For Quick Alerts
  ALLOW NOTIFICATIONS  
  For Daily Alerts

  ಅಮ್ಮನಿಗೆ ಸೊಸೆ ಬೇಕಿಲ್ಲ: ಮಗನಿಗೆ ಹೆಂಡತಿ ಮೇಲೆ ಮತ್ತೆ ಅನುಮಾನ?

  By ಪ್ರಿಯಾ ದೊರೆ
  |

  ಸತ್ಯ ಧಾರಾವಾಹಿಯಲ್ಲಿ ಸೀತಾಗೆ ಮಹತಿ ಹೇಳಿದ ಮಾತುಗಳೇ ಗೂಯ್ ಗುಡುತ್ತಿದೆ. ಎಲ್ಲಿ ತನ್ನ ಸೊಸೆಯೂ ಕೂಡ ನಾಟಕವಾಡಿ, ಆನಂತರ ಮನೆಯನ್ನು ಹೊಡೆಯುತ್ತಾಳೆ ಎಂದು ಭಯಗೊಂಡಿದ್ದಾಳೆ. ಸತ್ಯಳನ್ನು ಹೇಗಾದರೂ ಮಾಡಿ ಮಟ್ಟ ಹಾಕಬೇಕು ಎಂದುಕೊಂಡಿದ್ದಾಳೆ.

  ಸೀತಾ ಭಯಕ್ಕೆ ಮತ್ತಷ್ಟು ತುಪ್ಪ ಸುರಿಯುವಂತೆ ಕೀರ್ತನಾ ಮತ್ತಷ್ಟು ಮಾತನಾಡಿದ್ದಾಳೆ. ಇದರಿಂದ ಸೀತಾ ತಲೆ ಸಂಪೂರ್ಣವಾಗಿ ಕೆಟ್ಟು ಹೋಗಿದೆ. ಈಗ ತನ್ನ ಮನೆ ಹಾಗೂ ಮಗನ ಸಂಸಾರ ಚೆನ್ನಾಗಿರಲು ಏನಾದರೂ ಮಾಡಬೇಕು ಎಂದುಕೊಂಡಿದ್ದಾಳೆ.

  ದಿವ್ಯಾ ಹೇಳಿದ ಸುಳ್ಳಿನಿಂದ ಸತ್ಯ ಬಾಳಲ್ಲಿ ಬಿರುಗಾಳಿ ಏಳುತ್ತಾ?ದಿವ್ಯಾ ಹೇಳಿದ ಸುಳ್ಳಿನಿಂದ ಸತ್ಯ ಬಾಳಲ್ಲಿ ಬಿರುಗಾಳಿ ಏಳುತ್ತಾ?

  ಹಾಗಾಗಿ ಸೀತಾ ಸತ್ಯಗೆ ಫೋನ್ ಮಾಡಿದ್ದಾಳೆ. ತವರು ಮನೆಯಲ್ಲಿ ಸೆಟಲ್ ಆಗಿಬಿಟ್ಟಿದ್ದೀಯಾ ಇಲ್ಲಿಗೆ ಬರೋ ಯೋಚನೆ ಇಲ್ವಾ ಎಂದು ಕೇಳುತ್ತಾಳೆ. ಅದಕ್ಕೆ ಸತ್ಯ ನಾಳೆ ಬರ್ತೀವಿ ಎಂದಿದ್ದಕ್ಕೆ ಸೀತಾ, ಈ ಕೂಡಲೇ ಹೊರಟು ಬಂದರೆ ಸರಿ, ಇಲ್ಲವಾದರೆ ಅಲ್ಲೇ ಉಳಿಯಬೇಕು ಎಂದು ಸೀತಾ ಖಡಕ್ ಆಗಿ ಹೇಳಿ ಫೋನ್ ಕಟ್ ಮಾಡಿದ್ದಾಳೆ.

