For Quick Alerts
  ALLOW NOTIFICATIONS  
  For Daily Alerts

  ದಿವ್ಯಾ ಜೊತೆಗೆ ಹೋಗಲು ನಿರ್ಧರಿಸಿದ ಗಿರಿಜಮ್ಮ!

  By ಪ್ರಿಯಾ ದೊರೆ
  |

  'ಸತ್ಯ' ಧಾರಾವಾಹಿಯಲ್ಲಿ ಗಿರಿಜಮ್ಮ, ದಿವ್ಯಾಳನ್ನು ಗಂಡನ ಮನೆಗೆ ಹೋಗುವಂತೆ ಒತ್ತಾಯ ಮಾಡುತ್ತಿರುತ್ತಾಳೆ. ಆದರೆ ದಿವ್ಯಾ ಅಜ್ಜಿಯ ಜೊತೆಗೆ ಜಗಳವಾಡುತ್ತಾಳೆ. ತಾನು ಹೋಗುವುದಿಲ್ಲ ಎಂದು ಹೇಳುತ್ತಿರುತ್ತಾಳೆ.

  ಆದರೆ, ಗಿರಿಜಮ್ಮ, ದಿವ್ಯಾಗೆ ಒತ್ತಾಯ ಮಾಡಿದ್ದಕ್ಕೆ ದಿವ್ಯಾ, ಗಿರಿಜಮ್ಮನಿಗೆ ಜೋರು ಧ್ವನಿಯಲ್ಲಿ ಬೈಯುತ್ತಾಳೆ. ಈ ವೇಳೆಗೆ ಬಂದ ಜಾನಕಿ, ದಿವ್ಯಾಗೆ ಬೈಯುತ್ತಾಳೆ. ತನ್ನ ಅತ್ತೆಯ ಮೇಲೆ ಕೂಗಾಡುವ ಹಕ್ಕು ನಿನಗಿಲ್ಲ ಎಂದು ಹೇಳುತ್ತಾಳೆ.

  ಸಿರಿ ಮನೆಗೆ ಬಂದ ತುಳಸಿ, ಸಮರ್ಥ್: ಮದುವೆ ದಿನವೂ ಫಿಕ್ಸ್ ಆಯ್ತಾ?ಸಿರಿ ಮನೆಗೆ ಬಂದ ತುಳಸಿ, ಸಮರ್ಥ್: ಮದುವೆ ದಿನವೂ ಫಿಕ್ಸ್ ಆಯ್ತಾ?

  ಸೀತಾ, ಸತ್ಯ ತನ್ನನ್ನು ಉಳಿಸಲು ಹೋಗಿ ಕೈ ಸುಟ್ಟುಕೊಂಡಿರುವುದಕ್ಕೆ ಮರುಕ ಪಡುತ್ತಿದ್ದಾಳೆ. ಹಾಗಾಗಿ ಸತ್ಯ ಮೇಲೆ ಸ್ವಲ್ಪ ಕಾಳಜಿಯನ್ನು ತೋರುತ್ತಿದ್ದಾಳೆ. ಸೀತಾ ನಡವಳಿಕೆಯನ್ನು ಕಂಡು ಸತ್ಯ ಸಂತಸದಲ್ಲಿದ್ದಾಳೆ.

