For Quick Alerts
  ALLOW NOTIFICATIONS  
  For Daily Alerts

  ಸೀತಾಗೆ ಧೈರ್ಯ ತುಂಬಿದ ಸೊಸೆ: ಸಮಸ್ಯೆ ಬಗೆಹರಿಸುತ್ತಾಳಾ ಸತ್ಯ..?

  By ಪ್ರಿಯಾ ದೊರೆ
  |

  'ಸತ್ಯ' ಧಾರಾವಾಹಿಯಲ್ಲಿ ಮನೆಯಲ್ಲಿ ಯಾರೂ ಕಾರ್ತಿಕ್‌ನನ್ನು ನಂಬುವುದಿಲ್ಲ. ಮಾಳವಿಕಾ ಜೊತೆಗೆ ಕಾರ್ತಿಕ್ ಮಿಸ್ ಬಿಹೇವ್ ಮಾಡಿದ್ದಾನೆ ಎಂದೇ ತಿಳಿದಿರುತ್ತಾರೆ. ಹಾಗಾಗಿ ಯಾರೂ ಕಾರ್ತಿಕ್ ಜೊತೆಗೆ ಸರಿಯಾಗಿ ಮಾತನಾಡುತ್ತಿರುವುದಿಲ್ಲ.

  ಹೀಗಿರುವಾಗಲೇ ಕೀರ್ತನಾ ಬೇರೆ ಸೀತಾ ಬಳಿ ಚಾಡಿ ಹೇಳಿರುತ್ತಾಳೆ. ಇದಕ್ಕೆಲ್ಲಾ ಸತ್ಯ ಕಾರಣ. ಅವಳು ನಮ್ಮ ಮನೆಗೆ ಬಂದಿದ್ದೇ ತಪ್ಪು. ಅವಳಿಂದಲೇ ನಮ್ಮ ಮನೆಯ ಮಾನ ಮರ್ಯಾದೆ ಎಲ್ಲವೂ ಇವತ್ತು ಬೀದಿ ಪಾಲಾಗಿದೆ ಎಂದು ಚುಚ್ಚಿಕೊಡುತ್ತಾಳೆ.

  ಆದರೆ, ಸತ್ಯ ಒಬ್ಬಳೇ ಕಾರ್ತಿಕ್ ಪರವಾಗಿ ನಿಂತಿರುತ್ತಾಳೆ. ಎಲ್ಲರ ಎದುರು ಸತ್ಯ ಕಾರ್ತಿಕ್‌ನನ್ನು ಸಪೋರ್ಟ್ ಮಾಡಿ ಮಾತನಾಡುತ್ತಾಳೆ. ಕಾರ್ತಿಕ್ ಎಲ್ಲರ ಮಾತುಗಳಿಂದ ಕುಗ್ಗಿ ಹೋಗಿರುತ್ತಾನೆ.

