For Quick Alerts
  ALLOW NOTIFICATIONS  
  For Daily Alerts

  ಸಂಕಷ್ಟದಲ್ಲಿ ಬಾಲ: ಜಗನ್ನಾಥನ ಕೆಲಸದಿಂದ ಬಾಲನ ಬಣ್ಣ ಬಯಲಾಗುತ್ತಾ..?

  By ಪ್ರಿಯಾ ದೊರೆ
  |

  'ಸತ್ಯ' ಧಾರಾವಾಹಿಯಲ್ಲಿ ಸೀತಾ ಮನೆಯಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಸತ್ಯಗೆ ಮನೆಯಲ್ಲಿ ಯಾವುದಾದರೂ ಹಬ್ಬವಿದ್ದರೆ, ಭಯವಾಗುತ್ತದೆ. ಆ ಹಬ್ಬದ ಬಗ್ಗೆ ಅರ್ಥ ತಿಳಿಯಲು ಒದ್ದಾಡುತ್ತಾಳೆ.

  ಯಾಕೆಂದರೆ, ಸೀತಾ ಸತ್ಯಳನ್ನು ಪ್ರತಿಯೊಂದಕ್ಕೂ ಬೈಯುತ್ತಿರುತ್ತಾಳೆ. ಹಬ್ಬದ ಬಗ್ಗೆ ತಿಳಿದುಕೊಳ್ಳದಿದ್ದರೂ ಸೀತಾ ಬೇಸರ ಮಾಡಿಕೊಳ್ಳುತ್ತಾಳೆ. ಅಲ್ಲದೇ, ತನ್ನ ಅತ್ತೆಯನ್ನು ಇಂಪ್ರೆಸ್ ಮಾಡುವ ಸಲುವಾಗಿ ಸತ್ಯ ಆ ಮನೆಯ ಸಂಪ್ರಾದಾಯವನ್ನು ತಿಳಿದುಕೊಳ್ಳಲು ಬಯಸುತ್ತಾಳೆ.+

  ಪುಟ್ಟಕ್ಕನ ಬಳಿ ಸತ್ಯನ ಬಾಯಿ ಬಿಡಿಸಲು ಸ್ನೇಹಾ ಪ್ರಯತ್ನಪುಟ್ಟಕ್ಕನ ಬಳಿ ಸತ್ಯನ ಬಾಯಿ ಬಿಡಿಸಲು ಸ್ನೇಹಾ ಪ್ರಯತ್ನ

  ಇನ್ನು ಇದೀಗ ಕಾರ್ತಿಕ್ ನಿಧಾನವಾಗಿ ಸತ್ಯಳನ್ನು ಅರ್ಥ ಮಾಡಿಕೊಳ್ಳುತ್ತಿದ್ದಾನೆ. ಕೆಲ ವಿಚಾರಗಳಲ್ಲಿ ಸತ್ಯಳನ್ನು ಸಪೋರ್ಟ್ ಮಾಡುತ್ತಿದ್ದಾನೆ. ಇವರಿಬ್ಬರ ಮಧ್ಯೆ ಮತ್ತೆ ಪ್ರೀತಿ ಚಿಗುರುತ್ತಿದೆ. ಇದನ್ನು ರಿತು ಮತ್ತು ಮಂಜ ಇಬ್ಬರೂ ಅಬ್ಸರ್ವ್ ಮಾಡಿದ್ದಾರೆ.