  ಸತ್ಯ ಬಗ್ಗೆ ಸೀತಾ ಕಾಳಜಿ

  ಸತ್ಯ ಬಗ್ಗೆ ಸೀತಾ ಕಾಳಜಿ

  ಸತ್ಯ ಏನೂ ತಿಂದಿಲ್ಲ ಎಂದು ಹೇಳಿ ಸೀತಾ ಜ್ಯೂಸ್ ತರಿಸಿ ಕುಡಿಯಲು ಸತ್ಯಗೆ ಕೊಟ್ಟಿದ್ದಾಳೆ. ಈ ವೇಳೆ ಊರ್ಮಿಳಾ, ಕಾರ್ತಿಕ್ ನೀನು ಕುಡಿಸು ಎಂದು ಹೇಳಿದ್ದಾಳೆ. ಕಾರ್ತಿಕ್, ಸತ್ಯಗೆ ಜ್ಯೂಸ್ ಕುಡಿಸುವುದನ್ನು ನೋಡಿದ ಕೀರ್ತನಾ ಹೊಟ್ಟೆ ಉರಿ ಪಟ್ಟುಕೊಂಡಿದ್ದಾಳೆ. ಹಾಗಾಗಿ ಸೀತಾ ಬಳಿ ಬಂದು ಸೊಸೆಗೆ ಭಾರೀ ಕಾಳಜಿ ಮಾಡುತ್ತಿದ್ದೀಯಾ. ನಿನ್ನ ಜೀವ ಉಳಿಸಿದಳು ಎಂದು ಅವರ ಮೇಲೆ ಕಾಳಜಿ ಹೆಚ್ಚಾಯ್ತಾ ಎಂದು ಕೇಳುತ್ತಾಳೆ. ಅದಕ್ಕೆ ಸೀತಾ ನಿನಗೆ ಅದೆಲ್ಲಾ ಬೇಕಿಲ್ಲ. ಮೊದಲು ನಿನ್ನ ಸಂಸಾರ ನೋಡಿಕೋ. ಸತ್ಯ ಜೊತೆಗೆ ಕಾರ್ತಿಕ್ ಹೊಂದುಕೊಳ್ಳುತ್ತಿದ್ದಾನೆ ಎನ್ನುತ್ತಾಳೆ. ಇದಕ್ಕೆ ಕೀರ್ತನಾ, ಕಾರ್ತಿಕ್ ಮತ್ತು ಸತ್ಯ ನಡುವೆ ಕಂನ್ಸೆಂಟ್ ಡಿವೋರ್ಸ್ ಕೊಡಿಸುವುದನ್ನು ಮರೆಯಬೇಡಿ. ಸತ್ಯ ಪೇಪರ್‌ಗಳಿಗೆ ಅದಾಗಲೇ ಸಹಿ ಹಾಕಿದ್ದಾಳೆ ಎಂದು ಹೇಳಿ, ಮತ್ತೆ ಸೀತಾ ತಲೆ ಕೆಡಿಸುತ್ತಾಳೆ.

  ರಾಖಿಗೆ ಉಲ್ಟಾ ಹೊಡೆದ ರಿತು

  ರಾಖಿಗೆ ಉಲ್ಟಾ ಹೊಡೆದ ರಿತು

  ಇನ್ನು ರಿತು ಈಗ ರಾಕೇಶ್‌ನನ್ನು ಅವಾಯ್ಡ್ ಮಾಡುತ್ತಿದ್ದಾಳೆ. ಹುಡುಗರನ್ನು ದೂರವಿಟ್ಟಷ್ಟೂ ಅವರೇ ನಮ್ಮ ದಾರಿಗೆ ಬರುತ್ತಾರೆ ಎಂದು ರಿತು ಹೊಸ ಪ್ಲ್ಯಾನ್ ಮಾಡಿದ್ದಾಳೆ. ರಿತು ಬಗ್ಗೆ ತಲೆ ಕೆಡಿಸಿಕೊಂಡ ರಾಖಿ ಫೋನ್ ಮಾಡಿದ್ದಾನೆ. ಆದರೆ, ರಿತು ರಾಖಿಯನ್ನು ನೆಗೆಲೆಕ್ಟ್ ಆಗಿ ಮಾತನಾಡಿಸಿದ್ದಾಳೆ. ಇತ್ತೀಚೆಗೆ ಪಾಠ ಮಾಡುವುದನ್ನೇ ನಿಲ್ಲಿಸಿದ್ದೀರಾ.? ಯಾವಾಗ ಕ್ಲಾಸ್ ಇರುತ್ತೆ ಎಂದು ಕೇಳಿದ್ದಾಳೆ. ಇದಕ್ಕೆ ರಾಖಿ ಈಗಲೇ ಬರುತ್ತೀನಿ ಎಂದು ಹೇಳುತ್ತಾನೆ. ರಿತುವಿನಲ್ಲಿ ಆಗಿರುವ ಬದಲಾವಣೆಯನ್ನು ಕಂಡು ರಾಖಿ ಶಾಕ್ ಆಗುತ್ತಾನೆ.

