For Quick Alerts
  ALLOW NOTIFICATIONS  
  For Daily Alerts

  ಸತ್ಯ ಗಂಡ ಕಾರ್ತಿಕ್ ಎಂದು ತಿಳಿದ ದಿವ್ಯಾ ಮಾಡಿದ್ದೇನು?

  By ಪ್ರಿಯಾ ದೊರೆ
  |

  ಸತ್ಯ ಧಾರಾವಾಹಿಯಲ್ಲಿ ದಿವ್ಯಾ ಗ್ಯಾರೇಜಿಗೆ ಬಂದಿದ್ದಾಳೆ. ಅಲ್ಲಿ ಸತ್ಯ ಗಂಡನ ಫೋಟೋ ನೋಡಲು ಹುಡುಗರ ಬಳಿ ವಿಚಾರಿಸಿದ್ದಾಳೆ. ಆಗ ಹುಡುಗರಿಗೆ ದಿವ್ಯಾ ಸತ್ಯ ಮದುವೆಯಾಗಿರುವುದು ಯಾರನ್ನು ಎಂಬುದು ಕೂಡ ಗೊತ್ತಿಲ್ವಾ ಎಂಬಂತೆ ಶಾಕ್ ಆಗಿದ್ದಾರೆ.

  ಇತ್ತ ಮನೆಯಲ್ಲಿ ಜಾನಕಿ ಗಿರಿಜಮ್ಮನ ಬಳಿ ದಿವ್ಯಾ ಬಗ್ಗೆ ಮಾತನಾಡುತ್ತಿರುತ್ತಾಳೆ. ಯಾಕಾದರೂ ದಿವ್ಯಾಳನ್ನಾ ಮನೆಗೆ ಸೇರಿಸಿಕೊಂಡಿದ್ದೋ ಗೊತ್ತಿಲ್ಲ. ಅವಳನ್ನ ಮನೆಯೊಳಗೆ ಬಿಟ್ಟುಕೊಳ್ಳಬಾರದಿತ್ತು. ಇನ್ನೂ ಅವಳ ಅಹಂಕಾರ ಕೊಂಚವೂ ತಗ್ಗಿಲ್ಲ ಎಂದು ಜಾನಕಿ ಹೇಳುತ್ತಾಳೆ.

  ಆಗ ಗಿರಿಜಮ್ಮ ಇರ್ಲಿ ಬಿಡೇ ಎಂದು ಹೇಳಿದ್ದಕ್ಕೆ, ಜಾನಕಿ ಈಗ ಮನೆಗೆ ಸತ್ಯ ಮತ್ತೆ ಅಳಿಯಂದಿರು ಬರುತ್ತಾರೆ. ದಿವ್ಯಾಳನ್ನ ನೋಡಿದರೆ ಅಳಿಯಂದಿರಿಗೆ ಮುಜುಗರ ಆಗೋದಿಲ್ವಾ.? ಅದೇನು ಮಾಡುತ್ತೀರೋ ಮಾಡಿ ಎಂದಾಗ, ಗಿರಿಜಮ್ಮ ಮನದೊಳಗೆ ಏನೋ ಪ್ಲಾನ್ ಮಾಡುತ್ತಾರೆ.

