For Quick Alerts
  ALLOW NOTIFICATIONS  
  For Daily Alerts

  ಸತ್ಯ ತಲೆಯಲ್ಲಿ ಹೊಸ ಹುಳ ಬಿಟ್ಟ ಕಾರ್ತಿಕ್: ಸಖಿ ಬಾರ್ಯ ಎಂದರೇನು..?

  By ಪ್ರಿಯಾ ದೊರೆ
  |

  'ಸತ್ಯ' ಧಾರಾವಾಹಿಯಲ್ಲಿ ನೀನು ನನ್ನ ಜೊತೆ ಮಾತನಾಡಲಿಲ್ಲ ಅಂದ್ರೂ ನನಗೆ ಕೋಪ ಬರುತ್ತೆ ಎಂದು ಕಾರ್ತಿಕ್ ಹೇಳುತ್ತಾನೆ. ಸತ್ಯ ನಾನು ನಿನಗೆ ಹೇಗೆ ಕಾಣಿಸುತ್ತೀನಿ. ನಿನ್ನ ಜೊತೆ ಮಾತನಾಡಿದರೂ ತಪ್ಪು, ಮಾತನಾಡಿಲ್ಲ ಅಂದ್ರೂ ಕಷ್ಟ ಎಂದಾಗ, ಕಾರ್ತಿಕ್ ನೀನು ನನ್ನ ಹೆಂಡತಿ ಎನ್ನುತ್ತಾನೆ.

  ಈ ಮಾತನ್ನು ಕೇಳುವ ಸತ್ಯಗೆ ಖುಷಿಯ ಜೊತೆಗೆ ಶಾಕ್ ಕೂಡ ಆಗುತ್ತದೆ. ಅಮುಲ್ ಬೇಬಿ ಎಂದು ಕರೆದಿದ್ದಕ್ಕೆ ಕಾರ್ತಿಕ್ ಖುಷಿಯಾಗುತ್ತಾನೆ. ಸತ್ಯ ನಾನು ನಿನಗೆ ಏನಾಗಬೇಕು ಎಂದು ಕೇಳುತ್ತಾಳೆ.

  ಅರುಂಧತಿ ಬಲೆಯಲ್ಲಿ ಬಿದ್ದಿರುವ ಪ್ರೀತೂವನ್ನು ರಕ್ಷಣೆ ಮಾಡುತ್ತಾನಾ ಆದಿ?ಅರುಂಧತಿ ಬಲೆಯಲ್ಲಿ ಬಿದ್ದಿರುವ ಪ್ರೀತೂವನ್ನು ರಕ್ಷಣೆ ಮಾಡುತ್ತಾನಾ ಆದಿ?

  ಕೆಲ ಹೊತ್ತು ಯೋಚಿಸುವ ಕಾರ್ತಿಕ್ ನೀನು ನನಗೆ ಸಖಿ ಬಾರ್ಯ ಆಗಬೇಕು ಎಂದು ಹೇಳಿ ಸತ್ಯ ತಲೆಯಲ್ಲಿ ಹುಳಬಿಟ್ಟು ಮಲಗುತ್ತಾನೆ. ಸತ್ಯಗೆ ಬಾರ್ಯ ಸಖಿ ಎಂದರೇನು ಅನ್ನೋ ಪ್ರಶ್ನೆ ಎದ್ದಿದೆ.

