For Quick Alerts
  ALLOW NOTIFICATIONS  
  For Daily Alerts

  ಸುಹಾಸ್-ಕೀರ್ತನಾ ಕಿಕ್ ಔಟ್: ರಾಯರಿಗೆ ಸತ್ಯ ಹೇಳಿದ್ದೇನು..?

  By ಪ್ರಿಯಾ ದೊರೆ
  |

  'ಸತ್ಯ' ಧಾರಾವಾಹಿಯಲ್ಲಿ ಬಾಲನ ಬಣ್ಣ ಬಯಲಾಗುವ ಸಮಯ ಹತ್ತಿರ ಬಂದಿದೆ. ಬಾಲನ ಸಾಲಗಾರರು ಹಿಂದೆ ಬಿದ್ದಿದ್ದಾರೆ. ಇದನ್ನು ಗಿರಿಜಮ್ಮ ಕೂಡ ನೋಡಿದ್ದಾಳೆ. ಬಾಲನಿಗೆ ಈಗ ಒಂದು ಸಾಲ ತೀರಿಸಬೇಕು ಇಲ್ಲವೇ ಎಸ್ಕೇಪ್ ಆಗಬೇಕು.

  ಆದರೆ, ಈ ಎರಡೂ ದಾರಿಯೂ ಮುಚ್ಚಿದಂತಿದೆ. ಎಸ್ಕೇಪ್ ಆಗಲು ದಿವ್ಯಾ ಬಿಡುತ್ತಿಲ್ಲ. ಏನೇ ಆದರೂ ಎದುರಿಸಬೇಕು ಎಂದು ದಿವ್ಯಾ ಹಠ ಮಾಡುತ್ತಿದ್ದಾಳೆ. ಆದರೆ, ಬಾಲನ ಪರಿಸ್ಥಿತಿ ದಿವ್ಯಾಗೆ ಅರ್ಥವಾಗುತ್ತಿಲ್ಲ.

  ಶ್ರೀದೇವಿ ಡ್ರಾಮಾ ಕಂಪೆನಿಯಲ್ಲಿ 'ಕಾಂತಾರ' ಕ್ಲೈಮ್ಯಾಕ್ಸ್: ಮುಂದೇನಾಗುತ್ತೆ?ಶ್ರೀದೇವಿ ಡ್ರಾಮಾ ಕಂಪೆನಿಯಲ್ಲಿ 'ಕಾಂತಾರ' ಕ್ಲೈಮ್ಯಾಕ್ಸ್: ಮುಂದೇನಾಗುತ್ತೆ?

  ಬಾಲನಿಗೆ ಹಣ ಕೊಡುವುದಕ್ಕಾಗಿ ಕೀರ್ತನಾ ಹಾಗೂ ಸುಹಾಸ್ ದೊಡ್ಡ ಪ್ಲ್ಯಾನ್ ಒಂದನ್ನು ಮಾಡಿದ್ದರು. ಆ ಪ್ಲ್ಯಾನ್ ಅನ್ನು ಜಾರಿಗೆ ಕೂಡ ತಂದಿದ್ದರು. ಬಾಲನಿಗೆ ಹಣವನ್ನು ಕೊಟ್ಟು ಖುಷಿಯಾಗಿ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದರು.

