For Quick Alerts
  ALLOW NOTIFICATIONS  
  For Daily Alerts

  ಸತ್ಯ ಮಾಡಿದ ಕೆಲಸದಿಂದ ಕಾರ್ತಿಕ್ ಬಚಾವ್: ಕೀರ್ತನಾ ಗ್ರಹಚಾರ ನೆಟ್ಟಗಿಲ್ಲ..!

  By ಪ್ರಿಯಾ ದೊರೆ
  |

  'ಸತ್ಯ' ಧಾರಾವಾಹಿಯಲ್ಲಿ ದಿವ್ಯಾ ಪರೀಸ್ಥಿತಿಯನ್ನು ಗಿರಿಜಮ್ಮ ತಿಳಿದುಕೊಂಡಿದ್ದಾಳೆ. ದಿವ್ಯಾಳಿಗೂ ಈಗ ಅಜ್ಜಿ ತನ್ನ ಬಗ್ಗೆ ತಿಳಿದುಕೊಂಡು ಸಪೋರ್ಟ್ ಮಾಡುತ್ತಿರುವುದು ಖುಷಿಯಾಗಿದೆ. ಆದರೆ, ಅಜ್ಜಿಗೆ ಇನ್ನೂ ಸಂಪೂರ್ಣ ಮಾಹಿತಿ ಸಿಕ್ಕಿಲ್ಲ.

  ಬಾಲ ಹೇಳಿರುವುದನ್ನೇ ದಿವ್ಯಾ ಕೂಡ ಗಿರಿಜಮ್ಮನಿಗೆ ಹೇಳಿದ್ದಾಳೆ. ಬಾಲ ಹೇಳಿರುವುದು, ದಿವ್ಯಾ ನಂಬಿರುವುದು ಸತ್ಯ ಎಂದು ಗಿರಿಜಮ್ಮ ಅಂದುಕೊಂಡಿದ್ದಾಳೆ. ಹಾಗಾಗಿ ಮೊಮ್ಮಗಳಿಗೆ ಒಳ್ಳೆಯದೇ ಆಗುತ್ತಿದೆ ಎಂದು ಸುಮ್ಮನಾಗಿದ್ದಾಳೆ.

  ಕಿರುತೆರೆ ನಟಿ ತುನಿಷಾ ಶರ್ಮಾ ಸಾವಿನ ಪ್ರಕರಣ: ಮರಣೋತ್ತರ ಪರೀಕ್ಷೆ ವರದಿಯಲ್ಲಿ ಏನಿದೆ?ಕಿರುತೆರೆ ನಟಿ ತುನಿಷಾ ಶರ್ಮಾ ಸಾವಿನ ಪ್ರಕರಣ: ಮರಣೋತ್ತರ ಪರೀಕ್ಷೆ ವರದಿಯಲ್ಲಿ ಏನಿದೆ?

  ಇತ್ತ ಜಗನ್ನಾಥ ಬಾಲ ಕೊಟ್ಟ ಚೆಕ್ ಹಿಂದೆ ಬಿದ್ದಿದ್ದಾನೆ. ಖಾಲಿ ಚೆಕ್ ಗೆ ಇನ್ನೂರು ಕೋಟಿ ರೂಪಾಯಿ ಮೊತ್ತವನ್ನು ಬರೆದುಕೊಂಡಿದ್ದಾನೆ. ಇದನ್ನು ಕ್ಯಾಶ್ ಮಾಡಿಸಿಕೊಳ್ಳಲು ಒದ್ದಾಡುತ್ತಿದ್ದಾನೆ.

