Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕಾರ್ತಿಕ್‌ನನ್ನು ಬಚಾವ್ ಮಾಡಿದ ಸತ್ಯ: ಪತಿ-ಪತ್ನಿ ಒಂದಾಗುತ್ತಾರಾ..?
'ಸತ್ಯ' ಧಾರಾವಾಹಿಯಲ್ಲಿ ಲಕ್ಷ್ಮಣ, ಕಾರ್ತಿಕ್‌ಗೆ ಸಮಾಧಾನ ಮಾಡುತ್ತಾನೆ. ನಿನ್ನ ಮೇಲೆ ನಮಗ್ಯಾರಿಗೂ ಅಪನಂಬಿಕೆ ಇಲ್ಲ ಆದರೆ, ನಿನ್ನ ಬೇಜವಾಬ್ದಾರಿತನದಿಂದ ಹೀಗಾಯ್ತಲ್ಲ ಅಂತ ಬೇಸರ ಎಂದು ಹೇಳುತ್ತಾರೆ.
ಸೀತಾ, ರಾಯರು, ಊರ್ಮಿಳಾ ಎಲ್ಲರೂ ಕಾರ್ತಿಕ್ ಬಗ್ಗೆ ಹೊಗಳಿ ಮಾತನಾಡುತ್ತಾರೆ. ಸತ್ಯ ಕೆಲಸಕ್ಕೂ ಊರ್ಮಿಳಾ ಹಾಗೂ ರಾಯರು ಹೆಮ್ಮೆಯಿಂದ ಮಾತನಾಡುತ್ತಾರೆ. ಆದರೆ, ಸೀತಾ ಮಾತ್ರ ಏನನ್ನೂ ಮಾತನಾಡುವುದಿಲ್ಲ.
ಭೂಮಿಯನ್ನು
ಕೊಲ್ಲಿಸಲು
ಹೊರಟ
ಅಹಲ್ಯಾ;
ವರ್ಕ್
ಆಗುತ್ತಾ
ಅಹಲ್ಯಾ
ಪ್ಲಾನ್?
ಮನೆಯಲ್ಲಿ ಕಾರ್ತಿಕ್‌ನನ್ನು ಎಲ್ಲರೂ ಹಣ ಎಲ್ಲಿಂದ ಹೊಂದಿಸಿದೆ ಎಂದು ಪ್ರಶ್ನೆ ಮಾಡುತ್ತಾರೆ. ಆಗ ಕಾರ್ತಿಕ್ ಏನನ್ನೂ ಉತ್ತರಿಸಲಾಗದೇ ಸುಮ್ಮನೆ ಇರುತ್ತಾನೆ. ಕಾರ್ತಿಕ್, ಲಕ್ಷ್ಮಣ ಅವರ ರೂಮಿನಿಂದ ಹಣವನ್ನು ಕದ್ದಿರುತ್ತಾನೆ. ಈ ವಿಚಾರವನ್ನು ಹೇಳಲಾಗದೇ ಒದ್ದಾಡುತ್ತಾನೆ.

ಕೀರ್ತನಾ ಮಾತಿಗೆ ಸೋತ ಕಾರ್ತಿಕ್
ಕೀರ್ತನಾ ಬೇಕಂತಲೇ ಪ್ಲ್ಯಾನ್ ಮಾಡಿ 25 ಲಕ್ಷ ಹಣವನ್ನು ಲಕ್ಷ್ಮಣನ ರೂಮಿನಲ್ಲಿ ಬಿಸಿನೆಸ್ ಹಣ ಎಂದು ತಂದಿಟ್ಟಿರುತ್ತಾರೆ. ಇದು ಕಾರ್ತಿಕ್‌ಗೆ ಗೊತ್ತಾಗಲಿ. ಹಣವನ್ನು ಕದಿಯಲಿ ಎಂದೇ ಕಾರ್ತಿಕ್ ಇರುವ ಕಡೆ ಬಂದು ಮಾತನಾಡಿರುತ್ತಾರೆ. ಬಳಿಕ ರಾತ್ರಿ ಎಲ್ಲರೂ ಮಲಗಿದ ಮೇಲೆ ಕಾರ್ತಿಕ್ ಹಣವನ್ನು ಕದ್ದಿರುತ್ತಾನೆ. ಇದನ್ನು ವೀಡಿಯೋ ಮಾಡಿದ್ದ ಕೀರ್ತನಾ, ಬೇಕಂತಲೇ ಎಲ್ಲರ ಮುಂದೆ ಹಣದ ಬಗ್ಗೆ ವಿಚಾರಿಸುತ್ತಾಳೆ. ಒತ್ತಿ ಒತ್ತಿ ಅಷ್ಟೊಂದು ಹಣವನ್ನು ಹೇಗೆ ಹೊಂದಿಸಿದೆ ಎಂದು ಕೇಳುತ್ತಾಳೆ. ಇದರಿಂದ ಕಾರ್ತಿಕ್ ತಬ್ಬಿಬ್ಬಾಗುತ್ತಾನೆ.

