For Quick Alerts
  ALLOW NOTIFICATIONS  
  For Daily Alerts

  ಕೀರ್ತನಾ ಮಾಡಿರುವ ಈ ಪ್ಲಾನ್‌ನಿಂದ ಸತ್ಯಗೆ ಗ್ರಹಚಾರ ಒಕ್ಕರಿಸಿಕೊಳ್ಳುತ್ತಾ?

  By ಪ್ರಿಯಾ ದೊರೆ
  |

  ಸತ್ಯ ಧಾರಾವಾಹಿಯಲ್ಲಿ ಕಾರ್ತಿಕ್ ಸತ್ಯಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾನೆ. ಇಬ್ಬರೂ ಈಗ ಒಟ್ಟಿಗೆ ಮಲಗುತ್ತಾರೆ. ಸತ್ಯಗೆ ಕಾರ್ತಿಕ್ ಕೊಟ್ಟಿರುವ ಚಾಲೆಂಜ್ ಗೆಲ್ಲುವುದೇ ದೊಡ್ಡ ಸವಾಲಾಗಿದೆ. ನಿತ್ಯ ಈಗ ಸತ್ಯ ಕಾರ್ತಿಕ್ ಹೇಳಿದ ಪದದ ಬಗ್ಗೆಯೇ ಹೆಚ್ಚು ಯೋಚಿಸುತ್ತಾಳೆ.

  ಸಖಿಭಾರ್ಯ ಪದದ ಅರ್ಥ ಸಿಗದೇ ಒದ್ದಾಡುತ್ತಿದ್ದಾಳೆ. ಅರ್ಥ ಹೇಳದೇ ಹೋದರೆ ಸತ್ಯ ಸೋತಂತೆ ಆಗುತ್ತದೆ. ಆದರೆ ಸತ್ಯಳಿಗೆ ಈ ಚಾಲೆಂಜ್ ನಲ್ಲಿ ಸೋಲುವುದಕ್ಕೆ ಕೊಂಚವೂ ಇಷ್ಟವಿಲ್ಲ.

  ಹಾಗಾಗಿ ಸತ್ಯ ಮನೆಯಲ್ಲಿರುವ ಎಲ್ಲರಿಂದಲೂ ಪದದ ಅರ್ಥ ತಿಳಿದುಕೊಳ್ಳಲು ಪ್ರಯತ್ನಿಸಿದ್ದಾಳೆ. ಅದರೆ ಪ್ರಯೋಜನವಾಗಲಿಲ್ಲ. ಈಗ ಅದಕ್ಕಾಗಿ ರಾಕೇಶ್ ನನ್ನು ಕೇಳಿದರೆ, ಸಖಿಭಾರ್ಯ ಪದದ ಅರ್ಥ ಸಿಗಬಹುದು ಎಂದು ಕೇಳಲು ಮುಂದಾಗಿದ್ದಾಳೆ.

