Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Sathya: ರಿತು, ರಾಕೇಶ್‌ನನ್ನು ತಬ್ಬಿಕೊಂಡಿದ್ದನ್ನು ನೋಡಿದ ಸೀತಾ ಮಾಡಿದ್ದೇನು..?
'ಸತ್ಯ' ಧಾರಾವಾಹಿಯಲ್ಲಿ ಜಗನ್ನಾಥ ಎರಡು ಲಕ್ಷ ಹಣವನ್ನು ಕಳೆದುಕೊಂಡ ವಿಚಾರವನ್ನು ಬಾಲನಿಗೆ ಹೇಳುವುದಿಲ್ಲ. ಆದರೆ, ಜಗನ್ನಾಥ ಕೊಟ್ಟ ಎರಡು ಲಕ್ಷ ಹಣ ಬಾಲನ ಪಾಲಾಗಿರುತ್ತದೆ. ಆದರೆ ಈ ಸತ್ಯ ಜಗನ್ನಾಥನಿಗೆ ಗೊತ್ತಿರುವುದಿಲ್ಲ.
ಹಣ ಡೆಬಿಟ್ ಆಗಿದೆ, ಇನ್ನೂರು ಕೋಟಿ ನಿಮ್ಮ ಅಕೌಂಟ್‌ಗೆ ಬಂದಿದೆ ಎಂದು ಬಾಲ ಹೇಳುವುದನ್ನು ಕೇಳಿದ ಜಗನ್ನಾಥ ಸ್ವಲ್ಪ ಸಮಾಧಾನ ಮಾಡಿಕೊಳ್ಳುತ್ತಾನೆ. ತನಗೆ ಹಣ ಬಂದಿಲ್ಲ. ತನ್ನದು ಕೇವಲ ಎರಡು ಲಕ್ಷ ಹೋಗಿದೆ. ಆದರೆ ಅಳಿಯಂದಿರು ಇನ್ನೂರು ಕೋಟಿ ಕಳೆದುಕೊಂಡಿದ್ದಾರೆ ಎಂದು ಖುಷಿ ಪಡುತ್ತಾನೆ.
ರಾಮಾಚಾರಿಯಿಂದಾಗಿ
ಶಾಶ್ವತವಾಗಿ
ಕಣ್ಣು
ಕಳೆದುಕೊಂಡಳಾ
ಚಾರು?
ಕಾರ್ತಿಕ್ ಆಫೀಸಿಗೆ ಹೋಗಿರುವುದಕ್ಕೆ, ಮನೆಯಲ್ಲಿ ಎಲ್ಲರೂ ಮೊದಲಿನಂತೆ ಇರುವುದಕ್ಕೆ ಸತ್ಯ ಖುಷಿಯಾಗಿರುತ್ತಾಳೆ. ಈ ವಿಚಾರವನ್ನು ಹೇಳಲು ಜಾನಕಿಗೆ ಫೋನ್ ಮಾಡುತ್ತಾಳೆ. ಜಾನಕಿ, ಜಗನ್ನಾಥ ಹಣ ಕಳೆದುಕೊಂಡ ವಿಚಾರವನ್ನು ಹೇಳುತ್ತಾಳೆ.