  ಹೊಸ ಪ್ಲ್ಯಾನ್ ಮಾಡಿರುವ ಸುಹಾಸ್

  ಹೊಸ ಪ್ಲ್ಯಾನ್ ಮಾಡಿರುವ ಸುಹಾಸ್

  ಕೀರ್ತನಾ, ಸತ್ಯಳನ್ನು ಹೇಗೆ ಮಟ್ಟ ಹಾಕಬೇಕು ಎಂದು ಯೋಚಿಸುತ್ತಿರುತ್ತಾಳೆ. ಇದೇ ವೇಳೆಗೆ ಸುಹಾಸ್ ಅಲ್ಲಿಗೆ ಬಂದಾಗ ಕೀರ್ತನಾ ನಾವು ಹೇಗಾದರೂ ಮಾಡಿ ಬಾಲನಿಗೆ ಮುಕ್ತಿ ಕಾಣಿಸಬೇಕು ಎಂದು ಹೇಳುತ್ತಾಳೆ. ಆಗ ಸುಹಾಸ್, ಬಾಲ ಒಂದು ರೀತಿ ಕ್ಯಾನ್ಸರ್ ರೋಗವಿದ್ದಂತೆ. ನಿಧಾನವಾಗಿ ದೇಹದ ಎಲ್ಲಾ ಭಾಗಕ್ಕೂ ಅಂಟಿಕೊಂಡು ಬಿಡುತ್ತಾನೆ. ಅದಕ್ಕೆ ನನ್ನ ಬಳಿ ಪ್ಲ್ಯಾನ್ ಒಂದಿದೆ. ಕಂಪನಿ ಕಡೆಯಿಂದಲೇ ಅವನಿಗೆ ಹಣ ಕೊಡೋಣ. ಯಾಕೆಂದರೆ, ನಿಮ್ಮ ಅಪ್ಪ ಹಾಗೂ ಚಿಕ್ಕಪ್ಪ ಇಬ್ಬರೂ ಬಡವರಿಗೆ ದಾನ ಮಾಡುವುದರಲ್ಲಿ ಎತ್ತಿದ ಕೈ. ನಾವು ಅದೇ ನೆಪದಲ್ಲಿ ಬಾಲನಿಗೆ ಹಣ ಕೊಟ್ಟರೆ, ನಮ್ಮ ಪ್ರಾಬ್ಲಮ್ ಸುಲಭವಾಗಿ ಬಗೆಹರಿಯುತ್ತದೆ ಎಂದು ಹೇಳುತ್ತಾನೆ.

  ಹಬ್ಬದ ಅರ್ಥ ಕೇಳಿ ತಿಳಿದ ಸತ್ಯ

  ಹಬ್ಬದ ಅರ್ಥ ಕೇಳಿ ತಿಳಿದ ಸತ್ಯ

  ಇನ್ನು ದೀಪಾವಳಿ ಹಬ್ಬ ಹಿನ್ನೆಲೆ ಸೀತಾ ಮನೆಯಲ್ಲಿ ಸಂಪಿಗೆ ಪೂಜೆ ಮಾಡುತ್ತಿರುತ್ತಾರೆ. ಇದನ್ನು ನೋಡಿ ಸತ್ಯ ಸಂಪಿಗೆ ಪೂಜೆ ಯಾಕೆ ಮಾಡಬೇಕು ಎಂದು ಕೇಳುತ್ತಾಳೆ. ಆಗ ಸೀತಾ ಬೈಯುತ್ತಾಳೆ. ಸತ್ಯ ನೇರವಾಗಿ ಸೀತಾಳನ್ನೇ ಕೇಳುತ್ತಾಳೆ. ಆಗ ಸೀತಾ ಇವತ್ತು ದೀಪಾವಳಿ ಹಬ್ಬದ ಮೊದಲ ದಿನ. ನೀರು ತುಂಬುವ ಹಬ್ಬ ಇಲ್ಲ ಗಂಗೆಯನ್ನ ಮನೆ ತುಂಬಿಸಿಕೊಳ್ಳುವ ಹಬ್ಬ ಎಂದು ಕರೆಯುತ್ತಾರೆ. ಹಳ್ಳಿ ಕಡೆ ಇವತ್ತು, ಬಾವಿ ಕೆರೆಗಳಲ್ಲಿ ಹೊಸ ನೀರು ಬರುತ್ತೆ ಎಂಬ ಪ್ರತೀತಿ ಇದೆ. ಹೀಗಾಗಿ ಇವತ್ತು ಪೂಜೆ ಮಾಡುತ್ತಾರೆ. ತುಂಬಿರುವ ಕಳಸವನ್ನ ಮನೆಯೊಳೆಗೆ ತೆಗೆದುಕೊಂಡು ಬಾ ಎಂದು ಹೇಳುತ್ತಾಳೆ. ಬಿಂದಿಗೆ ತೆಗೆದುಕೊಂಡು ಹೋಗುವಾಗ ಸತ್ಯ ಎಡವುತ್ತಾಳೆ. ಆಗ ಸತ್ಯಳನ್ನು ಕಾರ್ತಿಕ್ ಹಿಡಿದುಕೊಳ್ಳುತ್ತಾನೆ.

