For Quick Alerts
  ALLOW NOTIFICATIONS  
  For Daily Alerts

  ಕೀರ್ತನಾ ಮಾಡಿದ ಪ್ಲ್ಯಾನ್‌ನಿಂದ ಸಿಡಿದ ಪಟಾಕಿ: ಸೀತಾಗೆ ಏನಾಯ್ತು..?

  By ಪ್ರಿಯಾ ದೊರೆ
  |

  ಕೀರ್ತನಾಗೆ ನಡೆದ ತಪ್ಪಿನ ಬಗ್ಗೆ ಕೊಂಚವೂ ಬೇಸರ ಇರುವುದಿಲ್ಲ. ಕೀರ್ತನಾ ಪೊಗರು ಇಳಿದಿರುವುದಿಲ್ಲ. ಬದಲಿಗೆ ಕೀರ್ತನಾ, ಸತ್ಯ ಹೊಡೆಯುತ್ತಿರುವ ಪಟಾಕಿಯಿಂದ ಅನಾಹುತ ಸಂಭವಿಸುವಂತೆ ಪ್ಲ್ಯಾನ್‌ ಮಾಡಿದ್ದಾಳೆ.

  ಸತ್ಯಳಿಂದಾಗಿ ತನಗೆ ಮನೆಯಲ್ಲಿ ಉಳಿದುಕೊಳ್ಳುವ ಅವಕಾಶ ಸಿಕ್ಕಿದೆ ಎಂಬುದನ್ನೂ ಮರೆತು, ಅವಳು ಹೇಳಿದ್ದಕ್ಕೆ ತಮ್ಮ ತಂದೆ ಕ್ಷಮಿಸಿದರಲ್ಲ ಎಂಬ ಬೇಸರ ಹೆಚ್ಚಾಗಿದೆ. ಇದಕ್ಕೇನಾದರೂ ಮಾಡಬೇಕು ಎಂದು ಯೋಚಿಸುತ್ತಿದ್ದಾಳೆ.

  ಸಿರಿ ಹಾಗೂ ತುಳಸಿ ಮಧ್ಯೆ ಬೆಳೆಯುತ್ತಿದೆ ಬಾಂಧವ್ಯ!ಸಿರಿ ಹಾಗೂ ತುಳಸಿ ಮಧ್ಯೆ ಬೆಳೆಯುತ್ತಿದೆ ಬಾಂಧವ್ಯ!

  ಇನ್ನು ಸತ್ಯ ಮಾಡಿದ ಕೆಲಸದಿಂದ ಹೆಮ್ಮೆ ಪಡುತ್ತಿರುವ ಕಾರ್ತಿಕ್, ಸತ್ಯಳಿಗೆ ಐ ಲವ್ ಯೂ ಹೇಳಲು ಮುಂದಾಗಿದ್ದಾನೆ. ಇದೇ ವೇಳೆಗೆ ರಾಮಚಂದ್ರ ರಾಯರು ಕರೆದಿದ್ದಾರೆ. ಯಾಕೆ ಎಂಬುದು ಇನ್ನೂ ಯಾರಿಗೂ ಗೊತ್ತಿಲ್ಲ.

  ಸೋತರು ಪೊಗರು ಬಿಡದ ಕೀರ್ತನಾ

  ಸೋತರು ಪೊಗರು ಬಿಡದ ಕೀರ್ತನಾ

  ರಾಮಚಂದ್ರ ರಾಯರು ಎಲ್ಲರೂ ಪಟಾಕಿ ಹೊಡೆಯೋಣ ಎಂದು ಕರೆಯುತ್ತಾರೆ. ಸೀತಾ ಸಮ್ಮುಖದಲ್ಲೇ ಪಟಾಕಿ ಹೊಡೆಯಬೇಕು ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿ ಸೀತಾ ಮುಖ ತಿರುಗಿಸುತ್ತಾಳೆ. ಇನ್ನು ಎಲ್ಲರೂ ಪಟಾಕಿ ಹೊಡೆಯುತ್ತಿರುತ್ತಾಳೆ. ಆದರೆ ಕೀರ್ತನಾ ನಡೆದ ತಪ್ಪಿನ ಬಗ್ಗೆ ಕೊಂಚವೂ ಬೇಸರ ಇರುವುದಿಲ್ಲ. ಕೀರ್ತನಾ ಪೊಗರು ಇಳಿದಿರುವುದಿಲ್ಲ. ಬದಲಿಗೆ ಕೀರ್ತನಾ ಸತ್ಯ ಹೊಡೆಯುತ್ತಿರುವ ಪಟಾಕಿಯಿಂದ ಅನಾಹುತ ಸಂಭವಿಸುವಂತೆ ಪ್ಲ್ಯಾನ್‌ ಮಾಡಿದ್ದಾಳೆ.

