For Quick Alerts
  ALLOW NOTIFICATIONS  
  For Daily Alerts

  ಬಾಲ ಮನೆಯವರನ್ನು ಇಂಪ್ರೆಸ್ ಮಾಡುತ್ತಿದ್ದರೆ, ಜಾನಕಿ ಆತನನ್ನು ಅನುಮಾನಿಸಿದ್ದು ಯಾಕೆ?

  By ಪ್ರಿಯಾ ದೊರೆ
  |

  ಸತ್ಯ ಧಾರಾವಾಹಿಯಲ್ಲಿ ಊರ್ಮಿಳಾ ಸೀತಾ ಬಳಿ ಮಾತನಾಡುತ್ತಾ, ಸತ್ಯ ಮನೆಯಲ್ಲಿ ಇಲ್ಲದೇ ಇರುವುದು ತುಂಬಾ ಬೋರ್ ಆಗುತ್ತಿದೆ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿದ ಸೀತಾ ಕೋಪ ಮಾಡಿಕೊಳ್ಳುತ್ತಾಳೆ. ನಿನಗ್ಯಾಕೋ ಸತ್ಯ ಮೇಲೆ ತುಂಬಾ ಒಲವು ಮೂಡಿದಂತಿದೆ ಎಂದು ಹೇಳುತ್ತಾಳೆ.

  ಅದಕ್ಕೆ ಊರ್ಮಿಳಾ, ದಿನಾ ಸತ್ಯ ಇವತ್ತು ಏನು ತಿಂಡಿ ಮಾಡೋಣ ಚಿಕ್ಕತ್ತೆ, ಯಾರಿಗೆ ಏನ್ ಇಷ್ಟ, ಅತ್ತೆಗೆ ಹೇಗಿದ್ದರೆ ನಾನು ಅಂದ್ರೆ ಇಷ್ಟ ಆಗುತ್ತೆ ಅಂತೆಲ್ಲಾ ದಿನಾ ಪ್ರಶ್ನೆಗಳನ್ನ ಕೇಳುತ್ತಿರುತ್ತಾಳೆ. ಅವಳಿಗೆ ನೀವೇಂದರೆ ತುಂಬಾ ಗೌರವ. ನೀವೂ ಕೂಡ ಒಂದಲ್ಲಾ ಒಂದು ದಿನ ಸತ್ಯಾಳನ್ನ ಒಪ್ಪಿಕೊಳ್ಳುತ್ತೀರಾ ಎಂದು ಹೇಳುತ್ತಾಳೆ.

  ಬಹುದಿನಗಳ ಬಳಿಕ ಸತ್ಯ ದಿವ್ಯಾಳನ್ನು ನೋಡಿ ಮಾಡಿದ್ದೇನು ಗೊತ್ತಾ?ಬಹುದಿನಗಳ ಬಳಿಕ ಸತ್ಯ ದಿವ್ಯಾಳನ್ನು ನೋಡಿ ಮಾಡಿದ್ದೇನು ಗೊತ್ತಾ?

  ಇತ್ತ ರಿತು ರಾಕೇಶ್ ನನ್ನು ಪ್ರೀತಿಸುತ್ತಿದ್ದಾಳೆ. ಹಾಗಾಗಿ ಆಗಾಗ ರಾಕೇಶ್‌ಗೆ ಫೋನ್ ಮಾಡಿ ಕ್ವಾಟ್ಲೆ ಕೊಡುತ್ತಿರುತ್ತಾಳೆ. ಆದರೆ ಇದೆಲ್ಲಾ ರಾಕೇಶ್ ಗೆ ಇಷ್ಟವಿರುವುದಿಲ್ಲ. ರಿತು ಇಂದ ದೂರ ಇರಲು ರಾಕಿ ಪ್ರಯತ್ನಿಸುತ್ತಲೇ ಇರುತ್ತಾನೆ.

  ನೆಕ್ಲೆಸ್ ಕೊಟ್ಟು ನೈಸ್ ಮಾಡುತ್ತಾನಾ ಬಾಲ..?

  ನೆಕ್ಲೆಸ್ ಕೊಟ್ಟು ನೈಸ್ ಮಾಡುತ್ತಾನಾ ಬಾಲ..?