ಕೀರ್ತನಾಗೆ ಶಾಕ್ ಆಯ್ತಾ..?
ಆದರೆ ಸತ್ಯ, ಕಾರ್ತಿಕ್‌ನನ್ನು ಸಪೋರ್ಟ್ ಮಾಡುತ್ತಾಳೆ. ಸತ್ಯ ಮತ್ತು ಕೀರ್ತನಾ ನಡುವೆ ವಾದ ನಡೆಯುತ್ತದೆ. ಕೀರ್ತನಾ ಚಿಕ್ಕಪ್ಪನ ಹಣವನ್ನು ಕಾರ್ತಿಕ್ ಕದ್ದಿರಬಹುದು ಎಂದು ಹೇಳುತ್ತಾಳೆ. ಆಗ ಊರ್ಮಿಳಾ ಹಣ ಇದೆಯಾ ಎಂದು ಚೆಕ್ ಮಾಡಲು ಹೋಗುತ್ತಾಳೆ. ಬಂದು ಹಣ ಇದೆ ಎಂದಾಗ ಎಲ್ಲರೂ ಕೀರ್ತನಾಳಿಗೆ ಬೈಯುತ್ತಾರೆ. ಕಳ್ಳರಿಗೆ ಕಾಣುವುದೆಲ್ಲವೂ ಹೀಗೆ. ನೀನು ಕಳ್ಳತನ ಮಾಡಿದೆ ಎಂದು ಕಾರ್ತಿಕ್ ಮೇಲೂ ಗೂಬೆ ಕೂರಿಸಬೇಡ ಎಂದು ಲಕ್ಷ್ಮಣ ಬೈಯುತ್ತಾರೆ. ಕೀರ್ತನಾಗೆ ಹಣ ಹಾಗೆ ಇದೆ ಎಂಬುದನ್ನು ಕೇಳಿ ಶಾಕ್ ಆಗುತ್ತದೆ.

ಕಷ್ಟದಲ್ಲಿ ಒಂದಾದ ಜೋಡಿ
ರೂಮಿಗೆ ಹೋದ ಮೇಲೆ ಕಾರ್ತಿಕ್ ಸತ್ಯ, ಬಳಿ ಥ್ಯಾಂಕ್ಸ್ ಕೇಳುತ್ತಾನೆ. ಸತ್ಯ, ಕಾರ್ತಿಕ್ ಇಷ್ಟೋಂದು ಎಮೋಷನಲ್ ಎಂದು ತಿಳಿದುಕೊಳ್ಳುತ್ತಾಳೆ. ಇಬ್ಬರೂ ಭಾವುಕರಾಗಿ ತಬ್ಬಿಕೊಳ್ಳುತ್ತಾರೆ. ಕಾರ್ತಿಕ್ ಮತ್ತು ಸತ್ಯ ಈ ವಿಚಾರದಿಂದ ಹತ್ತಿರವಾಗುತ್ತಾರೆ. ಒಬ್ಬರಿಗೊಬ್ಬರು ಭಾವನಾತ್ಮಕವಾಗಿ ಮಾತನಾಡುತ್ತಾರೆ. ಸಖಿಭಾರ್ಯ ಎಂದು ಕರೆದಿದ್ದು ಕೂಡ ಯಾಕೆ ಎಂಬುದನ್ನು ಕಾರ್ತಿಕ್ ಬಿಡಿಸಿ ಹೇಳುತ್ತಾನೆ. ಆಗ ಸತ್ಯಗೆ ಖುಷಿಯಾಗುತ್ತದೆ.

ನಾಮ ಇಟ್ಟನಾ ಗೋವಿಂದ..?
ಇತ್ತ ಜಗನ್ನಾಥ, ಗೋವಿಂದನ ಜೊತೆ ಮಾತನಾಡುತ್ತಾ ಹಣ ಸಿಗುತ್ತೆ ಎಂಬ ಖುಷಿಯಲ್ಲಿದ್ದಾನೆ. ಗೋವಿಂದ ಕೂಡ ಇವನಂತಹ ಬಕ್ರ ಮತ್ತೆ ಸಿಗುವುದಿಲ್ಲ ಎಂದು ಏನೇನೋ ಹೇಳಿ ಹೊಗಳುತ್ತಿರುತ್ತಾನೆ. ಫಾರಿನ್‌ಗೆ ಹೋಗಿ ಸೆಟಲ್ ಆಗುತ್ತೀರಾ ಎಂದು ಕೇಳಿದ್ದಕ್ಕೆ, ಜಗನ್ನಾಥ ಇಲ್ಲ, ನಾನು ಹುಟ್ಟಿದ ಮಣ್ಣಿನಲ್ಲೇ ಇರುತ್ತೇನೆ. ಇಲ್ಲೇ ಇದ್ದುಕೊಂಡು ಬೆಳವಣಿಗೆ ಕೆಲಸಗಳಿಗೆ ಸಹಾಯ ಮಾಡುತ್ತೇನೆ ಎಂದು ಹೇಳುತ್ತಾನೆ. ನಂತರ ಜಗನ್ನಾಥನ ಕೈಯಲ್ಲಿ ಎರಡು ಲಕ್ಷ ಹಣ ಹಾಗೂ ಚೆಕ್ ತೆಗೆದುಕೊಂಡು ಬ್ಯಾಂಕ್ ಒಳಗೆ ಹೋಗುತ್ತಾನೆ. ಆದರೆ, ಆಚೆ ಬರುತ್ತಾನೋ ಇಲ್ಲ ಜಗನ್ನಾಥನಿಗೆ ನಾಮ ಹಾಕುತ್ತಾನೋ ಎಂದು ಕಾದು ನೋಡಬೇಕು.