  ಎದುರುತ್ತರ ಕೊಟ್ಟ ಕಾರ್ತಿಕ್

  ಎದುರುತ್ತರ ಕೊಟ್ಟ ಕಾರ್ತಿಕ್

  ಕಾರ್ತಿಕ್ ವಿಚಾರ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಅವರ ಆಫೀಸಿನಲ್ಲಿ ಸಮಸ್ಯೆಗಳು ಉದ್ಭವಿಸಿರುತ್ತವೆ. ಇವರ ಕಂಪನಿ ಜೊತೆಗೆ ಕೈ ಜೋಡಿಸಿದವರೆಲ್ಲಾ, ಹೊರ ನಡೆಯುತ್ತಿರುತ್ತಾರೆ. ಲಕ್ಷ್ಮಣ ಎಷ್ಟು ಹೇಳಿದರೂ ಕೇಳುವುದಿಲ್ಲ. ಆಗ ರಾಮಚಂದ್ರ ರಾಯರು ಹಾಗೂ ಸೀತಾ ಇಬ್ಬರೂ ಕಾರ್ತಿಕ್‌ನನ್ನು ದೂಷಿಸುತ್ತಾರೆ. ಮಗನನ್ನು ನಂಬಿ ತಪ್ಪಾಯ್ತು. ಇನ್ಮೇಲಿಂದ ನಾನೇ ಆಫೀಸಿಗೆ ಹೋಗುತ್ತೇನೆ. ಕಾರ್ತಿಕ್ ಯಾವುದಕ್ಕೂ ಪ್ರಯೋಜನವಿಲ್ಲ ಎಂದು ಹೇಳುತ್ತಾರೆ. ಮನೆಯವರ ಮಾತಿನಿಂದ ಮೊದಲೇ ಕುಗ್ಗಿ ಹೋಗಿದ್ದ ಕಾರ್ತಿಕ್, ಈಗ ಇನ್ನಷ್ಟು ಬೇಸತ್ತಿರುತ್ತಾನೆ. ಹಾಗಾಗಿ ಮನೆಯವರಿಗೆ ಎದುರುತ್ತರ ಕೊಡುತ್ತಾನೆ. ನಾನೇನು ತಪ್ಪು ಮಾಡಿಲ್ಲ ಎಂದು ವಾದ ಮಾಡುತ್ತಾನೆ.

  ಸತ್ಯ ಬಗ್ಗೆ ಸೀತಾಳಲ್ಲಿ ಗೊಂದಲ

  ಸತ್ಯ ಬಗ್ಗೆ ಸೀತಾಳಲ್ಲಿ ಗೊಂದಲ

  ಸತ್ಯ ದೇವಸ್ಥಾನಕ್ಕೆ ಬಂದು ಬೆಲ್ಲದ ಆರತಿಯನ್ನು ಮಾಡುತ್ತಿರುತ್ತಾಳೆ. ಈ ವೇಳೆಗೆ ಅದೇ ದೇವಸ್ಥಾನಕ್ಕೆ ಬರುವ ಸೀತಾ, ಸತ್ಯಳನ್ನು ನೋಡಿ ಶಾಕ್ ಆಗುತ್ತಾಳೆ. ಇವಳೇನು ದೇವಸ್ಥಾನಕ್ಕೆ ಬಂದಿದ್ದಾಳೆ ಎಂದು ಶಾಕ್ ಆಗುತ್ತಾಳೆ. ಇದೇನು ದೇವಸ್ಥಾನಕ್ಕೆ ಬಂದಿದ್ದೀಯಾ ಎಂದು ಕೇಳುತ್ತಾಳೆ. ಅದಕ್ಕೆ ಸತ್ಯ, ಎಲ್ಲಾ ನಿಮ್ಮಿಂದ ಕಲಿತದ್ದು. ಮನೆಗೆ ಒಳ್ಳೆಯದಾಗಲಿ ಎಂದು ಬೇಡಿಕೊಳ್ಳಲು ಬಂದೆ ಎನ್ನುತ್ತಾಳೆ. ಅಲ್ಲದೇ, ಕಾರ್ತಿಕ್ ಹಾಗೂ ಅತ್ತೆ-ಮಾವನ ಹೆಸರಲ್ಲಿ ಅರ್ಚನೆ ಮಾಡಿಸುತ್ತಾಳೆ. ಇದನ್ನು ಗಮನಿಸಿದ ಸೀತಾ, ಸತ್ಯ ಬಗ್ಗೆ ಗೊಂದಲಕ್ಕೊಳಗಾಗುತ್ತಾಳೆ. ಸತ್ಯ ಒಳ್ಳೆಯವಳಾ, ಇಲ್ಲ ನಟಿಸುತ್ತಿದ್ದಾಳಾ ಎಂದು ಯೋಚಿಸುತ್ತಾಳೆ.

