Don't Miss!
- Technology
ಫೆಬ್ರವರಿ ತಿಂಗಳಿನಲ್ಲಿ ಅಬ್ಬರಿಸಲಿರುವ ಪ್ರಮುಖ ಸ್ಮಾರ್ಟ್ಫೋನ್ಗಳ ವಿವರ ಇಲ್ಲಿದೆ!
- News
Philips Layoffs : ಫಿಲೀಪ್ಸ್ನಿಂದ 6000 ಉದ್ಯೋಗಿಗಳ ವಜಾ
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Finance
ಅದಾನಿ ಗ್ರೂಪ್ನ 413 ಪುಟಗಳ ಪ್ರತಿಕ್ರಿಯೆ: ಹಿಂಡನ್ಬರ್ಗ್ ಹೇಳುವುದೇನು?
- Lifestyle
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- Sports
ನೀವೇ ನಮಗೆ ಸ್ಪೂರ್ತಿ: ಕಿರಿಯರ ಸಾಧನೆಗೆ ಹರ್ಮನ್ಪ್ರೀತ್ ಕೌರ್ ಮುಕ್ತಕಂಠದ ಶ್ಲಾಘನೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕಾರ್ತಿಕ್ ಮನೆಯಲ್ಲಿ ನೀರವ ಮೌನ: ಬಾಲನ ಬಾಳಲ್ಲಿ ಭರವಸೆಯ ಬೆಳಕು..?!
Article desc: 'ಸತ್ಯ' ಧಾರಾವಾಹಿಯಲ್ಲಿ ಹೊಸ ಪಾತ್ರ ಎಂಟ್ರಿ ಕೊಟ್ಟಿದೆ. ಮಾಳವಿಕಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿರುವಾಕೆ ಕಾರ್ತಿಕ್ ಹಿಂದೆ ಬಿದ್ದಿದ್ದಾಳೆ. ಕಾರ್ತಿಕ್ ಜೊತೆ ಮಿಸ್ ಬಿಹೇವ್ ಮಾಡಿರುವ ಮಾಳವಿಕಾ ನಾಟಕ ಮಾಡಿದ್ದಾಳೆ.
ರೂಮಿಗೆ ಕರೆದುಕೊಂಡು ಹೋಗಿ ಕಾರ್ತಿಕ್‌ನನ್ನು ತಬ್ಬಿಕೊಂಡಿದ್ದಾಳೆ. ಆದರೆ ಕಾರ್ತಿಕ್, ಮಾಳವಿಕಾಳ ಕೆನ್ನೆಗೆ ಹೊಡೆದ ಕಾರಣ ಅವಳು ಮೀಡಿಯಾ ಎದುರು ಹೋಗಿದ್ದಾಳೆ. ಕಾರ್ತಿಕ್ ನನ್ನ ಜೊತೆ ಮಿಸ್ ಬಿಹೇವ್ ಮಾಡಿದ ಎಂದು ಸುಳ್ಳು ಹೇಳಿದ್ದಾಳೆ.
BBK9:
ಬಿಗ್
ಬಾಸ್
ಮನೆಯಿಂದ
ಕಾವ್ಯಾಶ್ರೀ
ಹೊರಬಿದ್ದಿದ್ದಕ್ಕೆ
ಅಸಲಿ
ಕಾರಣವೇನು?
ಇದರಿಂದ ಕೋಟೆ ಮನೆ ಮಾನ ಮರ್ಯಾದೆ ಮೀಡಿಯಾ ಎದುರಿಗೆ ಹರಾಜಾಗಿದೆ. ಕಾರ್ತಿಕ್ ಈಗ ಯಾರಿಗೂ ಮುಖ ತೋರಿಸಲಾಗದೇ ಅವಮಾನಕ್ಕೊಳಗಾಗಿದ್ದಾನೆ. ಸೀತಾ ಮನೆ ಈಗ ಧಗಧಗನೆ ಉರಿಯುತ್ತಿದೆ.