ಆಫೀಸಿನಲ್ಲಿ ಪಾಠ ಮಾಡಿದ ರಾಯರು
ಕಾರ್ತಿಕ್‌ನನ್ನು ರಾಯರು ಆಫೀಸಿಗೆ ಕರೆದುಕೊಂಡು ಹೋಗುತ್ತಾರೆ. ಮೀಟಿಂಗ್ ಸಿದ್ಧ ಮಾಡಿ, ಅದರಲ್ಲಿ ಕಾರ್ತಿಕ್‌ನನ್ನು ಪರಿಚಯ ಮಾಡಿಸುತ್ತಾರೆ. ಇನ್ನು ಮುಂದೆ ಆಫೀಸಿನಲ್ಲಿ ಕಾರ್ತಿಕ್ ಕೂಡ ನಿಮ್ಮ ಜೊತೆಗೆ ಕೆಲಸ ಮಾಡುತ್ತಾನೆ ಎಂದು ಹೇಳುತ್ತಾರೆ. ಇನ್ನು ಎಲ್ಲರೂ ಕಾರ್ತಿಕ್ ಹಾಗೂ ಮಾಳವಿಕಾ ಕಾಂಟ್ರವರ್ಸಿ ಬಗ್ಗೆ ಚರ್ಚೆ ಮಾಡುತ್ತಾರೆ. ಆಗ ರಾಯರು ತೊಂದರೆ ಏನು ಇಲ್ಲ. ಯಾರು ಏನಾದರೂ ಮಾತನಾಡಲಿ ಸತ್ಯ ನಮಗೆ ಗೊತ್ತು ಎಂದು ಮಾತನಾಡುತ್ತಾರೆ. ಇನ್ನು ಕಾರ್ತಿಕ್‌ಗೆ ಕೆಲ ಪಾಠಗಳನ್ನು ಮಾಡುತ್ತಾನೆ. ಇನ್ನು ಮುಂದೆ ಕಾರ್ತಿಕ್ ಆಫೀಸ್ ಕೆಲಸಗಳನ್ನು ಹೇಗೆ ನಿಭಾಸುತ್ತಾನೋ ಎಂದು ಕಾದು ನೋಡಬೇಕಿದೆ.

ರಾಕಿ ಮೇಲೆ ಗೂಬೆ ಕೂರಿಸಿದ ಕೀರ್ತನಾ
ಇತ್ತ ರಾಕೇಶ್, ರಿತುಗೆ ಪಾಠ ಹೇಳಿಕೊಡುತ್ತಿರುತ್ತಾನೆ. ಆದರೆ ರಿತು, ರಾಕಿ ಮೇಲೆ ತನ್ನ ಪ್ರೀತಿಯನ್ನು ತೋರಿಸುವುದನ್ನು ಕೀರ್ತನಾ ನೋಡಿರುತ್ತಾಳೆ. ಹೇಗಾದರೂ ಮಾಡಿ ಇದನ್ನು ಸೀತಾಗೆ ತೋರಿಸಬೇಕು ಎನ್ನುಕೊಳ್ಳುವಾಗಲೇ ರಿತು, ರಾಕಿಯನ್ನು ತಬ್ಬಿಕೊಳ್ಳುತ್ತಾಳೆ. ಇದನ್ನು ಸೀತಾ ನೋಡಿ ಬಿಡುತ್ತಾಳೆ. ಬಳಿಕ ಕೀರ್ತನಾ ಬೇಕಂತಲೇ ಎಲ್ಲಾ ತಪ್ಪನ್ನು ರಾಕಿ ಮೇಲೆ ಹಾಕುತ್ತಾಳೆ. ಸೀತಾ, ರಾಕೇಶ್‌ದು ಯಾವ ತಪ್ಪು ಇಲ್ಲ ಎಂದರೂ ಕೇಳುವುದಿಲ್ಲ. ಮೊದಲು ಸತ್ಯ ಮನೆಗೆ ಬಂದಳು ಈಗ ಅದೇ ಕೊಂಪೆಯಲ್ಲಿರುವ ರಾಕೇಶ್‌ನನ್ನು ಈ ಮನೆಗೆ ಕರೆದುಕೊಂಡು ಬಂದಿದ್ದಾಳೆ ಎಂದೆಲ್ಲಾ ತಲೆಗೆ ತುಂಬುತ್ತಾಳೆ.

