For Quick Alerts
  ALLOW NOTIFICATIONS  
  For Daily Alerts

  ದಿವ್ಯಾಳನ್ನು ಕರೆದುಕೊಂಡು ಹೋಗಲು ಬಾಲ ಮಾಡಿದ ಹೊಸ ಪ್ಲಾನ್ ಸಕ್ಸಸ್ ಆಗುತ್ತಾ?

  By ಪ್ರಿಯಾ ದೊರೆ
  |

  ಸತ್ಯ ಧಾರಾವಾಹಿಯಲ್ಲಿ ಕಾರ್ತಿಕ್ ಸತ್ಯಳನ್ನು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾನೆ. ಆಕೆಯ ಗಾಯಕ್ಕೆ ಏನೂ ಆಗದಂತೆ. ಸತ್ಯ ಬೇಗ ಹುಷಾರಾಗಲಿ ಎಂದು ತುಂಬಾನೇ ಕಾಳಜಿ ವಹಿಸುತ್ತಿದ್ದಾನೆ.

  ಸಂಧಿಗ್ಧ ಪರೀಸ್ಥಿತಿಯಲ್ಲಿ ಬಾಲ ಸಿಲುಕಿದ್ದಾನೆ. ಬಾಲನಿಗೆ ಈಗ ಸಾಲಗಾರನ ಕೈಯಲ್ಲಿ ಸಿಕ್ಕಿ ಹಾಕಿಕೊಳ್ಳುವ ಮುನ್ನ ಹೇಗಾದರೂ ಮಾಡಿ ಜಾಗ ಖಾಲಿ ಮಾಡಬೇಕು ಎಂದು ಕೊಂಡಿದ್ದಾನೆ. ಆದರೆ ಇದಕ್ಕೆ ದಿವ್ಯಾ ಒಪ್ಪುತ್ತಿಲ್ಲ.

  KGF ಚಾಪ್ಟರ್ - 2 ಮೀರಿಸಿದ 'ಕಾಂತಾರ': ಅಚ್ಚರಿ ಅನಿಸಿದರೂ ಇದೇ ಸತ್ಯ! KGF ಚಾಪ್ಟರ್ - 2 ಮೀರಿಸಿದ 'ಕಾಂತಾರ': ಅಚ್ಚರಿ ಅನಿಸಿದರೂ ಇದೇ ಸತ್ಯ!

  ದಿವ್ಯಾಗೆ ಲಕ್ಸುರಿ ಲೈಫ್ ಲೀಡ್ ಮಾಡುವ ಆಸೆ. ಆದರೆ, ಆಕೆ ಮದುವೆಯಾಗಿರುವುದು ಏನೂ ಇಲ್ಲದ ಬಾಲನನ್ನು. ಬಾಲ ಸುಳ್ಳು ಹೇಳಿ ದಿವ್ಯಾಳನ್ನು ಮದುವೆಯಾಗಿದ್ದಾನೆ. ದಿವ್ಯಾ ಸದ್ಯ ಅರಮನೆಗೆ ಹೋಗಬೇಕು ಎಂದು ಹಠ ಹಿಡಿದಿದ್ದಾಳೆ.