ಸೀತಾಗೆ ಕೋಟೆ ಮನೆ ಮರ್ಯಾದೆ ಚಿಂತೆ
ಕಾರ್ತಿಕ್ ಒಬ್ಬನನ್ನೇ ಬಿಟ್ಟು ಎಲ್ಲರೂ ಮನೆಗೆ ಬಂದಿರುತ್ತಾರೆ. ಮನೆಯಲ್ಲಿ ಎಲ್ಲರಿಗೂ ಮೀಡಿಯಾದಿಂದ ಪರಿಚಿತರಿಂದ ಫೋನ್ ಬರುತ್ತಲೇ ಇರುತ್ತದೆ. ಲಕ್ಷ್ಮಣ ಎಲ್ಲರನ್ನೂ ಮ್ಯಾನೇಜ್ ಮಾಡುತ್ತಿರುತ್ತಾರೆ. ಇದನ್ನೆಲ್ಲಾ ಗಮನಿಸಿದ ಸೀತಾ, ಲಕ್ಷ್ಮಣನಿಗೆ ವೀಡಿಯೋಗಳು ವೈರಲ್ ಆಗದಂತೆ ತಡೆಯಲು ಸಾಧ್ಯವಿಲ್ಲವೇ ಎಂದು ಕೇಳುತ್ತಾಳೆ. ಅದಕ್ಕೆ ಲಕ್ಷ್ಮಣ ಮೀಡಿಯಾವನ್ನ ಕಂಟ್ರೋಲ್ ಮಾಡಬಹುದು, ಆದರೆ ಸೋಶಿಯಲ್ ಮೀಡಿಯಾದಲ್ಲಿ ಏನೂ ಮಾಡೋಕೆ ಆಗೊಲ್ಲ ಎನ್ನುತ್ತಾನೆ. ಈ ಪರಿಸ್ಥಿತಿಯನ್ನು ಲಾಭವಾಗಿ ಮಾಡಿಕೊಳ್ಳಲು ಕೀರ್ತನಾ ಮತ್ತು ಸುಹಾಸ್ ಮುಂದಾಗಿದ್ದಾರೆ. ಸೀತಾಳಿಗೆ ಕೋಟೆ ಮನೆ ಮಾನ ಮರ್ಯಾದೆ ಹರಾಜಾಗುತ್ತಿದೆ ಎಂಬುದೇ ದೊಡ್ಡ ಚಿಂತೆಯಾಗಿದೆ.
BBK
9
:
ಬಿಗ್‌ಬಾಸ್
ಎಲಿಮಿನೇಶನ್:
ಈ
ವಾರ
ಮನೆಯಿಂದ
ಹೊರಬಿದ್ದವರ್ಯಾರು?

ಕಾರ್ತಿಕ್‌ಗಾಗಿ ಅಳುತ್ತಿರುವ ಸತ್ಯ
ಸತ್ಯಗೆ ನಡೆದ ಘಟನೆಯ ಬಗ್ಗೆ ಯೋಚನೆಯೇ ಇಲ್ಲ. ಯಾರು ಏನಾದರೂ ತಿಳಿದುಕೊಳ್ಳಲಿ. ಅದು ಏನೇ ಆಗಿರಲಿ. ಕಾರ್ತಿಕ್ ಮೇಲೆ ತನಗೆ ನಂಬಿಕೆ ಇದೆ ಎಂಬಂತೆ ನಡೆದುಕೊಂಡಿದ್ದಾಳೆ. ಕಾರ್ತಿಕ್ ಮನೆಗೆ ಬಂದಿಲ್ಲ ಎಂದು ಚಿಂತೆ ಮಾಡುತ್ತಿದ್ದಾಳೆ. ಕಾರ್ತಿಕ್ ಫೋನ್ ರಿಸೀವ್ ಮಾಡುತ್ತಿಲ್ಲ ಎಂದು ಅಳುತ್ತಿದ್ದಾಳೆ. ಕಾರ್ತಿಕ್ ಇಲ್ಲದೇ ಉಸಿರಾಡಲೂ ಆಗುತ್ತಿಲ್ಲ. ಅವರು ಎಲ್ಲಿದ್ದರೂ ಮನೆಗೆ ಕರೆಸಿಕೊಳ್ಳಬೇಕು ಎಂದು ಯೋಚಿಸುತ್ತಿದ್ದಾಳೆ. ಸತ್ಯಳನ್ನು ರಿತು ಸಮಾಧಾನ ಮಾಡುತ್ತಿದ್ದಾಳೆ.

