಗ ಖುಷಿಯೋ ಖುಷಿ
ಬಾಲ ಬೇಕಂತಲೇ ಜಗನ್ನಾಥನಿಗೆ ಫೋನ್ ಮಾಡುತ್ತಾನೆ. ಮೊದಲು ಅಳಿಯಂದಿರಿಗೆ ಏನು ಉತ್ತರ ಕೊಡುವುದು ಎಂದು ತಿಳಿಯದೇ ಜಗನ್ನಾಥ ಫೋನ್ ರಿಸೀವ್ ಮಾಡಲ್ಲ. ಮತ್ತೆ ಬಾಲ ಕಾಲ್ ಮಾಡಿದಾಗ ದಾರಿ ಇಲ್ಲದೆ ಮಾತನಾಡುತ್ತಾನೆ. ಬಾಲ ಹಣ ಡೆಬಿಟ್ ಆಗಿದೆ. ಈಗ ನೀವು ಇನ್ನೂರು ಕೋಟಿ ರೂಪಾಯಿಯ ಒಡೆಯ ಎಂದು ಸುಳ್ಳು ಸುಳ್ಳೆ ಮಾತನಾಡುತ್ತಾನೆ. ಜಗನ್ನಾಥನಿಗೆ ಸತ್ಯ ಹೇಳಲಾಗದೇ ಬಾಲನ ಬಳಿ ಹೌದು ಎಂದು ಹೇಳುತ್ತಾನೆ. ಆದರೆ, ಬಾಲನಿಗೆ ಎಲ್ಲಾ ಸತ್ಯವೂ ಗೊತ್ತಿರುತ್ತದೆ.

ರಿತು-ರಾಕಿ ಲವ್ ಸ್ಟೋರಿ
ಇತ್ತ ರಾಕಿ, ರಿತುಗೆ ಪಾಠ ಹೇಳಿಕೊಡಲು ಮನೆಗೆ ಬರುತ್ತಾನೆ. ರಿತು ರಾಕಿ ಕೈ ಹಿಡಿದುಕೊಳ್ಳುತ್ತಾಳೆ. ಆದರೆ ರಾಕಿಗೆ ಇದು ಇಷ್ಟವಾಗುವುದಿಲ್ಲ. ಇದನ್ನು ಕೀರ್ತನಾ ನೋಡಿ ಬಿಡುತ್ತಾಳೆ. ಆದರೆ ರಾಕಿ, ರಿತುಳಿಂದ ತನ್ನ ಕೈಯನ್ನು ಬಿಡಿಸಿಕೊಂಡು ಓದುವುದರ ಕಡೆಗೆ ಗಮನ ಕೊಡು ಎಂದು ಹೇಳುತ್ತಾನೆ. ರಿತು ನಿನಗೆ ನನ್ನ ಪ್ರೀತಿ ಅರ್ಥಾನೇ ಆಗಲ್ಲ ಅಲ್ವಾ ಎಂದು ಬೇಸರ ಮಾಡಿಕೊಳ್ಳುತ್ತಾಳೆ. ಇದನ್ನೆಲ್ಲಾ ಕೀರ್ತನಾ ನೋಡುತ್ತಾಳೆ. ಈ ವಿಚಾರವಾಗಿಯೂ ಕೀರ್ತನಾ ಸತ್ಯ ತಲೆ ಮೇಲೆ ಗೂಬೆ ಕೂರಿಸುತ್ತಾಳಾ ಕಾದು ನೋಡಬೇಕಿದೆ.