For Quick Alerts
  ALLOW NOTIFICATIONS  
  For Daily Alerts

  ಸತ್ಯ ಗಂಡನ ಬಗ್ಗೆ ತಿಳಿದುಕೊಳ್ಳಲು ಗ್ಯಾರೇಜ್‌ಗೆ ಬಂದ ದಿವ್ಯ?

  By ಪ್ರಿಯಾ ದೊರೆ
  |

  ಸತ್ಯ ಧಾರಾವಾಹಿಯಲ್ಲಿ ಕಾರ್ತಿಕ್ ಮತ್ತು ಸತ್ಯ ಇಬ್ಬರೂ ಅವರ ತಾಯಿ ಮನೆಗೆ ಹೊರಟಿರುತ್ತಾರೆ. ಕಾರ್ತಿಕ್ ಬಟ್ಟೆಯನ್ನು ಪ್ಯಾಕ್ ಮಾಡಿಕೊಳ್ಳುತ್ತಿರುತ್ತಾನೆ. ಇದನ್ನು ನೋಡಿ ಸತ್ಯ ಥ್ಯಾಂಕ್ಸ್ ಕೇಳುತ್ತಾಳೆ.

  ಆದರೆ ಕಾರ್ತಿಕ್ ನೀನು ನನ್ನ ಅಪ್ಪ-ಅಮ್ಮನಿಗೆ ಇಷ್ಟವಾಗುವಂತೆ ನಾಟಕವಾಡುವಾಗ, ನಿಮ್ಮ ಮನೆಯವರಿಗೋಸ್ಕರ ನಾನು ನಾಟಕವಾಡಬಾರದ ಎಂದು ಹೇಳುತ್ತಾನೆ. ನನಗೆ ನಿನ್ನ ಮೇಲೆ ಯಾವ ಪ್ರೀತಿಯೂ ಇಲ್ಲ ಎಂದು ಹೇಳಿದಾಗ, ಆ ಮಾತನ್ನು ಕೇಳಿ ಸತ್ಯ ಶಾಕ್ ಆಗುತ್ತಾಳೆ.

  ಸತ್ಯ ಕೂಡ ಅದನ್ನು ಮ್ಯಾನೇಜ್ ಮಾಡುವ ಸಲುವಾಗಿ ಸರಿ ಎಂದು ಹೇಳುತ್ತಾಳೆ. ಆದರೆ ಮನದಲ್ಲೇ ಕಾರ್ತಿಕ್ ನಾನು ನಿನ್ನನ್ನು ನಿಜವಾಗಿಯೂ ಪ್ರೀತಿಸುತ್ತಿದ್ದೇನೆ ಎಂದು ಹೇಳಿಕೊಂಡು ನೊಂದುಕೊಳ್ಳುತ್ತಾಳೆ.