ದಿವ್ಯಾಗಾಗಿ ಓಡಿ ಬಂದ ಬಾಲ
ಬಾಲನ ಜೊತೆಗೆ ಜಗಳವಾಡಿದ ಮೇಲೆ ದಿವ್ಯಾ ಸಾಯುವ ನಿರ್ಧಾರ ಮಾಡಿದ್ದಳು. ಅವಳು ಕೆರೆಯತ್ತ ಹೋಗಿದ್ದನ್ನು ನೋಡಿದವರೊಬ್ಬರು ಬಾಲನಿಗೆ ಕರೆ ಮಾಡಿ ವಿಷಯ ಹೇಳಿದರು. ಕೆರೆಯತ್ತ ಓಡಿ ಹೋದ ಬಾಲನ ಎದುರಿಗೆ ದಿವ್ಯಾ ಬಂದು ನಿಂತಿದ್ದಾಳೆ. ದಿವ್ಯಾ ಕೆರೆಗೆ ಹಾರದೇ ಭಯ ಪಟ್ಟು ವಾಪಸ್ ಬಂದಿದ್ದಾಳೆ. ದಿವ್ಯಾಳನ್ನು ನೋಡಿದ ಬಾಲ ಖುಷಿ ಪಟ್ಟಿದ್ದಾನೆ. ಯಾವುದೇ ಕಾರಣಕ್ಕೂ ನನ್ನನ್ನು ಬಿಟ್ಟು ಹೋಗಬೇಡ ಎಂದು ಹೇಳುತ್ತಾನೆ. ಆಗ ದಿವ್ಯಾ ಆದಷ್ಟು ಬೇಗ ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗು ಎಂದು ಕೇಳುತ್ತಾಳೆ. ಇದಕ್ಕೆ ಬಾಲ ಭರವಸೆಯಿಂದ ಮಾತನಾಡಿ ಇಬ್ಬರೂ ನಗು ನಗುತ್ತಾ ಮನೆಗೆ ವಾಪಸ್ ಆಗಿದ್ದಾರೆ.

ಕಾರ್ತಿಕ್ ಮೇಲೆ ಸೀತಾಗೆ ನಂಬಿಕೆ ಇಲ್ವಾ..?
ಇನ್ನು ಸೀತಾ, ಕಾರ್ತಿಕ್ ಬಗ್ಗೆಯೇ ಅನುಮಾನವನ್ನು ವ್ಯಕ್ತ ಪಡಿಸಿದ್ದಾಳೆ. ರಾಮಚಂದ್ರ ರಾಯರ ಜೊತೆಗೆ ಮಾತನಾಡುತ್ತಾ ವೀಡಿಯೋ ನೋಡಿದರೆ ಕಾರ್ತಿಕ್‌ದೇ ತಪ್ಪು ಅನಿಸುತ್ತೆ. ಸತ್ಯ ಕರೆಕ್ಟ್ ಆಗಿ ಇದ್ದಿದ್ದರೆ ಹೀಗೆಲ್ಲಾ ಆಗುತ್ತಿರಲಿಲ್ಲ. ಆದರೆ, ಇದಕ್ಕೆ ಸತ್ಯಾನೇ ಕಾರಣ ಎನ್ನುತ್ತಾಳೆ. ನಮ್ಮ ಕೋಟೆ ಮನೆ ಮರ್ಯಾದೆ ಹೋಯ್ತು ಎನ್ನುತ್ತಾಳೆ. ಆದರೆ ರಾಯರು, ಕಾರ್ತಿಕ್ ಮೇಲೆ ಭರವಸೆ ಇಟ್ಟಿದ್ದಾರೆ. ಕಾರ್ತಿಕ್ ಎಲ್ಲಿದ್ದಾನೆ..? ಏನಾಗಿದ್ದಾನೋ ಎಂಬ ಭಯ ಸತ್ಯಳನ್ನು ಕಾಡುತ್ತಿದೆ.