  ರಸ್ತೆಯಲ್ಲೇ ಕನಸು ಕಾಣುತ್ತಿರುವ ಜಗನ್ನಾಥ

  ರಸ್ತೆಯಲ್ಲೇ ಕನಸು ಕಾಣುತ್ತಿರುವ ಜಗನ್ನಾಥ

  ಬಾಲ ಹೇಳಿದಂತೆ ಗೋವಿಂದ ಎಂಬ ಏಜೆಂಟ್ ಬಳಿ ಹೋಗಿ ತನ್ನ ಹಣ ಡ್ರಾ ಮಾಡಿಕೊಳ್ಳಲು ಸಹಾಯ ಕೇಳಿದ್ದಾನೆ. ಆದರೆ, ಏಜೆಂಟ್ ಎರಡು ಲಕ್ಷ ಹಣ ಕೇಳಿದ್ದು, ಅದನ್ನೆಲ್ಲಾ ಅರೇಂಜ್ ಮಾಡಿಕೊಂಡು ಜಗನ್ನಾಥ ಗೋವಿಂದನನ್ನು ಭೇಟಿ ಮಾಡುತ್ತಾನೆ. ಇನ್ನು ಇನ್ನೂರು ಕೋಟಿ ರೂಪಾಯಿಯನ್ನು ತುಂಬಿಸಿಕೊಂಡು ಬರಲು ಎರಡು ದೊಡ್ಡ ಟ್ರಾಲಿಗಳನ್ನು ಕೂಡ ತಂದಿರುತ್ತಾನೆ. ರಸ್ತೆಯಲ್ಲೇ ನಿಂತು ಹಣದ ಹೊಳೆಯಲ್ಲಿ ತೇಲಾಡುತ್ತಿದ್ದಾನೆ. ಆದರೆ, ಗೋವಿಂದ ಈಗಲೇ ಹಣ ಕೈ ಸೇರುವುದಿಲ್ಲ. ಅದಕ್ಕೆ ಕಾಯಬೇಕು ಎಂದು ಹೇಳುತ್ತಾನೆ. ಇದರಿಂದ ಜಗನ್ನಾಥನಿಗೆ ಬೇಸರವಾದರೂ ಹಣ ಬರುತ್ತದೆ ಎಂಬ ಖುಷಿಯಲ್ಲಿ ತೇಲಾಡುತ್ತಿರುತ್ತಾನೆ.

  ಕ್ಯಾಮರಾವನ್ನು ಮರೆತು ಮನೆಯಲ್ಲೇ ಬಿಟ್ಟು ಹೋದರಾ..?ಕ್ಯಾಮರಾವನ್ನು ಮರೆತು ಮನೆಯಲ್ಲೇ ಬಿಟ್ಟು ಹೋದರಾ..?

  ಕೀರ್ತನಾಗೆ ಗ್ರಹಚಾರ ಬಿಡಿಸಿದ ಸತ್ಯ

  ಕೀರ್ತನಾಗೆ ಗ್ರಹಚಾರ ಬಿಡಿಸಿದ ಸತ್ಯ

  ಮಳವಿಕಾಳನ್ನು ಮುಂದೆ ಬಿಟ್ಟು ಕೀರ್ತನಾ, ಕಾರ್ತಿಕ್ ಮಾನ ಮರ್ಯಾದೆಯನ್ನು ಬೀದಿಯಲ್ಲಿ ಹರಾಜು ಮಾಡಿರುವ ವಿಚಾರ ಸತ್ಯಳಿಗೆ ಗೊತ್ತಾಗುತ್ತದೆ. ಮಾಳವಿಕಾಳನ್ನು ಪೋಲೀಸರಿಗೆ ಹಿಡಿದುಕೊಟ್ಟ ಸತ್ಯ, ಸೀದಾ ಮನೆಗೆ ಬಂದು ಕೀರ್ತನಾಳ ಗ್ರಹಚಾರ ಬಿಡಿಸುತ್ತಾಳೆ. ನಿನ್ನಿಂದ ಈ ಮನೆ ಮರ್ಯಾದೆ ಬೀದಿಗೆ ಬಂತು. ಸ್ವಂತ ತಮ್ಮನ ವಿರುದ್ಧ ಪಿತೂರಿ ಮಾಡಿದ್ದೀಯಾ ಎಂದು ಕಪಾಳಮೋಕ್ಷ ಮಾಡುತ್ತಾಳೆ. ಸುಹಾಸ್‌ಗೂ ಕೀರ್ತನಾಗೂ ಬೈದು, ಇನ್ಮುಂದೆ ತಾನು ಹೇಳಿದಂತೆ ಕೇಳಬೇಕು ಎಂದು ಬೈಯುತ್ತಾಳೆ. ಶಿಕ್ಷೆ ನಾನು ನಿನಗೆ ಕೊಡುತ್ತೇನೆ ಎಂದು ಎಲ್ಲರ ಎದುರಿಗೂ ಕರೆದುಕೊಂಡು ಬರುತ್ತಾಳೆ.