  ಸುಹಾಸ್ ಪ್ಲ್ಯಾನ್ ಉಲ್ಟಾ-ಪಲ್ಟಾ

  ಸುಹಾಸ್ ಪ್ಲ್ಯಾನ್ ಉಲ್ಟಾ-ಪಲ್ಟಾ

  ಮನೆಯಲ್ಲಿ ಎಲ್ಲರೂ ಹಬ್ಬದ ಊಟ ಮಾಡುತ್ತಿರುತ್ತಾರೆ. ಇದೇ ವೇಳೆಗೆ ರಾಮಚಂದ್ರ ರಾಯರ ಮನೆ ಮುಂದೆ ಕಂಪನಿಯ ನೌಕರರು ಬಂದು ಪ್ರತಿಭಟನೆ ಮಾಡಲು ಶುರು ಮಾಡುತ್ತಾರೆ. ರಾಯರು ಏನೆಂದು ವಿಚಾರಿಸಲು ಊಟವನ್ನು ಬಿಟ್ಟು ಹೋಗುತ್ತಾರೆ. ಆಗ ಸುಹಾಸ್ ಮಾಡಿರುವ ಕೆಲಸ ಬಯಲಾಗಿದೆ. ನೌಕರರಿಗೆ ಕೊಡಬೇಕಾಗಿರುವ ಬೋನಸ್ ಕೊಟ್ಟಿಲ್ಲ ಎಂಬುದನ್ನು ತಿಳಿದು ರಾಮಚಂದ್ರ ರಾಯರು ಕೋಪಗೊಂಡಿದ್ದಾರೆ. ಸುಹಾಸ್ ಪ್ಲ್ಯಾನ್ ಮಾಡಿದ್ದೆಲ್ಲವೂ ಈಗ ಉಲ್ಟಾ ಆಗಿ ಬಿಟ್ಟಿದೆ.

  ಆದಿ-ಪಾರುಗೆ ಸರ್ಪ್ರೈಸ್ ಪ್ಲ್ಯಾನ್ ಮಾಡಿದ ಅಖಿಲಾಂಡೇಶ್ವರಿಆದಿ-ಪಾರುಗೆ ಸರ್ಪ್ರೈಸ್ ಪ್ಲ್ಯಾನ್ ಮಾಡಿದ ಅಖಿಲಾಂಡೇಶ್ವರಿ

  ಸುಹಾಸ್ ಮಾಡಿದ ಮೋಸ ಬಯಲು

  ಸುಹಾಸ್ ಮಾಡಿದ ಮೋಸ ಬಯಲು

  ಈಗ ರಾಮಚಂದ್ರ ರಾಯರಿಗೆ ಸುಹಾಸ್ ಮಾಡಿರುವ ಮೋಸದ ವಿಚಾರ ಗೊತ್ತಾಗಿದೆ. ಸುಹಾಸ್, ಬಾಲನಿಂದ ಬಚಾವ್ ಆಗಿದ್ದಾನೆ. ಆದರೆ ಮಾವನಿಂದ ಬಚಾವ್ ಆಗುವುದು ಕಷ್ಟವಿದೆ. ರಾಮಚಂದ್ರ ರಾಯರು, ಸುಹಾಸ್‌ನನ್ನು ಕರೆದು ಬೈಯುತ್ತಾರೆ. ಅವನು ಮಾಡಿದ ತಪ್ಪನ್ನು ಮನೆ ಮಂದಿ ಮುಂದೆ ಹೇಳಿ ಕಪಾಳಕ್ಕೆ ಹೊಡೆಯಲು ಮುಂದಾಗುತ್ತಾನೆ. ಆದರೆ, ಹೊಡೆಯದೇ ಸುಮ್ಮನಾಗುತ್ತಾರೆ. ಈ ವೇಳೆ ಕೀರ್ತಾನಾ ಕೂಡ ಏನು ಮಾತನಾಡಲಾಗದೇ ಸುಮ್ಮನಿರುತ್ತಾಳೆ. ಆಗ ಕಾರ್ತಿಕ್ ಕೂಡ ಬೈಯುತ್ತಾನೆ.

  ರಾಯರ ಬಳಿ ಸತ್ಯ ಹೇಳಿದ್ದೇನು..?

  ರಾಯರ ಬಳಿ ಸತ್ಯ ಹೇಳಿದ್ದೇನು..?

