Don't Miss!
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- News
Budget 2023; ರಾಜಕೀಯ ಉದ್ದೇಶದಿಂದ ಬಜೆಟ್ ಮಂಡನೆ ಮಾಡಿದ್ದಾರೆ: ಡಿ.ಕೆ. ಶಿವಕುಮಾರ್
- Sports
ಟಿ20 ರ್ಯಾಂಕಿಂಗ್: ಸೂರ್ಯಕುಮಾರ್ ಅಂಕದಲ್ಲಿ ಮತ್ತಷ್ಟು ಏರಿಕೆ
- Automobiles
ಭಾರತದಿಂದ ಬ್ರಿಟನ್ಗೆ ರಾಯಲ್ ಎನ್ಫೀಲ್ಡ್ ಸೂಪರ್ ಮಿಟಿಯೊರ್ 650 ರಫ್ತು ಪ್ರಾರಂಭ
- Technology
ಬಜೆಟ್ ಬೆಲೆಯಲ್ಲಿ ದೂಳೆಬ್ಬಿಸಲು ಮೊಟೊ E13 ತಯಾರಿ! ಲಾಂಚ್ ಯಾವಾಗ!
- Finance
LIC Jeevan Lakshya: LIC ಜೀವನ್ ಲಕ್ಷ್ಯ ಯೋಜನೆ: ಪಾಲಿಸಿ ಪ್ರಯೋಜನವೇನು? ಆರ್ಥಿಕ ರಕ್ಷಣೆ ಹೇಗೆ? ತಿಳಿಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Sathya serial: ರಾಮಚಂದ್ರ ರಾಯರ ಮೌನಕ್ಕೆ ಉಪಾಯ ಹುಡುಕಿದ ಸತ್ಯ
'ಸತ್ಯ' ಧಾರಾವಾಹಿಯಲ್ಲಿ ಕೀರ್ತನಾಳಿಗೆ ತನ್ನ ಪ್ಲ್ಯಾನ್ ಎಲ್ಲವೂ ಫ್ಲಾಪ್ ಆಯ್ತಲ್ಲ ಎಂದು ಕೋಪ ಬಂದಿರುತ್ತದೆ. ಆದರೆ, ಕೋಪವನ್ನು ಯಾರ ಮೇಲೂ ತೋರಿಸಿಕೊಳ್ಳಲು ಆಗುವುದಿಲ್ಲ. ಸುಹಾಸ್, ಕೀರ್ತನಾಗೆ ಸಮಾಧಾನ ಮಾಡುತ್ತಾನೆ.
ಸತ್ಯ ಅವರ ತಾಯಿ ಜಾನಕಿಗೆ ಫೋನ್ ಮಾಡಿ ಮಾತನಾಡುತ್ತಾಳೆ. ನಡೆದ ಘಟನೆಗಳನ್ನೆಲ್ಲಾ ವಿವರಿಸುತ್ತಾಳೆ. ಇದರಿಂದ ಜಾನಕಿ ಖುಷಿ ಪಡುತ್ತಾಳೆ. ಬಂದ ಗಂಡಾಂತರ ಹಾಗೆ ಹೋಯ್ತಲ್ಲ ಎಂದು ಸಂತಸವನ್ನು ಹಂಚಿಕೊಳ್ಳುತ್ತಾಳೆ.
ಮಗಳ
ಮದುವೆ
ಸಲುವಾಗಿ
ರಾಜಿ
ಕಾಲಿಗೆ
ಬೀಳುತ್ತಾಳ
ಪುಟ್ಟಕ್ಕ?
ಇನ್ನು ಜಗನ್ನಾಥ ಹಣ ಕೊಟ್ಟ ಗೋವಿಂದನನ್ನು ಹುಡುಕಾಡುತ್ತಿದ್ದಾನೆ. ಆದರೆ ಗೋವಿಂದ ಎಂಬುವರೇ ಇಲ್ಲ ಎಂದು ಎಲ್ಲರೂ ಹೇಳಿದ್ದನ್ನು ಕೇಳಿ ಹಣ ಕಳೆದುಕೊಂಡೆನಾ ಎಂಬ ಚಿಂತೆಗೆ ಬಿದ್ದಿದ್ದಾನೆ.