  ಗಲಾಟೆ ಮಾಡಿದ ದಿವ್ಯಾ

  ಗಲಾಟೆ ಮಾಡಿದ ದಿವ್ಯಾ

  ದಿವ್ಯಾ, ಗಿರಿಜಮ್ಮ ಇಬ್ಬರೂ ಮಾತನಾಡುವಾಗ ಮಧ್ಯೆ ಬರುವ ಜಾನಕಿ ದಿವ್ಯಾಗೆ ಬೈಯುತ್ತಾಳೆ. ನಿನ್ನ ಗಂಡನ ಮನೆಗೆ ಇವತ್ತೇ ಹೋಗು. ಇಲ್ಲಿ ಇರಬೇಡ ಎಂದು ಹೇಳುತ್ತಾಳೆ. ಅದಕ್ಕೆ ದಿವ್ಯಾ ಹೋಗೋದಿಲ್ಲ ಎಂದು ಹಠ ಮಾಡುತ್ತಿರುತ್ತಾಳೆ. ಜಾನಕಿ ಅತ್ತೆ ಮೇಲೆ ಒಂದು ಮಾತು ಹೆಚ್ಚಿಗೆ ಆಡಿದರೆ ಹಲ್ಲು ಉದುರಿಸುತ್ತೀನಿ. ಮೊದಲು ಮನೆಯಿಂದ ಹೋಗು ಎಂದು ಹೇಳುತ್ತಾಳೆ. ದಿವ್ಯಾ ನಾನು ಈಗಲೇ ಹೋಗುವುದಿಲ್ಲ. ನಾನು ಮದುವೆಯಾಗಿದ್ದೀನಿ. ಹೊಡೆಯುವುದೆಲ್ಲಾ ಸರಿ ಇರೊಲ್ಲ ಎಂದು ಹೇಳಿ ಅಲ್ಲಿಂದ ಹೋಗುತ್ತಾಳೆ.

  ಮೊಮ್ಮಗಳ ಜೊತೆಗೆ ಹೋಗುತ್ತಾಳಾ ಅಜ್ಜಿ..?

  ಮೊಮ್ಮಗಳ ಜೊತೆಗೆ ಹೋಗುತ್ತಾಳಾ ಅಜ್ಜಿ..?

  ದಿವ್ಯಾ ಹೋದ ಮೇಲೆ ಗಿರಿಜಮ್ಮ, ಜಾನಕಿಗೆ ಬೈಯುತ್ತಾಳೆ. ನೀನು ದಿವ್ಯಾಗೆ ಮನೆಯಿಂದ ಹೋಗು ಎನ್ನಬಾರದಿತ್ತು. ಅವಳು ಸಮಸ್ಯೆಯಲ್ಲಿದ್ದಾಳೆ. ಆದರೆ ಆ ವಿಚಾರವನ್ನು ಹೇಳುತ್ತಿಲ್ಲ ಅಷ್ಟೇ. ಮಾತನಾಡುವ ಭರದಲ್ಲಿ ದಿವ್ಯಾ ಆ ಹಾಳು ಕೊಂಪೆಗೆ ನಾನು ಹೋಗಲ್ಲ ಎಂದು ಹೇಳಿದಳು. ನನ್ನ ಗಂಡ ಶ್ರೀಮಂತ. ನಮ್ಮ ಮನೆ ಅರಮನೆ ಎಂದೆಲ್ಲಾ ದಿವ್ಯಾ ಹೇಳಿರುವುದು ಸುಳ್ಳು. ನಾನು ಕಾಕ್ರೋಜ್ ಜೊತೆಗೆ ದಿವ್ಯಾ ಹಿಂದೆ ಹೋಗುತ್ತೀನಿ. ಅವಳ ಸಮಸ್ಯೆ ಬಗ್ಗೆ ತಿಳಿದುಕೊಳ್ಳುತ್ತೀನಿ ಎಂದು ಹೇಳುತ್ತಾಳೆ. ಗಿರಿಜಮ್ಮ ದಿವ್ಯಾ-ಬಾಲನ ಬಣ್ಣವನ್ನು ಬಯಲು ಮಾಡುತ್ತಾರಾ..?

  English summary
  sathya serial 18th november Episode Written Update. Girijamma and janaki says divya to go with bala. And girijamma decides to go with divya.
  Sunday, November 20, 2022, 11:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X