For Quick Alerts
  ALLOW NOTIFICATIONS  
  For Daily Alerts

  ಮನೆಯಿಂದ ಎಸ್ಕೇಪ್ ಆಗಲು ಯತ್ನಿಸಿದ ಬಾಲನಿಗೆ ದಿವ್ಯಾ ಅಡ್ಡಗಾಲು..?

  By ಪ್ರಿಯಾ ದೊರೆ
  |

  'ಸತ್ಯ' ಧಾರಾವಾಹಿಯಲ್ಲಿ ಸೀತಾ ಮನೆಯವರೆಲ್ಲಾ ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದಾರೆ. ಬಲಿಪಾಡ್ಯಮಿಯ ಕಥೆಯನ್ನು ಸೀತಾ ಮತ್ತು ರಾಮಚಂದ್ರ ರಾಯರು ಹೇಳುತ್ತಿರುವಾಗ, ಕಥೆಯನ್ನು ಸತ್ಯ ಪೂರ್ತಿ ಮಾಡುತ್ತಾಳೆ. ಇದರಿಂದ ಸೀತಾ ಮನದೊಳಗೆ ಖುಷಿ ಪಟ್ಟರು ಕೂಡ ತೋರಿಸಿಕೊಳ್ಳುವುದಿಲ್ಲ.

  ಇನ್ನು ಮನೆಯಲ್ಲಿ ಎಲ್ಲರೂ ಹಬ್ಬದ ಖುಷಿಯಲ್ಲಿರುತ್ತಾರೆ. ಆದರೆ, ಸುಹಾಸ್ ನೌಕರರಿಗೆ ಕೊಡಬೇಕಿರುವ ಬೋನಸ್ ಹಣವನ್ನು ಬಾಲನ ಅಕೌಂಟ್‌ಗೆ ಹಾಕಿರುತ್ತಾನೆ. ಈ ವಿಚಾರ ಸೀತಾ ಮನೆಯ ದೀಪಾವಳಿಯಲ್ಲಿ ದೊಡ್ಡ ಪಟಾಕಿಯಾಗಿ ಸಿಡಿಯುತ್ತಾ ಎಂಬ ಕುತೂಹಲ ಎದುರಾಗಿದೆ.

  ನಿಜಕ್ಕೂ ಬದಲಾದಳಾ ದುರ್ಗಾ? ಅಥವಾ ಇದೆಲ್ಲ ನಾಟಕವಾ?ನಿಜಕ್ಕೂ ಬದಲಾದಳಾ ದುರ್ಗಾ? ಅಥವಾ ಇದೆಲ್ಲ ನಾಟಕವಾ?

  ಇನ್ನು ಗಿರಿಜಮ್ಮ ಮನೆಯಲ್ಲಿ ಎಲ್ಲರೂ ದೇವಸ್ಥಾನಕ್ಕೆ ಹೋಗಿದ್ದಾರೆ. ದೇವರ ಪೂಜೆ ನಡೆಯುವ ಸಂದರ್ಭದಲ್ಲಿ ಬಾಲ ಕಣ್ಮರೆಯಾಗಿದ್ದಾನೆ. ಇದರಿಂದ ಗಿರಿಜಮ್ಮ ಬಾಲನನ್ನು ಹುಡುಕಲು ದೇವಸ್ಥಾನದಿಂದ ಹೊರಗೆ ಬಂದಿದ್ದಾಳೆ.