  ಬಾಲನನ್ನು ಅನುಮಾನಿಸಿದ ಜಗನ್ನಾಥ

  ಬಾಲನನ್ನು ಅನುಮಾನಿಸಿದ ಜಗನ್ನಾಥ

  ಬಾಲನನ್ನು ರಾಜಹುಲಿ ಏರಿಯಾದಲ್ಲಿ ಸುತ್ತಾಡಿಸುತ್ತಾ ಜಗನ್ನಾಥ ಟೀ ಕೊಡಿಸುತ್ತಾನೆ. ಮಾತನಾಡುತ್ತಾ, ಬಾಲನ ಬಿಸಿನೆಸ್ ಬಗ್ಗೆ ಮಾಹಿತಿ ಪಡೆಯುತ್ತಾನೆ. ಆಗ ಬಾಲ ನೀವು ನಾನು ನಿಮಗೆ ಕೊಟ್ಟ ಚೆಕ್ ಮೇಲೆ ಅನುಮಾನ ಪಡುತ್ತಿದ್ದೀರಾ ಎಂದು ಕೇಳುತ್ತಾನೆ. ಜಗನ್ನಾಥ ಇಲ್ಲ ಎಂದು ಹೇಳುತ್ತಾನೆ. ಇನ್ನು ದಿವ್ಯಾ ಮನೆಯವರೆಲ್ಲರೂ ದೇವಸ್ಥಾನಕ್ಕೆ ಎಂದು ಹೋಗುತ್ತಿರುತ್ತಾರೆ. ಗಿರಿಜಮ್ಮ, ಜಾನಕಿ, ಜಗನ್ನಾಥ, ಬಾಲ, ದಿವ್ಯಾ ಎಲ್ಲರೂ ದೇವಸ್ಥಾನಕ್ಕೆ ಹೋಗುತ್ತಿರುತ್ತಾರೆ.

  ಸಂಜು ಅನುಗೆ ಮೆಸೇಜ್ ಮೂಲಕ ಮಾಡಿದ ಚಾಲೆಂಜ್ ಏನು?ಸಂಜು ಅನುಗೆ ಮೆಸೇಜ್ ಮೂಲಕ ಮಾಡಿದ ಚಾಲೆಂಜ್ ಏನು?

  ರಿತು ಮದುವೆ ವಿಚಾರ ಪ್ರಸ್ತಾಪ

  ರಿತು ಮದುವೆ ವಿಚಾರ ಪ್ರಸ್ತಾಪ

  ಸೀತಾ ಮನೆಯಲ್ಲಿ ದೀಪಾವಳಿ ಹಬ್ಬ ಹಿನ್ನೆಲೆ ಗಂಡು ಮಕ್ಕಳಿಗೆ ಎಲ್ಲರೂ ಎಣ್ಣೆ ಹಚ್ಚುತ್ತಿರುತ್ತಾರೆ. ಈ ವೇಳೆ ಕಾರ್ತಿಕ್ ಹಾಗೂ ಸತ್ಯ ಒಬ್ಬರಿಗೊಬ್ಬರು ಕಿತಾಪತಿ ಮಾಡುವಾಗ ಸತ್ಯ ಕಾರ್ತಿಕ್‌ಗೆ ತಲೆಯನ್ನು ಜೋರಾಗಿ ತಟ್ಟುತ್ತಾಳೆ. ಆಗ ಸೀತಾ, ಸತ್ಯಗೆ ಬೈಯುತ್ತಾಳೆ. ಬಟ್ ಕಾರ್ತಿಕ್ ಸತ್ಯ ತಪ್ಪಿಲ್ಲ ಎಂಬಂತೆ ಆಕೆಗೆ ಸಪೋರ್ಟ್ ಮಾಡುತ್ತಾನೆ. ಇನ್ನು ಈ ವೇಳೆ ರಿತು ಮದುವೆ ವಿಚಾರ ಬರುತ್ತದೆ. ಆಗ ಸೀತಾ ಈ ವರ್ಷ ನಿನ್ನ ಮದುವೆಯನ್ನೂ ಮಾಡೋಣ ಎಂದು ಹೇಳುತ್ತಾರೆ.

