For Quick Alerts
  ALLOW NOTIFICATIONS  
  For Daily Alerts

  ರಾಖಿ ಆತಂಕಕ್ಕೆ ತುಪ್ಪ ಸುರಿದ ರಿತು ಸ್ನೇಹಿತೆ: ಮುಂದೇನಾಗಬಹುದು..?

  By ಪ್ರಿಯಾ ದೊರೆ
  |

  'ಸತ್ಯ' ಧಾರಾವಾಹಿಯಲ್ಲಿ ರಾಖಿ ರಿಜೆಕ್ಟ್ ಮಾಡಿದಾಗಿನಿಂದಲೂ ರಿತು ತಲೆಕೆಡಿಸಿಕೊಂಡಿದ್ದಾಳೆ. ರಾಖಿಯನ್ನು ಬಿಟ್ಟಿರಲು ಸಾಧ್ಯವಿಲ್ಲ ಎಂಬಂತೆ ಒದ್ದಾಡುತ್ತಿದ್ದಾಳೆ. ಹೀಗಾಗಿ ರಿತು ಅವಳ ಸ್ನೇಹಿತೆಯ ಜೊತೆ ಮಾತನಾಡುವಾಗ ತನ್ನ ನೋವನ್ನು ತೋಡಿಕೊಂಡಿದ್ದಾಳೆ.

  ಜಾನಕಿ ಮತ್ತು ಗಿರಿಜಮ್ಮ ಇಬ್ಬರೂ ಸತ್ಯ-ಕಾರ್ತಿಕ್ ಗೆ ಮದುವೆಯಾದಾಗಿನಿಂದಲೂ ಏನೂ ಕೊಟ್ಟಿಲ್ಲ ಎಂದು ಚೀಟಿ ಹಣವನ್ನು ತಂದಿದ್ದಾರೆ. ಮಗಳು-ಅಳಿಯನಿಗೆ ಉಂಗುರ ಮಾಡಿಸಬೇಕು ಎಂದು ಆಸೆ ಪಟ್ಟಿದ್ದಾರೆ.

  ರಮ್ಯಾ ಕರುಣಾಕರ ಹೇಳಿದ ಸಂಪಿಗೆಪುರದ ಬಂಗಲೆಯ ಆ ರಹಸ್ಯವೇನು..?ರಮ್ಯಾ ಕರುಣಾಕರ ಹೇಳಿದ ಸಂಪಿಗೆಪುರದ ಬಂಗಲೆಯ ಆ ರಹಸ್ಯವೇನು..?

  ಸೀತಾ, ಸತ್ಯಗೋಸ್ಕರ ತೈಲವನ್ನು ತಂದುಕೊಟ್ಟಿದ್ದಾಳೆ. ಗಾಯ ಬೇಗ ವಾಸಿಯಾಗಲು ಔಷಧಿ ಕೊಟ್ಟಿದ್ದಾಳೆ. ಇನ್ನು ಸತ್ಯ ಊಟ ಮಾಡಿಲ್ಲ ಎಂದು ಹಾಲನ್ನು ತಂದು ಕಾರ್ತಿಕ್‌ಗೆ ಕುಡಿಸಲು ಹೇಳಿದ್ದಾಳೆ. ಇದರಿಂದ ಸತ್ಯ ಖುಷಿಯಾಗಿದ್ದಾಳೆ.