ಕಾಸ್ಟ್ಲಿ ಸೀರೆ ಕೊಟ್ಟ ಬಾಲ
ಗಿರಿಜಮ್ಮ, ದಿವ್ಯಾ ಜೊತೆಗೆ ಮಾತನಾಡಿ ವಾಪಸ್ ಊರಿಗೆ ಹೊರಡುತ್ತಾಳೆ. ದಿವ್ಯಾಳ ಸಂಪೂರ್ಣ ಪರಿಸ್ಥಿತಿಯನ್ನು ತಿಳಿದುಕೊಂಡ ಗಿರಿಜಮ್ಮ ಬಾಲ ಹೇಳಿರುವ ಸುಳ್ಳನ್ನೇ ನಂಬಿರುತ್ತಾಳೆ. ಬಾಲ, ಗಿರಿಜಮ್ಮನಿಗೆ ಸೀರೆಯನ್ನು ಕೊಡುತ್ತಾನೆ. ಇದು 40 ಸಾವಿರ ಎಂದು ಹೇಳುತ್ತಾನೆ. ಗಿರಿಜಮ್ಮ ಇಷ್ಟು ಕಾಸ್ಟ್ಲಿ ಸೀರೆ ನನಗೆ ಬೇಡ ಎಂದು ಹೇಳುತ್ತಾಳೆ. ಆದರೂ ದಿವ್ಯಾ ಮತ್ತು ಬಾಲ ಬಲವಂತ ಮಾಡಿ ಸೀರೆಯನ್ನು ಗಿರಿಜಮ್ಮನಿಗೆ ಕೊಡುತ್ತಾರೆ. ಗಿರಿಜಮ್ಮ ಸೀರೆ ತೆಗೆದುಕೊಂಡು ನನಗೆ ಮುಜುಗರವಾಗುತ್ತಿದೆ. ಇಷ್ಟು ಬೆಲೆ ಬಾಳುವ ಸೀರೆ ಬೇಕಿರಲಿಲ್ಲ ಎಂದು ಹೇಳುತ್ತಾಳೆ.

ರಾಕಿ ಬಗ್ಗೆ ಕೇಳಿ ಸತ್ಯ ಶಾಕ್
ಸೀತಾ, ಸತ್ಯಳನ್ನು ಕರೆದು ನಡೆದ ಘಟನೆಯನ್ನೆಲ್ಲಾ ಹೇಳುತ್ತಾಳೆ. ಆದರೆ ಸತ್ಯ, ಸೀತಾ ಮಾತನ್ನು ನಂಬುವುದಿಲ್ಲ. ರಾಕೇಶ್ ತುಂಬಾ ಒಳ್ಳೆಯ ಹುಡುಗ. ಅವನಿಗೆ ಓದುವುದೇ ದೊಡ್ಡ ಗುರಿ. ರಾಕಿ ಯಾವತ್ತೂ ಇಂತಹ ಕೆಲಸಗಳನ್ನು ಮಾಡುವುದಿಲ್ಲ. ನೀವು ತಪ್ಪು ತಿಳಿದುಕೊಂಡಿದ್ದೀರಾ ಎಂದು ಹೇಳುತ್ತಾಳೆ. ಆಗ ಸೀತ ಸತ್ಯಗೆ ಬೈಯುತ್ತಾಳೆ. ನಾನು ಸುಳ್ಳು ಹೇಳುತ್ತಿಲ್ಲ. ನಾನು ಕಣ್ಣಾರೆ ಕಂಡಿದ್ದನ್ನೆ ಹೇಳುತ್ತಿದ್ದೇನೆ ಎಂದು ಹೇಳಿ ಹೋಗುತ್ತಾಳೆ. ಸತ್ಯಗೆ ಈ ಮಾತುಗಳನ್ನು ಕೇಳಿ ಶಾಕ್ ಆಗುತ್ತದೆ. ರಾಕಿ ಗ್ರಹಚಾರವನ್ನು ಸತ್ಯ ಬಿಡಿಸುತ್ತಾಳಾ..? ರಿತು ಸತ್ಯವನ್ನು ಒಪ್ಪಿಕೊಳ್ಳುತ್ತಾಳಾ ಕಾದು ನೋಡಬೇಕಿದೆ.