  ಗಿರಿಜಮ್ಮನ ಕಾಲು ಹಿಡಿದ ಬಾಲ

  ಗಿರಿಜಮ್ಮನ ಕಾಲು ಹಿಡಿದ ಬಾಲ

  ಬಾಲ ಎಷ್ಟು ಹೇಳಿದರೂ ದಿವ್ಯಾ ಹಳ್ಳಿಗೆ ವಾಪಸ್ ಬರಲು ಒಪ್ಪುತ್ತಿಲ್ಲ. ಹಾಗಾಗಿ ಬಾಲ ಬೇರೆ ದಾರಿ ಇಲ್ಲದೇ, ಗಿರಿಜಮ್ಮನ ಮೊರೆ ಹೋಗಿದ್ದಾನೆ. ಗಿರಿಜಮ್ಮನ ಕಾಲು ಹಿಡಿದ ಬಾಲ, ಸಹಾಯ ಮಾಡುವಂತೆ ಕೇಳಿಕೊಂಡಿದ್ದಾನೆ. ಬಾಲ ವ್ಯಕ್ತಿಯೊಬ್ಬನ ಕೈಯಲ್ಲಿ ಒದೆ ತಿಂದಿದ್ದನ್ನು ನೋಡಿರುವ ಗಿರಿಜಮ್ಮ ದುಡ್ಡಿನ ಸಹಾಯ ಕೇಳಬಹುದು ಎಂದು ಅಂದುಕೊಳ್ಳುತ್ತಾಳೆ. ಆದರೆ, ಬಾಲ ಗಿರಿಜಮ್ಮನನ್ನು ತನಗೆ ಅರ್ಜೆಂಟ್ ಕೆಲಸವಿದೆ. ಹಾಗಾಗಿ ದುಬೈಗೆ ಹೋಗಬೇಕು. ಇದಕ್ಕೆ ಒಪ್ಪಿಗೆ ಕೊಡಿ ಎಂದು ಕೇಳುತ್ತಾನೆ. ಗಿರಿಜಮ್ಮ ಧಾರಾಳವಾಗಿ ಹೊರಡಿ ಎನ್ನುತ್ತಾಳೆ. ಆದರೆ ಬಾಲ ನಾನಷ್ಟೇ ಅಲ್ಲ, ನನ್ನ ಜೊತೆಗೆ ದಿವ್ಯಾಳನ್ನು ಕಳಿಸಿಕೊಡಿ. ಅವಳು ನನ್ನ ಜೊತೆಗೆ ಬರುವುದಕ್ಕೆ ಒಪ್ಪುತ್ತಿಲ್ಲ. ನೀವೇ ಅವಳನ್ನು ಒಪ್ಪಿಸಿ ನನ್ನ ಜೊತೆಗೆ ದಿವ್ಯಾಳನ್ನು ಕಳಿಸಿಕೊಡಿ. ಇದು ನನ್ನ ಬದುಕಿನ ಅಳಿವು-ಉಳಿವಿನ ಪ್ರಶ್ನೆ. ಈಗ ನಾನು ಹೋಗದಿದ್ದರೆ, ನನ್ನ ಅದೃಷ್ಟ ಕೈ ತಪ್ಪಿ ಹೋಗುತ್ತದೆ ಎಂದೆಲ್ಲಾ ಹೇಳುತ್ತಾನೆ. ಗಿರಿಜಮ್ಮ ಇದಕ್ಕೆ ಓಕೆ ಅನ್ನುತ್ತಾಳೆ.

  ಕಾರ್ತಿಕ್ ಗೆ ಬೈದ ಸೀತಾ

  ಕಾರ್ತಿಕ್ ಗೆ ಬೈದ ಸೀತಾ

  ಸತ್ಯ ಊರ್ಮಿಳಾ ಬಳಿ ತನ್ನನ್ನು ಸೀತಮ್ಮ ಕಾಳಜಿಯಿಂದ ನೋಡಿಕೊಂಡಿದ್ದು. ತೈಲ ತಂದು ಕೊಟ್ಟಿದ್ದು. ಹಾಗೆ ಹಾಲು ಕುಡಿಯಲು ಹೇಳಿದ್ದನ್ನು ಹೇಳಿಕೊಂಡು ಖುಷಿ ಪಡುತ್ತಿರುತ್ತಾಳೆ. ನಂತರ ಕಾರ್ತಿಕ್ ಕೂಡ ತನ್ನ ಬಗ್ಗೆ ಎಷ್ಟು ಕಾಳಜಿ ತೋರುತ್ತಿದ್ದಾನೆ ಎಂಬುದನ್ನು ಕೂಡ ಹೇಳುತ್ತಾಳೆ. ಇದೇ ವೇಳೆಗೆ ಕಾರ್ತಿಕ್ ಬಂದಾಗ ಊರ್ಮಿಳಾ ಆತನನ್ನು ಏನು ಹೆಂಡತಿ ಮೇಲೆ ಅಷ್ಟು ಕಾಳಜಿ ತೋರುತ್ತಿದ್ದೀಯಾ ಎಂದು ಕೇಳುವಾಗಲೇ ಸೀತಾ ಬರುತ್ತಾಳೆ. ಬಂದು ಗಾಯಕ್ಕೆ ತೈಲ ಹಚ್ಚದಿರುವುದಕ್ಕೆ ಕಾರ್ತಿಕ್ ಗೂ ಸತ್ಯಾಳಿಗೂ ಬೈಯುತ್ತಾಳೆ. ಜ್ಯೂಸ್ ತರಲು ಹೇಳಿ ಅದನ್ನು ಸತ್ಯಗೆ ಕುಡಿಯಲು ಹೇಳುತ್ತಾಳೆ.

