For Quick Alerts
  ALLOW NOTIFICATIONS  
  For Daily Alerts

  ಸತ್ಯಗೆ ರಿತು - ರಾಕಿ ಮಧ್ಯೆ ಇರುವ ಪ್ರೀತಿ ವಿಚಾರ ಗೊತ್ತಾಯ್ತಾ?

  By ಪ್ರಿಯಾ ದೊರೆ
  |

  ಸತ್ಯ ಧಾರಾವಾಹಿಯಲ್ಲಿ ದಿವ್ಯಾ ಮತ್ತೆ ಹಳ್ಳಿಗೆ ವಾಪಸ್ ಹೋಗುತ್ತಿದ್ದಾಳೆ. ಬಾಲನ ಜೊತೆಗೆ ಅವಳು ಎಲ್ಲಿಗೆ ಹೋಗುತ್ತಾಳೆ. ದಿವ್ಯಾ ಹಾಗೂ ಬಾಲನ ನಿಜವಾದ ಬಂಡವಾಳವೇನು ಎಂಬುದನ್ನು ತಿಳಿಯಲು ಗಿರಿಜಮ್ಮ ಅವರನ್ನು ಫಾಲೋ ಮಾಡುತ್ತಿದ್ದಾರೆ. ಗಿರಿಜಮ್ಮನ ಜೊತೆಗೆ ಕಾಕ್ರೋಚ್ ಕೂಡ ಇದ್ದಾನೆ.

  ದಿವ್ಯಾ ಹಾಗೂ ಬಾಲ ಕಾರನ್ನು ಅರ್ಧದಲ್ಲೇ ನಿಲ್ಲಿಸಿ ಕೆಲಗಿಳಿದಿದ್ದಾರೆ. ಟಿಟಿ ಒಂದನ್ನು ಹತ್ತಿ ಇಬ್ಬರೂ ಮುಂದೆ ಸಾಗಿದ್ದಾರೆ. ಇವರಿಬ್ಬರೂ ಕಾರನ್ನು ಬಿಟ್ಟು ಟಿಟಿ ಹತ್ತಿದ್ದು ಯಾಕೆ ಎಂಬುದು ಗೊತ್ತಾಗದಿದ್ದರೂ, ಗಿರಿಜಮ್ಮ ದಿವ್ಯಾ ಬಾಲನನ್ನು ಫಾಲೋ ಮಾಡುತ್ತಿದ್ದಾರೆ.

  ಟಿಟಿಯನ್ನೂ ಇಳಿದ ದಿವ್ಯಾ - ಬಾಲ ಟೆಂಪೋ ಹತ್ತಿ ಹೋಗುತ್ತಾರೆ. ಸ್ವಲ್ಪ ದೂರ ಹೋದ ಮೇಲೆ ಇಳಿದು ನಡೆದು ಹೋಗುತ್ತಾರೆ. ಇದನ್ನು ನೋಡಿದ ಗಿರಿಜಮ್ಮ, ಬಾಲ ಹೇಳಿದ್ದೆಲ್ಲವೂ ಸುಳ್ಳು ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಾಳೆ.