ನಾಮ ಹಾಕಿಸಿಕೊಂಡ ಜಗನ್ನಾಥ
ಗೋವಿಂದ ಎರಡು ಲಕ್ಷ ಹಣ ಹಾಗೂ ಚೆಕ್ ಎರಡನ್ನು ತೆಗೆದುಕೊಂಡು ಬಂದು ಬಾಲನಿಗೆ ಕೊಟ್ಟಿರುತ್ತಾನೆ. ಬಾಲ ದುಡ್ಡೂ ಬಂತೂ ಚೆಕ್ ತಲೆನೋವೂ ಹೋಯ್ತು ಎಂದು ಖುಷಿ ಪಡುತ್ತಾನೆ. ಇನ್ನು ಹಳ್ಳಿಯಲ್ಲಿ ಅಜ್ಜಿಯ ಜೊತೆಗೆ ಕಾಕ್ರೋಜ್ ಕೂಡ ಇದ್ದು, ಇದನ್ನು ಛೋಟಾ ಕಂಡು ಹಿಡಿಯುತ್ತಾನೆ. ಕಾಕ್ರೋಜ್ ಅನ್ನು ಬಾಲನ ಬಳಿಗೆ ಕರೆದುಕೊಂಡು ಬರುತ್ತಾನೆ. ಬಾಲ ಇಲ್ಲಿಗ್ಯಾಕೆ ಬಂದೆ ಎಂದು ಕೇಳಿದಾಗ ಕಾಕ್ರೋಜ್ ಸುಳ್ಳು ಹೇಳಲು ಪ್ರಯತ್ನಿಸುತ್ತಾನೆ. ಆದರೆ, ಬಾಲ ಬಿಡದೇ ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಿರುತ್ತಾನೆ.

ಸಂಕಟದಲ್ಲಿರುವ ಕಾರ್ತಿಕ್
ಇನ್ನು ಮನೆಯಲ್ಲಿ ಅವಾಂತರಗಳೆಲ್ಲೂ ಆದ ಮೇಲೆ ರಾಯರು ಮಾತ್ರವೇ ಮೌನವಾಗಿಯೇ ಇರುತ್ತಾರೆ. ಕಾರ್ತಿಕ್ ಜೊತೆ ಮಾತನಾಡುವುದಿಲ್ಲ. ಕಾರ್ತಿಕ್ ಅಪ್ಪನ ಜೊತೆಗೆ ಮಾತನಾಡಬೇಕು ಎಂದು ಬಯಸಿದರೂ ಆಗುವುದಿಲ್ಲ. ಇದರಿಂದ ಕಾರ್ತಿಕ್‌ಗೆ ಸಂಕಟವಾಗುತ್ತದೆ. ತನ್ನದೇನು ತಪ್ಪಿಲ್ಲ ಎಂದು ಗೊತ್ತಾದ ಮೇಲೂ ಅಪ್ಪ ಮಾತನಾಡುತ್ತಿಲ್ಲ. ತನ್ನ ಕಡೆ ನೋಡುತ್ತಲೂ ಇಲ್ಲ ಎಂದು ಬೇಸರ ಮಾಡಿಕೊಳ್ಳುತ್ತಾನೆ. ಇದನ್ನೆಲ್ಲಾ ಸತ್ಯ ಗಮನಿಸುತ್ತಿರುತ್ತಾಳೆ. ಮೌನವಾಗಿಯೇ ಕಾರ್ತಿಕ್ ಗೆ ಧೈರ್ಯ ಹೇಳುತ್ತಿರುತ್ತಾಳೆ.

