For Quick Alerts
  ALLOW NOTIFICATIONS  
  For Daily Alerts

  ಪಟಾಕಿ ಬ್ಲಾಸ್ಟ್ ಆಗಿ ಸತ್ಯ ಕೈ ಸುಟ್ಟಿದೆ: ಆಗಬೇಕಿದ್ದ ದೊಡ್ಡ ಅನಾಹುತ ಕೈ ತಪ್ಪಿತಾ?

  By ಪ್ರಿಯಾ ದೊರೆ
  |

  ಸತ್ಯ ಧಾರಾವಾಹಿಯಲ್ಲಿ ಕೀರ್ತನಾ ಸತ್ಯಾಳಿಗೆ ಮನೆಯಿಂದ ಗೇಟ್ ಪಾಸ್ ಕೊಡಿಸಬೇಕು ಎಂದು ತೀರ್ಮಾನ ಮಾಡಿದ್ದಾಳೆ. ಹಾಗಾಗಿ ಪಟಾಕಿಯಲ್ಲಿ ಏನೋ ಬೆರೆಸಿ ಬ್ಲಾಸ್ ಆಗುವಂತೆ ಮಾಡಿರುತ್ತಾಳೆ. ಈ ಕೆಲಸವನ್ನು ಸುಹಾಸ್ ಕೈನಲ್ಲಿ ಮಾಡಿಸಿರುತ್ತಾಳೆ.

  ಆ ಪಟಾಕಿಯನ್ನು ಸತ್ಯ ಹೊಡೆದರೆ, ಬ್ಲಾಸ್ಟ್ ಆಗಿ ಸ್ಥಳದಲ್ಲೇ ಸಾವನ್ನಪ್ಪಿದರೂ ಒಳ್ಳೆಯದೇ ಎಂದು ಕೀರ್ತನಾ ಭಾವಿಸಿರುತ್ತಾಳೆ. ಇಲ್ಲ ಹೆಚ್ಚು ಕಡಿಮೆಯಾಗಿ ಗಾಯವಾದರೂ ಸರಿಯೇ ಎಂದುಕೊಂಡಿರುತ್ತಾಳೆ. ಆದರೆ ಅದನ್ನು ರಿತು ಸೀತಾ ಕೈನಲ್ಲಿ ಹಚ್ಚಿಸಲು ಮುಂದಾಗುತ್ತಿರುತ್ತಾಳೆ.

  ರೊಮ್ಯಾಂಟಿಕ್ ಮೂಡ್‌ನಲ್ಲಿ ಸತ್ಯಾ; ಕಾರ್ತಿಕ್‌ಗೆ ಸಿಹಿ ಮುತ್ತು! ರೊಮ್ಯಾಂಟಿಕ್ ಮೂಡ್‌ನಲ್ಲಿ ಸತ್ಯಾ; ಕಾರ್ತಿಕ್‌ಗೆ ಸಿಹಿ ಮುತ್ತು!

  ಆಗ ಸುಹಾಸ್ ಮತ್ತು ಕೀರ್ತನಾ ನಡವಳಿಕೆಯಲ್ಲಿ ಆದ ಬದಲಾವಣೆಯನ್ನು ಕಂಡ ಸತ್ಯ ಇವರಿಬ್ಬರೂ ಏನೋ ಎಡವಟ್ಟು ಮಾಡಿದ್ದಾರೆ ಎಂದು ಅರ್ಥ ಮಾಡಿಕೊಳ್ಳುತ್ತಾಳೆ. ಸೀತಾ ದೇವಿಯನ್ನು ಬಚಾವ್ ಮಾಡಲು ಬರುತ್ತಾಳೆ.