  ಕಾರ್ತಿಕ್ ಪ್ರೀತಿಗೆ ಸತ್ಯ ಫಿದಾ

  ಕಾರ್ತಿಕ್ ಪ್ರೀತಿಗೆ ಸತ್ಯ ಫಿದಾ

  ಈಗಾಗಲೇ ಕೀರ್ತನಾ ಮಾಡಿದ ಕೆಲಸದಿಂದ ಸತ್ಯಗೆ ವರವಾಗಿದೆ. ಕಾರ್ತಿಕ್, ಸತ್ಯಳನ್ನು ಹೆಚ್ಚೆಚ್ಚು ಕೇರ್ ಮಾಡುತ್ತಿದ್ದಾನೆ. ಇನ್ನು ಕಾರ್ತಿಕ್, ಸತ್ಯಳನ್ನು ತನ್ನ ಬೆಡ್ ಮೇಲೆಯೇ ಮಲಗಲು ಹೇಳಿದ್ದಾನೆ. ಇದರಿಂದ ಸತ್ಯಗೆ ಕಾರ್ತಿಕ್ ತನ್ನ ಮೇಲೆ ಪ್ರೀತಿ, ಕಾಳಜಿಯನ್ನು ಅರ್ಥ ಮಾಡಿಕೊಂಡು, ಅಮುಲ್ ಬೇಬಿ ತನ್ನ ಜೊತೆಗಿರುವುದಕ್ಕೆ ಮನದೊಳಗೆ ಸಂತಸ ಪಡುತ್ತಿದ್ದಾಳೆ. ಸತ್ಯ ಕೈಗೆ ಗಾಯವಾಗಿರುವುದಕ್ಕೆ ಯಾವ ಕೆಲಸ ಮಾಡುವುದಕ್ಕೂ ಬಿಡುತ್ತಿಲ್ಲ.

  ಮತ್ತೊಂದು ಪ್ಲ್ಯಾನ್ ಮಾಡಿದ ಕೀರ್ತನಾ

  ಮತ್ತೊಂದು ಪ್ಲ್ಯಾನ್ ಮಾಡಿದ ಕೀರ್ತನಾ

  ಸುಹಾಸ್ ಈಗ ಮನೆಯವರಿಂದ ನಿಷ್ಠುರಕ್ಕೆ ಒಳಗಾಗಿದ್ದಾನೆ. ಹಾಗಾಗಿ ಸುಹಾಸ್ ಮನೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಅವನು ಮನೆ ಒರೆಸುತ್ತಿರುವುದನ್ನು ನೋಡಿ ಕೀರ್ತನಾ ಶಾಕ್ ಆಗಿದ್ದಾಳೆ. ಯಾಕೆ ಮನೆ ಕೆಲಸ ಮಾಡುತ್ತಿದ್ದೀಯಾ ಎಂದು ಕೇಳಿದ್ದಕ್ಕೆ, ಮಾವನವರ ಪ್ರೀತಿ ಗಳಿಸಲು. ಇಲ್ಲಾ ಅಂದ್ರೆ ಕಷ್ಟ ಆಗುತ್ತೆ ಎಂದು ಹೇಳುತ್ತಾನೆ. ಅದಕ್ಕೆ ಕೀರ್ತನಾ ಬೈಯುತ್ತಾಳೆ. ನೀನು ಹೀಗೆ ಮಾಡಿದರೆ, ಮನೆಯವರ ಎದುರು ನಾವಿನ್ನೂ ಚೀಪ್ ಆಗುತ್ತೀವಿ. ನಾನೀಗ ಆ ಸತ್ಯಗೆ ಗತಿ ಕಾಣಿಸೋಕೆ ಹೊಸ ಪ್ಲ್ಯಾನ್ ಮಾಡಿದ್ದೀನಿ ಎಂದು ಹೇಳುತ್ತಾಳೆ. ಮತ್ತೇನು ಮಾಡುವುದಕ್ಕೆ ಹೋಗಿ ಕೀರ್ತನಾ ಇನ್ನೇನು ಎಡವಟ್ಟು ಮಾಡಿಕೊಳ್ಳುತ್ತಾಳೋ.