  ಸೀತಾಳನ್ನು ಪ್ರಶ್ನೆ ಮಾಡಿದ ಸತ್ಯ

  ಸೀತಾಳನ್ನು ಪ್ರಶ್ನೆ ಮಾಡಿದ ಸತ್ಯ

  ಸತ್ಯ ಮತ್ತು ಸೀತಾ ಪ್ರದಕ್ಷಿಣೆ ಹಾಕುವಾಗ ಮಾತನಾಡುತ್ತಾರೆ. ಸತ್ಯ, ಸೀತಾಳನ್ನು ಪ್ರಶ್ನೆ ಮಾಡುತ್ತಾಳೆ. ನಿಮ್ಮ ಮಗನ ಮೇಲೆ ನಿಮಗೆ ನಂಬಿಕೆ ಇಲ್ವಾ.? ಯಾಕೆ ನೀವು ನಿಮ್ಮ ಮಗನನ್ನು ದೂಷಿಸುತ್ತಿದ್ದೀರಾ ಎಂದು ಕೇಳುತ್ತಾಳೆ. ಅದಕ್ಕೆ ಸೀತಾ, ನನ್ನ ಮಗ ಬುದ್ಧಿ ಕಲಿಯಲಿ ಎಂದು ಮಾಡುತ್ತಿದ್ದೇವೆ. ಅವನು ಏನು ಎಂಬುದು ಗೊತ್ತು ಎನ್ನುತ್ತಾಳೆ. ಆಗ ಸತ್ಯ ಒಮ್ಮೆ ನಿಮ್ಮ ಮಗನನ್ನು ಸಪೋರ್ಟ್ ಮಾಡಿ ಮಾತನಾಡಿ ಎಂದು ಸಲಹೆ ಕೊಡುತ್ತಾಳೆ. ಇನ್ನು ದೇವಸ್ಥಾನದಲ್ಲಿ ಜನರು ಕಾರ್ತಿಕ್ ಬಗ್ಗೆ ಮಾತನಾಡಿದಾಗ ನೊಂದುಕೊಂಡ ಸೀತಾಗೆ ಸತ್ಯ ಸಮಾಧಾನ ಮಾಡುತ್ತಾಳೆ.

  ಸತ್ಯ ಕಾರ್ತಿಕ್‌ನನ್ನು ಕಾಪಾಡುತ್ತಾಳಾ..?

  ಸತ್ಯ ಕಾರ್ತಿಕ್‌ನನ್ನು ಕಾಪಾಡುತ್ತಾಳಾ..?

  ಕಾರ್ತಿಕ್‌ಗೆ ಮಾಳವಿಕಾ ಬ್ಲ್ಯಾಕ್ ಮೇಲ್ ಮಾಡುತ್ತಿರುತ್ತಾಳೆ. ನಾನು ಬೇಕಂತಲೇ ಸುಳ್ಳು ಹೇಳಿದ್ದೀನಿ. ನಿನ್ನಿಂದ ನನಗೆ ಕೆಲಸವೊಂದು ಆಗಬೇಕು. ನನ್ನ ಮಾತು ಕೇಳಿದರೆ, ನಾನೇ ಸತ್ಯವನ್ನು ಒಪ್ಪಿಕೊಳ್ಳುತ್ತೇನೆ ಎಂದು ಮಾಳವಿಕಾ ಕಾರ್ತಿಕ್‌ಗೆ ಹೇಳಿರುತ್ತಾಳೆ. ಇದರ ಬಗ್ಗೆ ಕಾರ್ತಿಕ್ ಯಾರ ಬಳಿಯೂ ಹೇಳದೇ ಒಬ್ಬನೇ ಚಿಂತೆಯಲ್ಲಿ ಮುಳುಗಿರುತ್ತಾನೆ. ಆದರೆ, ಸತ್ಯ ಕಾರ್ತಿಕ್‌ನನ್ನು ಈ ಸಮಸ್ಯೆಯಿಂದ ಪಾರು ಮಾಡುತ್ತಾಳಾ ಎಂದು ಕಾದು ನೋಡಬೇಕಿದೆ.

  FB Artcles
  English summary
  Sathya serial 14th december Episode Written Update. sathya supports karthik. others at home blames karthik for the problem.
  Wednesday, December 14, 2022, 22:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X