  ಕಾರ್ತಿಕ್‌ನನ್ನು ನೋಡಿ ಶಾಕ್ ಆದ ದಿವ್ಯಾ

  ಕಾರ್ತಿಕ್‌ನನ್ನು ನೋಡಿ ಶಾಕ್ ಆದ ದಿವ್ಯಾ

  ಇದೇ ಸಮಯಕ್ಕೆ ಸತ್ಯ ಮತ್ತು ಕಾರ್ತಿಕ್ ಇಬ್ಬರೂ ಗ್ಯಾರೇಜಿಗೆ ಬೈಕ್‌ನಲ್ಲಿ ಬಂದಿದ್ದಾರೆ. ಬೈಕ್ ಶಬ್ದ ಕೇಳಿದ ಹುಡುಗರು ಸತ್ಯ ಬಂದಳು ಎಂದು ಕಾಣಿಸುತ್ತೆ ಎಂದು ಹೇಳಿದ್ದಾರೆ. ಅದನ್ನು ಕೇಳಿಸಿಕೊಂಡ ದಿವ್ಯಾ ಗ್ಯಾರೇಜ್‌ನಲ್ಲಿ ಬಚ್ಚಿಟ್ಟುಕೊಳ್ಳುತ್ತಾಳೆ. ಸತ್ಯ ಒಬ್ಬಳೆ ಖುಷಿಯಾಗಿ ನಡೆದುಕೊಂಡು ಬರುತ್ತಾಳೆ. ಸತ್ಯಳನ್ನು ಸೀರೆಯಲ್ಲಿ ನೋಡಿ ದಿವ್ಯಾ ಶಾಕ್ ಆಗುತ್ತಾಳೆ. ಹಿಂದೆಯೇ ಕಾರ್ತಿಕ್ ಸತ್ಯಳ ಬೈಕ್‌ನಲ್ಲಿ ಬರುತ್ತಾನೆ. ಆಗ ಕಾರ್ತಿಕ್‌ನನ್ನು ನೋಡಿದ ದಿವ್ಯಾ ಶಾಕ್ ಆಗುತ್ತಾಳೆ. ಇತ್ತ ಹುಡುಗರು ಬೈಕ್ ಅಡವಿಟ್ಟಿದ್ವಿ ಅಲ್ವಾ ಎಂದು ಕೇಳಿದ್ದಕ್ಕೆ ಸತ್ಯ ಹೌದು ಕಣ್ರೋ ನಿಮ್ ಭಾವ ನನಗೋಸ್ಕರ ಬಿಡಿಸಿಕೊಟ್ಟರು. ಇದರದ್ದು ಸಣ್ಣ-ಪುಟ್ಟ ರಿಪೇರಿ ಇದೆ ಮಾಡಿ ಎಂದು ಹೇಳಿ ಮನೆ ಕಡೆಗೆ ಹೊರಡುತ್ತಾರೆ.

  ಮನೆಯಿಂದ ಜಾಗ ಖಾಲಿ ಮಾಡಲು ಹೊರಟ ದಿವ್ಯಾ

  ಮನೆಯಿಂದ ಜಾಗ ಖಾಲಿ ಮಾಡಲು ಹೊರಟ ದಿವ್ಯಾ

  ಅಷ್ಟರಲ್ಲಿ ದಿವ್ಯಾ ಮನೆಗೆ ಬಂದು ಸೇರಿಕೊಳ್ಳುತ್ತಾಳೆ. ನಾನು ರಾಂಗ್ ಟೈಮ್‌ನಲ್ಲಿ ಮನೆಗೆ ಬಂದಿದ್ದೀನಿ. ಈಗ ಸತ್ಯ ಮತ್ತು ಕಾರ್ತಿಕ್ ಮನೆಗೆ ಬಂದರೆ ಹೇಗೆ ಅವರಿಗೆ ಮುಖ ತೋರಿಸುವುದು. ಕಾರ್ತಿಕ್ ಸತ್ಯಳನ್ನು ಮದುವೆಯಾಗುವುದಕ್ಕೆ ಅದು ಹೇಗೆ ಅವರ ಮನೆಯಲ್ಲಿ ಒಪ್ಪಿಕೊಂಡರು. ಅದು ಏನೇ ಇರಲಿ ನಾನು ಈಗ ಇವರಿಬ್ಬರು ಮನೆಗೆ ಬಂದಾಗ ಇಲ್ಲಿರುವುದು ಸರಿಯಿಲ್ಲ. ಸತ್ಯ ನನ್ನನ್ನು ಈಗ ಇಲ್ಲಿ ನೋಡಿದರೆ ಕಾರ್ತಿಕ್ ಎದುರಿಗೆ ಕೆನ್ನೆಗೆ ಹೊಡೆದರೂ ಆಶ್ಚರ್ಯವಿಲ್ಲ. ಕಾರ್ತಿಕ್ ಎದುರು ನಾನು ಹೊಡೆಸಿಕೊಳ್ಳುವುದು ಸರಿಯಿಲ್ಲ ಎಂದು ಮನಸ್ಸಿನಲ್ಲೇ ಮಾತನಾಡಿಕೊಳ್ಳುತ್ತಿರುತ್ತಾಳೆ. ಹಾಗಾಗಿ ಮನೆಯಿಂದ ಈಗಲೇ ಜಾಗ ಖಾಲಿ ಮಾಡುವುದು ಸರಿ ಎಂದುಕೊಂಡು ಬ್ಯಾಗ್ ಸಮೇತ ಹೊರಡುತ್ತಾಳೆ. ಇದನ್ನು ನೋಡುವ ಗಿರಿಜಮ್ಮ ಈಗ ಯಾಕೆ ಹೀಗೆ ಹೊರಟೆ ಎಂದು ಕೇಳುತ್ತಾಳೆ.

