For Quick Alerts
  ALLOW NOTIFICATIONS  
  For Daily Alerts

  ಜಾನಕಿ-ಗಿರಜಮ್ಮನ ಖುಷಿಗೆ ಕಾರಣವಾಗಿದ್ದು ಸತ್ಯಳಲ್ಲಿನ ಬದಲಾವಣೆ: ಕೊನೆಗೂ ಮನೆಗೆ ಬಂದಾಯ್ತು ಬಾಲ!

  By ಪ್ರಿಯಾ ದೊರೆ
  |

  ಸತ್ಯ ಧಾರಾವಾಹಿಯಲ್ಲಿ ದಿವ್ಯಾ ಅಮ್ಮನ ಮನೆಗೆ ವಾಪಸ್ ಬಂದಿದ್ದು, ಇದೇ ಸಂದರ್ಭದಲ್ಲಿ ಸತ್ಯ ಹಾಗೂ ಕಾರ್ತಿಕ್ ಕೂಡ ತವರು ಮನೆಗೆ ಬಂದಿದ್ದಾರೆ. ದಿವ್ಯಾಗೆ ಕಾರ್ತಿಕ್ ಹಾಗೂ ಸತ್ಯಳನ್ನು ಕಂಡು ಶಾಕ್ ಜೊತೆಗೆ ಹೊಟ್ಟೆಯೂ ಉರಿಯುತ್ತಿದೆ.

  ಆದರೆ, ಸತ್ಯ ದಿವ್ಯಾಳನ್ನು ಕಂಡು ಖುಷಿಯಾಗಿದ್ದಾಳೆ. ಅಲ್ಲದೇ, ದಿವ್ಯಾ ಮದುವೆಯಾಗಿರುವುದಕ್ಕೆ ಇನ್ನಷ್ಟು ಖುಷಿ ಪಟ್ಟಿದ್ದಾಳೆ. ಇದೇ ಸಂದರ್ಭದಲ್ಲಿ ದಿವ್ಯಾ ಹಾಗೂ ಸತ್ಯ ಮಾತನಾಡುವಾಗ, ದಿವ್ಯಾ ತನ್ನ ಪತಿ ಬಾಲ ಎಂದು ಹೇಳಿದ್ದಾಳೆ. ಈ ಮಾತನ್ನು ಕೇಳಿದ ಸತ್ಯ ಶಾಕ್ ಆಗಿದ್ದಾಳೆ.

  ಬಾಲ ಒಬ್ಬ ಫ್ರಾಡ್ ಅವನನ್ನು ನಂಬಿ ನೀನು ಮೋಸ ಹೋಗಿದ್ದೀಯಾ ಎಂದು ಸತ್ಯ ದಿವ್ಯಾಗೆ ಹೇಳಿದ್ದಾಳೆ. ಆದರೆ ದಿವ್ಯಾ ನೀನು ಅಂದುಕೊಂಡಿರುವುದು ತಪ್ಪು. ಬಾಲ ಸಾವಿರಾರು ರೂಪಾಯಿಯ ಕೋಟ್ಯಾಧಿಪತಿ. ಅವನು ಫಾರಿನ್ ರಿಟರ್ನ್ ಎಂದು ಹೇಳಿದ್ದಾಳೆ.

