For Quick Alerts
  ALLOW NOTIFICATIONS  
  For Daily Alerts

  ನೀನು ನೀನಾಗಿರು ಎಂದು ಕಾರ್ತಿಕ್ ಯಾರಿಗೆ ಹೇಳಿದ್ದು?

  By ಪ್ರಿಯಾ ದೊರೆ
  |

  ಸತ್ಯ ಧಾರಾವಾಹಿಯಲ್ಲಿ ದಿವ್ಯಾ ತಾತನಿಗೆ ಊಟ ಬಡಿಸುತ್ತಿರುತ್ತಾಳೆ. ಆಗ ತಾತ ಬಾಯಿಗೆ ಬಂದಂತೆ ಬೈಯುತ್ತಿರುತ್ತಾರೆ. ಸರಿಯಾಗಿ ಅಡುಗೆ ಮಾಡೋಕೆ ಬರೋದಿಲ್ಲ. ಊಟ ಬಡಿಸೋಕೆ ಬರಲ್ಲ ಎಂದು ಬೈಯುತ್ತಾನೆ.

  ಇನ್ನು ಪಾತ್ರೆ ತೊಳೆಯುವಾಗ ದಿವ್ಯಾ ನಾನು ನಮ್ಮ ಅಮ್ಮನ ಮನೆಯಲ್ಲಿ ಎಷ್ಟು ಅರಾಮವಾಗಿ ಇದ್ದೆ. ಅಲ್ಲಿ ಯಾವಾಗಲೂ ಬಯಸಿದ್ದನ್ನೆಲ್ಲಾ ತಿಂದುಕೊಂಡು ಟಿವಿ ನೋಡುತ್ತಿದ್ದೆ. ರಾಣಿ ಇದ್ದಂತೆ ಇದ್ದೆ. ಇಲ್ಲಿಗೆ ಬಂದು ಇಡೀ ದಿನ ಕೆಲಸ ಮಾಡುವಂತಾಯ್ತು ಎಂದುಕೊಳ್ಳುತ್ತಾಳೆ.

  ಇದನ್ನು ನೋಡಿ ನಮ್ಮ ಮನೆಯಲ್ಲಿ ಒಂದೇ ಒಂದು ಲೋಟ ಕೂಡ ತೊಳೆಯುತ್ತಿರಲಿಲ್ಲ. ಇಲ್ಲಿ ನೋಡು ಊರಿನ ಮುಸರೆ ಎಲ್ಲಾ ತಿಕ್ಕುತ್ತಿದ್ದಾಳೆ ಎಂದು ಗಿರಿಜಮ್ಮ ಹಾಗೂ ಕಾಕ್ರೋಚ್ ಅಂದುಕೊಳ್ಳುತ್ತಾರೆ.

  ನಕರ ಮಾಡುತ್ತಿರುವ ಕಾರ್ತಿಕ್

  ನಕರ ಮಾಡುತ್ತಿರುವ ಕಾರ್ತಿಕ್

  ಸತ್ಯಗೆ ಈಗ ಪಾರ್ಟಿಗೆ ಹೋಗಲೇ ಬೇಕಾಗಿದೆ. ಸೀತಮ್ಮ ಪರೀಕ್ಷೆ ಕೊಟ್ಟಿದ್ದು, ಅಲ್ಲಿ ಅವಳು ಗೆಲ್ಲಬೇಕಿದೆ. ಹಾಗಾಗಿ ಪಾರ್ಟಿಯಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದು ಗೊತ್ತಿಲ್ಲ. ಈ ಕಾರಣದಿಂದ ಸತ್ಯ ಕಾರ್ತಿಕ್ ಬಳಿ ಟಿಪ್ಸ್ ಕೇಳುತ್ತಿದ್ದಾಳೆ. ಕಾರ್ತಿಕ್ ಈಗ ಇದು ನನ್ನ ಟೈಮ್ ಎಂದು ಹೇಳಿ ಸತ್ಯಳನ್ನು ರೇಗಿಸುತ್ತಿದ್ದಾನೆ. ಆದರೆ ಸತ್ಯಗೆ ಈಗ ಪಾರ್ಟಿಯಲ್ಲಿ ಹೇಗೆ ನಡೆದುಕೊಲ್ಳಬೇಕು, ಬೇರೆಯವರ ಜೊತೆಗೆ ಹೇಗೆ ಮಾತನಾಡಬೇಕು ಎಂಬುದನ್ನೆಲ್ಲಾ ತಿಳಿಯಲೇ ಬೇಕಿದೆ. ಆದರೆ ಕಾರ್ತಿಕ್ ಸ್ವಲ್ಪ ನಕರ ಮಾಡುತ್ತಿದ್ದಾನೆ.