  ಬಟ್ಟೆ ಒಗೆಯುತ್ತಿರುವ ದಿವ್ಯಾ

  ಬಟ್ಟೆ ಒಗೆಯುತ್ತಿರುವ ದಿವ್ಯಾ

  ಮನೆಯಲ್ಲಿ ಅಡುಗೆ ಮಾಡಿ, ಮನೆ ಕೆಲಸ ಮಾಡಿ, ಬಟ್ಟೆಯನ್ನೂ ದಿವ್ಯಾ ಹೊಗೆಯುತ್ತಿದ್ದಾಳೆ. ಇದೆಲ್ಲವನ್ನು ನೋಡಿ ಗಿರಿಜಮ್ಮ ಶಾಕ್ ಆಗಿದ್ದಾಳೆ. ಇನ್ನು ಬಾಲ ಮತ್ತು ದಿವ್ಯಾಳನ್ನು ನೀವು ಯಾವಾಗ ಹೋಗುತ್ತೀರಾ ಎಂದು ಗಿರಿಜಮ್ಮ ಕೇಳಿದ್ದಾಳೆ. ಇದಕ್ಕೆ ಬಾಲ, ಸದ್ಯಕ್ಕಂತೂ ಇಲ್ಲ. ಇನ್ನೂ ಸ್ವಲ್ಪ ದಿನ ಇಲ್ಲೇ ಇದ್ದು ಆಮೇಲೆ ಹೋಗೋದು ಎಂದು ಹೇಳುತ್ತಾನೆ. ಅದನ್ನು ದಿವ್ಯಾ ಮತ್ತೆ ಅವರಿಗೆ ಬಿಡುವು ಸಿಗುತ್ತೋ ಇಲ್ವೋ, ಇರುವಷ್ಟು ದಿನ ಇರಲಿ ಬಿಡಿ ಎಂದು ಬಿಲ್ಡಪ್ ಕೊಡುತ್ತಾಳೆ.

  ಸಖಿ ಬಾರ್ಯ ಅರ್ಥ ಹುಡುಕುತ್ತಿರುವ ಸತ್ಯ

  ಸಖಿ ಬಾರ್ಯ ಅರ್ಥ ಹುಡುಕುತ್ತಿರುವ ಸತ್ಯ

  ಸತ್ಯ ತಲೆಯಲ್ಲಿ ಈಗ ಬಾರ್ಯ ಸಖಿ ಪದವೇ ಕುಳಿತಿದೆ. ಈಗ ಸತ್ಯಗೆ ಈ ಪದದ ಅರ್ಥ ಹುಡುಕಬೇಕಾಗಿದೆ. ಹಾಗಾಗಿ ಸತ್ಯ, ರಿತು ಬಳಿ ಹೋಗಿ ಈ ಪದದ ಅರ್ಥವನ್ನು ಕೇಳುತ್ತಾಳೆ. ಆದರೆ ಸತ್ಯ ಸಖಿಬಾರ್ಯ ಎಂದು ಕೇಳುವ ಬದಲು ಬಾರ್ಯಸಖಿ ಎಂದು ಕೇಳುತ್ತಾಳೆ. ರಿತು ನನಗೆ ಕನ್ನಡವೇ ಸರಿಯಾಗಿ ಬರೊಲ್ಲ. ಇದರ ಅರ್ಥ ನನಗೆ ಗೊತ್ತಿಲ್ಲ ಎಂದು ಹೇಳುತ್ತಾಳೆ. ಇನ್ನು ಮಂಜ ಸತ್ಯಗೆ ಸಹಾಯ ಮಾಡಲು ಗೂಗಲ್ ನಲ್ಲೂ ಸರ್ಷ್ ಮಾಡುತ್ತಾನೆ. ಆದರೆ, ಗೊತ್ತಾಗುವುದಿಲ್ಲ. ಅದೇ ವೇಳೆಗೆ ಅಲ್ಲಿಗೆ ಕಾರ್ತಿಕ್ ಬರುತ್ತಾನೆ. ಸತ್ಯ ಪ್ಲೀಸ್ ಅರ್ಥ ಹೇಳು.. ನನಗೆ ಗೊತ್ತಾಗುತ್ತಿಲ್ಲ ಎಂದು ಕೇಳುತ್ತಾಳೆ. ಆದರೆ ಕಾರ್ತಿಕ್ ಅರ್ಥ ಹೇಳದೇ ಹೊರಟು ಹೋಗುತ್ತಾನೆ. ಆಗ ಮಂಜ ಇದರ ಅರ್ಥಬೇಕು ಎಂದರೆ ನೀವು ಸೀತಮ್ಮ ಬಳಿ ಕೇಳಿದರೆ ತಿಳಿಯುತ್ತದೆ ಎಂದು ಹೇಳುತ್ತಾನೆ. ಸತ್ಯ, ಸೀತಾ ಬಳಿ ಸಖೀ ಬಾರ್ಯ ಪದದ ಅರ್ಥ ಕೇಳುತ್ತಾಳಾ ಕಾದು ನೋಡಬೇಕಿದೆ.

  English summary
  sathya serial 04th november Episode Written Update. sathya and karthik day by day becoming close. Now karthik called sathya with new word.
  Friday, November 4, 2022, 16:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X