  ಸೀತಾ ಹಚ್ಚಿದ ಪಟಾಕಿ

  ಸೀತಾ ಹಚ್ಚಿದ ಪಟಾಕಿ

  ಸತ್ಯ ಲಕ್ಷ್ಮಣ್, ಕಾರ್ತಿಕ್ ಎಲ್ಲರನ್ನೂ ಕರೆದುಕೊಂಡು ಬಂದ ಪಟಾಕಿ ಹೊಡೆಸುತ್ತಿರುತ್ತಾಳೆ. ಇದೇ ವೇಳೆಗೆ ರಿತು ಸೀತಾಳನ್ನು ಬಲವಂತವಾಗಿ ಕರೆದುಕೊಂಡು ಬರುತ್ತಾಳೆ. ಈ ವೇಳೆ ಅಕಸ್ಮಾತ್ ಆಗಿ ಸತ್ಯ, ಕೀರ್ತನಾಳನ್ನು ನೋಡುತ್ತಾಳೆ. ಆಗ ಕೀರ್ತನಾ ಮತ್ತು ಸುಹಾಸ್ ಪಟಾಕಿಯನ್ನು ನೋಡಿ ಆತಂಕ ಪಡುತ್ತಾರೆ. ಸುಹಾಸ್, ಸೀತಾಳನ್ನು ತಡೆಯಲು ಮುಂದಾಗುತ್ತಾನೆ. ಆದರೆ ಕೀರ್ತನಾ, ಸುಹಾಸ್‌ನನ್ನು ತಡೆದು, ಏನೇ ಆದರೂ ಸತ್ಯ ಮೇಲೆ ಅಪಮಾನ ಬರುವುದು ಸುಮ್ಮನಿರು ಎಂದು ಹೇಳುತ್ತಾಳೆ. ಸೀತಾ ಪಟಾಕಿ ಹಚ್ಚಲು ಮುಂದಾಗುತ್ತಾಳೆ.

  ಸಂಕಟ ಹೇಳಿಕೊಂಡ ಬಾಲ

  ಸಂಕಟ ಹೇಳಿಕೊಂಡ ಬಾಲ

  ಇತ್ತ ದಿವ್ಯಾ ತಮ್ಮ ಮಾವ ಬಂದಾಗ ಅವರ ಬಳಿ ಹೇಗೆ ಮಾತನಾಡಬೇಕು ಎಂದು ಕನ್ನಡಿ ಮುಂದೆ ನಿಂತು ಪ್ರಾಕ್ಟೀಸ್ ಮಾಡುತ್ತಿರುತ್ತಾಳೆ. ಇದೇ ವೇಳೆಗೆ ಬಾಲ ಬರುತ್ತಾನೆ. ಆಗ ಅಪ್ಪ ಎಷ್ಟೊತ್ತಿಗೆ ಬರುತ್ತಾರೆ ಕೇಳು. ಎಲ್ಲಿದ್ದಾರೆ ಎಂದೆಲ್ಲಾ ಕೇಳುತ್ತಾಳೆ. ಆಗ ಬಾಲ ಅವರು ಬರುತ್ತಿಲ್ಲ ಎಂದು ಹೇಳುತ್ತಾನೆ. ದಿವ್ಯಾ ಈ ಮಾತಿಗೆ ಸಿಟ್ಟಾಗಿ ನನ್ನ ಆ ಹಳ್ಳಿಗೆ ಕರೆದುಕೊಂಡು ಹೋಗಲು ಸುಮ್ಮನೆ ಸುಳ್ಳು ಹೇಳುತ್ತಿದ್ದೀಯಾ. ನನಗೆ ಮೋಸ ಮಾಡಿದ್ದೀಯಾ ಎಂದು ಬೈಯುತ್ತಾಳೆ. ಆಗ ಬಾಲ ಸ್ವಲ್ಪ ಭಯಪಡುತ್ತಾನೆ. ನಂತರ ಮತ್ತೆ ಎಮೋಷನಲ್ ಆಗಿ ದಿವ್ಯಾಳನ್ನು ಮರಳು ಮಾಡಲು ಪ್ರಯತ್ನಿಸುತ್ತಾನೆ.

  ಅತ್ತೆಯನ್ನು ಕಾಪಾಡಿದ ಸೊಸೆ

  ಅತ್ತೆಯನ್ನು ಕಾಪಾಡಿದ ಸೊಸೆ

  ಕೀರ್ತನಾ ಮತ್ತು ಸುಹಾಸ್ ನಡವಳಿಕೆಯಿಂದ ಸತ್ಯ ಏನೋ ಕಿತಾಪತಿ ಮಾಡಿದ್ದಾರೆ ಎಂಬುದು ತಿಳಿಯುತ್ತದೆ. ಇತ್ತ ಸೀತಾ ಪಟಾಕಿ ಹಚ್ಚುತ್ತಾಳೆ. ಇದೇ ವೇಳೆಗೆ ಅಪಾಯದ ಮುನ್ಸೂಚನೆ ನೀಡಲು ಸತ್ಯ, ಸೀತಮ್ಮ ಎಂದು ಕಿರುಚುತ್ತಾಳೆ. ಓಡಿ ಹೋಗಿ ಸತ್ಯ, ಸೀತಾಳನ್ನು ಹಿಡಿದು ಎಳೆಯುತ್ತಾಳೆ. ಸೀತಾ ಮತ್ತು ಸತ್ಯ ಇಬ್ಬರೂ ಬೀಳುತ್ತಾರೆ. ಆಗ ಪಟಾಕಿ ಡಮ್ ಎಂದು ಜೋರಾಗಿ ಶಬ್ಧ ಮಾಡುತ್ತದೆ. ಆದರೆ ಆ ಪಟಾಕಿಯಿಂದ ಸೀತಾಗೂ ಸತ್ಯಗೂ ಏನಾಗಿದೆಯೋ ಗೊತ್ತಿಲ್ಲ..? ಯಾರಿಗೆ ಏನಾಗುತ್ತದೋ ಎಂಬುದೇ ಈಗಿನ ಕುತೂಹಲ.

  English summary
  sathya serial 11th november Episode Written Update. keerthana plans to fight on sathya. And she does something for crackers. Which harms seetha.
  Sunday, November 13, 2022, 12:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X