  ಕೀರ್ತನಾಗೆ ಬುದ್ಧಿ ಹೇಳಿದ ಸೀತಾ

  ಕೀರ್ತನಾಗೆ ಬುದ್ಧಿ ಹೇಳಿದ ಸೀತಾ

  ಮನೆಯಲ್ಲಿ ಸೀತಾಳ ಜೊತೆಗೆ ಕೀರ್ತನಾ ಮಾತನಾಡುತ್ತಿರುತ್ತಾಳೆ. ನೀನು ಕೂಡ ಅವರ ಗುಂಪಿಗೇ ಸೇರಿ ಕೊಂಡಿದ್ದೀಯಲ್ಲಮ್ಮ. ಸತ್ಯಳನ್ನ ಸೊಸೆ ಅಂತ ನೀನು ಒಪ್ಪಿಕೊಂಡಿದ್ದಿಯಾ ಅಲ್ವಾ.? ಮೊನ್ನೆ ಅವಳು ಗೊಂಬೆಗಳ ಕಥೆ ಹೇಳಿದಾಗ ಅದು ಹೇಗೆ ಒಪ್ಪಿಕೊಂಡೆ. ಅವಳನ್ನು ಹೊಗಳಿದ್ಯಾಕೆ ಎಂದು ಕೇಳುತ್ತಾಳೆ. ಈಗ ನೋಡಿದರೆ ಆ ಕೊಂಪೆಗೆ ಹೋಗಿದ್ದಾರೆ ಎನ್ನುತ್ತಾಳೆ. ಆಗ ಸೀತಾ ಒಳ್ಳೆಯ ಕೆಲಸ ಮಾಡಿದಾಗ ಹೊಗಳುವುದರಲ್ಲಿ ತಪ್ಪೇನಿಲ್ಲ. ಇನ್ನು ಕೇವಲ ಆರು ತಿಂಗಳಷ್ಟೇ ಸತ್ಯ ಇಲ್ಲಿರುವುದು. ಅದರಲ್ಲಿ ಆಗಲೇ ಒಂದು ತಿಂಗಳು ಕಳೆದು ಹೋಗಿದೆ. ನಿನ್ನದನ್ನು ಮೊದಲು ನೋಡಿಕೋ. ಅವಳು ನಿನ್ನ ಮನೆಯಿಂದ ಹೋಗು ಎಂದರೆ ಏನು ಮಾಡುತ್ತಿಯಾ.? ಅದನ್ನ ಮೊದಲು ಯೋಚಿಸು ಎಂದು ಸೀತಾ ಕೀರ್ತನಾಗೆ ಬುದ್ಧಿ ಹೇಳುತ್ತಾಳೆ.

  ದಿವ್ಯಾಳನ್ನು ನೋಡಿ ಸತ್ಯ ಮಾಡಿದ್ದೇನು..?

  ದಿವ್ಯಾಳನ್ನು ನೋಡಿ ಸತ್ಯ ಮಾಡಿದ್ದೇನು..?

  ಇನ್ನು ಸತ್ಯ ಹಾಗೂ ಕಾರ್ತಿಕ್ ಮನೆಗೆ ಬರುತ್ತಾರೆ. ಗಿರಿಜಮ್ಮ ಇಬ್ಬರನ್ನೂ ಬಾಗಿಲಿನಲ್ಲೇ ನಿಲ್ಲಿಸಿಕೊಂಡು ಮಾತನಾಡುತ್ತಿರುತ್ತಾಳೆ. ಇಬ್ಬರೂ ಕೂಡ ನವರಾತ್ರಿ ಹಬ್ಬವನ್ನು ಮುಗಿಸಿಕೊಂಡೇ ಹೋಗುವುದು ಎಂದು ಹೇಳುತ್ತಾರೆ. ಅಷ್ಟರಲ್ಲಿ ದಿವ್ಯಾ ಕಾರ್ತಿಕ್ ಹಾಗೂ ಸತ್ಯಳನ್ನು ನೋಡುತ್ತಾಳೆ. ದಿವ್ಯಾಳನ್ನು ಕೂಡ ಸತ್ಯ ಮತ್ತು ಕಾರ್ತಿಕ್ ನೋಡಿ ಶಾಕ್ ಆಗುತ್ತಾರೆ. ಸತ್ಯ ಸೀದಾ ಮನೆಯೊಳಗೆ ಹೋಗಿ, ದಿವ್ಯಾ ಕೆನ್ನೆಗೆ ಭಾರಿಸುತ್ತಾಳೆ. ಇದನ್ನು ನೋಡಿ ಕಾರ್ತಿಕ್ ಶಾಕ್ ಆಗುತ್ತಾನೆ. ಈಗ ಸತ್ಯ ಬಾಲನ ಬಗ್ಗೆ ಎಲ್ಲಾ ಸತ್ಯವನ್ನು ದಿವ್ಯಾಗೆ ಹೇಳುತ್ತಾಳಾ ಎಂಬ ಕುತೂಹಲ ಮೂಡಿದೆ.

  English summary
  divya comes to know about sathya husband and she decides to escape from her house.
  Friday, October 14, 2022, 19:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X