  ಸತ್ಯ ಕೈಗೆ ಸಿಡಿದ ಪಟಾಕಿ

  ಸತ್ಯ ಕೈಗೆ ಸಿಡಿದ ಪಟಾಕಿ

  ಸತ್ಯ ಸೀತಾಳನ್ನು ಪಟಾಕಿ ಅವಳ ಬಳಿ ಸಿಡಿಯದಂತೆ ಎಳೆಯುತ್ತಾಳೆ. ಆ ರಭಸಕ್ಕೆ ಸತ್ಯ ಮತ್ತು ಸೀತಾ ಇಬ್ಬರೂ ಕೆಳಗೆ ಬೀಳುತ್ತಾರೆ. ಪಟಾಕಿ ಜೋರಾಗಿ ಬ್ಲಾಸ್ಟ್ ಆಗುತ್ತದೆ. ಆಗ ಸೀತಾ ಸತ್ಯ ಎಂದು ಕರೆಯುತ್ತಾಳೆ. ಇದರಿಂದ ಸತ್ಯ ನನ್ನನ್ನು ಅತ್ತೆ ಹೆಸರಿಟ್ಟು ಕರೆದರಲ್ಲ ಎಂದು ಅವರನ್ನೇ ನೋಡುತ್ತಿರುತ್ತಾಳೆ. ಆದರೆ ಸತ್ಯಳ ಮುಂಗೈ ಸುಟ್ಟಿರುತ್ತದೆ. ಸೀತಾ, ಊರ್ಮಿಳಾ ಎಲ್ಲರೂ ಇದರಿಂದ ಗಾಬರಿಯಾಗುತ್ತಾರೆ. ಸತ್ಯ ಮೂರ್ಚೆ ಬೀಳುತ್ತಾಳೆ.

  ಹೆಂಡತಿ ಮೇಲೆ ಹೆಚ್ಚಿದ ಕಾಳಜಿ

  ಹೆಂಡತಿ ಮೇಲೆ ಹೆಚ್ಚಿದ ಕಾಳಜಿ

  ಇನ್ನು ಸತ್ಯ ಮಾಡಿದ ಕೆಲಸವನ್ನು ಕಂಡು ಕಾರ್ತಿಕ್‌ ಬೇಸರದ ಜೊತೆಗೆ ಹೆಮ್ಮೆಯೂ ಪಡುತ್ತಾನೆ. ಆಗಬೇಕಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದಳು ಎಂದು ಮನದಲ್ಲೇ ಖುಷಿ ಪಡುತ್ತಾನೆ. ವೈದ್ಯರು ಬಂದು ಸತ್ಯಳ ಸುಟ್ಟ ಗಾಯಕ್ಕೆ ಔಷಧಿಯನ್ನು ಹಚ್ಚುತ್ತಿರುತ್ತಾರೆ. ಈ ವೇಳೆ ಕಾರ್ತಿಕ್ ಸತ್ಯಳನ್ನು ರೇಗಿಸುತ್ತಿರುತ್ತಾನೆ. ನಂತರ ಇಂಜೆಕ್ಷನ್ ಹಾಕಿ. ಅವಳಿಗೆ ಏನೂ ಆಗಬಾರದು. ಬೇಗ ಗಾಯ ಗುಣವಾಗಲಿ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ಸತ್ಯ ಖುಷಿ ಪಡುತ್ತಾಳೆ. ನೀನಂದ್ರೆ ನನಗೆ ತುಂಬಾ ಇಷ್ಟ. ಐ ಲವ್ ಯೂ ಸತ್ಯ ಎಂದು ಹೇಳುತ್ತಾನೆ. ಕಾರ್ತಿಕ್ ತೋರುವ ಪ್ರೀತಿ, ಕಾಳಜಿಯಿಂದ ಸತ್ಯ ತುಂಬಾ ಖುಷಿಪಡುತ್ತಾಳೆ.