  ಸತ್ಯ ಮತ್ತು ಕಾರ್ತಿಕ್ ಮನೆಗೆ ವಾಪಸ್ ಆಗಿದ್ದಾರೆ. ಇದೇ ವೇಳೆಗೆ ಬಾಲ ಜಾನಕಿ ಮನೆಗೆ ಬಂದಿದ್ದಾನೆ. ಗಿರಿಜಮ್ಮನ ಕಾಲು ಹಿಡಿದು ವಟವಟ ಎಂದು ಮಾತನಾಡಿದ್ದಾನೆ. ಇದರಿಂದ ಗಿರಿಜಮ್ಮ ಮತ್ತು ಜಾನಕಿ ಶಾಕ್ ಆಗಿ ಯಾರು ಎಂದು ಕೇಳಿದ್ದಾರೆ. ಆಗ ಬಾಲ ಇನ್ನೂ ನಾನ್ಯಾರು ಅಂತ ಗೊತ್ತಾಗಲಿಲ್ವಾ.? ನಾನು ದಿವ್ಯಾ ಗಂಡ ಬಾಲ ಎಂದು ಹೇಳುತ್ತಾನೆ. ಬ್ಯಾಗ್ ನಿಂದ ಮೂರು ನೆಕ್ಲೇಸ್ ಸರಗಳನ್ನು ತೆಗೆದು ಮೂವರಿಗೂ ಕೊಡುತ್ತಾನೆ. ದಿವ್ಯಾಗೆ ಡೈಮೆಂಡ್ ನೆಕ್ಲೇಸ್ ಅನ್ನು ತೊಡಿಸುತ್ತಾನೆ. ಗಿರಿಜಮ್ಮ ಡೌಟ್ ಬಂದು ಇದು ರೋಲ್ಡ್ ಗೋಲ್ಡಾ ಎಂದು ಕೇಳುತ್ತಾರೆ. ಆಗ ಬಾಲ ಅಯ್ಯೋ ನಿಮಗೆ ಯಾಕೆ ರೋಲ್ಡ್ ಗೋಲ್ಡ್ ಕೊಡಿಸಲಿ, ಕಾರ್ ಕೊಡಿಸಬೇಕಿತ್ತು, ಆದರೆ ಈ ಗಲ್ಲಿಯಲ್ಲಿ ಕಾರನ್ನು ನಿಲ್ಲಿಸುವುದಕ್ಕೆ ಜಾಗವಿಲ್ಲ ಎಂದು ಹೇಳುತ್ತಾನೆ.

  ನಿನ್ನ ಸಂಸಾರವನ್ನು ನೆಟ್ಟಗೆ ಮಾಡಿಕೋ ಎಂದ ಸೀತಾ

  ನಿನ್ನ ಸಂಸಾರವನ್ನು ನೆಟ್ಟಗೆ ಮಾಡಿಕೋ ಎಂದ ಸೀತಾ

  ಇತ್ತ ಕಾರ್ತಿಕ್ ಮನೆಗೆ ಕುಡಿದು ಬಂದಿದ್ದಾನೆ ಎಂದು ಕೀರ್ತನಾ ಮತ್ತು ಸುಹಾಸ್ ಸೀತಾಗೆ ಹೇಳುತ್ತಾರೆ. ಇದರಿಂದ ಸೀತಾ ಬೇಸರ ಮಾಡಿಕೊಂಡಿರುತ್ತಾಳೆ. ಆದರೆ ಕಾರ್ತಿಕ್ ಬಂದು ತಾನು ಕುಡಿದಿಲ್ಲ ಎಂದು ಹೇಳೀದಾಗ ಸೀತಾ ಇದಕ್ಕೆಲ್ಲಾ ಸತ್ಯ ಕಾರಣ ಎಂದು ಬೈಯುತ್ತಾಳೆ. ಅದಕ್ಕೆ ಕಾರ್ತಿಕ್, ಇಲ್ಲಿ ನೀವು ತಪ್ಪು ತಿಳಿದಿದ್ದೀರಾ. ನಾನು ಸತ್ಯಳನ್ನ ಮದುವೆಯಾದೆ ಅಂತ ಕುಡಿಯುವುದನ್ನು ಕಲಿತಿದ್ದು ನಿಜ, ಆದರೆ ನಾನು ಆ ಅಭ್ಯಾಸವನ್ನು ಬಿಡುವುದಕ್ಕೆ ಕೂಡ ಅವಳೇ ಕಾರಣ ಎಂದು ಹೇಳಿ ಹೋಗುತ್ತಾನೆ. ಆಗ ಕೀರ್ತನಾ ಸತ್ಯ ಬಗ್ಗೆ ಇನ್ನಷ್ಟು ಚಾಡಿ ಹೇಳುತ್ತಾಳೆ. ಆದರೆ ಸೀತಾ ಕೀರ್ತನಾಗೆ ಬೈದು ಕಳಿಸುತ್ತಾಳೆ. ಮೊದಲು ನಿನ್ನ ಸಂಸಾರದ ಬಗ್ಗೆ ನೋಡಿಕೋ ಎಂದು ಹೇಳುತ್ತಾಳೆ.