  ರಿತು ರಾಕಿಯನ್ನು ಪ್ರಶ್ನೆ ಮಾಡಿದ ಸತ್ಯ

  ರಿತು ರಾಕಿಯನ್ನು ಪ್ರಶ್ನೆ ಮಾಡಿದ ಸತ್ಯ

  ಸತ್ಯ ರೂಮಿಗೆ ಬರುತ್ತಿದ್ದಂತೆ ರಾಕೇಶ್ ಮತ್ತು ರಿತು ತಬ್ಬಿಬ್ಬಾಗುತ್ತಾರೆ. ಸತ್ಯ ಇಬ್ಬರನ್ನು ನೋಡಿ ಶಾಕ್ ಆಗುತ್ತಾಳೆ. ಇಬ್ಬರು ಏನು ಮಾಡುತ್ತಿದ್ದೀರಾ ಎಂದು ಕೇಳುತ್ತಾಳೆ. ರಾಕಿಗೆ ಏನು ಹೇಳಬೇಕು ಎಂಬುದೇ ಗೊತ್ತಾಗುವುದಿಲ್ಲ. ರಿತು ಕೂಡ ಗಾಬರಿಯಾಗಿ ಪಾಠ ಹೇಳಿಸಿಕೊಳ್ಳುತ್ತಿದ್ದೇನೆ ಎಂದು ಹೇಳುತ್ತಾಳೆ. ಅದಕ್ಕೆ ಸತ್ಯ, ನಿಮ್ಮಿಬ್ಬರನ್ನ ನೋಡಿದ್ರೆ ನನಗೆ ಹಾಗನ್ನಿಸುತ್ತಿಲ್ಲ ಎನ್ನುತ್ತಾಳೆ. ಆಗ ರಾಕಿ ಪಾಠ ಹೇಳಿಕೊಡುವಾಗ ರಿತು ನಿದ್ದೆ ಮಾಡುತ್ತಿದ್ದಳು. ಅದಕ್ಕೆ ಓಡಾಡಿಕೊಂಡು ಪಾಠ ಮಾಡುತ್ತಿದ್ದೆ ಎಂದು ಹೇಳುತ್ತಾನೆ. ಸತ್ಯ, ಆದರೂ ಯಾಕೋ ನಿಮ್ಮ ಮಾತಿನ ಮೇಲೆ ನಂಬಿಕೆ ಬರುತ್ತಿಲ್ಲ. ಅದೇನೇ ಇರಲಿ. ರಾಖಿ ಸಖಿಭರ್ಯ ಎಂದರೆ ಅರ್ಥವೇನು ಎಂದು ಕೇಳುತ್ತಾಳೆ. ಇದಕ್ಕೆ ರಾಕಿ ಗೊತ್ತಿಲ್ಲ. ಆದರೆ ಅರ್ಥ ತಿಳಿದುಕೊಂಡು ಹೇಳುತ್ತೀನಿ ಎನ್ನುತ್ತಾನೆ.

  ಸತ್ಯಗೆ ಗ್ರಹಚಾರ ಕೆಟ್ಟಿದ್ಯಾ?

  ಸತ್ಯಗೆ ಗ್ರಹಚಾರ ಕೆಟ್ಟಿದ್ಯಾ?

  ವುಮೆನ್ಸ್ ಕ್ಲಬ್ ನಿಂದ ಪಾರ್ಟಿ ಅರೇಂಜ್ ಆಗಿದೆ. ಅದಕ್ಕಾಗಿ ಸೀತಾ ಮನೆಯವರೆಲ್ಲರೂ ಹೋಗುತ್ತಿದ್ದಾರೆ. ಸೀತಾ ಬೇರೆ ಸತ್ಯಗೆ ಮತ್ತೊಂದು ಪರೀಕ್ಷೆಯನ್ನು ಒಡ್ಡಿದ್ದಾಳೆ. ಪಾರ್ಟಿಯಲ್ಲಿ ಸತ್ಯ ನಡೆದುಕೊಳ್ಳುವ ರೀತಿಯಿಂದಲೇ ಅವಳ ಅಸ್ತಿತ್ವದ ನಿರ್ಧಾರವಾಗುತ್ತೆ ಎಂದು ಸೀತಾ ಹೇಳಿದ್ದಾಳೆ. ಇದೇ ಸಂದರ್ಭವನ್ನು ಬಳಸಿಕೊಳ್ಳಲು ಕೀರ್ತನಾ ಸತ್ಯ ವಿರುದ್ಧ ಮತ್ತೊಂದು ಪ್ಲಾನ್ ಮಾಡಿದ್ದಾಳೆ. ಇದರಲ್ಲಿ ಮಹತಿ, ಸುಹಾಸ್ ಎಲ್ಲರೂ ಸೇರಿದ್ದಾರೆ. ಪಾರ್ಟಿಯಲ್ಲಿ ಸತ್ಯಗೆ ಕುಡಿಸುವ ಪ್ಲಾನ್ ಮಾಡಿದ್ದಾರೆ. ಇದರಿಂದ ಸತ್ಯ ಗ್ರಹಚಾರ ಕೆಡುವುದಂತೂ ಗ್ಯಾರೆಂಟಿ.

