Don't Miss!
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- News
ಡಿಕೆಶಿ ಪತ್ನಿ ನನಗೆ ಕಾಂಗ್ರೆಸ್ ತೊರೆಯದಂತೆ ಕೋರಿದ್ದರು: ರಮೇಶ್ ಜಾರಕಿಹೊಳಿ
- Technology
MusicLM :ಗೂಗಲ್ನಿಂದ ಹೊಸ ಟೂಲ್; ಇದು ಪಠ್ಯವನ್ನು ಸಂಗೀತವಾಗಿ ಪರಿವರ್ತಿಸಲಿದೆ!
- Finance
ಅದಾನಿ ಗ್ರೂಪ್ನ 413 ಪುಟಗಳ ಪ್ರತಿಕ್ರಿಯೆ: ಹಿಂಡನ್ಬರ್ಗ್ ಹೇಳುವುದೇನು?
- Lifestyle
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- Sports
ನೀವೇ ನಮಗೆ ಸ್ಪೂರ್ತಿ: ಕಿರಿಯರ ಸಾಧನೆಗೆ ಹರ್ಮನ್ಪ್ರೀತ್ ಕೌರ್ ಮುಕ್ತಕಂಠದ ಶ್ಲಾಘನೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕೀರ್ತನಾ ಪ್ಲ್ಯಾನ್ ಠುಸ್ ಆಯ್ತಾ? ಸುಹಾಸ್‌ಗೆ ಕಾದಿದೆಯಾ ಗ್ರಹಚಾರ?
'ಸತ್ಯ' ಧಾರಾವಾಹಿಯಲ್ಲಿ ಹೊಸ ಕ್ಯಾರೆಕ್ಟರ್ ಎಂಟ್ರಿಯಾಗಿದೆ. ಈ ಹೊಸ ಪಾತ್ರದಿಂದ ಈಗಷ್ಟೇ ಒಂದಾಗುತ್ತಿರುವ ಸತ್ಯ ಮತ್ತು ಕಾರ್ತಿಕ್ ನಡುವೆ ಮತ್ತೆ ಭಿನ್ನಾಭಿಪ್ರಾಯ ಮೂಡುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.
ಪಾರ್ಟಿಯಲ್ಲಿ ಸತ್ಯ ಒಬ್ಬಳನ್ನೇ ಬಿಟ್ಟು ಕಾರ್ತಿಕ್ ಹೋಗಿದ್ದಾನೆ. ಕಾರ್ತಿಕ್ ಕಾಣದ ಕಾರಣ ಸತ್ಯ ಸಿಟ್ಟು ಮಾಡಿಕೊಂಡಿದ್ದಾಳೆ. ನನ್ನ ಒಬ್ಬಳನ್ನೆ ಬಿಟ್ಟು ಕಾರ್ತಿಕ್ ಎಲ್ಲಿಗೆ ಹೋದನೋ ಎಂದು ಬೇಸರ ಮಾಡಿಕೊಂಡಿದ್ದಾಳೆ.
BBK9:
ಬ್ಯಾಟರಿ
ಚಾರ್ಜ್
ಮಾಡಲು
ರೂಪೇಶ್
ಶೆಟ್ಟಿಯಿಂದ
ಹರಸಾಹಸ..
ಮುಂದೇನಾಯ್ತು?
ಇದೇ ವೇಳೆಗೆ ಸತ್ಯ ಕಣ್ಣಿಗೆ ಕಾರ್ತಿಕ್ ಕಂಡಿದ್ದು, ಅವನ ಜೊತೆಗೆ ಇನ್ನೊಬ್ಬಳು ಹುಡುಗಿ ಇರುವುದನ್ನು ನೋಡಿದ್ದಾಳೆ. ಕಾರ್ತಿಕ್ ಮತ್ತು ಆ ಹುಡುಗಿಯನ್ನು ನೋಡಿದ ಸತ್ಯ ಹೊಟ್ಟೆ ಉರಿದುಕೊಂಡಿದ್ದಾಳೆ.