  ರಾಮಚಂದ್ರ ರಾಯರು, ಸುಹಾಸ್‌ನನ್ನು ಮನೆಯಿಂದ ಹೊರಗೆ ಹೋಗುವಂತೆ ಬೈಯುತ್ತಾನೆ. ಈ ಮನೆಯಲ್ಲಿ ನಿನಗೆ ಜಾಗವಿಲ್ಲ ಎಂದು ಹೇಳುತ್ತಾನೆ. ಆಗ ಕೀರ್ತನಾ ಕೂಡ ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ಸುಹಾಸ್‌ನನ್ನು ಮನೆಯಿಂದ ಹೊರ ಹೋಗಲು ಹೇಳುತ್ತಾಳೆ. ನಂತರ ಕೀರ್ತನಾ, ರಾಯರಿಗೆ ಸಮಾಧಾನ ಹೇಳಲು ಮುಂದಾಗುತ್ತಾಳೆ. ಆದರೆ, ರಾಯರು ಅವಳನ್ನು ಕೂಡ ಮನೆಯಿಂದ ಹೊರ ಹೋಗುವಂತೆ ಹೇಳಿದಾಗ, ಕೀರ್ತನಾ ರಾಯರ ಕಾಲನ್ನು ಹಿಡಿದು ಬೇಡಿ ಕೊಳ್ಳುತ್ತಾಳೆ. ಆದರೆ, ರಾಯರು ಖಡಾಖಂಡಿತವಾಗಿ ಕ್ಷಮಿಸೊಲ್ಲ ಎಂದು ಹೇಳುತ್ತಾರೆ. ಸೀತಾ ಕೇಳಿದರೂ ರಾಯರು ಸಮಾಧಾನವಾಗುವುದಿಲ್ಲ. ಆದರೆ ಸತ್ಯ, ರಾಯರನ್ನು ರೂಮಿಗೆ ಕರೆದು, ಅವರಿಬ್ಬರನ್ನು ಈ ಬಾರಿ ಕ್ಷಮಿಸುವಂತೆ ಕೇಳುತ್ತಾಳೆ. ತನ್ನ ಪರಿಸ್ಥಿತಿ ಬಗ್ಗೆ ವಿವರಿಸುತ್ತಾಳೆ. ಅದಕ್ಕೆ ರಾಯರು ಒಪ್ಪುತ್ತಾರೆ.

  ದಿವ್ಯಾಗೆ ಎಲ್ಲಾ ಸತ್ಯ ಗೊತ್ತಾಯ್ತಾ..?

  ದಿವ್ಯಾಗೆ ಎಲ್ಲಾ ಸತ್ಯ ಗೊತ್ತಾಯ್ತಾ..?

  ಗಿರಿಜಮ್ಮನಿಗೆ ಬಾಲನ ಬಗ್ಗೆ ಅರ್ಧಂಬರ್ಧ ಗೊತ್ತಾಗಿದೆ. ಬಾಲ, ದಿವ್ಯಾಳಿಂದಲೂ ಎಲ್ಲಾ ಸತ್ಯ ಮುಚ್ಚಿಟ್ಟಿದ್ದಾನಾ..? ದಿವ್ಯಾ, ಬಾಲನನ್ನು ನಂಬಿ ಮೋಸ ಹೋಗಿದ್ದಾಳಾ..? ಈಗ ಇವರಿಬ್ಬರ ಮುಂದಿನ ಬದುಕು ಹೇಗೆ ಎಂಬುದೇ ಗೊತ್ತಾಗದಂತಾಗಿದೆ. ಈ ಬಗ್ಗೆ ಗಿರಿಜಮ್ಮ ಜಾನಕಿ ಬಳಿ ಹೇಳಿದ್ದಾಳೆ. ಹೇಗಾದರೂ ಮಾಡಿ ಈ ರಹಸ್ಯವನ್ನು ಭೇದಿಸಬೇಕು ಎಂದು ಗಿರಿಜಮ್ಮ ತೀರ್ಮಾನಿಸಿದ್ದಾಳೆ. ಹಾಗಾದರೆ, ಬಾಲನ ಬಣ್ಣ ಬಯಲಾಗಲು ಹೆಚ್ಚು ಸಮಯವಿಲ್ಲ.

  English summary
  sathya serial 09th november Episode Written Update. Ramachandra Rayaru Try To sends suhas and keerthana out of the house. But sathya saves them.
  Wednesday, November 9, 2022, 18:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X