  ದಿವ್ಯಾ ಮಾತನ್ನು ಎತ್ತಿ ಆಡಿದ ಸತ್ಯ

  ದಿವ್ಯಾ ಮಾತನ್ನು ಎತ್ತಿ ಆಡಿದ ಸತ್ಯ

  ಅಷ್ಟೇ ಅಲ್ಲದೇ, ಬಾಲನ ಹೆಸರಲ್ಲಿ ಫಾರಿನ್ ನಲ್ಲಿ ದೊಡ್ಡ ಕಂಪನಿ ಇದೆ. ಬಟ್ ಅವನಿಗೆ ಸಿಂಪಲ್ ಆಗಿ ಬದುಕುವುದೇ ಇಷ್ಟ. ಬಾಲನ ಬಳಿ ಹಣವೂ ಇದೆ. ಜೊತೆಗೆ ಅವನು ರೊಮ್ಯಾಮಟಿಕ್ ಕೂಡ. ಕಾರ್ತಿಕ್ ಥರ ಅಲ್ಲ. ನಿನಗೂ ಅವನಿಗೂ ಜೋಡಿ ಚೆನ್ನಾಗಿದೆ. ಇಬ್ಬರೂ ಸೇರಿ ಮಠ ಕಟ್ಟಿಬಿಡಿ ಎಂದು ಹೀಯಾಳಿಸುತ್ತಾಳೆ. ಸತ್ಯ ರೂಮಿಗೆ ಹೋಗಿ ಇದೇ ವಿಚಾರವಾಗಿ ಕಾರ್ತಿಕ್ ಜೊತೆಗೆ ವಾದ ಮಾಡುತ್ತಾಳೆ. ನೀನು ರೊಮ್ಯಾಂಟಿಕ್ ಅಲ್ಲ. ಮಠ ಕಟ್ಟೋಕೆ ಸರಿ ಅಂತೆ ಎಂದು ಹೇಳುತ್ತಾಳೆ. ಆಗ ಕಾರ್ತಿಕ್ ಯಾರಿದೆಲ್ಲಾ ಹೇಳಿದ್ದು ಎಂದು ಕೇಳಿದ್ದಕ್ಕೆ, ನಿನ್ನ ಎಕ್ಸ್ ಗರ್ಲ್ ಫ್ರೆಂಡ್ ಎಂದು ಸತ್ಯ ಹೇಳುತ್ತಾಳೆ. ಆಗ ಕಾರ್ತಿಕ್ ಸ್ವಲ್ಪ ಬೇಸರ ಮಾಡಿಕೊಳ್ಳುತ್ತಾನೆ.

  ಮನೆ ಮುಂದೆ ರಂಗೋಲಿ ಬಿಡಿಸಿದ ಗೃಹಿಣಿ ಸತ್ಯ

  ಮನೆ ಮುಂದೆ ರಂಗೋಲಿ ಬಿಡಿಸಿದ ಗೃಹಿಣಿ ಸತ್ಯ

  ಇನ್ನು ಸತ್ಯ ಬೆಳಗ್ಗೆ ಎದ್ದು, ವಿಜಯದಶಮಿ ಎಂದು ಮನೆ ಮುಂದೆ ರಂಗೋಲಿ ಹಾಕುತ್ತಿರುತ್ತಾಳೆ. ಇದನ್ನು ಕಂಡ ಜಾನಕಿ ಖುಷಿಯಿಂದ ದೇವರಿಗೆ ಕೈ ಮುಗಿಯುತ್ತಾಳೆ. ಬಳಿಕ ಗಿರಿಜಮ್ಮನನ್ನು ಎಬ್ಬಿಸಿ ಸತ್ಯ ರಂಗೋಲಿ ಬಿಡಿಸುತ್ತಿರುವುದನ್ನು ತೋರಿಸುತ್ತಾಳೆ. ಗಿರಿಜಮ್ಮ ಸತ್ಯ ರಂಗೋಲಿ ಹಾಕಿ ದೇವರ ನಾಮ ಹಾಡುತ್ತಾ ದೇವರ ದೀಪ ಹಚ್ಚಲು ಮುಂದಾಗುತ್ತಾಳೆ. ಇದೆಲ್ಲವನ್ನೂ ಕಂಡು ಗಿರಿಜಮ್ಮ ಖುಷಿ ಪಡುವುದರ ಜೊತೆಗೆ ಹೇಗಿದ್ದ ಸತ್ಯ ಹೇಗಾದಳು ಎಂದು ನೆನೆಯುತ್ತಿರುತ್ತಾರೆ.