  ಬಾಲ ಗ್ರಹಚಾರ ಕೆಟ್ಟಿದೆ

  ಬಾಲ ಗ್ರಹಚಾರ ಕೆಟ್ಟಿದೆ

  ಬಾಲನನ್ನು ಸಾಲ ಕೊಟ್ಟ ವ್ಯಕ್ತಿ ಬೈಯುತ್ತಿರುತ್ತಾನೆ. ಇದನ್ನು ಗಿರಿಜಮ್ಮ ನೋಡಿ ಬಿಡುತ್ತಾಳೆ. ಕೊಡಬೇಕಿರುವ ಹಣವನ್ನು ಕೊಡುವವರೆಗೂ ಬಿಡಲ್ಲ ಎಂದು ಆ ವ್ಯಕ್ತಿ ಹೇಳುತ್ತಿರುತ್ತಾನೆ. ಅದಕ್ಕೆ ಬಾಲ ಈಗ ಫ್ಯಾಮಿಲಿ ಜೊತೆಗೆ ಬಂದಿದ್ದೀನಿ. ನನ್ನ ಮಾನ ಮರ್ಯಾದೆ ತೆಗೆಯಬೇಡಿ ಎಂದು ಹೇಳುತ್ತಾ ಬಾಲ ಆತನ ಕಾಲನ್ನು ಹಿಡಿದುಕೊಳ್ಳುತ್ತಾನೆ. ಆದರೆ, ಆ ವ್ಯಕ್ತಿ ಬಾಲನ ಕೆನ್ನೆಗೆ ಬಾರಿಸುತ್ತಾನೆ. ಆಗ ಬಾಲ ಇವತ್ತು ಸಂಜೆ ನನ್ನ ಮಾವನ ಮನೆಗೆ ಬನ್ನಿ ಎಲ್ಲಾ ಹಣವನ್ನೂ ಚುಕ್ತಾ ಮಾಡುತ್ತೀನಿ ಎಂದು ಹೇಳುತ್ತಾನೆ. ಆಗ ಆ ವ್ಯಕ್ತಿ ಬಾಲನನ್ನು ಬಿಡುತ್ತಾನೆ. ಇದೆಲ್ಲವನ್ನೂ ಗಿರಿಜಮ್ಮ ನೋಡಿ ಶಾಕ್ ಆಗುತ್ತಾಳೆ.

  ಮುನಿಸು ಮುಂದುವರಿಸಿದ ಸೀತಾ

  ಮುನಿಸು ಮುಂದುವರಿಸಿದ ಸೀತಾ

  ಸತ್ಯ ಮನೆಯಲ್ಲಿ ಎಲ್ಲರೂ ಹಬ್ಬವನ್ನು ಖುಷಿಯಿಂದ ಆಚರಿಸುತ್ತಿದ್ದಾರೆ. ರಿತು, ಊರ್ಮಿಳಾ, ಮಂಜ, ಸತ್ಯ, ಕಾರ್ತಿಕ್ ಎಲ್ಲರೂ ಪಟಾಕಿಯನ್ನು ಹೊಡೆದು ಎಂಜಾಯ್ ಮಾಡುತ್ತಿದ್ದಾರೆ. ಆದರೆ ಸೀತಾಗೆ ಸತ್ಯ ಮೇಲಿರುವ ಕೋಪ ಹೋಗಿಲ್ಲ. ಎಲ್ಲರೂ ಊಟಕ್ಕೆ ಬನ್ನಿ ಎಂದು ಕರೆಯುತ್ತಾಳೆ. ಆಗ ಮತ್ತೆ ಕೀರ್ತನಾ ಬಂದು ಬೇಕಂತಲೇ ಸತ್ಯ ಬಗ್ಗೆ ಚಾಡಿ ಹೇಳುತ್ತಾಳೆ. ಊಟ ಮಾಡುವಾಗ ಸತ್ಯ ಬಡಿಸುತ್ತೇನೆ ಎಂದಿದ್ದಕ್ಕೆ ಸೀತಾ ನನಗೆ ಬೇಡ ಎನ್ನುತ್ತಾಳೆ. ಆದರೆ ಆಮೇಲೆ ಸೀತಾ ಬಡಿಸಿಕೊಂಡು ತಿನ್ನುತ್ತಾಳೆ. ಇದರಿಂದ ಮನೆಯವರೆಲ್ಲರೂ ಬೇಸರ ಮಾಡಿಕೊಂಡರೆ, ಕೀರ್ತನಾ ಮಾತ್ರ ಖುಷಿ ಪಡುತ್ತಾಳೆ.