  ಕಾರ್ತಿಕ್ ತಲೆಯೊಳಗೆ ಹುಳ ಬಿಟ್ಟ ದಿವ್ಯಾ

  ಕಾರ್ತಿಕ್ ತಲೆಯೊಳಗೆ ಹುಳ ಬಿಟ್ಟ ದಿವ್ಯಾ

  ದಿವ್ಯಾ ಈಗ ತನ್ನ ಮೇಲಿನ ಅಭಿಪ್ರಾಯಗಳನ್ನು ಬದಲಾಯಿಸಲು ಮುಂದಾಗಿದ್ದಾಳೆ. ಮತ್ತೆ ಸತ್ಯ ಮೇಲೆ ಗೂಬೆ ಕೂರಿಸಲು ಕಾರ್ತಿಕ್ ಬಳಿ ಸುಳ್ಳು ಹೇಳಿದ್ದಾಳೆ. ಸತ್ಯ ಬೇಕಂತಲೇ ಪ್ಲಾನ್ ಮಾಡಿ ನಿಮ್ಮನ್ನು ಮದುವೆಯಾಗಿದ್ದು ಎಂದು ಹೇಳಿದ್ದಾಳೆ. ದಿವ್ಯಾ ಮಾತನ್ನು ನಂಬದ ಕಾರ್ತಿಕ್ ವಾದ ಮಾಡಿದ್ದಾನೆ. ಆದರೆ ದಿವ್ಯಾ ತನ್ನ ಉದ್ದೇಶವನ್ನು ಪೂರೈಸಿಕೊಂಡಿದ್ದಾಳೆ. ಸತ್ಯ ಬೇಕಂತಲೇ, ತನ್ನ ಮದುವೆಯನ್ನು ಅದ್ಧೂರಿಯಾಗಿ ಆಗಬೇಕೆಂದು ಸಾಲ ಮಾಡಿದಳು. ನನಗೆ ಬಾಲ ಇಷ್ಟವಿರಲಿಲ್ಲ. ನಿಮ್ಮನ್ನೇ ಮದುವೆಯಾಗಬೇಕು ಎಂದುಕೊಂಡಿದ್ದೆ. ಆದರೆ ಸತ್ಯ ಮದುವೆಯ ದಿನ ತನ್ನ ಆಟವನ್ನು ಆಡಿದಳು. ಇದೆಲ್ಲಾ ಅವಳದ್ದೇ ಕಿತಾಪತಿ ಎಂದು ಹೇಳುತ್ತಾಳೆ. ಕಾರ್ತಿಕ್ ದಿವ್ಯಾ ಮಾತನ್ನು ನಂಬಿಕೊಳ್ಳುತ್ತಾನೆ.

  ದಿವ್ಯಾ ಬಗ್ಗೆಯೇ ಯೋಚಿಸುತ್ತಿರುವ ಕಾರ್ತಿಕ್

  ದಿವ್ಯಾ ಬಗ್ಗೆಯೇ ಯೋಚಿಸುತ್ತಿರುವ ಕಾರ್ತಿಕ್

  ಸತ್ಯ ಮನೆಗೆ ಹೊರಟು ನಿಂತಿದ್ದಾಳೆ. ಆದರೆ ಜಾನಕಿ ಇನ್ನೊಂದು ಎರಡು ದಿನ ಇರು ಎಂದರೂ ಸತ್ಯ ಕೇಳುತ್ತಿಲ್ಲ. ಸತ್ಯಾಳ ಜವಾಬ್ದಾರಿಯನ್ನು ಕಂಡು ಜಾನಕಿ ಖುಷಿ ಪಟ್ಟಿದ್ದಾಳೆ. ಕಾರ್ತಿಕ್ ಗೆ ಈಗ ಮತ್ತೆ ಸತ್ಯ ಮೇಲೆ ಅನುಮಾನ ಮೂಡಿದ್ದು, ಕಾರ್ತಿಕ್ ಮತ್ತೆ ಅವಳ ಮೇಲೆ ಕೋಪ ಮಾಡಿಕೊಂಡಿದ್ದಾನೆ. ಆದರೆ ಸತ್ಯಗೆ ಇದು ಅರ್ಥವಾಗುತ್ತಿಲ್ಲ. ಮನೆಗೆ ಬಂದ ಮೇಲೂ ಕಾರ್ತಿಕ್ ನಡವಳಿಕೆಯನ್ನು ಕಂಡು ಮನೆಯವರೆಲ್ಲರೂ ಶಾಕ್ ಆಗಿದ್ದಾರೆ. ಇನ್ನು ರೂಮಿನಲ್ಲಿ ಕಾರ್ತಿಕ್ ಇಡೀ ದಿನ ದಿವ್ಯಾ ಹೇಳಿದ ಮಾತುಗಳ ಬಗ್ಗೆಯೇ ಯೋಚಿಸುತ್ತಿದ್ದಾನೆ. ಸತ್ಯ ಎಷ್ಟು ಮೋಸ ಮಾಡಿದ್ದಾಳೆ. ಪಾಪ ದಿವ್ಯಾ ಎಂಬೆಲ್ಲಾ ಆಲೋಚನೆಗಳನ್ನು ಮಾಡುತ್ತಿದ್ದಾನೆ.