  ಗಿರಿಜಮ್ಮನ ಬಳಿ ಸುಳ್ಳು ಹೇಳುತ್ತಿರುವ ದಿವ್ಯಾ

  ಗಿರಿಜಮ್ಮನ ಬಳಿ ಸುಳ್ಳು ಹೇಳುತ್ತಿರುವ ದಿವ್ಯಾ

  ಈಗ ದಿವ್ಯ ತನ್ನ ತಾಯಿ ಮನೆಗೆ ಬಂದು ಸೆಟಲ್ ಆಗಿದ್ದಾಳೆ. ಜಾನಕಿ ಬೇಡ ಎಂದರೂ ಗಿರಿಜಮ್ಮ ದಿವ್ಯಾಳನ್ನು ಮನೆಯೊಳಗೆ ಬಿಟ್ಟುಕೊಂಡಿದ್ದಾಳೆ. ದಿವ್ಯಾ ತಾನು ದೊಡ್ಡ ಮನೆಗೆ ಸೊಸೆಯಾಗಿ ಹೋಗಿದ್ದು, ತುಂಬಾ ಸುಖವಾಗಿದ್ದೀನಿ ಎಂದು ಹೇಳಿದ್ದಾಳೆ. ಆದರೆ ಅವಳು ಬಂದಿರುವ ರೀತಿ ನೋಡಿ ಗಿರಿಜಮ್ಮನಿಗೆ ಅನುಮಾನ ಬಂದಿದೆ. ಹಾಗಾಗಿ ದಿವ್ಯಾಳನ್ನು ಪ್ರಶ್ನೆ ಮೇಲೆ ಪ್ರಶ್ನೆಗಳನ್ನು ಮಾಡುತ್ತಿರುತ್ತಾಳೆ. ದಿವ್ಯಾ ತನನ್ನು ಕಂಡರೆ, ಅವರ ಗಂಡ ಹಾಗೂ ಅತ್ತೆ-ಮಾವನಿಗೆ ಪಂಚ ಪ್ರಾಣ. ಗಂಡನ ಮನೆಯಲ್ಲಿ ಎಷ್ಟಿದ್ದರೇನು ತವರು ಮನೆ ತಾನೇ ಹೆಣ್ಣು ಮಕ್ಕಳಿಗೆ ಇಷ್ಟವಾಗುವುದು. ಅದಕ್ಕೆ ನಾನು ಬಂದೆ. ಇಲ್ಲಿ ಸ್ವಲ್ಪ ದಿನ ಇದ್ದು ಹೋಗುತ್ತೇನೆ ಎಂದು ಹೇಳುತ್ತಾಳೆ. ಅಲ್ಲದೇ, ಇಲ್ಲಿಗೆ ಸೂಟ್ ಆಗಲಿ ಎಂದು ಕಡಿಮೆ ಬೆಲೆಯ ಬಟ್ಟೆಯನ್ನು ಹಾಕಿಕೊಂಡು ಬಂದಿದ್ದೀನಿ. ನನ್ನ ಗಂಡ ದುಬೈನಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಸುಳ್ಳು ಹೇಳುತ್ತಾಳೆ.

  ಮತ್ತೆ ಹಣ ಕೀಳಲು ಸ್ಕೆಚ್ ಹಾಕಿದ ಬಾಲ

  ಮತ್ತೆ ಹಣ ಕೀಳಲು ಸ್ಕೆಚ್ ಹಾಕಿದ ಬಾಲ

  ಅತ್ತ ಬಾಲ ದಿವ್ಯಾ ಅವರ ತಾಯಿ ಮನೆಗೆ ಹೋಗಿರುವ ವಿಚಾರವನ್ನು ತಿಳಿದು, ಈಗ ಮತ್ತೆ ಕೀರ್ತನಾಗೆ ಫೋನ್ ಮಾಡಿದ್ದಾನೆ. ಮತ್ತೆ ಕೀರ್ತನಾಳನ್ನು ಬ್ಲ್ಯಾಕ್ ಮೇಲ್ ಮಾಡುತ್ತಾ ಹಣ ಪೀಕಲು ಮುಂದಾಗಿದ್ದಾನೆ. ಆದರೆ ಕೀರ್ತನಾ ಬಾಲನ ಮೇಲೆ ಕೂಗಾಡಿದ್ದಾಳೆ. ಬಾಲ ದಿವ್ಯ ಹಳ್ಳಿ ಬಿಟ್ಟು ಅವರ ಅಮ್ಮನ ಮನೆಗೆ ವಾಪಸ್ ಬಂದಿದ್ದಾಳೆ. ಈಗ ನೀವು ಹಣ ಕೊಡದಿದ್ದರೆ, ನಾನು ದಿವ್ಯ ಇಬ್ಬರು ನಿಮ್ಮ ಮನೆಗೆ ಬರಬೇಕಾಗುತ್ತೆ. ಆಮೇಲೆ ಆಗೋದನ್ನು ನೀವೇ ಎದುರಿಸಬೇಕು. ಅದರ ಬದಲು ಸುಮ್ಮನೆ ಹಣ ಹಾಕಿ. ಆಗ ನಿಮಗೂ ಪ್ರಾಬ್ಲಮ್ ಇಲ್ಲ. ನನಗೂ ತೊಂದರೆ ಇರುವುದಿಲ್ಲ ಎಂದು ಹೇಳುತ್ತಾನೆ. ಕೀರ್ತನಾ ಫೋನ್ ಇಟ್ಟ ಮೇಲೆ, ಇನ್ನು ಎಷ್ಟು ಸಲ ಅಂತ ನಾವು ಬಾಲನಿಗೆ ದುಡ್ಡು ಕೊಡುವುದು ಎಂದು ಸುಹಾಸ್ ಮತ್ತು ಕೀರ್ತನಾ ಮಾತನಾಡಿಕೊಳ್ಳುತ್ತಾರೆ.