  ಎಸ್ಕೇಪ್ ಆಗಲು ದಿವ್ಯಾ ಬಿಡುತ್ತಿಲ್ಲ

  ಎಸ್ಕೇಪ್ ಆಗಲು ದಿವ್ಯಾ ಬಿಡುತ್ತಿಲ್ಲ

  ಇನ್ನು ದೇವಸ್ಥಾನದಿಂದ ಬಂದ ಬಾಲ, ದಿವ್ಯಾಳನ್ನು ಈ ಕೂಡಲೇ ಮನೆಯಿಂದ ಹೊರಡಲು ಹೇಳುತ್ತಾನೆ. ಬಟ್ಟೆಯನ್ನೆಲ್ಲಾ ಪ್ಯಾಕ್ ಮಾಡಿಕೋ ಈಗಲೇ ನಾವು ಜಾಗ ಖಾಲಿ ಮಾಡಬೇಕು ಎಂದು ಹೇಳುತ್ತಾನೆ. ಈ ಮಾತನ್ನು ಕೇಳುವ ದಿವ್ಯಾ ನಾವ್ಯಾಕೆ ಹೋಗಬೇಕು. ಕಾರಣ ಹೇಳು ಎಂದು ಹೇಳುತ್ತಾಳೆ. ಆಗ ಬಾಲಗೆ ಏನು ಹೇಳಬೇಕು ಎಂಬುದೇ ತಿಳಿಯುವುದಿಲ್ಲ. ಈಗ ನಾವು ಇಲ್ಲಿಂದ ಹೋಗುವುದು ಮುಖ್ಯ. ಬಾ ದಿವ್ಯಾ ಇಲ್ಲಾಂದ್ರೆ ನಮಗೆ ಉಳಿಗಾಲವಿಲ್ಲ ಎಂದು ಹೇಳುತ್ತಾನೆ.

  ಹಠ ಹಿಡಿದ ದಿವ್ಯಾ

  ಹಠ ಹಿಡಿದ ದಿವ್ಯಾ

  ಆಗ ಬಾಲ ಬೇರೆ ದಾರಿ ಇಲ್ಲದೇ, ನಮ್ಮ ಅಪ್ಪ ಬರುತ್ತಿದ್ದಾರೆ. ಬಂದರೆ ನಮ್ಮನ್ನು ಕೊಲೆ ಮಾಡುತ್ತಾರೆ. ಹೋಗೋಣ ನಡಿ. ಮೊದಲು ಇಲ್ಲಿಂದ ಎಸ್ಕೇಪ್ ಆಗೋಣ ಎನ್ನುತ್ತಾನೆ. ಈ ಮಾತನ್ನು ಕೇಳಿದ ದಿವ್ಯಾ, ಒಳ್ಳೆಯದೇ ಆಯ್ತು. ನಿಮ್ಮಪ್ಪ ಬರಲಿ ನಾನು ಮಾತನಾಡಿ ಸಮಸ್ಯೆ ಬಗೆಹರಿಸುತ್ತೀನಿ, ನಾನೇನಿದ್ದರೂ ನಿಮ್ಮ ಅರಮನೆಗೆ ಬರೋದು, ಆ ಹಳ್ಳಿಗೆ ಬರುವುದಿಲ್ಲ ಎಂದು ಹಠ ಹಿಡಿಯುತ್ತಾಳೆ. ಇದರಿಂದ ಬಾಲ ಮತ್ತಷ್ಟು ಆತಂಕಕ್ಕೆ ಒಳಗಾಗುತ್ತಾನೆ..? ಹಾಗಾದರೆ, ಬಾಲನ ಬಣ್ಣ ಎಲ್ಲರ ಮುಂದೆ ಬಯಲಾಗುತ್ತಾ..? ಹಾಗೇನಾದರೂ ಆದರೆ, ದಿವ್ಯಾ ಯಾವ ನಿರ್ಧಾರ ತೆಗೆದುಕೊಳ್ಳುತ್ತಾಳೆ ಎಂದು ಕಾದು ನೋಡಬೇಕಿದೆ.

  English summary
  sathya serial 08th november Episode Written Update. bala tries to escape from house. But divya doesn’t agree to go. Now bala is in risk.
  Tuesday, November 8, 2022, 16:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X