  ಸತ್ಯ ಫ್ರೆಂಡ್ ಎಂದಿದ್ದ ಬಾಲ

  ಸತ್ಯ ಫ್ರೆಂಡ್ ಎಂದಿದ್ದ ಬಾಲ

  ಅಷ್ಟರಲ್ಲಿ ಜಾನಕಿ ನಿಮ್ಮನ್ನು ಎಲ್ಲೋ ನೋಡಿದ್ದೀನಿ ಎಂದು ಹೇಳುತ್ತಾರೆ. ದಿವ್ಯಾ ನೀವು ಬಾಲನನ್ನು ನೋಡಲು ಸಾಧ್ಯವೇ ಇಲ್ಲ. ಅವನು ಯಾವಾಗಲೂ ಫಾರಿನ್ ಟ್ರಿಪ್ ನಲ್ಲೇ ಬ್ಯುಸಿಯಾಗಿರುತ್ತಾನೆ ಎಂದು ಹೇಳುತ್ತಾಳೆ. ಆದರೆ ಜಾನಕಿ ಇಲ್ಲ ನಾನು ಬಾಲನನ್ನು ನಮ್ಮ ಮನೆಯಲ್ಲೇ ನೋಡಿದ್ದೀನಿ. ಒಂದು ದಿನ ಸತ್ಯ ಫ್ರೆಂಡ್ ಅಂತ ಹೇಳಿಕೊಂಡು ನಮ್ಮ ಮನೆಗೆ ಬಂದಿದ್ದಿರಿ ಅಲ್ವಾ ಎಂದು ಕೇಳುತ್ತಾಳೆ. ಈ ಮಾತನ್ನು ಕೇಳಿ ಬಾಲ ಮತ್ತು ದಿವ್ಯಾ ಇಬ್ಬರೂ ಶಾಕ್ ಆಗುತ್ತಾರೆ.

  ಕೀರ್ತನಾಗೆ ಸತ್ಯ ಗ್ರಹಚಾರ ಬಿಡಿಸುತ್ತಾಳಾ..?

  ಕೀರ್ತನಾಗೆ ಸತ್ಯ ಗ್ರಹಚಾರ ಬಿಡಿಸುತ್ತಾಳಾ..?

  ಕೀರ್ತನಾ ಮಹತಿ ಎಂಬುವರನ್ನು ಭೇಟಿಯಾಗುತ್ತಾಳೆ. ತನ್ನ ಹಣವನ್ನು ವಾಪಸ್ ಕೊಡುವುದಕ್ಕೆ ಹೇಳುತ್ತಾಳೆ. ಬಳಿಕ ತನ್ನ ತಾಯಿ ವಿರುದ್ಧವೇ ಏನೋ ಮಾಡಲು ಹೇಳುತ್ತಾಳೆ. ಅದರಿಂದ ಸತ್ಯಳ ವಿರುದ್ಧ ಹೋರಾಡಬಹುದು ಎಂದು ಹೇಳುತ್ತಾಳೆ. ಸತ್ಯಗೆ ಏನೋ ಮಾಡುವುದಕ್ಕೆ ಹೋಗಿ ಈಗ ಕೀರ್ತನಾ ಮಣ್ಣು ಮುಕ್ಕುತ್ತಾಳಾ.? ಮನೆಯಿಂದ ಕಿಕ್ ಔಟ್ ಆಗುತ್ತಾಳಾ ಕಾದು ನೋಡಬೇಕಿದೆ.

  English summary
  bala gifts necklace to girijamma, divya and janaki to impress them. But janaki says I have seen you before. This makes them get shocked.
  Tuesday, October 18, 2022, 20:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X