  ಸತ್ಯ ಗಂಡನ ಬಗ್ಗೆ ಕೇಳಿದ್ದಕ್ಕೆ ಎಲ್ಲರೂ ಶಾಕ್

  ಸತ್ಯ ಗಂಡನ ಬಗ್ಗೆ ಕೇಳಿದ್ದಕ್ಕೆ ಎಲ್ಲರೂ ಶಾಕ್

  ಇತ್ತ ಗ್ಯಾರೇಜ್ ನಲ್ಲಿ ಹುಡುಗರು ಸತ್ಯ ಹಬ್ಬಕ್ಕೆ ಬರುತ್ತಾಳೆ ಎಂದು ಖುಷಿಯಿಂದ ಇರುತ್ತಾರೆ. ಆಗ ದಿವ್ಯಾ ಬಂದಿರುವುದನ್ನು ತಿಳಿದು, ಹೇಗಾದರೂ ಮಾಡಿ ಅವಳನ್ನು ಮನೆಯಿಂದ ಹೊರಗೆ ಹಾಕಬೇಕು ಎಂದು ಯೋಚಿಸುವಷ್ಟರಲ್ಲಿ ದಿವ್ಯಾ ಅಲ್ಲಿಗೆ ಬರುತ್ತಾಳೆ. ಸತ್ಯ ಬಗ್ಗೆ ಕೀಳಾಗಿ ಮಾತನಾಡುತ್ತಾಳೆ. ನಂತರ ಸತ್ಯ ಮದುವೆಯಾಗಿರುವ ಆ ಹುಡುಗ ಯಾರು ಎಂದು ಕೇಳುತ್ತಾಳೆ. ಆಗ ಹುಡುಗರಿಗೆಲ್ಲಾ ಶಾಕ್ ಆಗುತ್ತದೆ. ಸತ್ಯ ಮದುವೆಯಾಗಿರುವುದು ಯಾರನ್ನು ಎಂಬುದು ದಿವ್ಯಾಗೆ ಗೊತ್ತೇ ಇಲ್ವಾ ಎಂದುಕೊಳ್ಳುತ್ತಾರೆ.

  ಕಾರ್ತಿಕ್ ನನ್ನು ದಿವ್ಯಾ ನೋಡುತ್ತಾಳಾ..?

  ಕಾರ್ತಿಕ್ ನನ್ನು ದಿವ್ಯಾ ನೋಡುತ್ತಾಳಾ..?

  ಅಷ್ಟರಲ್ಲಿ ಸತ್ಯನೇ ಗ್ಯಾರೇಜಿಗೆ ಬಂದದ್ದನ್ನು ತಿಳಿದ ದಿವ್ಯಾ, ಅಲ್ಲೇ ಬಚ್ಚಿಟ್ಟುಕೊಳ್ಳುತ್ತಾಳೆ. ಸತ್ಯ ಸೀರೆ ಉಟ್ಟುಕೊಂಡು ಖುಷಿಯಾಗಿ ಬರುವುದನ್ನು ನೋಡುತ್ತಾಳೆ. ಇನ್ನೇನು ಕಾರ್ತಿಕ್ ಸತ್ಯಳನ್ನು ಮದುವೆಯಾಗಿರುವುದು ದಿವ್ಯಾಗೆ ಗೊತ್ತಾಗಬಹುದು.? ಹಾಗೇನಾದರೂ ಗೊತ್ತಾದರೆ, ದಿವ್ಯಾ ಹೇಗೆ ರಿಯಾಕ್ಟ್ ಮಾಡುತ್ತಾಳೋ ಕಾದು ನೋಡಬೇಕಿದೆ.

  English summary
  divya starts investigating about sathya husband So she comes to garage.
  Thursday, October 13, 2022, 19:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X