  ಕೀರ್ತನಾ ಕೈಲ್ಲೇ ತುಪ್ಪವಿದೆ

  ಕೀರ್ತನಾ ಕೈಲ್ಲೇ ತುಪ್ಪವಿದೆ

  ಇತ್ತ ಸೀತಾಗೆ ಮಗನದ್ದೇ ಚಿಂತೆಯಾಗಿಬಿಟ್ಟಿದೆ. ಸತ್ಯ ಎಲ್ಲರ ಜೊತೆಗೆ ಹೊಂದಿಕೊಂಡು, ಮಗನನ್ನು ತನ್ನತ್ತ ಸೆಳೆದುಕೊಂಡು ಈ ಮನೆಯನ್ನು ಹೊಡೆದು ಬಿಡುತ್ತಾಳಾ, ಮಹತಿ ಮನೆಯಲ್ಲಿ ನಡೆದಂತೆಯೇ ನಮ್ಮ ಮನೆಯಲ್ಲೂ ನಡೆಯುತ್ತಾ, ಹಾಗಾದರೆ ಈ ಮನೆ ಭಾಗವಾಗುತ್ತಾ, ಈಗ ತವರು ಮನೆಗೆ ಸತ್ಯ ಕಾರ್ತಿಕ್ ನನ್ನು ಕರೆದುಕೊಂಡು ಹೋಗಿದ್ದಳು. ಕಾರ್ತಿಕ್ ಅಲ್ಲಿ ಇದ್ದಿದ್ದರಿಂದ ಅವನು ಸತ್ಯಳ ಪರವಶನಾಗಿದ್ದಾನಾ? ಎಂದು ಸೀತಾ ತಲೆ ಕೆಡಿಸಿಕೊಂಡಿರುತ್ತಾಳೆ. ಇದೇ ವೇಳೆಗೆ ತುಪ್ಪದ ಜೊತೆಗೆ ಬರುವ ಕೀರ್ತನಾ, ನಿನ್ನ ಸೊಸೆ ಬಂದು ಇಷ್ಟೊತ್ತಾದರೂ ನಿನ್ನ ಮಾತನಾಡಿಸೋಕೆ ಬರಲಿಲ್ವಾ ಎಂದು ಚುಚ್ಚಿ ಮಾತನಾಡುತ್ತಾಳೆ. ನೀನು ಈಗ ಆ ಡಿವೋರ್ಸ್ ಪೇಪರ್ಸ್ ಮೂಲಕವೇ ಸತ್ಯನಾ ಮನೆಯಿಂದ ಹೊರಗೆ ಹಾಕಿ ಎನ್ನುತ್ತಾಳೆ. ಅದಕ್ಕೆ ಸೀತಾ ಸತ್ಯ ಈ ಮನೆಯಿಂದ ಹೊರಗೆ ಹೋಗೇ ಹೋಗುತ್ತಾಳೆ ಎನ್ನುತ್ತಾಳೆ.

  ಮಂಜ ಹೇಳಿದ ಸತ್ಯ ಅರ್ಥವಾಯ್ತಾ?

  ಮಂಜ ಹೇಳಿದ ಸತ್ಯ ಅರ್ಥವಾಯ್ತಾ?

  ಕಾರ್ತಿಕ್ ಗೆ ಈಗ ಸತ್ಯ ಮೇಲೆ ಮತ್ತೆ ಅನುಮಾನ ಶುರುವಾಗಿದೆ. ದಿವ್ಯಾ ಹೇಳಿದ ಮಾತುಗಳಿಂದ ಗೊಂದಲಕ್ಕೆ ಒಳಗಾಗಿದ್ದಾನೆ. ಈ ಬಗ್ಗೆ ಮಂಜನ ಜೊತೆಗೂ ಮಾತನಾಡುತ್ತಾನೆ. ಸತ್ಯ ನನಗೆ ಮೋಸ ಮಾಡಿ ಬಿಟ್ಟಳು ಎಂದು ದಿವ್ಯಾ ಹೇಳಿದ್ದನ್ನೆಲ್ಲಾ ಹೇಳುತ್ತಾನೆ. ಆಗ ಮಂಜಾ ಬುದ್ಧಿವಾದ ಹೇಳುತ್ತಾನೆ. ಹೋಗಿ ಹೋಗಿ ಆ ದಿವ್ಯಾ ಮಾತನ್ನು ಕೇಳಿದ್ಯಾ, ಆ ಥರ ಅಲ್ಲ ಎಂದು ಹೇಳುತ್ತಾನೆ. ಮಂಜನ ಮಾತುಗಳನ್ನು ಕೇಳಿದ ಕಾರ್ತಿಕ್ ಮುಂದೆ ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತಾನೋ?

  English summary
  Seetha is more worried about sathya and Karthik is thinking of divya words. Read on
  Tuesday, November 1, 2022, 21:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X