  ಸಹಾಯಕ್ಕೆ ಬೇಡಿದ ಜಗನ್ನಾಥ

  ಸಹಾಯಕ್ಕೆ ಬೇಡಿದ ಜಗನ್ನಾಥ

  ಇನ್ನು ದೇವಸ್ಥಾನದ ಬಳಿ ಬರುತ್ತಿದ್ದಂತೆ ಜಗನ್ನಾಥ ಅವನ ಸ್ನೇಹಿತನನ್ನು ಬಾಲನಿಗೆ ಪರಿಚಯ ಮಾಡಿಸುತ್ತಾನೆ. ಆತ ಜೀವನದಲ್ಲಿ ತುಂಬಾ ಕಷ್ಟಪಡುತ್ತಿದ್ದಾನೆ. ಹಾಗಾಗಿ ನೀವು ನನಗೆ ಸಹಾಯ ಮಾಡಿದಂತೆ ಈತನಿಗೂ ಹಣ ಕೊಟ್ಟು ಸಹಾಯ ಮಾಡಿ ಎಂದು ಹೇಳುತ್ತಾನೆ. ಬಾಲ ಆಗ ಅಯ್ಯೋ ಹೇಗೆ ಈಗ ಬಚಾವ್ ಆಗುವುದು ಎಂದು ಯೋಚಿಸುತ್ತಿರುತ್ತಾನೆ. ಆಗ ಗಿರಿಜಮ್ಮ, ಈಗ ಬಾಲನ ಬಣ್ಣ ಕಳಚುವುದಕ್ಕೆ ಸರಿಯಾದ ಸಮಯ ಎಂದು ಹೇಳಿ, ಆತನಿಗೆ ಸಹಾಯ ಮಾಡಿ ಎಂದು ಬಲವಂತ ಮಾಡುತ್ತಾಳೆ. ಬಾಲ ಬೇರೆ ದಾರಿ ಇಲ್ಲದೇ ಸಹಾಯ ಮಾಡುತ್ತೇನೆ. ಆದರೆ, ಚೆಕ್ ಕೊಡುವುದಿಲ್ಲ. ಡೈರೆಕ್ಟ್ ಆಗಿ ಹಣ ಟ್ರಾನ್ಸ್ ಫರ್ ಮಾಡಿಸುತ್ತೀನಿ ಎಂದು ಹೇಳಿ, ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುತ್ತಾನೆ.

  ಒಂದೇ ನಕ್ಷತ್ರದವರು ಮದುವೆಯಾಗಬಾರದಾ..?

  ಒಂದೇ ನಕ್ಷತ್ರದವರು ಮದುವೆಯಾಗಬಾರದಾ..?

  ಬಾಲನ ಬಣ್ಣವನ್ನು ಬಯಲು ಮಾಡಲು ಇದು ಸರಿಯಾದ ಸಮಯವಾಗಿದೆ. ಬಾಲ ಈಗ ಜಗನ್ನಾಥನ ಕೈಯಲ್ಲಿ ಸರಿಯಾಗಿ ಸಿಕ್ಕಿ ಹಾಕಿಕೊಂಡಿದ್ದಾನೆ. ದಿವ್ಯಾಳನ್ನು ಉಳಿಸಿಕೊಳ್ಳಲು ಬಾಲ ಮುಂದೇನು ಪ್ಲ್ಯಾನ್ ಮಾಡುತ್ತಾನೋ ಎಂಬ ಕುತೂಹಲ ಮೂಡಿದೆ. ಇನ್ನು ದೇವಸ್ಥಾನದಲ್ಲಿ ಪೂಜೆ ಮಾಡಿಸುವಾಗ ದಿವ್ಯಾ ಮತ್ತು ಬಾಲ ಇಬ್ಬರ ನಕ್ಷತ್ರ ಒಂದೇ ಎಂಬುದು ತಿಳಿಯುತ್ತದೆ. ಈಗ ಮನೆಯವರೆಲ್ಲರೂ ಇದನ್ನು ಕೇಳಿ ಶಾಕ್ ಆಗಿದ್ದು, ಮುಂದೇನಾಗುತ್ತದೋ..?

  English summary
  sathya serial 04th november Episode Written Update. jagannatha asked bala to help his friend. But bala has no option to escape from this situation.
  Sunday, November 6, 2022, 11:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X