  ವೇಷ ಬದಲಿಸಿದ ಗಿರಿಜಮ್ಮ

  ವೇಷ ಬದಲಿಸಿದ ಗಿರಿಜಮ್ಮ

  ದಾರಿ ಮದ್ಯೆ ಕಾಕ್ರೋಚ್ ಬಾಲನನ್ನು ಸತ್ಯ ಜೈಲಿಗೆ ಹಾಕಿದ ವಿಚಾರವನ್ನು ಹೇಳುತ್ತಾನೆ. ಈ ಮಾತನ್ನು ಕೇಳಿದ ಗಿರಿಜಮ್ಮ ಮೊದಲು ಶಾಕ್ ಆಗುತ್ತಾಳೆ. ಇದೆಲ್ಲಾ ಹೇಳೆ ಇಲ್ಲ ಎಂದು ಹೇಳುತ್ತಾಳೆ. ಇಷ್ಟೊತ್ತು ದಿವ್ಯಾ-ಬಾಲನನ್ನು ಕಾರಿನಲ್ಲಿ ಫಾಲೋ ಮಾಡುತ್ತಿದ್ದ ಗಿರಿಜಮ್ಮ ಅವರು ಈಗ ನಡೆದುಕೊಂಡು ಹೋಗಬೇಕಾಗಿದೆ. ಹಾಗಾಗಿ ಇಬ್ಬರೂ ವೇಷವನ್ನು ಬದಲಿಸಿದ್ದಾರೆ. ಉತ್ತರ ಕನ್ನಡದ ಜನರಂತೆ ವೇಷ ಧರಿಸಿ ದಿವ್ಯಾಳನ್ನು ಫಾಲೋ ಮಾಡುತ್ತಿದ್ದಾರೆ. ಈ ವೇಳೆ ದಿವ್ಯಾ ನಮ್ಮನ್ನು ಗುರುತಿಸುತ್ತಾಳಾ ಎಂಬ ಅನುಮಾನಕ್ಕೆ ಅವಳಿಗೆ ಅಷ್ಟೆಲ್ಲಾ ಬುದ್ಧಿ ಇದ್ದಿದ್ದರೆ, ಬಾಲನನ್ನ ಮದುವೆಯಾಗಿ ಇಲ್ಲಿಗೆ ಯಾಕೆ ಬರುತ್ತಿದ್ದಳು ಎಂದು ಬೈದುಕೊಳ್ಳುತ್ತಾರೆ.

  ಸೊಸೆಗೆ ಎದುರಾಯ್ತು ಮತ್ತೊಂದು ಪರೀಕ್ಷೆ

  ಸೊಸೆಗೆ ಎದುರಾಯ್ತು ಮತ್ತೊಂದು ಪರೀಕ್ಷೆ

  ಇತ್ತ ಸೀತಾ ಸತ್ಯ ಬಗ್ಗೆ ತನ್ನ ಅಭಿಪ್ರಾಯ ಬದಲಾಗುತ್ತಿದ್ದರೂ ಒಪ್ಪಿಕೊಳ್ಳಲಾಗದೇ ಒದ್ದಾಡುತ್ತಿದ್ದಾಳೆ. ಇನ್ನು ಸೀತಾ ಸತ್ಯಾಳನ್ನು ತನ್ನ ವುಮೆನ್ಸ್ ಕ್ಲಬ್ ಪಾರ್ಟಿಗೆ ಸತ್ಯಳನ್ನು ಕರೆದಿದ್ದಾಳೆ. ಪಾರ್ಟಿಗೆ ಮನೆಯವರೆಲ್ಲರೂ ಬರುತ್ತಿದ್ದಾರೆ. ನೀನು ಬಾ. ಅಲ್ಲಿ ನೀನು ಹೇಗೆ ನಡೆದುಕೊಳ್ಳುತ್ತೀಯಾ. ಅದರಿಂದ ನಮ್ಮ ಮನೆ ಮರಿಯಾದೆಯನ್ನು ಕಾಪಾಡುತ್ತೀಯಾ ಎಂಬುದನ್ನು ನೋಡುತ್ತೀನಿ. ಇದು ನಿನಗೆ ಒಂದು ಪರೀಕ್ಷೆ ಇದ್ದಂತೆ ಎಂದು ಹೇಳಿ ಹೋಗುತ್ತಾಳೆ. ಸತ್ಯ ಹೇಗಪ್ಪ ಈ ಪರೀಕ್ಷೆಯನ್ನು ಎದುರಿಸುವುದು ಎಂದು ಭಯಪಡುತ್ತಾಳೆ. ಅತ್ತೆ ಗಾಂಭಿರ್ಯತೆ ನನಗಂತೂ ಬರಲ್ಲ ಎಂದು ಅಂದುಕೊಳ್ಳುತ್ತಾಳೆ.

