Don't Miss!
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Automobiles
ಭಾರತದಲ್ಲಿ ಮೊದಲ ಬಾರಿಗೆ 2.5 ಕೋಟಿ ಕಾರುಗಳ ಮಾರಾಟ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಕಂಪನಿ
- Sports
IND vs NZ: 2ನೇ ಟಿ20 ಪಂದ್ಯದಲ್ಲಿ ಕಳಪೆ ಪಿಚ್ ನಿರ್ಮಾಣ; ಲಕ್ನೋ ಪಿಚ್ ಕ್ಯುರೇಟರ್ ವಜಾ
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- News
ವಾರಕ್ಕೊಮ್ಮೆ ದೆಹಲಿಗೆ ಓಡುವ ಸಿಎಂಗೆ ಫ್ರೀಡಂ ಪಾರ್ಕ್ಗೆ ಬರುವ ತಾಳ್ಮೆ ಇಲ್ಲವೇ? ಕಾಂಗ್ರೆಸ್ ಪ್ರಶ್ನೆ
- Technology
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಾಳವಿಕಾ ಬಣ್ಣ ಬಯಲು ಮಾಡುತ್ತಾಳಾ ಸತ್ಯ..?
'ಸತ್ಯ' ಧಾರಾವಾಹಿಯಲ್ಲಿ ಮಾಳವಿಕಾ, ಕಾರ್ತಿಕ್‌ಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾಳೆ. ಬರೋಬ್ಬರಿ 50 ಲಕ್ಷ ರೂಪಾಯಿ ಹಣ ಕೊಡುವಂತೆ ಪೀಡಿಸುತ್ತಿದ್ದಾಳೆ. ಇದರಿಂದ ಕಾರ್ತಿಕ್ ಕುಗ್ಗಿ ಹೋಗಿದ್ದಾನೆ.
ಇತ್ತ ಸತ್ಯ, ಸೀತಾಗೆ ಸಮಾಧಾನ ಹೇಳುತ್ತಾಳೆ. ನಿಮ್ಮ ಮಗ ಯಾವ ತಪ್ಪನ್ನೂ ಮಾಡಿಲ್ಲ. ನೀವು ಅವರಿಗೆ ಸಮಾಧಾನ ಹೇಳಿ, ಸಪೋರ್ಟ್ ಮಾಡಿ ಎನ್ನುತ್ತಾಳೆ. ಸೀತಾಗೆ, ಸತ್ಯ ಮೇಲೆ ನಂಬಿಕೆ ಬರಲು ಶುರುವಾಗುತ್ತದೆ.
ಸಿರಿ
ಜಾಣ್ಮೆಗೆ
ಮೆಚ್ಚಿದ
ದತ್ತ!
ಸಿರಿಯ
ತಲೆಕೆಡಿಸಿದ
ದತ್ತನ
ವಿಚಿತ್ರ
ವರ್ತನೆ
ಇನ್ನು ದೇವಸ್ಥಾನದಲ್ಲಿ ಸೀತಾ ಮತ್ತು ಕಾರ್ತಿಕ್ ಬಗ್ಗೆ ಮಾತನಾಡಿದವರಿಗೆ ಹೋಗಿ ಸತ್ಯ, ಕ್ಲಾಸ್ ತೆಗೆದುಕೊಳ್ಳುತ್ತಾಳೆ. ಮೂವರಿಗೂ ಕಪಾಳಕ್ಕೆ ಹೊಡೆದು, ಇನ್ನೊಮ್ಮೆ ಹೀಗೆ ಮಾತನಾಡಬೇಡಿ ಎಂದು ಬುದ್ದಿ ಹೇಳಿ, ಬೈದು ಕಳಿಸುತ್ತಾಳೆ.

ಅಜ್ಜಿ ಬಳಿ ಸತ್ಯ ಹೇಳಿದ ದಿವ್ಯಾ
ಇತ್ತ ದಿವ್ಯಾಳ ಕಷ್ಟವನ್ನು ನೋಡಲಾಗದೇ ಗಿರಿಜಮ್ಮ, ಅವಳ ಸಮಸ್ಯೆಯನ್ನು ಕೇಳಲು ಬರುತ್ತಾಳೆ. ದಿವ್ಯಾ ಯಾರು ನೀವು ಎಂದು ಕೇಳಿದ್ದಕ್ಕೆ, ನಿಮ್ಮ ಅಜ್ಜಿ ನಾನು ಎಂದು ಕೂಲಿಂಗ್ ಗ್ಲಾಸ್ ಅನ್ನು ತೆಗೆಯುತ್ತಾಳೆ. ಆಗ ದಿವ್ಯಾಗೆ ಶಾಕ್ ಆಗುತ್ತದೆ. ಗಿರಿಜಮ್ಮ ಇದೇನಿದು ನಿನ್ನ ಪರಿಸ್ಥಿತಿ ಎಂದು ಕೇಳುತ್ತಾರೆ. ಆಗ ದಿವ್ಯಾ ನಡೆದ ಘಟನೆ ಬಗ್ಗೆ ಎಲ್ಲಾ ಹೇಳುತ್ತಾಳೆ. ಆದರೆ, ದಿವ್ಯಾ ಮಾತಿನ ಮೇಲೆ ಅಜ್ಜಿಗೆ ನಂಬಿಕೆ ಬರುವುದಿಲ್ಲ. ಬಾಲ ನಿಜಕ್ಕೂ ಕಷ್ಟದ ಪರಿಸ್ಥಿತಿಯಲ್ಲಿದ್ದಾನಾ? ಇಲ್ಲವೇ ಅವನು ಇರುವುದೇ ಇಲ್ಲಾ ಎಂಬ ಅನುಮಾನ ಅಜ್ಜಿಗೆ ಬರುತ್ತದೆ. ಈ ಅನುಮಾನದಿಂದ ಪಾರಾಗಲು ಅಜ್ಜಿ ಪ್ಲ್ಯಾನ್ ಒಂದನ್ನು ಮಾಡುತ್ತಾರೆ.