  ಸತ್ಯ, ರಾಕಿ ಮಾಡಿದ್ದನ್ನು ಕೇಳಿದ ಮನೆಯವರು

  ಸತ್ಯ, ರಾಕಿ ಮಾಡಿದ್ದನ್ನು ಕೇಳಿದ ಮನೆಯವರು

  ಸೀತಾ ಮನೆಗೆ ಬರುತ್ತಿದ್ದಂತೆ ಸತ್ಯಗೆ ಬೈಯುತ್ತಾಳೆ. ಆದರೆ, ಸತ್ಯ ಟಿವಿ ಆನ್ ಮಾಡಿ ಕಾರ್ತಿಕ್ ಬಗ್ಗೆ ಬರುತ್ತಿದ್ದ ಸುದ್ದಿಯನ್ನು ಎಲ್ಲರಿಗೂ ತೋರಿಸುತ್ತಾಳೆ. ಕಾರ್ತಿಕ್ ನಿರಪರಾಧಿ ಎಂಬುದು ಪ್ರೂವ್ ಆಗುತ್ತದೆ. ಇನ್ನು ಮಾಳವಿಕಾ ಬೇಕಂತಲೇ ಹಣಕ್ಕಾಗಿ ಈ ಆರೋಪ ಮಾಡಿರುವುದು ತಿಳಿಯುತ್ತದೆ. ಆಗ ಸತ್ಯ ತಾನೂ ಮತ್ತು ರಾಕಿ ಸೇರಿ ಮಾಳವಿಕಾ ಬಗ್ಗೆ ಮಾಹಿತಿ ಪಡೆದಿದ್ದು, ಅವಳ ಬೆನ್ನ ಹಿಂದೆ ಬಿದ್ದು ಸಮಸ್ಯೆ ಬಗೆ ಹರಿಸಿದ್ದನ್ನು ಹೇಳುತ್ತಾಳೆ. ಆದರೆ ಈ ಮಾತನ್ನು ಸೀತಾ ನಂಬುವುದಿಲ್ಲ.

  ಸತ್ಯಳನ್ನು ಬೈದ ಸೀತಾ

  ಸತ್ಯಳನ್ನು ಬೈದ ಸೀತಾ

  ನೀನು ಇದೆಲ್ಲಾ ಹೇಗೆ ಮಾಡಿರುವುದಕ್ಕೆ ಸಾಧ್ಯ ಎಂದು ಬೈಯುತ್ತಾಳೆ. ಆದರೆ. ಲಕ್ಷ್ಮಣ ಇಲ್ಲ ಸತ್ಯಾನೇ ಮಾಳವಿಕಾಳನ್ನು ಹಿಡಿದುಕೊಟ್ಟಿದ್ದು ಎಂದು ಕಮೀಷನರ್ ಕೂಡ ಹೇಳಿದರು ಎಂದು ಲಕ್ಷ್ಮಣ ಹೇಳುತ್ತಾನೆ. ಆಗ ಮನೆಯಲ್ಲಿ ಎಲ್ಲರೂ ಸಂತೋಷ ಪಡುತ್ತಾರೆ, ರಾಯರು, ಊರ್ಮಿಳಾ ಸತ್ಯ ಮಾಡಿದ ಕೆಲಸದಿಂದ ಖುಷಿ ಪಡುತ್ತಾರೆ. ಕಾರ್ತಿಕ್ ತನ್ನ ಬೇಜವಾಬ್ದಾರಿಯಿಂದ ಆದ ತಪ್ಪು ಎಂದು ಪಶ್ಚಾತಾಪ ಪಡುತ್ತಾನೆ.

  English summary
  sathya serial 26th december Episode Written Update. keerthana plans Comes to know for sathya, sathya solves all problem and makes everyone feel proud.
  Monday, December 26, 2022, 15:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X