  ದಿವ್ಯಾ ಮನೆಗೆ ಬಂದ ಕಾಕ್ರೋಚ್

  ದಿವ್ಯಾ ಮನೆಗೆ ಬಂದ ಕಾಕ್ರೋಚ್

  ವೇಷ ಬದಲಿಸಿಕೊಂಡು ಗಿರಿಜಮ್ಮ ಮತ್ತು ಕಾಕ್ರೋಚ್ ದಿವ್ಯಾ ಇರುವ ಹಳ್ಳಿಗೆ ಬಂದಿದ್ದಾರೆ. ಉಳಿದುಕೊಳ್ಳಲು ಕಾಕ್ರೋಚ್ ವ್ಯವಸ್ಥೆ ಮಾಡಿದ್ದು, ಅಜ್ಜಿ ಜಾನಕಿ ಜೊತೆಗೆ ಮಾತನಾಡಿದ್ದಾರೆ. ದಿವ್ಯಾ ಕೊಂಪೆಯಲ್ಲೇ ಇದ್ದಾಳೆ. ಅವಳಿರುವುದು ಗುಡಿಸಲಲ್ಲಿ, ಅರಮನೆಯಲ್ಲಿ ಅಲ್ಲ ಎಂಬ ಸತ್ಯವನ್ನು ಹೇಳಿದ್ದಾಳೆ. ಈ ಮಾತನ್ನು ಕೇಳಿ ಜಾನಕಿ ಶಾಕ್ ಆಗಿದ್ದಾಳೆ. ಇನ್ನು ಕಾಕ್ರೋಚ್ ದಿವ್ಯಾ ಅವರ ಮನೆಯಲ್ಲಿ ಯಾರು ಯಾರು ಇದ್ದಾರೆ ಎಂದು ಎಂದು ತಿಳಿಯಲು ಬಂದಿದ್ದಾನೆ. ಬಾಲನ ಬಳಿ ಉಳಿಯಲು ಜಾಗ ಕೊಡಿ ಎಂದು ಕೇಳಿದ್ದಾನೆ. ಈ ವೇಳೆ ದಿವ್ಯಾ ಮತ್ತು ಅವರ ಮನೆಯಲ್ಲಿರುವ ತಾತನನ್ನು ನೋಡಿದ್ದಾನೆ.

  ಕಾಕ್ರೋಚ್ ನನ್ನು ಬಾಲ ಗುರುತಿಸುತ್ತಾನಾ?

  ಕಾಕ್ರೋಚ್ ನನ್ನು ಬಾಲ ಗುರುತಿಸುತ್ತಾನಾ?

  ಕಾಕ್ರೋಚ್ ಮನೆಯೊಳಗೆ ಇಣುಕಿ ನೋಡುತ್ತಿದ್ದದ್ದನ್ನೇ ಗಮನಿಸಿದ ಬಾಲ ಅನುಮಾನಗೊಂಡಿದ್ದಾನೆ. ಕಾಕ್ರೋಚ್ ಅಲ್ಲಿಂದ ಹೊರಟ ಮೇಲೂ ಅವನು ಯಾರಿಬಹುದು ಎಂಬ ಅನುಮಾನದಲ್ಲೇ ನೋಡುತ್ತಿದ್ದ. ಬಾಲನಿಗೆ ಕಾಕ್ರೋಚ್ ಮೇಲೆ ಶಂಕೆ ಬಂದಿದೆ. ಆದರೆ, ಅದು, ಕಾಕ್ರೋಚ್ ಮತ್ತು ಗಿರಿಜಮ್ಮ ಎಂಬುದನ್ನು ತಿಳಿಯುತ್ತಾನಾ..? ಹಾಗೇನಾದರೂ ಗೊತ್ತಾದರೆ, ಏನು ಮಾಡುತ್ತಾನೆ ಎಂಬ ಕುತೂಹಲ ಮೂಡಿದೆ.

  English summary
  Girijamma stays in village, Cockroach goes to divya house and he enquires.
  Thursday, November 24, 2022, 18:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X