   ಅನುಮಾನ ಹೆಚ್ಚಿಸುತ್ತಿರುವ ದಿವ್ಯಾ ನಡವಳಿಕೆ

  ಅನುಮಾನ ಹೆಚ್ಚಿಸುತ್ತಿರುವ ದಿವ್ಯಾ ನಡವಳಿಕೆ

  ಅಷ್ಟರಲ್ಲಿ ದಿವ್ಯಾಳನ್ನು ಜಾನಕಿ ಬೈದು ಎಬ್ಬಿಸುತ್ತಾಳೆ. ದಿವ್ಯಾ ನಿದ್ದೆಗಣ್ಣಿನಲ್ಲೇ ಎದ್ದು ಚೊಂಬನ್ನು ಹಿಡಿದು ರೂಮಿನಿಂದ ಆಚೆ ಹೋಗುತ್ತಿರುತ್ತಾಳೆ. ಗಿರಿಜಮ್ಮ ಯಾಕೆ ಏನಾಯ್ತೇ ಎಂದು ಕೇಳಿದ್ದಕ್ಕೆ. ಈಗಲೇ ಲೇಟ್ ಆಯ್ತು. ಟಾಯ್ಲೆಟ್ ಗೆ ಎಷ್ಟು ಜನ ಕ್ಯೂನಲ್ಲಿದ್ದಾರೋ ಎಂದು ಮಾತನಾಡುತ್ತಿರುತ್ತಾಳೆ. ಈ ಮಾತನ್ನು ಕೇಳಿದ ಗಿರಿಜಮ್ಮ ಶಾಕ್ ಆಗುತ್ತಾಳೆ. ಎಚ್ಚರವಾದ ದಿವ್ಯಾ ಏನೋ ಒಂದು ಸುಳ್ಳು ಹೇಳಿ ಮ್ಯಾನೇಜ್ ಮಾಡಲು ಯತ್ನಿಸುತ್ತಾಳೆ. ಆದರೆ ಗಿರಿಜಮ್ಮ ದಿವ್ಯಾ ನಮ್ಮಿಂದ ಏನನ್ನೋ ಮುಚ್ಚಿಡುತ್ತಿದ್ದಾಳೆ. ಅವಳು ಸುಖವಾಗಿಲ್ಲ. ಮನೆಯಲ್ಲಿ ಜಗಳವಾಡಿಕೊಂಡು ಇಲ್ಲಿಗೆ ಬಂದಿರಬೇಕು ಎಂದು ಯೋಚಿಸುತ್ತಿರುತ್ತಾಳೆ.

   ಬಾಲನನ್ನು ಕಂಡು ಸತ್ಯ ಏನು ಮಾಡುತ್ತಾಳೆ..?

  ಬಾಲನನ್ನು ಕಂಡು ಸತ್ಯ ಏನು ಮಾಡುತ್ತಾಳೆ..?

  ಅಷ್ಟರಲ್ಲಿ ದಿವ್ಯಾ ಬಂದು ನನ್ನ ಬಗ್ಗೆ ಯೋಚಿಸುವುದನ್ನು ಬಿಡು. ನಿನ್ನ ಮೊಮ್ಮೊಗಳು ಸತ್ಯ ಬಗ್ಗೆ ಯೋಚಿಸು ಎಂದು ಹೇಳಿ ತನ್ನ ಬಗ್ಗೆ ಸುಖಾ ಸುಮ್ಮನೆ ಕೊಚ್ಚಿಕೊಳ್ಳುತ್ತಿರುತ್ತಾಳೆ. ಇದೇ ವೇಳೆಗೆ ಬರುವ ಬಾಲ ದಿವ್ಯಾಳನ್ನು ಎತ್ತಿಕೊಂಡು ಗಿರಿಜಮ್ಮನ ಮುಂದೆ ನಿಲ್ಲುತ್ತಾನೆ. ಕಾಲಿಡಿದು ನಮ್ಮನ್ನು ಕ್ಷಮಿಸಿ ಬಿಡಿ. ನಮ್ಮಿಂದಾದ ಅವಮಾನವನ್ನು ಮರೆತು ಬಿಡಿ ಎಂದು ಇಂಗ್ಲೀಷ್ ನಲ್ಲಿ ಏನೇನೋ ಹೇಳುತ್ತಾನೆ. ಆದರೆ, ಜಾನಕಿ ಮತ್ತು ಗಿರಿಜಮ್ಮನಿಗೆ ಬಾಲ ಯಾರೆಂಬುದೇ ತಿಳಿಯುವುದಿಲ್ಲ. ಮುಂದೆ ಸತ್ಯ ಬಾಲನನ್ನು ನೋಡಿ ಏನು ಮಾಡುತ್ತಾಳೋ..? ಅಷ್ಟೇ ಅಲ್ಲದೇ, ಬಾಲನ ಬಂಡವಾಳ ದಿವ್ಯಾಗೂ ಗೊತ್ತಾಗುತ್ತಾ..?

  English summary
  girijamma and janaki feels happy to see changes in sathya and at the same time bala enters home, but still he has not told about him.
  Monday, October 17, 2022, 20:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X