  ರಾಕಿ ಜೊತೆ ರೊಮ್ಯಾಂಟಿಕ್ ಆದ ರಿತು

  ರಾಕಿ ಜೊತೆ ರೊಮ್ಯಾಂಟಿಕ್ ಆದ ರಿತು

  ಈಗ ರಿತುಗೆ ಹೊಸ ಸರ್ ಬಂದಿದ್ದಾರೆ. ಅದು ಬೇರೆ ಯಾರೂ ಅಲ್ಲ. ಅಮಾಟೆ ರಿತುಗೆ ರಾಕಿ ಬಳಿ ಹೇಗೆ ನಡೆದುಕೊಳ್ಳಬೇಕು ಎಂದು ಹೇಳಿಕೊಡುತ್ತಿದ್ದಾನೆ. ರಾಕಿ ಜೊತೆಗೆ ಸ್ವಲ್ಪ ರೊಮ್ಯಾಂಟಿಕ್ ಆಗಿ ನಡೆದುಕೊಳ್ಳುವುದಕ್ಕೆ ಹೇಳಿಕೊಟ್ಟಿದ್ದಾನೆ. ಅಮಾಟೆ ಮಾತನ್ನು ನಂಬಿರುವ ರಿತು, ಅಮಾಟೆ ಹೇಳಿದಂತೆಯೇ ನಡೆದುಕೊಳ್ಳುತ್ತಿದ್ದಾಳೆ. ರಾಕೇಶ್ ರಿತುಗೆ ಪಾಠ ಹೇಳಿಕೊಡುತ್ತಿರುತ್ತಾನೆ. ಆದರೆ, ರಿತು ನಿದ್ದೆ ಮಾಡುತ್ತಿರುತ್ತಾಳೆ. ಇದನ್ನು ನೋಡಿದ ರಾಕಿ ಬೈಯುತ್ತಿದ್ದಾನೆ.

  ರೂಮಿಗೆ ಬಂದ ಸತ್ಯ ಮಾಡಿದ್ದೇನು?

  ರೂಮಿಗೆ ಬಂದ ಸತ್ಯ ಮಾಡಿದ್ದೇನು?

  ಸತ್ಯಗೆ ರಾಕಿ ಬಂದಿರುವುದು ಗೊತ್ತಾಗುತ್ತಿದ್ದಂತೆ ಸಖಿಭಾರ್ಯ ಅರ್ಥವನ್ನು ಕೇಳೋಣ ಎಂದು ರಿತು ರೂಮಿಗೆ ಹೋಗುತ್ತಾಳೆ. ಈ ವೇಳೆ ರಿತು ರಾಕಿ ಜೊತೆಗೆ ಜಗಳ ಮಾಡುತ್ತಿರುತ್ತಾಳೆ. ಅವನನ್ನು ಬಲವಂತವಾಗಿ ತಬ್ಬಿಕೊಂಡು ರೊಮ್ಯಾಂಟಿಕ್ ಆಗಿ ನಡೆದುಕೊಳ್ಳುತ್ತಿರುತ್ತಾಳೆ. ಆದರೆ, ರಾಕಿ ರಿತುನನ್ನು ಬೈದರೂ ಅವಳು ಕೇಳುವುದಿಲ್ಲ. ರಾಕಿ ಕೊರಳ ಪಟ್ಟಿಯನ್ನು ಹಿಡಿಯುವ ವೇಳೆಗೆ ಅಲ್ಲಿಗೆ ಸತ್ಯ ಬರುತ್ತಾಳೆ. ಈಗ ಸತ್ಯಗೆ ರಿತು-ರಾಕಿ ನಡುವೆ ನಡೆಯುತ್ತಿರುವ ಪ್ರೀತಿ ವಿಚಾರ ಗೊತ್ತಾಗುತ್ತಾ..? ಗೊತ್ತಾದರೆ ಸತ್ಯ ಏನು ಮಾಡಬಹುದು..?

  English summary
  Girijamma started following divya and bala by changing attire
  Wednesday, November 23, 2022, 16:52
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X