ಕಾರ್ತಿಕ್‌ಗೆ ಕ್ಲಾಸ್ ತೆಗೆದುಕೊಂಡ ಸತ್ಯ
ಪಾರ್ಟಿಯಲ್ಲಿ ಮಾಳವಿಕಾ ಎಂಬ ಹುಡುಗಿ ಕಾರ್ತಿಕ್ ಜೊತೆಗೆ ಮಾತನಾಡುತ್ತಿರುತ್ತಾಳೆ. ಮಾಳವಿಕಾ ಕುಡಿದ ಮತ್ತಿನಲ್ಲಿದ್ದು, ಅವಳು ಬೀಳುವಾಗ ಕಾರ್ತಿಕ್ ಹಿಡಿದುಕೊಂಡು ಸಪೋರ್ಟ್ ಮಾಡುತ್ತಾನೆ. ಇನ್ನು ತನಗೆ ಕಾರ್ತಿಕ್ ಎಂದರೆ ಇಷ್ಟ ಎಂಬ ವಿಚಾರವನ್ನೂ ಹೇಳಿದ್ದು, ತನ್ನನ್ನು ವಾಶ್ ರೂಮ್‌ವರೆಗೂ ಬಿಡುವಂತೆ ಸಹಾಯ ಕೇಳಿದ್ದಾಳೆ. ಇದನ್ನೆಲ್ಲಾ ನೋಡಿದ ಸತ್ಯ ಹೊಟ್ಟೆ ಉರಿದುಕೊಂಡಿದ್ದಾಳೆ. ಇದೇ ಸಂದರ್ಭದಲ್ಲಿ ಕಾರ್ತಿಕ್ ಸತ್ಯಗೆ ಫೋನ್ ಮಾಡಿ ನನಗೆ ಹೆಲ್ಪ್ ಮಾಡು. ಇಲ್ಲೊಬ್ಬಳು ಹುಡುಗಿ ಬಳಿ ಸಿಕ್ಕಿ ಹಾಕಿಕೊಂಡಿದ್ದೀನಿ ಎಂದು ಹೇಳುತ್ತಾನೆ. ಆದರೆ ಸತ್ಯ, ಕಾರ್ತಿಕ್ ಗೆ ಬೈಯುತ್ತಾಳೆ. ನಿನಗೆ ಮದುವೆಯಾಗಿರುವುದೇ ಮರೆತೋಗಿದೆ. ನಿನಗೆ ಆ ಹುಡುಗಿ ಬೇಕಾ ಎಂದೆಲ್ಲಾ ಮಾತನಾಡಿದ್ದಾಳೆ. ಮಾಳವಿಕಾಳಿಂದಾಗಿ ಈಗ ಸತ್ಯ ಮತ್ತು ಕಾರ್ತಿಕ್ ಜಗಳ ಆಡುತ್ತಾರಾ ಕಾದು ನೋಡಿಬೇಕಿದೆ.

ದಿವ್ಯಾ ಕನಸಲ್ಲಿ ಗಿರಿಜಮ್ಮನ ಹವಾ
ಇನ್ನು ದಿವ್ಯಾ ಕನಸಲ್ಲಿ ಗಿರಿಜಮ್ಮ ಹಳ್ಳಿಗೆ ಬಂದಿರುತ್ತಾಳೆ. ದಿವ್ಯಾಗೆ ಇದೇನಾ ನಿನ್ನ ಶ್ರೀಮಂತಿಕೆ ಎಂದೆಲ್ಲಾ ಪ್ರಶ್ನೆ ಮಾಡಿ ಹೀಯಾಳಿಸುತ್ತಾರೆ. ಗಾಬರಿಯಿಂದ ದಿವ್ಯಾ ಜೋರಾಗಿ ಕಿರುಚಿಕೊಂಡು ಎದ್ದೇಳುತ್ತಾಳೆ. ಆಗ ತಾತ ಅಲ್ಲಿಗೆ ಬಂದು ದಿವ್ಯಾಳನ್ನು ಬಾಯಿಗೆ ಬಂದ ಹಾಗೆ ಬೈಯುತ್ತಾರೆ. ನಿಮಗೆ ಮನೆಯಲ್ಲಿ ಜಾಗ ಕೊಟ್ಟಿದ್ದೇ ತಪ್ಪಾಯ್ತು. ಅದು ಯಾಕೆ ಹೀಗಾಡುತ್ತೀರೋ. ನೆಮ್ಮದಿಯಾಗಿ ಮಲಗೋದಕ್ಕೂ ಬಿಡುವುದಿಲ್ಲ ಎಂದು ಹೇಳುತ್ತಾರೆ. ಬಾಲ ನಾವು ಆಚೆ ಮಲಗೋಣ, ತಾತ ಇಲ್ಲೇ ಮಲಗಲಿ ಎಂದು ಜಾಗ ಬಿಟ್ಟು ಕೊಡುತ್ತಾರೆ.