  ಜಾನಕಿ ಇಟ್ಟ ಹಣ ಕಳ್ಳತನ

  ಜಾನಕಿ ಇಟ್ಟ ಹಣ ಕಳ್ಳತನ

  ಜಾನಕಿ ಮತ್ತು ಗಿರಿಜಮ್ಮ ಇಬ್ಬರು ಸತ್ಯ ಮತ್ತು ಕಾರ್ತಿಕ್‌ಗೆ ಉಂಗುರ ಮಾಡಿಸಲು ಆಸೆ ಪಟ್ಟಿದ್ದಾರೆ. ಆದರೆ, ಅಕ್ಕಿ ಡಬ್ಬಿಯಲ್ಲಿ ಇಟ್ಟಿದ್ದ ಹಣವೇ ಮಂಗಮಾಯವಾಗಿದೆ. ಇದೇ ಟೆಂಷನ್ ನಲ್ಲಿ ಇಬ್ಬರೂ ತಲೆ ಮೇಲೆ ಕೈ ಹೊತ್ತು ಕೂತಿರುವಾಗಲೇ, ಜಗನ್ನಾಥ ಬಟ್ಟೆ ಖರೀದಿಸಿಕೊಂಡು ಬಂದಿದ್ದಾನೆ. ಏನಿದೆಲ್ಲಾ ಎಂದು ಕೇಳಿದ್ದಕ್ಕೆ, ಮನೆಗೆ ಹಬ್ಬಕ್ಕೆಂದು ಬಂದಿರುವ ಮಗಳು-ಅಳಿಯನಿಗಾಗಿ ಬಟ್ಟೆ ತಂದೆ. ನೀವು ತಂದಿಟ್ಟ ಚೀಟಿ ದುಡ್ಡಲ್ಲಿ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿ ಇಬ್ಬರೂ ಶಾಕ್ ಆಗುತ್ತಾರೆ.

  ರಿತು ನಿರ್ಧಾರದಿಂದ ಎಡವಟ್ಟಾಗುತ್ತಾ..?

  ರಿತು ನಿರ್ಧಾರದಿಂದ ಎಡವಟ್ಟಾಗುತ್ತಾ..?

  ರಿತು ತನ್ನ ಸ್ನೇಹಿತೆ ಶ್ರಾವ್ಯ ರಾಜಾಹುಲಿಗೆ ಏರಿಯಾಗೆ ಹೋಗೋಣ ಎಂದರೂ ರಿತು ಕೇಳುತ್ತಿಲ್ಲ. ತನಗೆ ಫೋನ್, ಮೆಸೇಜ್ ಮಾಡುತ್ತಿಲ್ಲ ಎಂದು ಹಗಲು-ರಾತ್ರಿ ಶ್ರಾವ್ಯಳಿಗೆ ಹಿಂಸೆ ಕೊಡುತ್ತಿದ್ದಾಳೆ. ಆದರೆ ರಾಖಿಗೆ ರಾತ್ರಿ ಎರಡು ಬಾರಿ ಫೋನ್ ಮಾಡಿದ್ದಾಳೆ. ಮಿಸ್ ಕಾಲ್ ನೋಡಿದ ರಿತು ಫುಲ್ ಖುಷಿಯಾಗಿದ್ದಾಳೆ. ಇನ್ನು ಆಕೆಯ ಸ್ನೇಹಿತೆ ರಾಖಿಯನ್ನು ಕಾಡಿಸುವಂತೆ ಸಲಹೆ ಕೊಟ್ಟಿದ್ದಾಳೆ. ಹುಡುಗರಿಗೆ ನಾವು ಸಲುಗೆ ಕೊಟ್ಟಷ್ಟು ಜಂಭ ಜಾಸ್ತಿ, ಸ್ವಲ್ಪ ಆಟವಾಡಿಸು ಆಗ ಅವನೇ ದಾರಿಗೆ ಬರುತ್ತಾನೆ ಎಂದು ಹೇಳಿದ್ದಾಳೆ. ಹೀಗಾಗಿ ರಿತು ಈಗ ರಾಖಿ ಫೀಲಿಂಗ್ಸ್ ಜೊತೆಗೆ ಆಟವಾಡುತ್ತಿದ್ದಾಳೆ. ಇದರಿಂದ ಅನಾಹುತವಾಗುವುದಂತೂ ನಿಜ.

  English summary
  sathya serial 16th november Episode Written Update. rakhi worried about rithu. So he called but rithu and shravya is playin g with rakhi’s feeling.
  Wednesday, November 16, 2022, 17:33
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X