  ಕೀರ್ತನಾಳನ್ನು ಮರೆತೇ ಬಿಟ್ಟಳಾ ಸತ್ಯ

  ಕೀರ್ತನಾಳನ್ನು ಮರೆತೇ ಬಿಟ್ಟಳಾ ಸತ್ಯ

  ಸತ್ಯ ಕಾರ್ತಿಕ್ ತನ್ನ ಕಡೆಗೆ ಒಲಿದಿರುವುದಕ್ಕೆ ಫುಲ್ ಖುಷಿಯಾಗಿರುತ್ತಾಳೆ. ಪ್ರೀತಿಯ ಆಗಸದಲ್ಲಿ ಸತ್ಯ ತೇಲಾಡುತ್ತಿರುತ್ತಾಳೆ. ಕಾರ್ತಿಕ್ ಜೊತೆ ಹಗಲುಗನಸು ಕಾಣುತ್ತಾ ಸತ್ಯ ರೊಮ್ಯಾಂಟಿಕ್ ಹಾಡಿಗೆ ಡುಯೆಟ್ ಹಾಡುತ್ತಿರುತ್ತಾಳೆ. ಕಾರ್ತಿಕ್ ಮನಸ್ಸಿಗೆ ಹತ್ತಿರವಾದ ಖುಷಿಯಲ್ಲಿ ಸತ್ಯ ಪಟಾಕಿ ಹೊಡೆದ ಘಟನೆಯನ್ನು ಮರೆತಿದ್ದಾಳೆ. ಕೀರ್ತನಾ ಮತ್ತು ಸುಹಾಸ್ ಸೇರಿ ಮಾಡಿರುವ ಕಿತಾಪತಿ ಬಗ್ಗೆ ಯೋಚನೆಯೇ ಮಾಡಿಲ್ಲ. ಕೀರ್ತನಾ ಮಾಡಿದ ತಪ್ಪನ್ನು ಮನೆಯಲ್ಲಿ ಹೇಳುವುದಾಗಲಿ, ಆ ಬಗ್ಗೆ ಚಕಾರ ಎತ್ತಿರುವುದಿಲ್ಲ.

  ಹಠ ಹಿಡಿದ ದಿವ್ಯಾ

  ಹಠ ಹಿಡಿದ ದಿವ್ಯಾ

  ಇನ್ನು ಇತ್ತ ಬಾಲಾ ದಿವ್ಯಾಳನ್ನು ಹೇಗಾದರೂ ಮಾಡಿ ಹಳ್ಳಿಗೆ ಕರೆದುಕೊಂಡು ಹೋಗಬೇಕು ಎಂದು ಶತಪ್ರಯತ್ನ ಮಾಡುತ್ತಿರುತ್ತಾನೆ. ಆದರೆ, ದಿವ್ಯಾ ನಾನು ಬಂದರೆ ನಿನ್ನ ಬಂಗಲೆ ಮನೆಗೆ ಬರುವುದು. ಆ ಹಾಳು ಕೊಂಪೆಯಂತಿರುವ ಹಳ್ಳಿಗೆ ಬರುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳುತ್ತಾಳೆ. ಅದಕ್ಕೆ ಬಾಲ ನನಗಿಂತಲೂ ನಿನಗೆ ನನ್ನ ಆಸ್ತಿ, ಹಣದ ಮೇಲೇಯೇ ಪ್ರೀತಿ ಅಲ್ವಾ ಎಂದು ಪ್ರಶ್ನೆ ಮಾಡುತ್ತಾನೆ. ನಾವು ಹಳ್ಳಿಗೆ ಹೋಗಲೇಬೇಕು ಎಂದು ಹೇಳುತ್ತಾನೆ. ಆದರೆ, ದಿವ್ಯಾ ಮಾತ್ರ ತನ್ನ ಹಠವನ್ನು ಬಿಡುವುದಿಲ್ಲ. ಇವರಿಬ್ಬರೂ ಜಾಗ ಖಾಲಿ ಮಾಡುವುದರೊಳಗೆ ಸಾಲಗಾರ ಮನೆಗೆ ಬಂದು ಬಾಲನಿಗೆ ಚಳಿ ಬಿಡಿಸುತ್ತಾನಾ ಎಂಬುದೇ ಕುತೂಹಲವಾಗಿದೆ.

  English summary
  Sathya and Karthik both started loving eachother; Karthik shows extra love and care on sathya. Read on
  Monday, November 14, 2022, 19:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X