ಸೀತಾಗೆ ಸತ್ಯ ಮೇಲೆ ಇನ್ನೂ ಅನುಮಾನ
ಇದೇ ವೇಳೆಯಲ್ಲಿ ಊರ್ಮಿಳಾ, ಸತ್ಯಳನ್ನು ಹೊಗಳುತ್ತಾಳೆ. ಕಾರ್ತಿಕ್‌ನನ್ನು ನಾವು ಚಿಕ್ಕವನಿದ್ದಾಗಿನಿಂದಲೂ ನೋಡುತ್ತಿದ್ದೇವೆ. ಆದರೆ, ಅವನ ಮೇಲೆ ಅಪವಾದ ಬಂದಾಗ ನಾವ್ಯಾರೂ ಅವನನ್ನು ನಂಬಲೇ ಇಲ್ಲ. ಆದರೆ, ಸತ್ಯ ಕಾರ್ತಿಕ್‌ಗೆ ಸಪೋರ್ಟ್ ಮಾಡಿದಳು. ಅವನನ್ನು ಕಷ್ಟದಿಂದ ಪಾರು ಮಾಡಿದಳು. ಸತ್ಯ ಎದುರು ಕೂಡ ನಾವು ಕೆಟ್ಟವರಾದ್ವಿ. ಪಾಪ ಕಾರ್ತಿಕ್ ತನ್ನದೇನು ತಪ್ಪಿಲ್ಲ ಎಂದು ಎಷ್ಟು ಹೇಳಿದರೂ ನಾವ್ಯಾರೂ ಕೇಳಲೇ ಇಲ್ಲ ಎಂದು ಹೇಳುತ್ತಾಳೆ. ಆದರೆ ಸೀತಾ, ಊರ್ಮಿಳಾ ಮಾತನ್ನು ಕೇಳುವುದಿಲ್ಲ. ಬದಲಿಗೆ ಮತ್ತೆ ಮತ್ತೆ ಸತ್ಯಳಿಂದಲೇ ಇದೆಲ್ಲಾ ಆಗುತ್ತಿದೆ ಎಂದು ಹೇಳುತ್ತಾಳೆ. ಸತ್ಯಳೇ ಏನೋ ಪ್ಲಾನ್ ಮಾಡಿದ್ದಾಳೆ. ತನ್ನ ಮಗನ ಮೇಲೆ ಆರೋಪ ಬರುವಂತೆ ಮಾಡಿದ್ದಾಳೆ ಎಂದು ಸೀತಾ ಆಲೋಚಿಸುತ್ತಾಳೆ.

ರಾಯರ ಜೊತೆ ಮಾತನಾಡುವ ಕಾರ್ತಿಕ್
ಕಾರ್ತಿಕ್ ಅಪ್ಪನ ಬಗ್ಗೆ ಯೋಚಿಸುತ್ತಿರುವುದನ್ನು ನೋಡಿದ ಸತ್ಯ ಸಮಾಧಾನ ಮಾಡುತ್ತಾಳೆ. ಹೀಗೆ ಯೋಚನೆ ಮಾಡಿಕೊಮಡು ಇರುವುದಕ್ಕಿಂತ ಅಪ್ಪನ ಬಳಿ ಹೋಗಿ ನೀನೇ ಮಾತನಾಡು ಎಂದು ಐಡಿಯಾ ಕೊಡುತ್ತಾಳೆ. ಕಾರ್ತಿಕ್ ಗೆ ಸತ್ಯ ಹೇಳಿದ್ದು ಸರಿ ಅಂತ ಅನಿಸುತ್ತದೆ. ಇದಕ್ಕಾಗಿ ಸತ್ಯ ಪ್ಲಾನ್ ಕೂಡ ರೆಡಿ ಮಾಡಿಕೊಡುತ್ತಾಳೆ. ಕಾರ್ತಿಕ್ ತುಂಬಾ ಖುಷಿಯಾಗಿ ಅವರ ತಂದೆ ಜೊತೆಗೆ ಮಾತನಾಡಲು ಮುಂದಾಗುತ್ತಾನೆ. ಆದರೆ ರಾಯರು ಕಾರ್ತಿಕ್ ಜೊತೆಗೆ ಮಾತನಾಡುತ್ತಾರಾ ಎಂಬ ಕುತೂಹಲ ಮೂಡಿದೆ.