ಜಗನ್ನಾಥನ ಕೈಗೆ ಸಿಕ್ಕ ಬಾಲ
ಮೊಮ್ಮೊಗಳ ಸಹಾಯಕ್ಕೆ ನಿಲ್ಲುವ ಅಜ್ಜಿ, ಬಾಲ ಅವರಿಗೆ ಕೊಟ್ಟ ನೆಕ್ಲೇಸ್‌ಗಳು ಒರಿನಲ್ ಗೋಲ್ಡಾ, ಇಲ್ಲ ಡುಪ್ಲಿಕೇಟಾ ಎಂದು ಚೆಕ್ ಮಾಡುವಂತೆ ಜಾನಕಿಗೆ ಹೇಳುತ್ತಾಳೆ. ಜಾನಕಿ ಚೆಕ್ ಮಾಡಿಕೊಂಡು ಬಂದು ಅದೆಲ್ಲ ನಿಜವಾದ ಚಿನ್ನ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿದ ಗಿರಿಜಮ್ಮ, ಬಾಲ ಹೇಳುತ್ತಿರುವುದು ನಿಜವಿರಬೇಕು. ನೋಡೋಣ ನೀನು ಆರಾಮವಾಗಿರುವ ಎಂದು ಹೇಳುತ್ತಾಳೆ. ಇತ್ತ ಜಗನ್ನಾಥ, ಬಾಲನಿಗೆ ಪದೇ ಪದೇ ಕಾಲ್ ಮಾಡುತ್ತಿರುತ್ತಾನೆ. ಚೆಕ್ ವಿಚಾರವಾಗಿ ಕಾಲ್ ಮಾಡಿದಾಗ ಬಾಲ ಇವರು ನನ್ನನ್ನು ಈಗಲೇ ಬಿಡುವುದಿಲ್ಲ ಎಂದು ಹೇಳಿ ಬೇರೆ ಐಡಿಯಾ ಕೊಡುತ್ತಾನೆ.

ಕಾರ್ತಿಕ್ ಹಿಂದೆ ಬಿದ್ದ ಸತ್ಯ
ಕಾರ್ತಿಕ್, ಮಾಳವಿಕಾಳಿಗೆ ಹಣ ಕೊಡಲು ಸ್ನೇಹಿತರ ಬಳಿ ಕೇಳಿರುತ್ತಾನೆ. ಒಬ್ಬನೇ ಈ ವಿಚಾರವಾಗಿ ಒದ್ದಾಡುತ್ತಿರುತ್ತಾನೆ. ಸತ್ಯ ಈ ಬಗ್ಗೆ ರಾಕಿ ಬಳಿ ಹೇಳಿಕೊಳ್ಳುತ್ತಾಳೆ. ಆಗ ರಾಕಿ ಇದೆಲ್ಲಾ ಬೇಕಂತಲೇ ಮಾಡುತ್ತಾರೆ. ಇವರೆ ಫೇಕ್. ಹಣ ಕ್ಕಾಗಿ ದೊಡ್ಡ ದೊಡ್ಡವರನ್ನು ಖಾಡುತ್ತಾರೆ. ಹನಿಟ್ರ್ಯಾಪ್ ಇರಬಹುದು ಎಂದು ಹೇಳುತ್ತಾನೆ. ಆಗ ಸತ್ಯ, ಕಾರ್ತಿಕ್ ಬಳಿ ಹೋಗಿ ಆಕೆ ಹಣ ಕೇಳಿದ್ದಾಳಾ..? ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾಳಾ ಎಂದು ವಿಚಾರಿಸುತ್ತಾಳೆ. ಆದರೆ ಕಾರ್ತಿಕ್ ಯಾವುದೇ ಸತ್ಯವನ್ನು ಹೇಳುವುದಿಲ್ಲ. ಸತ್ಯ ಕಾರ್ತಿಕ್ ಹಿಂದೆ ಬೀಳುತ್ತಾಳೆ.

ಮಾಳವಿಕಾ ಬಣ್ಣ ಬಯಲಾಯ್ತಾ..?
ಕಾರ್ತಿಕ್‌ನನ್ನು ಗಮನಿಸುವ ಮಾಡುವ ಸತ್ಯಗೆ ಇದು ಹನಿಟ್ರ್ಯಾಪ್ ಎಂಬುದು ಗೊತ್ತಾಗುತ್ತದೆ. ಅಷ್ಟೇ ಅಲ್ಲದೇ, ರಾಕಿ ಕೂಡ ಮಾಳವಿಕಾ ಫ್ರಾಡ್ ಎಂಬುದನ್ನು ಪತ್ತೆ ಹಚ್ಚುತ್ತಾನೆ. ಮಂಜು, ಸತ್ಯ ಬಳಿ ಕಾರ್ತಿಕ್ ಹಣಕ್ಕಾಗಿ ಪರದಾಡುತ್ತಿರುವ ಸತ್ಯವನ್ನು ಹೇಳುತ್ತಾನೆ. ಆಗ ಸತ್ಯ ಹೇಗಾದರೂ ಕಾರ್ತಿಕ್‌ನನ್ನು ಮಾಳವಿಕಾಳಿಂದ ಬಚಾವ್ ಮಾಡಬೇಕು ಎಂದು ಪಣ ತೊಡುತ್ತಾಳೆ.