  ಮೊಮ್ಮಗಳನ್ನು ನೋಡಿ ಗಿರಿಜಮ್ಮ ಶಾಕ್

  ಮೊಮ್ಮಗಳನ್ನು ನೋಡಿ ಗಿರಿಜಮ್ಮ ಶಾಕ್

  ಇತ್ತ ದಿವ್ಯಾ ಮುಸರೆ ತೊಳೆಯುತ್ತಾ, ಕೊಟ್ಟಿಗೆಯಲ್ಲಿ ಹಸು ಸಗಣಿ ಬಾಚುತ್ತಿದ್ದಾಳೆ. ಇದೇ ವೇಳೆಗೆ ಬರುವ ತಾತ ದಿವ್ಯಾಳನ್ನು ಮೂದೇವಿ ಎಂದು ಬಾಯಿಗೆ ಬಂದ ಹಾಗೆ ಬೈಯುತ್ತಿದ್ದಾನೆ. ದಿವ್ಯಾ ತಾತ ಎಷ್ಟು ಬೈದರೂ ಏನೂ ಮಾತನಾಡದೇ ಸೈಲೆಂಟ್ ಆಗಿ ಅವರ ಮಾತನನ್ನು ಕೇಳುತ್ತಿದ್ದಾಳೆ. ಸುಮ್ಮನೆ ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಿರುವುದನ್ನು ನೋಡಿ ಕಾಕ್ರೋಚ್ ಮತ್ತು ಗಿರಿಜಮ್ಮ ಶಾಕ್ ಆಗಿದ್ದಾರೆ. ನಮ್ಮ ದಿವ್ಯಾ ಯಾರಾದರೂ ಬೈದರೆ, ತಿರುಗಿಸಿ ನೂರು ಮಾತನಾಡುತ್ತಿದ್ದವಳು ಇಲ್ಯಾಕೆ ಹೀಗೆ ಇದ್ದಾಳೆ. ಇನ್ನು ದಿವ್ಯಾಳನ್ನು ಬಗ್ಗಿಸಿರುವ ಆ ತಾತ ನಿಜಕ್ಕೂ ಗ್ರೇಟ್ ಎಂದು ಮಾತನಾಡಿಕೊಳ್ಳುತ್ತಾರೆ.

  ಸೀತಮ್ಮನನ್ನು ಹೊಗಳಿದ ಸತ್ಯ

  ಸೀತಮ್ಮನನ್ನು ಹೊಗಳಿದ ಸತ್ಯ

  ಇನ್ನು ಸತ್ಯ ಕಾರ್ತಿಕ್ ಟವೆಲ್ ಹಿಡಿದು ಕಾಡಿಸುತ್ತಾಳೆ. ಪಾರ್ಟಿ ಟಿಪ್ಸ್ ಹೇಳದಿದ್ದರೆ ಸುಮ್ಮನೆ ಬಿಡುವುದಿಲ್ಲ ಎಂದು ಹೇಳುತ್ತಾಳೆ. ಕಾರ್ತಿಕ್ ಬೇರೆ ದಾರಿಯಿಲ್ಲದೇ ಸತ್ಯಗೆ ಪಾರ್ಟಿಯಲ್ಲಿ ಹೇಗೆ ನಡೆದುಕೊಳ್ಳಬೇಕು ಎಂದು ಹೇಳಿಕೊಡುತ್ತಾನೆ. ಸತ್ಯ ಹೇಗಪ್ಪ ಅಲ್ಲಿ ಹೀಗೆಲ್ಲಾ ಡೀಸೆಂಟ್ ಆಗಿ ನಡೆದುಕೊಳ್ಳುವುದು ಎಂದು ಭಯಪಡುತ್ತಾಳೆ. ಇನ್ನು ಸೀರೆ ಉಡುತ್ತೇನೆ ಎಂದು ಹೇಳುತ್ತಾಳೆ. ಅದಕ್ಕೆ ಕಾರ್ತಿಕ್ ಬೇಡ ನೀನು ಅಮ್ಮನಂತೆ ಕಾಣಿಸುತ್ತೀಯಾ ಎಂದಿದ್ದಕ್ಕೆ ಸತ್ಯ ಸೀತಮ್ಮನನ್ನು ಹೊಗಳುತ್ತಾಳೆ. ಅವರ ಗತ್ತೇ ಗತ್ತು. ನಾನು ಅವರಂತೆ ಸೀರೆ ಉಡುತ್ತೇನೆ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿ ಕಾರ್ತಿಕ್ ಖುಷಿ ಪಡುತ್ತಾನೆ.

  ನೀನು ನೀನಾಗಿರು ಎಂದು ಅಮುಲ್ ಬೇಬಿ

  ನೀನು ನೀನಾಗಿರು ಎಂದು ಅಮುಲ್ ಬೇಬಿ

  ಇನ್ನು ಸತ್ಯ ತನಗೆ ಇಂಗ್ಲೀಷ್ ಬರೋದಿಲ್ಲ ಎಂದು ಹೇಳಿದ್ದಕ್ಕೆ, ಕಾರ್ತಿಕ್ ಕನ್ನಡದಲ್ಲೇ ಮಾತನಾಡು. ಭಾಷೆ ಎಲ್ಲಾ ಒಂದು ಪ್ರಾಬ್ಲಂ ಅಲ್ಲವೇ ಅಲ್ಲ ಎಂದು ಹೇಳುತ್ತಾನೆ. ನಾನು ಉದ್ದ ಕೂದಲನ್ನು ಬೀಡುತ್ತೀನಿ ಎಂದು ಸತ್ಯ ಹೇಳಿದ್ದಕ್ಕೆ ಕಾರ್ತಿಕ್ ಬೇಡ ಎಂದು ಹೇಳುತ್ತಾನೆ. ಇಲ್ಲ ನನಗೂ ಬೇರೆ ಹೆಣ್ಣು ಮಕ್ಕಳನ್ನ ನೋಡಿದಾಗ ಮುಜುಗರವಾಗುತ್ತೆ. ಕೂದಲು ಬಿಡುತ್ತೇನೆ ಎಂದು ಹೇಳುತ್ತಾಳೆ. ಅದಕ್ಕೆ ಕಾರ್ತಿಕ್ ಬೇಡ ಸತು, ನೀನು ನೀನಾಗಿರು ನನಗೆ ಅದೇ ಇಷ್ಟ ಎಂದು ಹೇಳುತ್ತಾನೆ.

  English summary
  karthik gives party tips for sathya. Karthik likes sathya as she is. And he says her to stay same.
  Friday, November 25, 2022, 18:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X