ಸುಹಾಸ್‌ಗೆ ಬೈದ ಕೀರ್ತನಾ
ಕೀರ್ತನಾ ಪಾರ್ಟಿಯಲ್ಲಿ ಸತ್ಯ ಮಾನಮರ್ಯಾದೆ ತೆಗೆಯಬೇಕು ಎಂದು ಪ್ಲ್ಯಾನ್ ಮಾಡಿಕೊಂಡಿದ್ದಾಳೆ. ಹಾಗಾಗಿ ಸುಹಾಸ್ ಜ್ಯೂಸ್‌ಗೆ ಡ್ರಿಂಕ್ಸ್ ಮಿಕ್ಸ್ ಮಾಡಿ ಕೊಟ್ಟಿದ್ದಾನೆ. ಸತ್ಯ ಅದನ್ನು ಕುಡಿದ ಮೇಲೆ ಅವಳಿಗೆ ತಲೆ ಸುತ್ತು ಬಂದಿದೆ. ಆದರೆ, ಸತ್ಯ ತನ್ನನ್ನು ತಾನು ಕಂಟ್ರೋಲ್ ಮಾಡಿಕೊಳ್ಳುತ್ತಿದ್ದಾಳೆ. ಆದರೆ, ಸತ್ಯ ಎಲ್ಲರ ಮುಂದೆ ಕೂಗಾಡುತ್ತಾಳೆ ಎಂದು ಅಂದುಕೊಂಡಿದ್ದ ಕೀರ್ತನಾ ಪ್ಲ್ಯಾನ್ ಠುಸ್ ಆಗಿದೆ. ಹೀಗಾಗಿ ಅದೇನೇ ಆಗಲಿ ಈ ಪಾರ್ಟಿಯಲ್ಲಿ ಸತ್ಯ ಅವಾಂತರ ಮೀಡಿಯಾದಲ್ಲಿ ಬರುವಂತೆ ಆಗಬೇಕು. ಅದರಿಂದ ನಮ್ಮಮ್ಮ ಬೇಸರ ಮಾಡಿಕೊಂಡು ಅವಳಿಗೆ ಬೈದು ಮನೆಯಿಂದ ಹೊರಗೆ ಹಾಕಬೇಕು. ನಾಳೆ ಬೆಳಗ್ಗೆ ಅಷ್ಟೊತ್ತಿಗೆ ಸತ್ಯ ನಮ್ಮ ಮನೆಯಿಂದ ಕಿಕ್ ಔಟ್ ಆಗಬೇಕು ಎಂದು ಸುಹಾಸ್‌ಗೆ ಹೇಳುತ್ತಾಳೆ.

ಇಕ್ಕಟ್ಟಿಗೆ ಸಿಲುಕಿದ ಬಾಲ
ಇನ್ನು ಬಾಲ ಈಗ ದಿವ್ಯಾಳನ್ನು ಸಮಾಧಾನ ಮಾಡಬೇಕಿದೆ. ಹೀಗಾಗಿ ಅವನು ಚೋಟಾ ಬಳಿ ಹೋಗಿ ಸಹಾಯವನ್ನು ಕೇಳುತ್ತಾನೆ. ದಿವ್ಯಾ ಜೊತೆಗೆ ರೊಮ್ಯಾಂಟಿಕ್ ಆಗಿರಲು ಐಡಿಯಾ ಕೊಡು ಎಂದು ಕೇಳುತ್ತಾನೆ. ಅವನು ಅದ್ಯಾವುದೋ ಒಂದು ಜಾಗಕ್ಕೆ ದಿವ್ಯಾಕ್ಕರನ್ನು ಕರೆದುಕೊಂಡು ಬನ್ನಿ ಎಂದು ಹೇಳಿ ತನ್ನ ಐಡಿಯಾ ಹೇಳುತ್ತಾನೆ. ದಿವ್ಯಾಳನ್ನು ಸಮಾಧಾನ ಮಾಡಿ ಬಾಲ ಅದೆಲ್ಲಿಗೋ ಕರೆದುಕೊಂಡು ಹೋಗುತ್ತಿದ್ದಾನೆ. ಅಲ್ಲಿ ಇನ್ನೇನಾಗುತ್ತೋ..?