  ಇಲ್ಲೇ ಇರುತ್ತೀನಿ ಎನ್ನುತ್ತಿರುವ ದಿವ್ಯಾ

  ಇಲ್ಲೇ ಇರುತ್ತೀನಿ ಎನ್ನುತ್ತಿರುವ ದಿವ್ಯಾ

  ಗಿರಿಜಮ್ಮ ದಿವ್ಯಾಳನ್ನು ಬಾಲನ ಜೊತೆಗೆ ಹೋಗುವಂತೆ ಹೇಳುತ್ತಾಳೆ. ಗಂಡನ ಮನೆಯಲ್ಲಿ ಇರುವುದೇ ಸರಿ. ತವರು ಮನೆಯಲ್ಲಿ ಹೆಚ್ಚು ದಿನವಿದ್ದರೆ ಮರಿಯಾದೆ ಇರುವುದಿಲ್ಲ ಎಂದು ಹೇಳುತ್ತಾಳೆ. ಆದರೆ, ದಿವ್ಯಾ ನಾನು ಆ ಕೊಂಪೆಗೆ ಹೋಗುವುದಿಲ್ಲ ಎಂದು ಬಾಯಿ ತಪ್ಪಿ ಹೇಳುತ್ತಾಳೆ. ಇದಕ್ಕೆ ಗಿರಿಜಮ್ಮ ದಿವ್ಯಾಳನ್ನು ಹಾಗಾದರೆ ನೀನು ದೊಡ್ಡ ಮನೆಯಲ್ಲಿ ಇಲ್ವಾ ಎಂದು ಮರು ಪ್ರಶ್ನೆ ಮಾಡುತ್ತಾಳೆ. ದಿವ್ಯಾ ಗಿರಿಜಮ್ಮನನ್ನು ಯಾಮಾರಿಸಲು ಮುಂದಾಗುತ್ತಾಳೆ.

  ಆತುರದಲ್ಲಿ ಎಲ್ಲಾ ಸತ್ಯವನ್ನು ಹೇಳುತ್ತಾಳಾ ದಿವ್ಯಾ?

  ಆತುರದಲ್ಲಿ ಎಲ್ಲಾ ಸತ್ಯವನ್ನು ಹೇಳುತ್ತಾಳಾ ದಿವ್ಯಾ?

  ಆದರೂ ಗಿರಿಜಮ್ಮ ಎಡಬಿಡದೆ ದಿವ್ಯಾಗೆ ನೀನು ಬಾಲನ ಜೊತೆಗೆ ಹೋಗಲೇ ಬೇಕು. ಇಲ್ಲಿರುವುದು ಸರಿಯಲ್ಲ. ನಿನಗೆ ಅಲ್ಲಿ ಆಳು-ಕಾಳುಗಳಿದ್ದಾರೆ. ಪ್ರೀತಿಸುವ ಅತ್ತೆ-ಮಾವ ಇದ್ದಾರೆ ಎಂದು ಹೇಳುತ್ತಾಳೆ. ದಿವ್ಯಾ ತನ್ನ ಹಠವನ್ನು ಬಿಡುವುದಿಲ್ಲ. ಗಿರಿಜಮ್ಮನ ಮೇಲೆ ಕೂಗಾಡುತ್ತಾಳೆ. ಆಗ ಜಾನಕಿ ಬಂದು ದಿವ್ಯಾಗೆ ಬೈಯುತ್ತಾಳೆ. ಇವರಿಬ್ಬರ ಬಲವಂತದಲ್ಲಿ ಸಿಲುಕಿರುವ ದಿವ್ಯಾ ಆತುರದಲ್ಲಿ ಸತ್ಯವನ್ನು ಹೇಳಿ ಬಿಡುತ್ತಾಳಾ..?

  English summary
  Bala is trying get Divya back to his village but she is not ready to do it. Read on
  Friday, November 18, 2022, 19:29
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X